[30/12/2022, 7:48 PM] Kpcc official: ಹಿಂದಿನ #ಜನಸಂಕಟಯಾತ್ರೆ ಯಲ್ಲಿ ಖಾಲಿ ಕುರ್ಚಿ ದರ್ಶನ ಪಡೆದ ಬಿಜೆಪಿ ಈಗ ಅಮಿತ್ ಶಾ ಎದುರು ಮಾನ ಉಳಿಸಿಕೊಳ್ಳಲು ಕುರ್ಚಿಗಳಿಗಷ್ಟೇ ಅಲ್ಲ ಕುರ್ಚಿ ಮೇಲೆ ಕೂರುವವರಿಗೂ ಹಣ ಕೊಟ್ಟು ಕರೆಸಿದೆ.
ಈ ಹಣ ಯಾವುದು @BJP4Karnataka?
40% ಕಮಿಷನ್ ಲೂಟಿಯದ್ದೇ? ಹುದ್ದೆಗಳ ಮಾರಾಟದ ಸಂಪಾದನೆಯೇ?
ಮಂತ್ರಿಗಿರಿ ಮಾರಾಟದಿಂದ ಬಂದ ಹಣವೇ?
[30/12/2022, 7:48 PM] Kpcc official: ಭ್ರಷ್ಟ ಬಿಜೆಪಿಯ 40% ಕಮಿಷನ್ ಲೂಟಿಗೆ ಮತ್ತೊಂದು ಬಲಿ.
ಸಾಲ ಮಾಡಿ ಕಾಮಗಾರಿಗೆ ಹಣ ಹೂಡಿದ್ದ ಗುತ್ತಿಗೆದಾರ ಪ್ರಸಾದ್ ಭ್ರಷ್ಟ @BJP4Karnataka ಸರ್ಕಾರದ ಕಮಿಷನ್ ಕಿರುಕುಳಕ್ಕೆ ಬಲಿಯಾಗಿದ್ದಾರೆ.
@AmitShah ಅವರೇ, ರಾಜ್ಯದ ಗುತ್ತಿಗೆದಾರರೊಂದಿಗೆ ಸಮಾಲೋಚನೆ ನಡೆಸುವ, 40% ಕಮಿಷನ್ ವಿರುದ್ದ ಕ್ರಮ ಕೈಗೊಳ್ಳುವ ದಮ್ಮು, ತಾಕತ್ತು ಇದೆಯೇ?
[30/12/2022, 8:20 PM] Kpcc official: *ವಿಜಯಪುರದಲ್ಲಿ ನಡೆದ ಕೃಷ್ಣಾ ಜನಾಂದೋಲನ ಕಾರ್ಯಕ್ರಮದಲ್ಲಿ ಡಿ.ಕೆ. ಶಿವಕುಮಾರ್ ಅವರ ಮಾತುಗಳು:*
‘ನಮ್ಮ ಭೂಮಿ ತಾಯಿಯಲ್ಲಿ ಹರಿಯುತ್ತಿರುವ ಕೃಷ್ಣಾ ನದಿಗೆ ನಮ್ಮ ನಿಮ್ಮ ಸಾಷ್ಟಾಂಗ ನಮನ ಅರ್ಪಿಸೋಣ. ಇದೊಂದು ಪವಿತ್ರವಾದ ಸಭೆ.
ನಮ್ಮ ಸಮೀಕ್ಷೆ ತಂಡದವರು ವಿಜಯಪುರದಲ್ಲಿ 8 ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲವು ಸಾಧಿಸಲಿದೆ ಎಂದು ಹೇಳಿದ್ದಾರೆ. ಉಳಿದ ಯಾವ ಎರಡು ಕ್ಷೇತ್ರಗಳಲ್ಲಿ ಹಿನ್ನಡೆಯಾಗಲಿದೆ ಎಂದು ನನಗೆ ಅನುಮಾನ. ಆದರೆ ನಿಮ್ಮ ಈ ಸ್ಫೂರ್ತಿ, ಅಭಿಮಾನ ನೋಡಿದರೆ ಈ ಜಿಲ್ಲೆಯಲ್ಲಿ 8 ಕ್ಕೆ 8 ಕ್ಷೇತ್ರಗಳನ್ನೂ ಗೆಲ್ಲುತ್ತೇವೆ ಎಂಬ ಆತ್ಮವಿಶ್ವಾಸ ಬಂದಿದೆ.
ನನಗೆ ಒಂದು ನಂಬಿಕೆ ಇದೆ. ನಾವೆಲ್ಲರೂ ಪವಿತ್ರವಾದ ಭೂಮಿಯಲ್ಲಿ ಇದ್ದೇವೆ. ಇದು ಬಸವಣ್ಣ, ಕನಕದಾಸರ, ಸಂತ ಶಿಶುನಾಳ ಶರೀಫರ, ಕುವೆಂಪು ಅವರ ಕರ್ನಾಟಕವಾಗಿ ಎಲ್ಲ ಜಾತಿ ಹಾಗೂ ಧರ್ಮಕ್ಕೂ ಸಮಬಾಳು ಸಮಪಾಲು ಸಿಗಬೇಕು. ಇದು ನಮ್ಮೆಲ್ಲರ ಆಸೆ. ಇಂದು ನೀವೆಲ್ಲರೂ ಸೇರಿ ಒಗ್ಗಟ್ಟಿನಿಂದ ಈ ಸಭೆ ಮೂಲಕ ನಮಗೆ ಶಕ್ತಿ ನೀಡಿದ್ದೀರಿ. ರಾಜ್ಯದ ಈ ಕೃಷ್ಣ ಯೋಜನೆಗೆ ಲಾಲ್ ಬಹದ್ದೂರ್ ಶಾಸ್ತ್ರಿ, ಇಂದಿರಾ ಗಾಂಧಿ ಅವರು ಅಧಿಕಾರದಲ್ಲಿದ್ದಾಗ ಕೊಡುಗೆ ಕೊಟ್ಟರು. ಒಣಭೂಮಿಯಾಗಿದ್ದ ಈ ಭಾಗದ ಜಮೀನನ್ನು ಹಸಿರು ಭೂಮಿಯನ್ನಾಗಿ ಮಾಡಿದರು. ನಿಮನ್ನು ಶಕ್ತಿವಂತರನ್ನಾಗಿ, ಈ ರಾಜ್ಯದ ಆಸ್ತಿಯನ್ನಾಗಿ ಮಾಡಿದ್ದಾರೆ. ಬಹಳ ಮಂದಿ ತಮ್ಮ ಜಮೀನು ತ್ಯಾಗ ಮಾಡಿದ್ದೀರಿ. ಈ ದೇಶಕ್ಕೆ ನೀವು ಮಾಡಿರುವ ತ್ಯಾಗವನ್ನು ನಾವು ಮರೆಯಲು ಸಾಧ್ಯವಿಲ್ಲ.
ಸರ್ಕಾರ ನೀಡಿರುವ ಹಣ ಕಡಿಮೆ ಇರಬಹುದು. ಆದರೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ 8 ವರ್ಷಗಳಲ್ಲಿ ಆಗಿರುವ ಅನ್ಯಾಯ ತಪ್ಪಿಸಿ. ಮುಂದೆ ಬರುವ ಕಾಂಗ್ರೆಸ್ ಸರ್ಕಾರ ನಿಮ್ಮ ಕೈ ಹಿಡಿದು, ನಿಮ್ಮ ಭೂಮಿಯಲ್ಲಿ ನೀರು ಹರಿಸಿ, ಹಸಿರು ಮಾಡುತ್ತದೆ.
ರೈತರಿಗೆ ಸಂಬಳವಿಲ್ಲ. ಪ್ರಮೋಶನ್, ಪಿಂಚಣಿ, ಲಂಚ ಸಿಗುವುದಿಲ್ಲ. ಅದೇ ರೀತಿ ರೈತನಿಗೆ ನಿವೃತ್ತಿಯೂ ಇಲ್ಲ. ಈ ಸಮಾಜದ ಆಧಾರದಸ್ತಂಭ ಕೃಷಿಕ, ಶಿಕ್ಷಕ, ಸೈನಿಕ ಹಾಗೂ ಕಾರ್ಮಿಕ. ಇವರಲ್ಲಿ ಒಬ್ಬರು ಇಲ್ಲದಿದ್ದರೂ ಈ ಸಮಾಜ ಬದುಕಲು ಸಾಧ್ಯವಿಲ್ಲ.
*ಕಾಂಗ್ರೆಸ್ ಪಕ್ಷ ರೈತರ ಪರವಾಗಿ ನಿಲ್ಲಲಿದೆ. ನಮಗೆ ಎಷ್ಟೇ ಕಷ್ಟವಾದರೂ ಮುಂದಿನ ದಿನಗಳಲ್ಲಿ 136 ಸೀಟುಗಳನ್ನು ಗೆದ್ದು ಅಧಿಕಾರಕ್ಕೆ ಬಂದು, ಈ ಭಾಗದ ಕೃಷ್ಣಾ ನೀರಾವರಿ ಯೋಜನೆಗೆ ಐದು ವರ್ಷಗಳಲ್ಲಿ 2 ಲಕ್ಷ ಕೋಟಿ ರು. ನೀಡುವುದಾಗಿ ವಾಗ್ದಾನ ಕೊಡಲು ಇಲ್ಲಿಗೆ ಬಂದಿದ್ದೇವೆ. ಇದು ನಮ್ಮ ಸಂಕಲ್ಪ. ನಾವು ನುಡಿದಂತೆ ನಡೆಯುತ್ತೇವೆ.*
ನಮ್ಮ ಜೀವನ ಸಾರ್ಥಕವಾಗಬೇಕಾದರೆ, ನಾವು ಎಷ್ಟು ಸಂತೋಷವಾಗಿರುತ್ತೇವೆ ಎಂಬುದಕ್ಕಿಂತ ನಮ್ಮಿಂದ ಎಷ್ಟು ಜನ ಸಂತೋಷವಾಗಿರುತ್ತಾರೆ ಎಂಬುದು ಮುಖ್ಯ.
ದೇವರು ವರವನ್ನು ನೀಡುವುದಿಲ್ಲ, ಶಾಪವನ್ನೂ ನೀಡುವುದಿಲ್ಲ. ಕೇವಲ ಅವಕಾಶವನ್ನು ಮಾತ್ರ ನೀಡುತ್ತಾನೆ. ಆದರೆ ನಿಮಗೆ ಕೊಟ್ಟಿರುವ ಅವಕಾಶವನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಯಾವಾಗಲೇ ಅಧಿಕಾರಕ್ಕೆ ಬಂದರೂ ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ನೀತಿ ಅನುಸರಿಸಿದೆ.
ಕಾಂಗ್ರೆಸ್ ಶಕ್ತಿ ಈ ದೇಶದ ಶಕ್ತಿ. ಕಾಂಗ್ರೆಸ್ ಇತಿಹಾಸ ದೇಶದ ಇಥಿಹಾಸ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗೆಲ್ಲಾ ಎಲ್ಲ ವರ್ಗದ ಜನರಿಗೆ ನ್ಯಾಯ ನೀಡುವ ಕಾರ್ಯಕ್ರಮ ರೂಪಿಸುತ್ತದೆ. ನಮ್ಮ ನಾಯಕರು ನಿಮ್ಮ ಮೇಲೆ ನಂಬಿಕೆ ಇಟ್ಟು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರ ಅದಿಕಾರಕ್ಕೆ ಬರಲಿದೆ ಎಂದು ಹೇಳಿದ್ದಾರೆ. ನೀವು ಇಷ್ಟು ಹೊತ್ತು ಕೂತಿದ್ದೀರಿ ಎಂದರೆ ನೀವು ಮತ ಹಾಕುವ ನಂಬಿಕೆ ಇದೆ. ನೀವು ಪ್ರತಿಯೊಬ್ಬರು ಐದು ಮತಗಳನ್ನು ಕಾಂಗ್ರೆಸ್ ಗೆ ಸಿಗುವಂತೆ ಮಾಡಬೇಕು.
ಈ ನಾಡು ಎಲ್ಲ ವರ್ಗಕ್ಕೆ ಸೇರಿದ ನಾಡು. ಜಾತಿ, ಧರ್ಮ ನಮಗೆ ಮುಖ್ಯವಲ್ಲ. ನಾವು ಹುಟ್ಟುವಾಗ ಇಂತಹುದೇ ಜಾತಿ, ಧರ್ಮದಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿ ಹುಟ್ಟಿಲ್ಲ. ಕೃಷಿಕನಿಗೆ ಯಾವ ಜಾತಿ ಧರ್ಮ ಇದೆ? ಇದೇ ಕಾಂಗ್ರೆಸ್ ಜಾತಿ ಹಾಗೂ ನೀತಿ. ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವುದು ಕಾಂಗ್ರೆಸ್ ನೀತಿ.
ಇಂದು ಜನ ಸಾಯುತ್ತಿದ್ದಾರೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಪ್ರಧಾನಿಗಳು ನಿಮ್ಮ ಆದಾಯವನ್ನು ಡಬಲ್ ಮಾಡುತ್ತೇವೆ ಎಂದು ಹೇಳಿದ್ದರು. ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಹಾಕುವುದಾಗಿ ಹೇಳಿದ್ದರು. ನಿಮ್ಮ ಆದಾಯ ಡಬಲ್ ಆಯಿತಾ, ಖಾತೆಗೆ ಹಣ ಬಂತಾ? ನಿಮ್ಮ ಆದಾಯ ಪಾತಾಳಕ್ಕೆ ಹೋಗಿದೆ, ಬೆಲೆ ಗಗನಕ್ಕೇರಿದೆ. ರಸಗೊಬ್ಬರ, ಕೀಟ ನಾಶಕ ಮೇಲೆ ಜಿಎಸ್ಟಿ ಹಾಕಿ ರೈತರನ್ನು ಸಾಯಿಸುವ ಕೆಲಸ ಮಾಡುತ್ತಿದ್ದಾರೆ. ದಿನನಿತ್ಯ ಪಿಕ್ ಪಾಕೆಟ್ ಮಾಡುತ್ತಿದ್ದಾರೆ. 440 ರೂ. ಇದ್ದ ಅಡುಗೆ ಅನಿಲ 1000 ಆಗಿದೆ. ಇದಕ್ಕೆಲ್ಲ ಉಪಾಯ ಎಂದರೆ, ನಿಮಗೆ ನಾವು ಶಕ್ತಿ ನೀಡಬೇಕು. ನಿಮ್ಮ ಮನೆ ಬಾಗಿಲಿಗೆ ಅವಕಾಶ ಬರುತ್ತಿದೆ.
ಬಿಜೆಪಿ ಸರ್ಕಾರ ಬಂದ ನಂತರ ನಿಮ್ಮ ಬದುಕಿನಲ್ಲಿ ಏನಾದರೂ ಅನುಕೂಲವಾಗಿದೆಯೇ? ಬರೀ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಸರ್ಕಾರಿ ಕಚೇರಿಗಳ ಗೋಡೆ ಮುಟ್ಟಿದರೆ ಕಾಸು, ಕಾಸು ಎನ್ನುತ್ತಿವೆ. 40% ಕಮಿಷನ್ ವಸೂಲಿ ಮಾಡಲಾಗುತ್ತಿದೆ. ಈ ಸರಕಾರ ಯೋಜನೆ ಅಂದಾಜು ಮಾಡುವಾಗ 500 ಕೋಟಿ ರೂ ಇದ್ದರೆ ಅದಕ್ಕೆ 1 ಸಾವಿರ ಕೋಟಿ, 100 ಕೋಟಿಯನ್ನು 200 ಕೋಟಿ ಮಾಡುತ್ತದೆ. ಪ್ರತಿ ಅಂದಾಜು ಬಗ್ಗೆ ತನಿಖೆಗೆ ಆದೇಶ ಮಾಡಿ, ಯಾರೆಲ್ಲ ತಪ್ಪು ಮಾಡಿದ್ದಾರೋ ಅವರನ್ನು ಶಿಕ್ಷೆಗೆ ಗುರಿಪಡಿಸಲಾಗುವುದು. ಈಗಾಗಲೇ ಅಂದಾಜು ಸಮಿತಿ ವರದಿಯಲ್ಲಿ 40 ಕೋಟಿ ಕಡಿಮೆ ಮಾಡಿಸಿದೆ. ಆದರೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡಿಲ್ಲ. ಬೆಳಗಾವಿಯಲ್ಲಿ 300 ಕೋಟಿ ಯೋಜನೆಗೆ 800 ಕೋಟಿ ಅಂದಾಜು ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರ ಮಾಡಿದ್ದ ಯೋಜನೆ ವಜಾ ಮಾಡಿದ್ದಾರೆ. ನಿಮ್ಮ ಯೋಜನೆಗಳನ್ನು ನಾವು ಬಿಡುತ್ತೇವಾ? ನಮ್ಮ ಜನರಿಗೆ ಕೊಟ್ಟ ತೊಂದರೆ ನೋಡಿಕೊಂಡು ಸುಮ್ಮನೆ ಕೂರುತ್ತೇವಾ? ಮುಂದಿನ ದಿನಗಳಲ್ಲಿ ನಿಮಗೆ ಉತ್ತರ ಸಿಗಲಿದೆ. ಈ ಭ್ರಷ್ಟ ಸರ್ಕಾರವನ್ನು ನೀವು ಕಿತ್ತು ಹಾಕಬೇಕು. ಅದಕ್ಕೆ ನೀವು ತಯಾರಾಗಬೇಕು.
ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಕಾಲದಲ್ಲಿ ಆರಂಭವಾಗಿ, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಮನಮೋಹನ್ ಸಿಂಗ್ ಅವರ ಕಾಲದಲ್ಲಿ ಅನೇಕ ಅಭಿವೃದ್ಧಿ ಕೆಲಸಗಳನ್ನು ನೀಡಿದೆ. ಈ ದೇಶದಲ್ಲಿ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಸರ್ಕಾರ ಅಧಿಕಾರಕ್ಕೆ ಬರಲಿದೆ. ಆಗ ಕಾನೂನಿನ ಅಡೆತಡೆಗಳನ್ನು ತೆಗೆದು, ಇದನ್ನು ರಾಷ್ಟ್ರೀಯ ಯೋಜನೆಯಾಗಿ ಪರಿವರ್ತನೆಯಾಗಿ ಮಾಡಲು ಶಕ್ತಿ ನೀಡಬೇಕು.
ಹೆಚ್.ಕೆ ಪಾಟೀಲ್ ಅವರು ಮಹದಾಯಿ ವಿಚಾರವಾಗಿ ಪ್ರಸ್ತಾಪ ಮಾಡಿದ್ದರು. ಕೇಂದ್ರ ಮಂತ್ರಿಗಳು ಈ ಯೋಜನೆಯ ಡಿಪಿಆರ್ ಗೆ ಕೇಂದ್ರ ಜಲಶಕ್ತಿ ಸಚಿವಾಲಯ ಅನುಮೋದನೆ ನೀಡಿರುವ ಆದೇಶವನ್ನು ಪ್ರಕಟಿಸಿದ್ದಾರೆ. ಈ ಆದೇಶದ ದಿನಾಂಕ ಇಲ್ಲ. ಕಳೆದ ಮೂರು ವರ್ಷಗಳಿಂದ ಏನನ್ನೂ ಮಾಡಲಾಗದ ಬಿಜೆಪಿಯವರು, ಈಗ ಗೋವಾಯದಲ್ಲಿ, ಕರ್ನಾಟಕದಲ್ಲಿ ಕೇಂದ್ರದಲ್ಲಿ ಅವರೇ ಅಧಿಕಾರದಲ್ಲಿದ್ದಾರೆ. ಆದರೂ ನಮ್ಮ ರಾಜ್ಯಕ್ಕೆ ನ್ಯಾಯ ಕೊಡಲು ಆಗಿಲ್ಲ. ಈ ಆದೇಶದ ಕಡೆಯಲ್ಲಿ ಸುಪ್ರೀಂ ಕೋರ್ಟ್ ತೀರ್ಮಾನ ಆಗಬೇಕು ಎಂದು ಹೇಳಿದ್ದಾರೆ. ಗೋವಾ ಸರ್ಕಾರದ ಮೇಲೆ ಒತ್ತಡ ಹೇರಿ ನ್ಯಾಯಾಲಯದಲ್ಲಿ ಸಲ್ಲಿಸಿರುವ ಅರ್ಜಿ ಹಂಪಡೆಯುವಂತೆ ಮಾಡಬಹುದಿತ್ತು. ಬಿಜೆಪಿಯದ್ದು ಬರೀ ಮೋಸ. ಇದೊಂದು ಕಾಗದದ ಮೇಲಿರುವ ಸರ್ಕಾರ. ಯಾವುದೂ ಕಾರ್ಯರೂಪಕ್ಕೆ ಬರುವುದಿಲ್ಲ.
ಬದುಕು ಹಾಗೂ ಭಾವನೆ ನಡುವೆ ಸಾಕಷ್ಟು ವ್ಯತ್ಯಾಸವಿದೆ. ಅವರು ಕೇವಲ ಭಾವನೆ ಮೇಲೆ ರಾಜಕಾರಣ ಮಾಡುತ್ತಿದ್ದಾರೆಯೇ ಹೊರತು ಬದುಕಿನ ಬಗ್ಗೆ ಚಿಂತನೆ ಮಾಡಿಲ್ಲ. ಯಾರ ಹೊಟ್ಟೆಯನ್ನೂ ತುಂಬಿಸುವ ಕೆಲಸ ಮಾಡುತ್ತಿಲ್ಲ. ಧರ್ಮ, ಜಾತಿ ವಿಚಾರದ ಮೇಲೆ ರಾಜಕೀಯ ಮಾಡುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಜನರಿಗೆ ಯಾವುದೇ ಅನುಕೂಲವಾಗಿಲ್ಲ. ರಾಜ್ಯ ಸರ್ಕಾರಕ್ಕೆ ಕೇವಲ 90 ದಿನ ಮಾತ್ರ ಉಳಿದಿದೆ. ನೀವೆಲ್ಲರೂ ಬಿಜೆಪಿಗೆ ಬಾಗಿಲು ಬಂದ್ ಮಾಡಬೇಕು. ಕಾಂಗ್ರೆಸ್ ಕಾರ್ಯಕರ್ತರು ವಿಧಾನಸೌಧದ ಮೂರನೇ ಮಹಡಿಯಲ್ಲಿ ಓಡಾಡುವಂತೆ ಕಾಂಗ್ರೆಸ್ ಅಧಿಕಾರಕ್ಕೆ ತರಬೇಕು. ಆಶೀರ್ವಾದ ಮಾಡಬೇಕು ಎಂದು ಪ್ರಾರ್ಥಿಸುತ್ತೇನೆ.’
[30/12/2022, 8:22 PM] Kpcc official: ಬಿಜೆಪಿ ಸರ್ಕಾರದಲ್ಲಿ ಆರೋಪಿಗಳಿಗೆ ಶ್ರೀರಕ್ಷೆ, ಆರೋಪಿಸಿದವರಿಗೆ ಶಿಕ್ಷೆ!
40% ಕಮಿಷನ್ ಕಿರುಕುಳ ತಾಳಲಾರದೆ ಬಹಿರಂಗ ವೇದಿಕೆಗೆ ಬಂದು ಆರೋಪ ಮಾಡಿದ ಗುತ್ತಿಗೆದಾರರನ್ನು ಬಂಧಿಸಿದ ಸರ್ಕಾರ ಆರೋಪದ ಬಗ್ಗೆ ಸಣ್ಣ ತನಿಖೆಗೂ ವಹಿಸದ ಸಿಎಂ @BSBommai ಅವರೇ ಗುತ್ತಿಗೆದಾರರ ಸಾವುಗಳಿಗೆ ನೇರ ಹೊಣೆ.
ಜೊತೆಗೆ ಬೇಜವಾಬ್ದಾರಿ ಪ್ರಧಾನಿ ಕೂಡ!
[31/12/2022, 9:32 AM] Kpcc official: *ವಿಜಯಪುರದಲ್ಲಿ ಡಿ.ಕೆ.ಶಿವಕುಮಾರ್ ಅವರು ಮಾಧ್ಯಮಗಳಿಗೆ ಶನಿವಾರ ನೀಡಿದ ಪ್ರತಿಕ್ರಿಯೆ:*
ರಾಜ್ಯದ ಜನರಿಗೆ ಬಿಜೆಪಿ ಮಾಡುತ್ತಿರುವ ಅನ್ಯಾಯ ಯಾವ ಕಾಲದಲ್ಲೂ ಆಗಿರಲಿಲ್ಲ. ಇದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಲು ನಮ್ಮ ಪ್ರತಿಭಟನಾ ಸಮಾವೇಶಕ್ಕೆ ಅಪಾರ ಪ್ರಮಾಣದಲ್ಲಿ ಜನ ಸೇರಿದ್ದರು.
ಅಮಿತ್ ಶಾ ಅವರ ರಾಜ್ಯ ಪ್ರವಾಸ ಹಾಗೂ ಯೋಜನೆ ಘೋಷಣೆ ಚುನಾವಣೆ ಮೇಲೆ ಪ್ರಭಾವ ಬೀರುತ್ತದೆಯೇ ಎಂದು ಕೇಳಿದಾಗ, ' ಅಧಿಕಾರ ಇದ್ದಾಗ ಕೆಲಸ ಮಾಡದವರು ಅಧಿಕಾರ ಹೋಗುವ ಸಮಯದಲ್ಲಿ ಯೋಜನೆ ಘೋಷಣೆ ಮಾಡಿದರೆ ಪ್ರಯೋಜನವೇನು? ಉಳಿದಿರುವ 100 ದಿನಗಳಲ್ಲಿ ಯಾವ ಯೋಜನೆ ಜಾರಿ ಆಗುತ್ತದೆ? ಇದು ಕೇವಲ ಕಾಗದದ ಮೇಲೆ ಉಳಿಯುವ ಯೋಜನೆ ಅಷ್ಟೇ. ಕಳೆದ ಚುನಾವಣೆಯಲ್ಲಿ ನೀಡಿದ್ದ 600 ಭರವಸೆಗಳಲ್ಲಿ 550 ಅನ್ನು ಜಾರಿ ಮಾಡಿಲ್ಲ. ನಮ್ಮ ಪಕ್ಷ ಕೊಟ್ಟಿದ್ದ 169 ಯೋಜನೆಗಳ ಪೈಕಿ 168 ಯೋಜನೆಗಳನ್ನು ಜಾರಿ ಮಾಡಿದ್ದೇವೆ' ಎಂದು ತಿಳಿಸಿದರು.
ಮೀಸಲಾತಿ ವಿಚಾರವಾಗಿ ರಾಜ್ಯ ಸರ್ಕಾರದ ನಡೆ ಬಗ್ಗೆ ಕೇಳಿದಾಗ, 'ಅವರು ನಮ್ಮನ್ನು ಶಾಲಾ ಮಕ್ಕಳೆಂದು ಭಾವಿಸಿದ್ದಾರೆ. ಅವರ ಕ್ರಮದಿಂದ ಯಾರಿಗೆ ಅನುಕೂಲ? ಇರುವ ಮೀಸಲಾತಿ ವರ್ಗ ತೆಗೆದುಹಾಕಲು ಹೇಗೆ ಸಾಧ್ಯ? ಇದು ಅಸಾಧ್ಯ. ಶೇ. 10 ರಷ್ಟು ಮೀಸಲಾತಿ ತೆಗೆದರೆ ಅವರ ಭವಿಷ್ಯ ಏನಾಗಬೇಕು? ಯಾವುದೇ ಕ್ರಮವನ್ನು ಸಂವಿಧಾನ ಬದ್ಧ, ಕಾನೂನು ಬದ್ಧವಾಗಿ ತೆಗೆದುಕೊಳ್ಳಬೇಕು. ಈ ಕ್ರಮದಿಂದ ಪಂಚಮಸಾಲಿ ಹಾಗೂ ಒಕ್ಕಲಿಗರಿಗೆ ನ್ಯಾಯ ಸಿಗುತ್ತದೆ ಎಂದು ಬಿಜೆಪಿ ನಾಯಕರನ್ನು ಬಿಟ್ಟು ಆಯಾ ಸಮುದಾಯದ ಮುಖಂಡರಿಂದ ಹೇಳಿಕೆ ಕೊಡಿಸಲಿ. ಸಿಎಂ ಯಾಕೆ ಈ ವಿಚಾರವನ್ನು ಖುದ್ದಾಗಿ ಘೋಷಣೆ ಮಾಡಿಲ್ಲ? 3 ತಿಂಗಳ ನಂತರ ಚುನಾವಣೆ ಬಂದಾಗ ಮೀಸಲಾತಿ ಪ್ರಮಾಣ ಎಷ್ಟು ಎಂದು ತೀರ್ಮಾನ ಮಾಡುತ್ತಾರೆಯೇ? ಇದು ಮೋಸ ಮಾಡುವ ತಂತ್ರ. ಯಾವ ಸಮಾಜಕ್ಕೂ ಅವರು ನ್ಯಾಯ ಒದಗಿಸಿಕೊಟ್ಟಿಲ್ಲ. ನಾವು ಸಮಬಾಳು, ಸಮಪಾಲು ಎಂಬ ನೀತಿ ಮೇಲೆ ಕೇಳುತ್ತಿದ್ದೇವೆ. ಒಕ್ಕಲಿಗರು ಶೇ.12 ರಷ್ಟು ಮೀಸಲಾತಿ ಕೇಳಿದ್ದು ಅದನ್ನು ಘೋಷಣೆ ಮಾಡಲಿ. ಪಂಚಮಸಾಲಿ ಸಮಾಜ ಆಗ್ರಹಿಸಿರುವ ಬೇಡಿಕೆ ಘೋಷಿಸಲಿ. ಪರಿಶಿಷ್ಟರಿಗೆ ನೀಡಲಾಗಿರುವ ಮೀಸಲಾತಿ ಹೆಚ್ಚಳವನ್ನು ಸಂವಿಧಾನದ 9ನೇ ಶೆಡ್ಯೂಲ್ ನಲ್ಲಿ ಸೇರಿಸಬೇಕಿತ್ತು. ಇದುವರೆಗೂ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕೂಡ ಹೋಗಿಲ್ಲ. ಇಲ್ಲಿ ಕೇವಲ ಆದೇಶ ಮಾಡಿದರೆ ಆಗುತ್ತದೆಯೇ? ಎಲ್ಲದಕ್ಕೂ ಕಾನೂನು ತೊಡಕು ಇದೆ. ಯಾರ ವಿರೋಧವನ್ನೂ ಕಟ್ಟಿಕೊಳ್ಳಬಾರದು ಎಂದು ಆಡುತ್ತಿರುವ ನಾಟಕ. ಈ ಬಗ್ಗೆ ಎಲ್ಲಾ ನಾಯಕರ ಜತೆ ಚರ್ಚೆ ಮಾಡಿ ನಾಳೆ ಅಥವಾ ನಾಡಿದ್ದು ತಿಳಿಸುತ್ತೇವೆ ' ಎಂದು ಹೇಳಿದರು.
ಎಲ್ಲರಿಗೂ ಮೀಸಲಾತಿ ಕೊಡಲು ಸಾಧ್ಯವಿಲ್ಲ ಎಂಬ ನಿರಾಣಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, ' ಬಿಜೆಪಿಯಲ್ಲಿ ಯತ್ನಾಳ್ ಅವರಿಗೆ ಈ ವಿಚಾರದಲ್ಲಿ ತಗಾದೆ ಎತ್ತಿದರೆ ಪಕ್ಷದಿಂದ ಕಿತ್ತು ಹಾಕುವ ಬೆದರಿಕೆ ಹಾಕಿದ್ದಾರೆ. ಯತ್ನಾಳ್ ಅವರು ಈಗ ಈ ವಿಚಾರದಲ್ಲಿ ಹೇಳಿಕೆ ನೀಡಲಿ. ಬೆಂಬಲ ನೀಡಬೇಕು ಇಲ್ಲ ವಿರೋಧ ವ್ಯಕ್ತಪಡಿಸಬೇಕು. ಬಾಯಿ ಮುಚ್ಚಿಕೊಂಡಿರುವುದು ಏಕೆ? ಅಷ್ಟೆಲ್ಲ ಮಾತನಾಡುತ್ತಿದ್ದವರು ಈಗ ಯಾಕೆ ಮಾತನಾಡುತ್ತಿಲ್ಲ. ಸಿಎಂ ಖುದ್ದಾಗಿ ಈ ಬಗ್ಗೆ ನಿರ್ಧಾರ ಪ್ರಕಟಿಸಿಲ್ಲ ಏಕೆ? ಇವರು ಕೊಡುವ ಚಾಕಲೇಟ್ ಒಪ್ಪಲು ಸಾಧ್ಯವಿಲ್ಲ. ಇವರದು ಬರೀ ಮೋಸ. ಎಲ್ಲಾ ಸಮಾಜಕ್ಕೂ ಬ್ರಹ್ಮಾಂಡ ಮೋಸ ಮಾಡಿದ್ದಾರೆ ' ಎಂದು ತಿಳಿಸಿದರು.
[31/12/2022, 2:23 PM] Kpcc official: ಕುಟುಂಬ ರಾಜಕಾರಣದ ಭ್ರಷ್ಟ ಪಕ್ಷಗಳನ್ನು ದೂರವಿಡಿ ಎಂದರೆ ಬಿಜೆಪಿಯನ್ನ ದೂರವಿಡಿ ಎಂದರ್ಥವಲ್ಲವೇ @BJP4Karnataka?
ಶೆಟ್ಟರ್ ಕುಟುಂಬ, BSY ಕುಟುಂಬ, ನಿರಾಣಿ ಕುಟುಂಬ, ಈಶ್ವರಪ್ಪ ಕುಟುಂಬ ಸೇರಿದಂತೆ ಹಲವು ಕುಟುಂಬಗಳ ಪಕ್ಷವಾಗಿರುವ ಹಾಗೂ ಭ್ರಷ್ಟಾಚಾರವನ್ನೇ ಉಸಿರಾಡುತ್ತಿರುವ ಬಿಜೆಪಿಯನ್ನ ದೂರವಿಡಿ ಎಂಬ ಸಲಹೆಯನ್ನು ಕನ್ನಡಿಗರು ಪಾಲಿಸುವರು!
[31/12/2022, 2:23 PM] Kpcc official: ಬಿಜೆಪಿ ಎಂದರೆ ರಾಗ, ತಾಳ, ಮೇಳವಿಲ್ಲದ ಸಂಗೀತ ಕಚೇರಿ ಇದ್ದಂತೆ!
ಬಿಜೆಪಿ ನಡೆಸಿದ್ದು ಸಮವೇಶವಲ್ಲ, ಜನರನ್ನು ರಂಜಿಸುವ ಹಾಸ್ಯದ ರಸಮಂಜರಿ ಕಾರ್ಯಕ್ರಮ!
ಅಮಿತ್ ಶಾ ಅವರ ಹಿಂದಿ ಭಾಷಣ ಅನುವಾದಿಸಲು @CTRavi_BJP ಅಥವಾ @ShobhaBJP ಅವರೇ ಸೂಕ್ತರಾಗಿದ್ದರು ಅಲ್ಲವೇ @BJP4Karnataka?
[31/12/2022, 2:34 PM] Kpcc official: ಕರ್ನಾಟಕ ಮೂಲದ ಬ್ಯಾಂಕುಗಳನ್ನು ನಾಶಪಡಿಸಿದ್ದಾಯ್ತು, ಈಗ KMF ಮೇಲೆ ಕೇಂದ್ರ ಸರ್ಕಾರದ ವಕ್ರದೃಷ್ಟಿ ಬಿದ್ದಿದೆ.
ಕರ್ನಾಟಕದ ರೈತರ ಪಾಲಿನ ಕಾಮದೇನುವಂತಿರುವ KMF ವಿಲೀನದ ಹೆಸರಲ್ಲಿ ಮುಳುಗಿಸುವ ಬಿಜೆಪಿಯ ಹುನ್ನಾರವನ್ನು ತಡೆಯಲು ಕನ್ನಡಿಗರು ಸಜ್ಜಾಗಬೇಕಿದೆ.
ಕರ್ನಾಟಕದ ಅಸ್ಮಿತೆ, ಅರ್ಥಿಕತೆಗಳೆಲ್ಲವನ್ನೂ ಅಪೋಷನ ಪಡೆಯುವುದೇ ಬಿಜೆಪಿ ಅಜೆಂಡಾ.
[31/12/2022, 4:53 PM] Kpcc official: 2022 ರ ವರ್ಷ ಬಿಜೆಪಿ ಹಗರಣಗಳ ವರ್ಷ
2022 ರಲ್ಲಿ ಯಾವ ಹಗರಣವಿಲ್ಲದ ಅಥವಾ ವಿವಾದಗಳಿಲ್ಲದ ದಿನಗಳೇ ಇರಲಿಲ್ಲ. ಅಷ್ಟರಮಟ್ಟಿಗೆ ರಾಜ್ಯ ಬಿಜೆಪಿ ಸರ್ಕಾರ ಹಗರಣಗಳಲ್ಲಿ ಮುಳುಗಿತ್ತು.
ಜನವರಿಯಿಂದ-ಡಿಸೆಂಬರ್ ವರೆಗಿನ ಬಿಜೆಪಿ ಹಗರಣಗಳ ಪಟ್ಟಿ ಇಲ್ಲಿದೆ.
#PSIScam #40PercentSarkara #PayCM #VoterIdScam
[31/12/2022, 4:53 PM] Kpcc official: ಸಾಲ ಮಾಡಿ ಕಾಮಗಾರಿಗೆ ಬಂಡವಾಳ ಹೂಡಿದ್ದ ಗುತ್ತಿಗೆದಾರ ಪ್ರಸಾದ್ ಅವರಿಗೆ ಬಿಲ್ ಬಿಡುಗಡೆ ಮಾಡದೆ ಸತಾಯಿಸುತ್ತಿದ್ದ ಕಾರಣ ಆತ್ಮಹತ್ಯೆಯ ದಾರಿ ಹಿಡಿದಿದ್ದಾರೆ.
ಭ್ರಷ್ಟ @BJP4Karnataka ಸರ್ಕಾರದಿಂದಾಗಿ ಗುತ್ತಿಗೆದಾದರು ನಮಗೆ ಸಾವೇ ಗತಿ ಎಂಬ ಹಂತಕ್ಕೆ ಬಂದಿದ್ದಾರೆ.
@BSBommai ಅವರೇ, ಇನ್ನೆಷ್ಟು ಬಲಿಗಾಗಿ ಕಾಯುತ್ತಿರುವಿರಿ?
[31/12/2022, 4:53 PM] Kpcc official: '@AmitShah ಅವರೇ,
ಗುತ್ತಿಗೆದಾರರ 40% ಕಮಿಷನ್ ಆರೋಪದ ಬಗ್ಗೆ ತಾವು ತುಟಿ ಬಿಚ್ಚದೆ ಇರುವುದೇಕೆ?
ಆತ್ಮಹತ್ಯೆ ದಾರಿ ಹಿಡಿದಿರುವ ಗುತ್ತಿಗೆದಾರರೊಂದಿಗೆ ಸಮಾಲೋಚನೆ ನಡೆಸುವುದಿಲ್ಲವೇ?
ಆತ್ಮಹತ್ಯೆ ಮಾಡಿಕೊಂಡ ಸಂತೋಷ್ ಪಾಟೀಲ್, ಪ್ರಸಾದ್ ಕುಟುಂಬಕ್ಕೆ ಸಾಂತ್ವಾನ ಹೇಳುವುದಿಲ್ಲವೇ?
ಗುತ್ತಿಗೆದಾರರ ಆರೋಪದ ಬಗ್ಗೆ ತನಿಖೆಗೆ ಇಷ್ಟವಿಲ್ಲವೇ?
[01/01, 2:22 PM] Kpcc official: ರೈತರ ಪ್ರಮುಖ ಶತ್ರುಗಳು -
>ಪ್ರಕೃತಿ ವಿಕೋಪ
>ಬೆಳೆಗಳ ರೋಗ ರುಜಿನಗಳು
>ಹಾಗೂ ಬಿಜೆಪಿ ಸರ್ಕಾರ!
ರೈತರ ಮೇಲೆ ಬಿಜೆಪಿ ಸರ್ಕಾರಕ್ಕೆ ಜನ್ಮ ಜನ್ಮಾಂತರದ ದ್ವೇಷ ಇದ್ದಂತಿದೆ!
ರಸಗೊಬ್ಬರ ಪೂರೈಕೆಯಲ್ಲಿನ ಸವಾಲುಗಳನ್ನು, ರಸಗೊಬ್ಬರದ ಕಾಳಸಂತೆಯನ್ನು ನಿರ್ವಹಿಸುವೆಡೆ ಗಮನ ಕೊಡದ ಸರ್ಕಾರದಿಂದಾಗಿ ಫಸಲು ಪಡೆಯದಂತಾಗಿದೆ.
[01/01, 4:51 PM] Kpcc official: *ಡಿ.ಕೆ. ಶಿವಕುಮಾರ್ ಅವರ ಮಾಧ್ಯಮ ಪ್ರತಿಕ್ರಿಯೆ:*
ರಾಜ್ಯದ ಜನತೆಗೆ ತುಂಬು ಹೃದಯದಿಂದ ಹೊಸ ವರ್ಷದ ಶುಭಶಯಗಳನ್ನು ಕೋರುತ್ತೇನೆ. ಕಳೆದ ಮೂರು ವರ್ಷಗಳಿಂದ ರಾಜ್ಯಕ್ಕೆ ಬಂದಿರುವ ಕಳಂಕವನ್ನು 2023 ರಲ್ಲಿ ತೆಗೆದುಹಾಕುವ ಕೆಲಸ ಮಾಡಬೇಕು. ಈ ರಾಜ್ಯದ ಜನರು ಬದಲಾವಣೆ ತರುತ್ತಾರೆಂದು ನಾನು ನಂಬಿದ್ದೇನೆ.
ಅಮಿತ್ ಶಾ ಅವರು ಎರಡು ದಿನಗಳ ಕಾಲ ರಾಜ್ಯ ಪ್ರವಾಸ ಮಾಡಿ, ರಾಜ್ಯದಲ್ಲಿ ಆಡಳಿತ ಸರಿಯಿಲ್ಲ, ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ವಹಿಸಿಕೊಳ್ಳಲು ಯಾರೂ ಸಿದ್ಧರಿಲ್ಲ, ಈಗಿರುವ ಮುಖಂಡರ ನಾಯಕತ್ವದಲ್ಲಿ ಮುಂದಿನ ಚುನಾವಣೆ ಗೆಲ್ಲಲು ಆಗುವುದಿಲ್ಲ ಎಂಬುದನ್ನು ಒಪ್ಪಿಕೊಂಡು, ಪ್ರಧಾನ ಮಂತ್ರಿಗಳ ಮುಖಂಡತ್ವದಲ್ಲಿ ರಾಜ್ಯದಲ್ಲಿ ಚುನಾವಣೆ ಎದುರಿಸುವುದಾಗಿ ಸತ್ಯ ನುಡಿದಿದ್ದಾರೆ. ಇದಕ್ಕಾಗಿ ನಾನು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ.
ಕಾಂಗ್ರೆಸ್ ಪಕ್ಷವು ಮಲ್ಲಿಕಾರ್ಜುನಖರ್ಗೆ, ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ, ಪರಮೇಶ್ವರ್, ಹೆಚ್.ಕೆ. ಪಾಟೀಲ್, ಎಂ.ಬಿ. ಪಾಟೀಲ್, ಹರಿಪ್ರಸಾದ್ ಸೇರಿದಂತೆ ಹಲವು ನಾಯಕರ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಲಲಿದೆ. ನಮ್ಮ ಸಾಮೂಹಿಕ ನಾಯಕತ್ವವನ್ನು ಸೋಲಿಸಲು ಸಾಧ್ಯವಿಲ್ಲ ಎಂದು ತಿಳಿದು ಪ್ರಧಾನಮಂತ್ರಿಗಳ ಹೆಸರನ್ನು ಮುಂಚೂಣಿಗೆ ಇಟ್ಟಿದ್ದಾರೆ.
ಕಳೆದ ಮೂರು ವರ್ಷಗಳಿಂದ ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವರ ಬಿಜೆಪಿ ಸರ್ಕಾರದ ಆಡಳಿತ ಸಂಪೂರ್ಣ ವಿಫಲ ಆಗಿದೆ ಎಂಬುದಕ್ಕೆ ಅವರ ನುಡಿ ಮುತ್ತುಗಳೇ ಸಾಕ್ಷಿ.
ಕೆಎಂಎಫ್ ಹಾಗೂ ಅಮೂಲ್ ವಿಲೀನದ ಬಗ್ಗೆ ಕೇಳಿದ ಪ್ರಶ್ನೆಗೆ, ' ಶಾ ಅವರು ಹೇಳಿರುವ ಮಾತನ್ನು ರಾಜ್ಯ ಸಹಕಾರಿ ಸಚಿವ ಸೋಮಶೇಖರ್ ಹಾಗೂ ಮುಖ್ಯಮಂತ್ರಿ ಬೊಮ್ಮಾಯಿ ಅವರು ನಿರ್ಣಯದ ಮೂಲಕ ಪ್ರಸ್ತಾಪಿಸಲಿ. ಇದು ರಾಜ್ಯಕ್ಕೆ ಸಂಬಂಧಿಸಿದ ವಿಚಾರ. ನಾನೂ ಸಹಕಾರ ಸಚಿವನಾಗಿದ್ದೆ. ನಮ್ಮ ಹಾಲು, ನಮ್ಮ ನೀರು, ನಮ್ಮ ಜನ, ನಮ್ಮ ಹಕ್ಕು. ನಮ್ಮ ಕನಕಪುರದಲ್ಲಿ ಅಮೂಲ್ ಕಂಪನಿಗಿಂತ ದೊಡ್ಡ ಹಾಲು ಉತ್ಪಾದನೆ ಘಟಕ ಇದೆ. ಬೆಂಗಳೂರಿನ ಕೆಎಂಎಫ್, ಮಂಡ್ಯ, ಹಾಸನ ಸೇರಿದಂತೆ ಎಲ್ಲ ಕಡೆಗಳಲ್ಲಿ ನಮ್ಮ ರೈತರು ಹಾಲು ಒಕ್ಕೂಟ ಸಂಸ್ಥೆಗಳನ್ನು ಬೆಳೆಸಿದ್ದಾರೆ. ನಮ್ಮ ಸಂಸ್ಥೆ ಲಾಭದಲ್ಲಿ ನಡೆಯುತ್ತಿದೆ. ನಮ್ಮ ರೈತರನ್ನು ಶಕ್ತಿಶಾಲಿ ಮಾಡಬೇಕು. ನಮಗೆ ಬೇರೆ ರಾಜ್ಯಗಳ ಸಂಸ್ಥೆ ಜತೆ ವಿಲೀನ ಮಾಡಿಕೊಳ್ಳುವ ಅಗತ್ಯವಿಲ್ಲ. ಆ ಸಂಸ್ಥೆ ಕೂಡ ಉತ್ತಮ ಸಂಸ್ಥೆ ಇರಬಹುದು. ಅದರ ಜತೆ ಆರೋಗ್ಯಕರ ಸ್ಪರ್ಧೆ ಮಾಡುತ್ತೇವೆ. ಆ ಶಕ್ತಿ ರಾಜ್ಯದ ಹಾಲು ಉತ್ಪಾದಕರಿಗೆ ಇದೆ ಎಂಬುದನ್ನು ಮುಖ್ಯಮಂತ್ರಿಗೆ ಹೇಳಬಯಸುತ್ತೇನೆ' ಎಂದು ತಿಳಿಸಿದರು.
ಶಾ ಅವರು ಬಿಜೆಪಿ ನಾಯಕರಿಗೆ ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ ಟಾಸ್ಕ್ ನೀಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ' ಅವರ ಪಕ್ಷದ ಅಜೆಂಡಾ, ಅವರು ಏನಾದರೂ ಮಾಡಿಕೊಳ್ಳಲಿ. ಅವರ ವಿಚಾರದಲ್ಲಿ ನಾನು ಮಾತನಾಡುವುದಿಲ್ಲ. ನಾನು ಬಿಜೆಪಿ ಅವರಂತೆ ಗೊಂದಲದಲ್ಲಿ ಇಲ್ಲ. ಕಳೆದ ಬಾರಿ ಅವರು ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಚುನಾವಣೆ ನಡೆಯಲಿದೆ ಎಂದು ಹೇಳಿದ್ದರು. ಈಗ ಅವರ ನಾಯಕತ್ವ ಹೋಗಿದೆ, ಮೋದಿ ಅವರ ನಾಯಕತ್ವ ಬಂದಿದೆ. ಉಳಿದ ಬಿಜೆಪಿ ನಾಯಕರು ನಮ್ಮ ಪಕ್ಷದ ನಾಯಕರು ಬರುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಅಂದರೆ ನಮ್ಮನ್ನು ಸೋಲಿಸಲು ಬಿಜೆಪಿ ರಾಜ್ಯ ನಾಯಕರ ಕೈಯಲ್ಲಿ ಸಾಧ್ಯವಾಗದೆ ಕೇಂದ್ರ ತಂಡ ಆಗಮಿಸುತ್ತಿದೆ. ಬರಲಿ ತೊಂದರೆ ಇಲ್ಲ. ಜನರು ನಮ್ಮ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಬಿಜೆಪಿಯವರ ಆಚಾರ-ವಿಚಾರ, ದುರಾಡಳಿತವನ್ನು ಜನ ನೋಡಿದ್ದಾರೆ' ಎಂದು ತಿಳಿಸಿದರು.
ಬಿಜೆಪಿ ಹಿಂದೂ ಅಜೆಂಡಾ ಪ್ರಯೋಗಿಸಲಿದೆ ಎಂಬ ಪ್ರಶ್ನೆಗೆ, ' ಅವರು ಭಾವನೆ ಮೇಲೆ ಹೋದರೆ ನಾವು ಬದುಕಿನ ಮೇಲೆ ಹೋಗುತ್ತೇವೆ. ಭಾವನೆ ಮತ್ತು ಬದುಕಿನ ನಡುವೆ ವ್ಯತ್ಯಾಸವಿದೆ' ಎಂದು ತಿಳಿಸಿದರು.
[01/01, 5:31 PM] Kpcc official: ಸೈನಿಕರ ಮೇಲಿನ ಬೂಟಾಟಿಕೆಯ ಪ್ರೀತಿ ತೋರುವ ಬಿಜೆಪಿ ವಾಸ್ತವದಲ್ಲಿ ನಿವೃತ್ತ ಯೋಧರಿಗೆ ವಂಚಿಸುತ್ತಿದೆ.
ರಾಯಚೂರಿನಲ್ಲಿ ನಿವೃತ್ತ ಯೋಧರ ನಿವೇಶನಕ್ಕೆ ಜಾಗ ಮಂಜೂರು ಮಾಡದೆ ಅಲೆದಾಡಿಸುತ್ತಿರುವ ಬಿಜೆಪಿ ಸರ್ಕಾರ ಯೋಧರಿಗೆ ಕನಿಷ್ಠ ಗೌರವ ಕೊಡುವುದನ್ನೂ ಮರೆತಿದೆ.
ಹುಸಿ ಭರವಸೆ ಕೊಟ್ಟು ಬಂದ @RAshokaBJP ನಂತರ ಯೋಧರತ್ತ ಕಣ್ಣೆತ್ತಿಯೂ ನೋಡಲಿಲ್ಲ.
[01/01, 5:39 PM] Kpcc official: ◆ಸಿಎಂ ಹುದ್ದೆಗೆ ₹2500 ಕೋಟಿ
◆ನಿರಾಣಿ ಹಣ ನೀಡಿ ಮಂತ್ರಿಯಾದವರು
◆ಸಚಿವ ಸ್ಥಾನಗಳು ಮಾರಾಟಗೊಂಡಿವೆ
- ಯತ್ನಾಳ್
ಕರ್ನಾಟಕವು ಬಿಜೆಪಿಯ ATM ಎಂಬುದನ್ನು ಬಿಜೆಪಿಯವರೇ ಹೇಳಿದ್ದಾರೆ.
ರಾಜಕೀಯ ಎಂದರೆ ನನಗೆ ಬಿಸ್ನೆಸ್ ಎಂದ @AmitShah ಅವರು ಮೊನ್ನೆ ಬಂದಿದ್ದು ಆಪರೇಷನ್ ಕಮಲದ ಮೂಲಕ ಮಾಡಿದ್ದ ಹೂಡಿಕೆಯ ಲಾಭಾಂಶ ಪಡೆದು ಹೋಗುವುದಕ್ಕಾ?
[01/01, 6:53 PM] Kpcc official: ಬಿಜೆಪಿ ಎಂದರೆ ಭಸ್ಮಾಸುರ ಜನತಾ ಪಾರ್ಟಿ!
ಭಸ್ಮಾಸುರ ತಲೆಯ ಮೇಲೆ ಕೈ ಇಟ್ಟರೆ ಭಸ್ಮವಾಗುತ್ತಿದ್ದರು, ಆದರೆ ಬಿಜೆಪಿಯವರು ಕಣ್ಣು ಹಾಕಿದರೆ ಸಾಕು ಭಸ್ಮವಾಗುತ್ತದೆ.
ಕನ್ನಡಿಗರ ಕೆನರಾ, ಕಾರ್ಪೊರೇಷನ್, ವಿಜಯಾ ಬ್ಯಾಂಕುಗಳ ಅಸ್ತಿತ್ವ ಕಸಿದ ಕೇಂದ್ರ ಸರ್ಕಾರ ಈಗ KMF ಗೆ ಕಣ್ಣು ಹಾಕಿದೆ.
KMF ಉಳಿಸಲು ಕಾಂಗ್ರೆಸ್ ಬದ್ಧವಾಗಿದೆ.
#SaveNandini
[02/01, 3:29 PM] Kpcc official: *ಹುಬ್ಬಳ್ಳಿಯಲ್ಲಿ ಡಿ.ಕೆ ಶಿವಕುಮಾರ್ ಅವರ ಮಾಧ್ಯಮ ಪ್ರತಿಕ್ರಿಯೆ:*
ಬಿಜೆಪಿ ಸುಳ್ಳಿನ ಯೂನಿವರ್ಸಿಟಿ. ಮಹಾರಾಷ್ಟ್ರ, ಗೋವಾ, ಕರ್ನಾಟಕ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರಗಳೇ ಅಧಿಕಾರದಲ್ಲಿವೆ. ಕಳೆದ ಮೂರುವರೆ ವರ್ಷಗಳಿಂದ ಏನನ್ನೂ ಮಾಡದ ಬಿಜೆಪಿ ಈಗ ನಾವು ಜನರ ಪರ ಧ್ವನಿ ಎತ್ತುತ್ತೇವೆ ಎಂದು ಹೇಳಿದ ಬಳಿಕ ಡಿಪಿಆರ್ ಒಪ್ಪಿಗೆ ಪಡೆದಿದ್ದೇವೆ ಎಂದು ಹೇಳುತ್ತಿದ್ದಾರೆ.
ಎಸ್.ಎಂ. ಕೃಷ್ಣಾ ಅವರ ಕಾಲದಲ್ಲಿ ಈ ಯೋಜನೆ ಆರಂಭಿಸಲು ತೀರ್ಮಾನಿಸಲಾಯಿತು. ಆಗ ಹೆಚ್.ಕೆ. ಪಾಟೀಲರು ನೀರಾವರಿ ಸಚಿವರಾಗಿದ್ದರು. ಆದರೆ ಕಾನೂನು ಸಮರದಿಂದ ನ್ಯಾಯಾಧಿಕರಣಕ್ಕೆ ಈ ವಿಚಾರ ಹೋಗಿ 2018 ರಲ್ಲಿ ಈ ವಿಚಾರವಾಗಿ ತೀರ್ಪು ಬಂದಿದೆ. ತೀರ್ಪು ಬಂದ ಬಳಿಕ ಅಗತ್ಯ ಅನುಮತಿ ಪಡೆದು ಯೋಜನೆ ಜಾರಿಗೊಳಿಸದೇ, ಈಗ ಡಿಪಿಆರ್ ಗೆ ಒಪ್ಪಿಗೆ ನೀಡಿ ದಿನಾಂಕವೇ ಇಲ್ಲದ ಆದೇಶ ಹೊರಡಿಸಿದ್ದಾರೆ. ಈ ಅನುಮತಿ ಪತ್ರದಲ್ಲೂ ಸುಪ್ರೀಂ ಕೋರ್ಟ್ ತೀರ್ಮಾನ ಎಂದು ಹೇಳಲಾಗಿದೆ. ಸುಪ್ರೀಂ ಕೋರ್ಟ್ ನಲ್ಲಿ ಯಾರು ಕೇಸ್ ಹಾಕಿದ್ದಾರೋ ಅವರಿಂದ ವಾಪಸ್ ತೆಗೆಸಿ ಈ ಯೋಜನೆ ಜಾರಿಗೆ ತರಬಹುದಾಗಿತ್ತಲ್ಲವೇ? ಅವರ ಮಂತ್ರಿ ರಾಜೀನಾಮೆ ನೀಡುವುದಾಗಿ ಹೇಳಿದ್ದಾರಂತೆ. ಅವರು ರಾಜೀನಾಮೆ ನೀಡಲಿ ಯಾರು ಬೇಡ ಎಂದವರು?
ರಾಜ್ಯದಲ್ಲಿ ಬಿಜೆಪಿ ಪರವಾಗಿ 26 ಮಂದಿ ಸಂಸದರಿದ್ದಾರೆ. 26 ಸಂಸದರು ಇದ್ದರೂ ಪ್ರಧಾನಮಂತ್ರಿಗಳ ಬಳಿ ಈ ವಿಚಾರವಾಗಿ ಚರ್ಚೆ ಮಾಡದೇ, ಇರುವ ಅಡೆತಡೆಗಳನ್ನು ನಿವಾರಿಸಿ ಕೆಲಸ ಆರಂಭಿಸದೇ, ಬರೀ ಖಾಲಿ ಮಾತುಗಳನ್ನಾಡುತ್ತಿದ್ದಾರೆ. ಆಕ್ಷೇಪಣಾ ಅರ್ಜಿ ಹೊರತುಪಡಿಸಿ ಯೋಜನೆಯ ಉಳಿದ ಕೆಲಸಗಳನ್ನು ಆರಂಭಿಸಬಹುದಲ್ಲವೇ? ನಿಮ್ಮ ರಾಜ್ಯದಲ್ಲಿ ನಿಮ್ಮ ಹಣದಲ್ಲಿ ಕೆಲಸ ಮಾಡಲು ಯಾರು ತಡೆಯುತ್ತಾರೆ. ನೀರು ತರುವ ಸ್ಥಳ ಹೊರತುಪಡಿಸಿ ಉಳಿದ ಎಲ್ಲ ಕೆಲಸಗಳನ್ನು ಮಾಡಿಕೊಳ್ಳಬಹುದಲ್ಲವೇ? ಚುನಾವಣೆ ಬಂತು, ನಾವು ಧ್ವನಿ ಎತ್ತುತ್ತೇವೆ ಎಂಬ ಕಾರಣಕ್ಕೆ ಈ ರೀತಿ ಸುಳ್ಳು ಹೇಳಿದರೆ ಹೇಗೆ.
ಮೀಸಲಾತಿ ವಿಚಾರದಲ್ಲೂ ಇದೇ ರೀತಿ ಸುಳ್ಳು ಹೇಳುತ್ತಿದ್ದಾರೆ. ಪಂಚಮಸಾಲಿ ಸಮುದಾಯದ ಸ್ವಾಮೀಜಿಗಳು ಹೇಳಿದಂತೆ ತಲೆಗೆ ತುಪ್ಪ ಸವರಿದರೆ ನಾಲಿಗೆಯಿಂದ ಅದರ ರುಚಿಯು ಸವಿಯಲು ಸಾಧ್ಯವಿಲ್ಲ, ಮೂಗಿನಿಂದ ಅದರ ಸುವಾಸನೆಯನ್ನೂ ಗ್ರಹಿಸಲು ಸಾಧ್ಯವಿಲ್ಲ. ಹೀಗೆ ಪಂಚಮಸಾಲಿಗಳು ಹಾಗೂ ಒಕ್ಕಲಿಗರ ತಲೆಗೆ ತುಪ್ಪ ಸವರಿದ್ದಾರೆ. ನಿಮ್ಮ ಕೈಯಲ್ಲಿ ಸಾಧ್ಯವಿದ್ದರೆ ಮಾಡುತ್ತೇವೆ ಎಂದು ಹೇಳಿ, ಆಗದಿದ್ದರೆ ಆಗುವುದಿಲ್ಲ ಎಂದು ಹೇಳಿ. ಸುಮ್ಮನೆ ಜನರನ್ನು ತಪ್ಪುದಾರಿಗೆಳೆದು ಬೊಮ್ಮಾಯಿ ಅವರು ಯಾಕೆ ಗೊಂದಲ ಸೃಷ್ಟಿಸುತ್ತಿದ್ದಾರೆ? ಈ ಬಗ್ಗೆ ನಾವು ಅಧ್ಯಯನ ಮಾಡಿದ್ದೇವೆ. ಆರ್ಥಿಕ ದುರ್ಬಲ ವರ್ಗದವರಿಗೆ ನೀಡಲಾಗಿರುವ ಶೇ.10 ರಷ್ಟು ಮೀಸಲಾತಿ ಶ್ರೇಣಿಯನ್ನು ಮುಟ್ಟಲು ಸಾಧ್ಯವೇ ಇಲ್ಲ. ಅದೆಲ್ಲಿಂದ ತೆಗೆದು, ಎಲ್ಲಿಗೆ ಹೇಗೆ ಸೇರಿಸಿದ್ದೀರಿ? ಉದ್ಯೋಗ ನೇಮಕಾತಿಗೆ ಅದಿಸೂಚನೆ ಹೊರಡಿಸಲು ಸಂಪುಟ ಸಭೆಯಲ್ಲಿ ತೀರ್ಮಾನ ಎಂದು ಹೇಳುತ್ತಿದ್ದೀರಿ. ಈ ವಿಚಾರ ಇಟ್ಟುಕೊಂಡು, ನಮಗೆ ಇದರಿಂದ ಅನ್ಯಾಯವಾಗಿದೆ ಎಂದು ಯಾರಾದರೂ ನ್ಯಾಯಾಲಯದ ಮೊರೆ ಹೋಗುತ್ತಾರೆ. ಪರಿಶಿಷ್ಟ ಜಾತಿ ಹಾಗೂ ಪಂಗಡವರಿಗೆ ಹೆಚ್ಚಿಸಲಾಗಿರುವ ಮೀಸಲಾತಿ ಬಗ್ಗೆ ಸಂಸತ್ತಿಗೆ ಪ್ರಸ್ತಾವನೆ ಸಲ್ಲಿಸಿ, ಸಂವಿಧಾನದ 9 ನೇ ಶೆಡ್ಯೂಲ್ ನಲ್ಲಿ ಸೇರಿಸಬೇಕಿತ್ತು. ಆದರೆ ರಾಜ್ಯ ಸರ್ಕಾರ ಈ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಸಲ್ಲಿಸಿಯೇ ಇಲ್ಲ.
ನಾವು ರಚಿಸಿದ ನಾಗಮೋಹನ್ ದಾಸ್ ಅವರ ಸಮಿತಿ ವರದಿಯೂ ಅದನ್ನೇ ಹೇಳಿದೆ. ನಾವು ಕೂಡ ಅದಕ್ಕೆ ಬೆಂಬಲ ಸೂಚಿಸಿದ್ದು, ನಮ್ಮಿಂದ ಯಾವುದೇ ತಕರಾರು ವ್ಯಕ್ತವಾಗಿಲ್ಲ. ಸುಪ್ರೀಂ ಕೋರ್ಟ್ ತೀರ್ಪಿನ ಮೀತಿಯನ್ನು ಮೀರುತ್ತೇನೆ ಎಂದಿದ್ದೀರಿ. ನೀವು ಎಲ್ಲರಿಗೂ ನ್ಯಾಯ ಕೊಡಿ. ಒಕ್ಕಲಿಗ ಸ್ವಾಮೀಜಿಗಳು ಸಚಿವ ಆರ್. ಅಶೋಕ್ ಅವರಿಗೆ ಕೊಟ್ಟ ಪತ್ರದಲ್ಲಿ ಏನು ಮನವಿ ಮಾಡಲಾಗಿದೆ? ಮುಖ್ಯಮಂತ್ರಿಗಳು ಯಾಕೆ ಸುದ್ದಿಗೋಷ್ಠಿ ನಡೆಸಿ ಈ ವಿಚಾರ ಪ್ರಕಟಿಸುತ್ತಿಲ್ಲ? ಇಷ್ಟು ದಿನಗಳ ಕಾಲ ಮಾತನಾಡುತ್ತಿದ್ದ ಯತ್ನಾಳ್, ಅರವಿಂದ ಬೆಲ್ಲದ್ ಅವರು ಈಗ ಯಾಕೆ ಮಾತನಾಡುತ್ತಿಲ್ಲ? ಅವರು ಸರ್ಕಾರದ ಈ ನಿರ್ಧಾರ ಸರಿ ಎನ್ನಬೇಕು ಅಥವಾ ತಪ್ಪು ಎನ್ನಬೇಕು? ಎರಡೂ ಹೇಳದೆ ಮೌನವಾಗಿರುವುದೇಕೆ?
ಮುಖ್ಯಮಂತ್ರಿಗಳು ಅಂತಿಮ ವರದಿ ಬರುವವರೆಗೂ ಕಾಯಬೇಕು ಎಂದು ಹೇಳುತ್ತಿದ್ದಾರಲ್ಲ ಎಂದು ಗಮನ ಸೆಳೆದಾಗ, ‘ಈ ವರದಿ ಯಾವಾಗ ಬರುತ್ತದೆ? ಚುನಾವಣೆ ಮುಗಿದ ನಂತರವೇ? ಅಂತಿಮ ವರದಿವರೆಗೂ ಕಾಯಬೇಕಾದರೆ ಘೋಷಣೆಯನ್ನೂ ಆಗಲೇ ಒಟ್ಟಿಗೆ ಮಾಡಬೇಕಿತ್ತು. ಕೊಟ್ಟ ಕುದುರೆಯನ್ನು ಏರಲಾಗದೆ, ಮತ್ತೊಂದು ಕುದುರೆ ಏರಲು ಬಯಸುವವನು ವೀರನೂ ಅಲ್ಲ, ಶೂರನೂ ಅಲ್ಲ ಎಂಬ ಮಾತಿನಂತೆ ಅಧಿಕಾರ ಇದ್ದಾಗ ಮಾಡದವರು, ಅಧಿಕಾರ ಹೋಗುವ ಸಮಯದಲ್ಲಿ ಮಾಡುತ್ತಾರಾ? ಈ ಸರ್ಕಾರದ ಅವಧಿ ಉಳಿದಿರುವುದು ಇನ್ನು 90 ದಿನಗಳು ಮಾತ್ರ. ಸರ್ಕಾರ ಫೆ. 28 ರ ಒಳಗಾಗಿ ಬಸವಣ್ಣ, ಅಂಬೇಡ್ಕರ್ ಪ್ರತಿಮೆ ಕಾರ್ಯ ಮುಗಿಸಬೇಕು ಎಂದು ಗಡವು ನೀಡಿದ್ದಾರಂತೆ. ಈ 60 ದಿನಗಳಲ್ಲಿ ವರದಿ ಬರುವುದಿಲ್ಲ, ಮೀಸಲಾತಿ ಆಗುವುದಿಲ್ಲ. ಈ ಮೀಸಲಾತಿ ಗೊಂದಲವನ್ನು ಬಹಳ ಚೆನ್ನಾಗಿ ವ್ಯಾಖ್ಯಾನಿಸಿರುವ ಮೃತ್ಯುಂಜಯ ಶ್ರೀಗಳಿಗೆ ನಮಸ್ಕಾರ ಹೇಳುತ್ತೇನೆ’ ಎಂದು ತಿಳಿಸಿದರು.
ನೀವು ಅಧಿಕಾರಕ್ಕೆ ಬಂದ ನಂತರ ಹೇಗೆ ಎಂದು ಕೇಳಿದಾಗ, ‘ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ನೀತಿಯ ಮೇಲೆ ಆಡಳಿತ ನಡೆಸುತ್ತೇವೆ. ಜನಸಂಖ್ಯೆ ಆಧಾರದ ಮೇಲೆ ಯಾರಿಗೆ ಯಾವ ಹಕ್ಕು ಸಿಗಬೇಕೋ ಅದನ್ನು ಮಾಡುತ್ತೇವೆ. ನೊಂದವರಿಗೆ ಆರ್ಥಿಕವಾಗಿ ಶಕ್ತಿ ತುಂಬಬೇಕು’ ಎಂದು ತಿಳಿಸಿದರು.
ಮೃತ್ಯುಂಜಯ ಸ್ವಾಮಿಗಳು ಯಾರು ಪಂಚಮಸಾಲಿಗಳಿಗೆ ಮೀಸಲಾತಿ ನೀಡುತ್ತಾರೋ ಅವರಿಗೆ ನಮ್ಮ ಬೆಂಬಲ ಎಂದು ಹೇಳಿದ್ದಾರೆ, ನೀವು ನಿಮ್ಮ ಪ್ರಣಾಳಿಕೆಯಲ್ಲಿ ಈ ವಿಚಾರ ಪ್ರಸ್ತಾಪಿಸುತ್ತೀರಾ ಎಂದು ಕೇಳಿದಾಗ, ‘ಈಗ ನಾನು ಯಾವುದೇ ವಿಚಾರ ಪ್ರಸ್ತಾಪಿಸುವುದಿಲ್ಲ. ಅವರವರ ಹಕ್ಕನ್ನು ಅವರು ಕೇಳುವುದರಲ್ಲಿ ತಪ್ಪಿಲ್ಲ. ಆದರೆ ಹಿಂದುಳಿದ ವರ್ಗದವರಿಗೆ ಅನ್ಯಾಯ ಆಗಬಾರದು’ ಎಂದು ತಿಳಿಸಿದರು.
ಸಿಎಂ ಕೂಡ ಯಾರಿಗೂ ಅನ್ಯಾಯ ಆಗದಂತೆ ಈ ವಿಚಾರ ಬಗೆಹರಿಸಲಾಗುವುದು ಎಂದು ನೀಡಿರುವ ಹೇಳಿಕೆ ಬಗ್ಗೆ ಕೇಳಿದಾಗ, ‘ಅನ್ಯಾಯ ಮಾಡುವುದಿಲ್ಲವಾದರೆ ನಮಗೆ ನ್ಯಾಯ ನೀಡಿ’ ಎಂದರು.
ಉದ್ಯಮಿ ಪ್ರದೀಪ್ ಎಂಬುವವರು ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಅವರ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಪ್ರಶ್ನೆ ಕೇಳಿದಾಗ, ‘ಎಫ್ಐಆರ್ ಆಗಿದ್ದು, ಕಾನೂನು ಪ್ರಕಾರ ಯಾವ ಕ್ರಮ ಕೈಗೊಳ್ಳಬೇಕೋ ಕೈಗೊಳ್ಳಲಿ. ಆದರೆ ಅವರು ಆದಷ್ಟು ಬೇಗ ಬಿ ರಿಪೋರ್ಟ್ ಕೂಡ ಬರೆಯುತ್ತಾರೆ. ಬಿಜೆಪಿ ಸರ್ಕಾರ ಎಂತೆಂಥಹ ಸಚಿವರುಗಳಿಗೇ ಬಿ ರಿಪೋರ್ಟ್ ಬರೆದಿದ್ದು, ಲಿಂಬಾವಳಿ ಅವರ ಪ್ರಕರಣದಲ್ಲೂ ಬರೆಯುತ್ತಾರೆ. ಅದು ನಮಗೆ ಗೊತ್ತಿದೆ’ ಎಂದು ಛೇಡಿಸಿದರು.
ಮಹದಾಯಿ ವಿಚಾರದಲ್ಲಿ ಕಾಂಗ್ರೆಸ್ ಅಪ್ ಡೇಟ್ ಆಗಿಲ್ಲ ಎಂಬ ಬಿಜೆಪಿ ನಾಯಕರ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ, ‘ಕಾಂಗ್ರೆಸ್ ಔಟ್ ಡೇಟೆಡ್ ಆಗಿದ್ದರೆ, ನೀವು ಎಷ್ಟು ಮುಂದುವರಿದಿದ್ದೀರಿ ಜೋಷಿ ಸಾಹೇಬರೆ? ಆದೇಶದಲ್ಲಿ ನೀವು ಏನು ಬರೆಸಿದ್ದೀರಿ ಗೊತ್ತಿಲ್ಲವೇ? ಈ ಎಲ್ಲ ಅನುಮತಿಯು ಸುಪ್ರೀಂ ಕೋರ್ಟ್ ತೀರ್ಪಿನ ಅನುಗುಣವಾಗಿ ಇರಲಿದೆ. ಸುಪ್ರೀಂ ಕೋರ್ಟ್ ತೀರ್ಪು ಬರುವುದು ಯಾವಾಗ? ನಾವು ಸತ್ತ ಮೇಲಾ? ನಮಗೆ ಅಧಿಕಾರ ಕೊಡಿ, ಎಲ್ಲವನ್ನು ಆರು ತಿಂಗಳಲ್ಲಿ ಮಾಡುತ್ತೇವೆ. ಅವರಿಗೆ ಅಧಿಕಾರ ಕೊಟ್ಟಿದ್ದೀರಿ. ಅವರು ಮಾಡಲಿಲ್ಲ. ನಮಗೆ ಅಧಿಕಾರ ಕೊಟ್ಟು ನೋಡಿ. ಆಮೇಲೆ ಮಾತನಾಡಿ’ ಎಂದು ಹೇಳಿದರು.
ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರು ನಾವು ಕಟ್ಟಿದ ಕಾಲುವೆಗೆ ಅಡ್ಡ ಗೋಡೆ ಕಟ್ಟಿದ ದ್ರೋಹಿಗಳು ಎಂಬ ಬಿಜೆಪಿ ಆರೋಪದ ಬಗ್ಗೆ ಕೇಳಿದಾಗ, ‘ನಮ್ಮ ಕಾಲದಲ್ಲಿ ನ್ಯಾಯಾಲಯದ ಆದೇಶ ಸಮಾಧಾನವಿಲ್ಲದಿದ್ದರೂ ಕೊಟ್ಟಿರುವ 4 ಟಿಎಂಸಿ ನೀರಿನ ಬಳಕೆ ಮುಂದಾಗಿದ್ದೆವು. ಇವರು ಕುಡಿಯುವ ನೀರಿನ ವಿಚಾರದಲ್ಲೂ ರಾಜಕೀಯ ಮಾಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಕ್ಷದ ಟಿಕೆಟ್ ಮೊದಲ ಪಟ್ಟಿ ಯಾವಾಗ ಎಂದು ಕೇಳಿದ ಪ್ರಶ್ನೆಗೆ, ‘ಪಕ್ಷದಲ್ಲಿ ಯಾವುದೇ ಕಿತ್ತಾಟವಿಲ್ಲ. ಸ್ಪರ್ಧೆ ಇದೆ. ಜಗದೀಶ್ ಶೆಟ್ಟರ್ ಅವರ ಕ್ಷೇತ್ರದಲ್ಲೂ ಪ್ರಬಲ ಸ್ಪರ್ಧೆ ಇದೆ ಎಂದಾದರೆ ನಮ್ಮ ಕಾಂಗ್ರೆಸ್ ಎಷ್ಟು ಬಲಿಷ್ಠವಾಗಿದೆ ಯೋಚಿಸಿ. ಯಾರು ಅವರ ವಿರುದ್ದ ಸ್ಪರ್ಧಿಸಲು ಸೂಕ್ತ ವ್ಯಕ್ತಿ ಎಂದು ಪಕ್ಷ ತೀರ್ಮಾನಿಸಲಿದೆ. ನಮ್ಮ ಪಕ್ಷದಲ್ಲಿ ಯಾವುದೇ ಒಳಒಪ್ಪಂದಕ್ಕೆ ಅವಕಾಶವಿಲ್ಲ. ಅದೇನಿದ್ದರು ಬೇರೆ ಪಕ್ಷದಲ್ಲಿ. ನನ್ನ ಅಧ್ಯಕ್ಷತೆಯಲ್ಲಿ ಯಾವುದೇ ಮ್ಯಾಚ್ ಫಿಕ್ಸಿಂಗ್ ಗೆ ಅವಕಾಶವಿಲ್ಲ’ ಎಂದು ತಿಳಿಸಿದರು.
ಹಾಲಿ ಶಾಸಕರು ಹಾಗೂ ಪರಾಜಿತರಿಗೆ ಟಿಕೆಟ್ ಸಿಗುವುದೇ ಎಂದು ಕೇಳಿದಾಗ, ‘ಪಕ್ಷದಲ್ಲಿ ಎಲ್ಲರೂ ಅರ್ಜಿ ಹಾಕಿದ್ದಾರೆ. ಸಮಿತಿ ಕೂತು ಚರ್ಚೆ ಮಾಡಿ ತೀರ್ಮಾನಿಸಲಿದೆ’ ಎಂದು ತಿಳಿಸಿದರು.
ಹಾಲಿ ಶಾಸಕರನ್ನು ಕೈಬಿಡಲಾಗುವುದೇ ಎಂದು ಕೇಳಿದಾಗ, ‘ನಾವು ಎಲ್ಲ ಕ್ಷೇತ್ರಗಳಿಂದ ವರದಿ ಪಡೆಯುತ್ತಿದ್ದು, ಬಹುತೇಕ ಶೇ.95 ರಷ್ಟು ಮಂದಿಗೆ ಟಿಕೆಟ್ ಸಿಗಲಿದೆ’ ಎಂದು ಹೇಳಿದರು.
ಪಕ್ಷ ಬಿಟ್ಟುಹೋದ ಶಾಸಕರು ವಾಪಸ್ ಬರುತ್ತಾರಾ ಎಂದು ಕೇಳಿದ ಪ್ರಶ್ನೆಗೆ, ‘ರಾಜಕೀಯದಲ್ಲಿ ಏನು ಬೇಕಾದರೂ ಸಾಧ್ಯವಿದೆ. ಇನ್ನು ಯಾರೂ ಅರ್ಜಿ ಕೊಟ್ಟಿಲ್ಲ. ಅರ್ಜಿ ಕೊಟ್ಟ ನಂತರ ಹೇಳುತ್ತೇನೆ’ ಎಂದು ತಿಳಿಸಿದರು.
ಕಾಂಗ್ರೆಸ್ ನಲ್ಲಿ ಬಣಗಳ ಬಗ್ಗೆ ಕೇಳಿದಾಗ, ‘ಎಲ್ಲೂ ಬಣಗಳಿಲ್ಲ. ಬಿಜೆಪಿಯಲ್ಲಿ ಜಗದೀಶ್ ಶೆಟ್ಟರ್, ಬೆಲ್ಲದ್ ಅವರ ಕ್ಷೇತ್ರಗಳಲ್ಲಿನ ಬಣಗಳ ಬಗ್ಗೆ ನಿಮಗೆ ಗೊತ್ತಿದೆಯಾ? ನಮ್ಮಲ್ಲಿ ಅಧಿಕಾರ ಇಲ್ಲ, ಅಧಿಕಾರ ಪಡೆಯಬೇಕು ಎಂದು ಸ್ಪರ್ಧೆ ಇದ್ದರೆ, ಅವರಲ್ಲಿ ಅಧಿಕಾರ ಇದೆ, ಅಧಿಕಾರದಿಂದ ಇಳಿಸಲು ಸ್ಪರ್ಧೆ ಇದೆ’ ಎಂದು ತಿಳಿಸಿದರು.
[02/01, 3:31 PM] Kpcc official: ಕರ್ನಾಟಕಕ್ಕೆ 'ಕನಕಪುರ ಆದರ್ಶ' ವಿಡಿಯೋ ಸರಣಿ ಬಿಡುಗಡೆಗೊಳಿಸಿದ ಡಿ.ಕೆ ಶಿವಕುಮಾರ್
ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಸಂಬಂಧಿಸಿದಂತೆ ಹೊಸ ವರ್ಷದ ಸಂದರ್ಭದಲ್ಲಿ 'ಕರ್ನಾಟಕಕ್ಕೆ ಕನಕಪುರ ಆದರ್ಶ' ವಿಡಿಯೋ ಸರಣಿಯನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಬಿಡುಗಡೆಗೊಳಿಸಿದ್ದಾರೆ.
ಡಿ.ಕೆ ಶಿವಕುಮಾರ್ ಅವರು ಕನಕಪುರದಿಂದ ಮೂರು ಬಾರಿ ಶಾಸಕರಾಗಿದ್ದು, ಈ ಅವಧಿಯಲ್ಲಿ ಅವರ ಸಾಧನೆಯಿಂದಾಗಿ ಪ್ರತಿ ಬಾರಿಯೂ ಸತತವಾಗಿ ಅವರ ಗೆಲುವಿನ ಅಂತರ ಹೆಚ್ಚಿದೆ. ಡಿ.ಕೆ ಶಿವಕುಮಾರ್ ಅವರು 2008 ಮತ್ತು 2013ರಲ್ಲಿ ಭಾರಿ ಅಂತರದಿಂದ ಗೆದ್ದಿದ್ದರು. 2018ರಲ್ಲಿ ಅವರು ತಮ್ಮ ಎದುರಾಳಿಯನ್ನು 79,909 ಮತಗಳಿಂದ ಸೋಲಿಸಿ ಆ ಚುನಾವಣೆಯಲ್ಲಿ ದಾಖಲೆಯನ್ನು ಸೃಷ್ಟಿಸಿದರು.
ಡಿ.ಕೆ ಶಿವಕುಮಾರ್ ಅವರು ಶಾಸಕರಾಗಿದ್ದ ಅವಧಿಯಲ್ಲಿ ಕೈಗೊಂಡ ಸೋಲಾರ್ ವಿದ್ಯುತ್ ಉತ್ಪಾದನಾ ಪಾರ್ಕ್‌ಗಳ ಸ್ಥಾಪನೆ, ಕೆರೆಗಳ ಶುದ್ಧೀಕರಣ, ಶಾಲಾ-ಕಾಲೇಜುಗಳ ಉನ್ನತೀಕರಣ, ಎಲ್ಲಾ ಮನೆಗಳಿಗೆ ನೀರು ಸರಬರಾಜು, ಹೊಸ ಜಿಮ್‌ಗಳು-ಉದ್ಯಾನವನಗಳ ನಿರ್ಮಾಣ ಸೇರಿದಂತೆ ಮೂಲಸೌಕರ್ಯಗಳ ಅಭಿವೃದ್ಧಿಯನ್ನು ವೀಡಿಯೊ ಸರಣಿಯಲ್ಲಿ ತೋರಿಸಲಾಗಿದೆ. ಅವರ ಕ್ಷೇತ್ರದಲ್ಲಿ ಹೊಸ ರಸ್ತೆಗಳು ಮತ್ತು ಪಾದಚಾರಿ ಮಾರ್ಗಗಳ ನಿರ್ಮಾಣಕ್ಕೆ ಉತ್ತೇಜನ ನೀಡಲಾಗಿದೆ.
''ಪಟ್ಟಣಕ್ಕೆ ಕುಡಿಯುವ ನೀರು ಒದಗಿಸಲು ಕಂದಾಯ ಅಧಿಕಾರಿ ಶ್ರೀ ನಾರಾಯಣಪ್ಪನವರು ನಿರ್ಮಿಸಿದ ಕಾನಕಾನಹಳ್ಳಿ ಕೆರೆ ಇಂದು ಹೊಸ ರೂಪ ಪಡೆದುಕೊಂಡಿದೆ. ಇದು ನಾನು ಶಾಸಕನಾದ ನಂತರ ಕನಕಪುರದ ಜನತೆಗೆ ನೀಡಿದ ಕೊಡುಗೆ. ಈ ಉದ್ಯಾನವನವು ಅಭಿವೃದ್ಧಿಗೆ ಮಾದರಿಯಾಗಿದೆ. ಅದರ ಒಂದು ನೋಟ ಇಲ್ಲಿದೆ" ಎಂದು ಡಿ.ಕೆ ಶಿವಕುಮಾರ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿರುವ ವಿಡಿಯೋ ಸರಣಿ ಕುರಿತು ಟ್ವೀಟ್ ಮಾಡಿದ್ದಾರೆ.
"ಕನಕಪುರದ ಸೂರ್ಯ ರೈತ ಯೋಜನೆ ರೈತರನ್ನು ತಲೆ ಎತ್ತಿ ನಡೆಯುವಂತೆ ಮಾಡಿದೆ. ಕನಕಪುರವನ್ನು ಕರ್ನಾಟಕಕ್ಕೆ ಮಾದರಿಯನ್ನಾಗಿ ಮಾಡಲು ಸೌರಶಕ್ತಿಯನ್ನು ಹೇಗೆ ಬಳಸಲಾಗಿದೆ ಎಂಬುದನ್ನು ನೀವೇ ನೋಡಿ" ಎಂದಿರುವ ಡಿ.ಕೆ ಶಿವಕುಮಾರ್, ಕನಕಪುರ ಮಾದರಿಯನ್ನು ಇಟ್ಟುಕೊಂಡು ಕರ್ನಾಟಕವನ್ನು ಇನ್ನೂ ಹೆಚ್ಚಿನ ಅಭಿವೃದ್ಧಿಯತ್ತ ಮುನ್ನಡೆಸಬಹುದು ಎಂಬ ಸ್ಪಷ್ಟ ಸಂದೇಶವನ್ನು ನೀಡಿದ್ದಾರೆ.
ಈ ವಿಡಿಯೋ ಸರಣಿಯ ಮೂಲಕ ಕೆಪಿಸಿಸಿ ಅಧ್ಯಕ್ಷರು ತಾವು ಶಾಸಕರಾಗಿದ್ದ ಅವಧಿಯಲ್ಲಿ ಕನಕಪುರ ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿಯನ್ನು ಕರ್ನಾಟಕದ ಜನತೆಗೆ ತೋರಿಸಲು ಬಯಸಿದ್ದು, ಮುಖ್ಯಮಂತ್ರಿಯಾಗುವ ಅವಕಾಶ ದೊರೆತಲ್ಲಿ ಇಡೀ ರಾಜ್ಯದಲ್ಲಿ ಇಂತಹ ಅಭಿವೃದ್ಧಿ ಆಗಲಿದೆ ಎಂಬ ಅಂಶವನ್ನು ಒತ್ತಿ ಹೇಳುತ್ತಿದ್ದಾರೆ ಎಂದು ಡಿ.ಕೆ ಶಿವಕುಮಾರ್ ಅವರ ಆಪ್ತ ಮೂಲಗಳು ತಿಳಿಸಿವೆ.
ಕನಕಪುರ ಪ್ರದೇಶದ ನಿವಾಸಿಗಳು ಕೆಪಿಸಿಸಿ ಅಧ್ಯಕ್ಷರ ಕಾರ್ಯದ ಬಗ್ಗೆ ತೃಪ್ತಿ ಮತ್ತು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದನ್ನು ಈ ವಿಡಿಯೋಗಳಲ್ಲಿ ಕಾಣಬಹುದಾಗಿದೆ. ರೈತರು ತಮ್ಮ ಪಂಪ್‌ಸೆಟ್‌ಗಳನ್ನು ಚಲಾಯಿಸಲು ಸೌರಶಕ್ತಿಯನ್ನು ಬಳಸುತ್ತಿದ್ದು, ನಿರಂತರ ವಿದ್ಯುತ್ ಸರಬರಾಜು ಮಾಡುತ್ತಿರುವ ಕನಕಪುರವನ್ನು ವಿದ್ಯುತ್ ಹೆಚ್ಚುವರಿ ಪ್ರದೇಶವನ್ನಾಗಿ ಮಾಡಿದ್ದಕ್ಕಾಗಿ ಜನರು ಡಿ.ಕೆ ಶಿವಕುಮಾರ್ ಅವರನ್ನು ಶ್ಲಾಘಿಸಿದ್ದಾರೆ. ಡಿ.ಕೆ ಶಿವಕುಮಾರ್ ಅವರು ಸ್ಥಾಪಿಸಿರುವ ಜಿಮ್ನಾಷಿಯಂಗಳು ಯುವಕರು ಸದೃಢರಾಗಿರಲು ಮತ್ತು ಮಾದಕ ವ್ಯಸನದಿಂದ ದೂರವಿರಲು ಸಹಾಯ ಮಾಡುತ್ತಿವೆ.
ಈ ವೀಡಿಯೊ ಸರಣಿಯ ಮೂಲಕ ಡಿ.ಕೆ ಶಿವಕುಮಾರ್ ಅವರು ಕರ್ನಾಟಕದ ಜನರಿಗೆ ತಾವು “ದೂರದರ್ಶಿತ್ವ ಹೊಂದಿರುವ ವ್ಯಕ್ತಿ” ಎಂಬುದನ್ನು ತಿಳಿಸುತ್ತಿದ್ದು, ರಾಜ್ಯದ ಅಭಿವೃದ್ಧಿಗೆ ಬದ್ಧರಾಗಿರುವ ವ್ಯಕ್ತಿ ಎಂಬುದನ್ನು ಮತದಾರರಿಗೆ ತೋರಿಸಿಕೊಟ್ಟಿದ್ದಾರೆ.
ಕೆಪಿಸಿಸಿ ಮುಖ್ಯಸ್ಥರು ಹಂಚಿಕೊಂಡ ವಿಡಿಯೋಗಳು ಹಳ್ಳಿಗಳಲ್ಲಿರುವ ಹೊಂಡಗಳನ್ನು ಕೆರೆಗಳನ್ನಾಗಿ ಹೇಗೆ ಪರಿವರ್ತಿಸಲಾಗಿದೆ ಮತ್ತು ಅವುಗಳು ಹೇಗೆ ಸ್ಥಳೀಯ ಪ್ರವಾಸಿ ತಾಣಗಳಾಗಿ ಹೊರಹೊಮ್ಮುತ್ತಿವೆ ಎಂದು ತೋರಿಸಿವೆ. ಕನಕಪುರದ ಎಲ್ಲಾ ಹಳ್ಳಿಗಳು ಪಟ್ಟಣಗಳನ್ನು ಮತ್ತು ಧಾನ್ಯ ಮಾರುಕಟ್ಟೆಗಳನ್ನು ಸಂಪರ್ಕಿಸುವ ವಿಶಾಲವಾದ ರಸ್ತೆ ಜಾಲವನ್ನು ಹೊಂದಿರುವುದನ್ನು ಈ ವಿಡಿಯೋಗಳಲ್ಲಿ ದಾಖಲಿಸಲಾಗಿದೆ.
[02/01, 8:03 PM] Kpcc official: ಹುಬ್ಬಳ್ಳಿಯಲ್ಲಿ ಸೋಮವಾರ ನಡೆದ ಮಹದಾಯಿ ಜಲ-ಜನ ಆಂದೋಲನ ಸಮಾವೇಶದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ ಕೆ ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲಿಂ ಅಹ್ಮದ್, ಸತೀಶ್ ಜಾರಕಿಹೊಳಿ, ಕೇಂದ್ರದ ಮಾಜಿ ಸಚಿವ ಕೆ ಎಚ್ ಮುನಿಯಪ್ಪ, ಮಾಜಿ ಸಚಿವರಾದ ಎಚ್ ಕೆ ಪಾಟೀಲ್, ಎ ಎಂ ಹಿಂಡಸಗೇರಿ, ಹಿರಿಯ ಮುಖಂಡ ಡಿ ಆರ್ ಪಾಟೀಲ್, ಶಾಸಕ ಪ್ರಸಾದ್ ಅಬ್ಬಯ್ಯ, ಡಿಸಿಸಿ ಅಧ್ಯಕ್ಷರಾದ ಅನಿಲ್ ಪಾಟೀಲ್, ರಾಜು ಅಳ್ಳೂರ, ಜಿ ಎಸ್ ಪಾಟೀಲ್ ಮತ್ತಿತರರು ಭಾಗವಹಿಸಿದ್ದರು.
[02/01, 8:20 PM] Kpcc official: *ಹುಬ್ಬಳ್ಳಿಯಲ್ಲಿ ನಡೆದ ಮಹದಾಯಿ ಜಲ-ಜನ ಆಂದೋಲನದಲ್ಲಿ ಡಿ.ಕೆ. ಶಿವಕುಮಾರ್ ಅವರ ಮಾತಿನ ಸಾರಾಂಶ:*
ಇದು ಹೋರಾಟ ಪ್ರಾರಂಭದ ಗಳಿಗೆ. ಹೆಚ್.ಕೆ. ಪಾಟೀಲ್ ಅವರು ಮಂತ್ರಿಯಾಗಿದ್ದಾಗ ಮಹದಾಯಿ ಯೋಜನೆಗೆ ಸ್ವರೂಪ ಕೊಟ್ಟಿದ್ದರು. ಇದು ಪೂರ್ಣಗೊಳ್ಳಬೇಕು. ಒಂದು ಪಕ್ಷ ಅಧಿಕಾರಕ್ಕೆ ಬಂದರೆ ಅದರ ಧ್ಯೇಯ ಜನರಿಗೆ ಕುಡಿಯುವ ನೀರು, ನೀರಾವರಿ, ಯುವಕರಿಗೆ ಉದ್ಯೋಗ, ರೈತರ ಉತ್ಪನ್ನಗಳಿಗೆ ಉತ್ತಮ ಬೆಲೆ, ಸಾಮಾಜಿಕ ನ್ಯಾಯ, ಉತ್ತಮ ಆಡಳಿತ ನೀಡುವುದಾಗಿದೆ.
ಕಾಂಗ್ರೆಸ್ ಸರ್ಕಾರ ಇದ್ದಾಗ ಏನು ಮಾಡಿದ್ದೇವೆ ಎಂದು ಹೆಚ್.ಕೆ ಪಾಟೀಲ್ ಅವರು ಸೇರಿದಂತೆ ಎಲ್ಲ ನಾಯಕರು ಮಾತನಾಡಿದ್ದಾರೆ. ನಾನು ಬಿಜೆಪಿ ಸ್ನೇಹಿತರಿಗೆ ನಿಮ್ಮ ಅಧಿಕಾರ ಅವಧಿಯಲ್ಲಿ ನಿಮ್ಮ ಸಾಧನೆ ಏನು ಎಂದು ಕೇಳಬಯಸುತ್ತೇನೆ. ಇವರ ಸಾಧನೆ ಕೇವಲ ಹಸಿ ಸುಳ್ಳು. ಯಾರಿಂದಲೂ ಅರ್ಥ ಮಾಡಿಕೊಳ್ಳಲು ಸಾಧ್ಯವಾಗದಂತಹ ಹಸಿ ಸುಳ್ಳು ಹೇಳುತ್ತಾರೆ. ಮುಖ್ಯಮಂತ್ರಿಗಳು ಈ ಭಾಗದವರು. ಈ ಭಾಗದ ಶೆಟ್ಟರ್ ಅವರು ಮಾಜಿ ಸಿಎಂ, ಈ ಭಾಗದವರೇ ಕೇಂದ್ರ ಮಂತ್ರಿಯಾಗಿದ್ದಾರೆ. ಆದರೂ ಈ ಭಾಗಕ್ಕೆ ಯಾವುದಾದರೂ ಒಂದು ಕಾರ್ಯಕ್ರಮ ನೀಡೀದ್ದಾರಾ? ನಾವು ಕೇವಲ ಡಬಲ್ ಇಂಜಿನ ವಿರುದ್ಧವಲ್ಲ, ಒಟ್ಟು ನಾಲ್ಕು ಇಂಜಿನ್ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಕರ್ನಾಟಕ, ಮಹಾರಾಷ್ಟ್ರ, ಗೋವಾದಲ್ಲಿ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದೆ. ಈ ಸರ್ಕಾರಗಳಿದ್ದರೂ, ರಾಜ್ಯದಿಂದ 25 ಸಂಸದರಿದ್ದರೂ ಈ ರಾಜ್ಯದ ಕುಡಿಯುವ ನೀರು, ರೈತರ ಸಮಸ್ಯೆಗೆ ಪರಿಹಾರ ನೀಡಲು ಆಗುತ್ತಿಲ್ಲ. ಹಾಗಾದರೆ ನಿಮಗೆ ಅಧಿಕಾರ ಯಾಕೆ ಬೇಕು?
ಯಡಿಯೂಪರ್ರನವರು ಜೇಬಿಂದ ಚೀಟಿ ತೆಗೆದು ತೋರಿಸಿದ್ದು ಆಯಿತು, ಶೆಟ್ಟರ್ ಅವರು ಅಧಿಕಾರ ಮಾಡಿ ಆಯಿತು, ಬೊಮ್ಮಾಯಿ ಅವರು ಅಧಿಕಾರಕ್ಕೆ ಬಂದಿದ್ದಾರೆ. ಆದರೆ ಈ ಕಳಸಾ ಬಂಡೂರಿ ವಿಚಾರದಲ್ಲಿ ಬರೀ ಶೋ ಮಾಡಿದ್ದೀರಿ. ನಮ್ಮ ಚಿತ್ರರಂಗದ ಎಲ್ಲ ಕಲಾವಿದರು ಇಲ್ಲಿಗೆ ಬಂದು ಹೋರಾಟ ಮಾಡಿದ್ದರು. ರೈತ ಸಂಘಟನೆ, ಕನ್ನಡಪರ ಸಂಘಟನೆಗಳು ಹೋರಾಟ ಮಾಡಿದ್ದವು. ನಿಮ್ಮ ಸಂಭ್ರಮಾಚರಣೆ ಕಾರ್ಯಕ್ರಮಕ್ಕೆ ಈ ಹೋರಾಟ ಮಾಡಿದವರು ಯಾಕೆ ಬರಲಿಲ್ಲ?
ನಿಮ್ಮ ಹಸಿ ಸುಳ್ಳು ಎಲ್ಲರಿಗೂ ಅರಿವಾಗುತ್ತಿದೆ. ನಿಮ್ಮ ಡಿಪಿಆರ್ ಯಾರಿಗೆ ಬೇಕು? ಈ ಭಾಗದ ಜನರಿಗೆ ಕುಡಿಯಲು ನೀರು ಸಿಗಬೇಕು, ರೈತರ ಬದುಕು ಹಸನಾಗಬೇಕು. ನಮಗೆ ಬಸವಣ್ಣನವರು, ಶಿಶುನಾಳ ಶರೀಫರು, ಕನಕದಾಸರು, ಕುವೆಂಪು ಅವರ ಕರ್ನಾಟಕ ಬೇಕು. ಕಾಂಗ್ರೆಸ್ ಪಕ್ಷ ಸದಾ ನುಡಿದಂತೆ ನಡೆದಿದೆ. ಕಾಂಗ್ರೆಸ್ ಸರ್ಕಾರ ಇದ್ದಾಗ ರಾಜ್ಯದ ಜನರಿಗೆ ಕೊಟ್ಟ ಮಾತಿನಿಂತೆ ಕೆಲಸ ಮಾಡಿದ್ದೇವೆ, ಮಾಡುತ್ತೇವೆ. ಇದು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ. ಮುಂದೆ ಬಿಜೆಪಿ ಸರಕಾರ ಬರಲು ಸಾಧ್ಯವಿಲ್ಲ. ನೀವು ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದಿರಿ. ನಿಮ್ಮ ಸರ್ಕಾರದ ಅವಧಿ ಇನ್ನು ಕೇವಲ 60 ದಿನ ಮಾತ್ರ. ಅಲ್ಲಮಪ್ರಭುಗಳು ಒಂದು ಮಾತು ಹೇಳಿದ್ದಾರೆ. ಕೊಟ್ಟ ಕುದುರೆಯನ್ನು ಏರಲಾಗದೆ ಮತ್ತೊಂದು ಕುದುರೆ ಏರಬಯಸುವವನು ವೀರನೂ ಅಲ್ಲ ಶೂರನೂ ಅಲ್ಲ. ಅದೇ ರೀತಿ ಅಧಿಕಾರ ಇದ್ದಾಗ ನಿಮ್ಮ ಕೈಯಲ್ಲಿ ಮಾಡಲು ಸಾಧ್ಯವಾದಾಗ ಈಗ ನೀವು ಏನು ಮಾಡುತ್ತೀರಿ.
ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ಹೇಳುತ್ತೇನೆ, ನಾವೆಲ್ಲರೂ ಕೂತು ಚರ್ಚೆ ಮಾಡಿ, ಮುಂಬರುವ ಸರ್ಕಾರದ ಬಜೆಟ್ ನಲ್ಲಿ ಈ ಯೋಜನೆಗೆ ಅನುದಾನ ನೀಡಿ ಪೂರ್ಣಗೊಳಿಸುತ್ತೇವೆ. ಇದು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ. ಈ ಭಾಗದಲ್ಲಿ ಬಿಜೆಪಿ ಸರ್ಕಾರ ಯಾವುದೇ ರೀತಿ ಉದ್ಯೋಗ ಸೃಷ್ಟಿ ಮಾಡಲಿಲ್ಲ. ಇಂದು ಪತ್ರಿಕೆಗಳಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಪ್ರಮಾಣದ ಬಗ್ಗೆ ಬಂದಿದೆ. ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶದಲ್ಲಿ 10 ಲಕ್ಷ ಕೋಟಿ ಬಂಡವಾಳ ಹೂಡಿಕೆಗೆ ಕ್ಕೆ ಸಹಿ ಹಾಕಿದ್ದೇವೆ ಎಂದು ಹೇಳಿದರಲ್ಲಾ, ಕಳೆದ ಮೂರು ವರ್ಷಗಳಲ್ಲಿ ಒಂದೂ ಕಾರ್ಖಾನೆ ಬರಲಿಲ್ಲ, ಉದ್ಯೋಗ ಸೃಷ್ಟಿ ಆಗಲಿಲ್ಲ ಯಾಕೆ? ಕಾರಣ ಕೋಮು ಗಲಭೆ. ನೀವು ಭಾವನೆ ಮೇಲೆ ಮನೆ ಕಟ್ಟುತ್ತೀರಿ. ಕಾಂಗ್ರೆಸ್ ಬದುಕು, ಉದ್ಯೋಗದ ಮೇಲೆ ಮನೆ ಕಟ್ಟುತ್ತದೆ. ನೀವು ಚರ್ಚ್ ಗಳಿಗೆ ನುಗ್ಗಿ ಹನುಮಾನ್ ಚಾಲೀಸ ಪಠಿಸುವಂತೆ ಮಾಡಿಸುತ್ತೀರಿ. ಅಲ್ಪಸಂಖ್ಯಾತ ಯುವಕರ ಮೇಲೆ ಸುಳ್ಳು ಕೇಸ್ ಹಾಕಿಸುತ್ತೀರಿ. ಇಂತಹ ಪರಿಸ್ಥಿತಿಯಲ್ಲಿ ಯಾರು ಬಂಡವಾಳ ಹೂಡಿಕೆ ಮಾಡುತ್ತಾರೆ? ಇದಕ್ಕೆ ಬೊಮ್ಮಾಯಿ, ಜೋಷಿ ಹಾಗೂ ಶೆಟ್ಟರ್ ಅವರು ಉತ್ತರಿಸಬೇಕು. ಸಮಾಜದಲ್ಲಿ ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗಿ, ಶಾಂತಿ ಸ್ಥಾಪಿಸಿದರೆ ಬಂಡವಾಳ ಹೂಡಿಕೆಯಾಗುತ್ತದೆ. ಉದ್ಯೋಗ ಸೃಷ್ಟಿಯಾಗುತ್ತದೆ.
ಭಾವನೆಯಿಂದ ಹೊಟ್ಟೆ ತುಂಬುವುದಿಲ್ಲ, ಬದುಕು ಕಟ್ಟಿಕೊಂಡರೆ ಮಾತ್ರ ಹೊಟ್ಟೆ ತುಂಬುತ್ತದೆ. ಈ ಚುನಾವಣೆಗೂ ಮುನ್ನ ರೈತರ ಆದಾಯ ಡಬಲ್ ಮಾಡುವುದಾಗಿ ಪ್ರಧಾನಿ ಹೇಳಿದರು. ಯಾರ ಆದಾಯ ಡಬಲ್ ಆಗಿದೆ? ಕೋವಿಡ್ ಸಂದರ್ಭದಲ್ಲಿ ಈ ಭಾಗದ ರೈತರ ಜಮೀನಿಗೆ ಹೋಗಿ ಪರಿಸ್ಥಿತಿ ನೋಡಿದೆವು. ಕಾಂಗ್ರೆಸ್ ಪಕ್ಷ ರೈತರಿಂದ ನೇರವಾಗಿ ಬೆಳೆ ಖರೀದಿ ಮಾಡಿ ಅವರಿಗೆ ಬೆಂಬಲ ಬೆಲೆ ನೀಡಿತು. ಬೆಂಗಳೂರಿನಿಂದ ಉತ್ತರ ಕರ್ನಾಟಕ ಭಾಗದ ವಲಸೆ ಕಾರ್ಮಿಕರು ಮತ್ತೆ ತಮ್ಮ ಊರಿಗೆ ಹೋಗಲು ಮುಂದಾದಾಗ ಸರ್ಕಾರ ಮೂರು ಪಟ್ಟು ಟಿಕೆಟ್ ದರ ಹೆಚ್ಚಿಸಿ ಸುಲಿಗೆ ಮಾಡಲು ಮುಂದಾಗಿತ್ತು. ಆಗ ನಾನು ಪಕ್ಷದಿಂದ 1 ಕೋಟಿ ರೂ. ಚೆಕ್ ನೀಡಲು ಮುಂದಾದೆ. ಆಗ ವಲಸೆ ಕಾರ್ಮಿಕರಿಗೆ ಉಚಿತ ಪ್ರಯಾಣ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿದೆವು. ನಂತರ ಸರ್ಕಾರ ಒಂದು ವಾರ ಉಚಿತ ಪ್ರಯಾಣ ವ್ಯವಸ್ಥೆ ಕಲ್ಪಿಸಿತು.
ನಾನು ಪ್ರಹ್ಲಾದ್ ಜೋಷಿ, ಬೊಮ್ಮಾಯಿ ಅವರಂತೆ ಸುಳ್ಳು ಹೇಳುತ್ತಿಲ್ಲ. ನಾವು ರೈತರು, ಯುವಕರ ಪರವಾಗಿ ಹೋರಾಟ ಮಾಡಿದ್ದೇವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲ ವರ್ಗದವರು ಅಧಿಕಾರಕ್ಕೆ ಬಂದಂತೆ. ಬಿಜೆಪಿಯವರು ಅಚ್ಛೇ ದಿನದ ಬಗ್ಗೆ ಮಾತನಾಡುತ್ತಾರೆ. ಯಾರಿಗೆ ಬಂತು ಅಚ್ಛೇ ದಿನ? ಯಾರಿಗೂ ಬರಲಿಲ್ಲ. ಈ ಸರ್ಕಾರದ ಅಂತ್ಯದ ದಿನಗಳು ಬಂದಿದೆ. ಈ ರಾಜ್ಯಕ್ಕೆ ಶಕ್ತಿ ತುಂಬಲು ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ. ಜನರಿಗೆ ಬ್ರಹ್ಮಾಂಡ ಭ್ರಷ್ಟಾಚಾರ ಮುಕ್ತ ಸರ್ಕಾರ ಬೇಕು. ಅದಕ್ಕೆ ನೀವು ಶಕ್ತಿ ತುಂಬಬೇಕು.
ಈ ಹಿಂದೆ ಕುಂದಗೋಳ ವಿಧಾನಸಭೆ ಉಪಚುನಾವಣೆಯಲ್ಲಿ ಕುಸುಮಾ ಶಿವಳ್ಳಿ ಅವರನ್ನು ಗೆಲ್ಲಿಸಿ ಮುಂದೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ತರುವ ಸೂಚನೆ ನೀಡಿದ್ದೀರಿ. ನಿಮ್ಮ ಜತೆ ನಾವು ಇರುತ್ತೇವೆ. ಮುಂದಿನ ದಿನಗಳಲ್ಲಿ ನಾನು ಹಾಗೂ ಸಿದ್ದರಾಮಯ್ಯ ಅವರು ಒಟ್ಟಿಗೆ ಎಲ್ಲ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದ್ದೇವೆ. ನಂತರ ಎರಡು ತಂಡವಾಗಿ ಎಲ್ಲ ಕ್ಷೇತ್ರಗಳಿಗೆ ಭೇಟಿ ನೀಡುತ್ತೇವೆ. ನಾವು ಕೊಡುವ ಮಾತು ಉಳಿಸಿಕೊಳ್ಳುತ್ತೇವೆ. ಬಿಜೆಪಿಯವರು 600 ಭರವಸೆ ನೀಡಿ 550 ಭರವಸೆ ಈಡೇರಿಸಿಲ್ಲ. ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ 169 ಭರವಸೆ ನೀಡಿ 165 ಕಾರ್ಯಕ್ರಮ ನೀಡಿದ್ದೇವೆ. ಇದು ಕಾಂಗ್ರೆಸ್ ಪಕ್ಷದ ಸಂಕಲ್ಪ. ಇದನ್ನು ಗಮನದಲ್ಲಿಟ್ಟುಕೊಂಡು ನೀವು ನಮ್ಮ ಜತೆ ನಿಲ್ಲಬೇಕು.
ಸಿದ್ದೇಶ್ವರ ಶ್ರೀಗಳ ಆರೋಗ್ಯ ಸರಿಯಿಲ್ಲ. ನಾವು, ನೀವೆಲ್ಲರೂ ಸೇರಿ ಅವರು ಗುಣಮುಖರಾಗಲು ಪ್ರಾರ್ಥಿಸೋಣ. ಅವರ ಸಿದ್ಧಾಂತ ಪಾಲಿಸೋಣ. ದೇವರು ಅವರಿಗೆ ಆರೋಗ್ಯ ನೀಡಲಿ ಎಂದು ಪ್ರಾರ್ಥಿಸೋಣ. ಬಿಜೆಪಿಯವರು ನಾವು ಹಿಂದೂ ನಾವು ಮುಂದು ಎನ್ನುತ್ತಾರೆ. ಆದರೆ ಕಾಂಗ್ರೆಸ್ ಹಿಂದೂ ಮುಸಲ್ಮಾನರು, ಕ್ರೈಸ್ತರು, ಸಿಖ್ಖರು, ಒಕ್ಕಲಿಗರು, ಲಿಂಗಾಯತರು, ಕುರುಬರು ಎಲ್ಲರೂ ಒಂದು ಎನ್ನುತ್ತೇವೆ. ಈ ನಾಡು ನಿಮ್ಮದು. ಕನ್ನಡ ನಾಡಿನ ಸ್ವಾಭಿಮಾನ ಉಳಿಸುವ ಕೆಲಸ ನೀವು ಮಾಡಬೇಕು. ಈ ನದಿ ನೀರು ನಮ್ಮದು. ನಮ್ಮ ನೀರು, ನಮ್ಮ ಹಕ್ಕು.
[02/01, 8:21 PM] Kpcc official: *ಮಹದಾಯಿ ಜಲ ಜನ ಆಂದೋಲನದಲ್ಲಿ ಕಾಂಗ್ರೆಸ್ ನಾಯಕರ ಮಾತಿನ ಮುಖ್ಯಾಂಶಗಳು:*
*ರಣದೀಪ್ ಸಿಂಗ್ ಸುರ್ಜೆವಾಲ*
ಮಹದಾಯಿ ಜಲಾಂದೋಲನದ ಅನಿವಾರ್ಯತೆ ಯಾಕೆ ಬಂತು? ದೆಹಲಿ ಹಾಗೂ ಬೆಂಗಳೂರಿನಲ್ಲಿ ಅಧಿಕಾರದಲ್ಲಿ ಕೂತಿರುವವರು ಈ ಭಾಗದ ಜನರಿಗೆ ದ್ರೋಹ ಬಗೆದಿದ್ದಾರೆ. ಇವರ ಚರಿತ್ರೆಯೋ ದ್ರೋಹದ ಮೇಲೆ ನಿಂತಿದೆ. ಕುಡಿಯುವ ನೀರಾಗಲಿ, ಕೃಷಿಗೆ ಬೇಕಾದ ನೀರಾಗಲಿ ಅದನ್ನು ಈ ಭಾಗದ ಜನರಿಗೆ ಸಿಗದಂತೆ ಬಿಜೆಪಿ ನಾಯಕರು ಮಾಡುತ್ತಿದ್ದಾರೆ. ಇವರು ಯೋಜನೆಗೆ ಅಡ್ಡಿ ಮಾಡಿ ಸುಳ್ಳಿನ ಉತ್ಸವ ಮಾಡುತ್ತಾರೆ. ದೆಹಲಿಯಲ್ಲಿ 8 ವರ್ಷಗಳಿಂದ, ರಾಜ್ಯದಲ್ಲಿ 3 ವರ್ಷಗಳಿಂದ ಬಿಜೆಪಿ ಅಧಿಕಾರದಲ್ಲಿದೆ. ಇವರು ನಾವು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡುವರೇ?
ಕಾಂಗ್ರೆಸ್ ಸರ್ಕಾರ ಈ ಯೋಜನೆಯನ್ನು ಆರಂಭಿಸಿದ್ದು, 2010ರಲ್ಲಿ ಮಹದಾಯಿ ನ್ಯಾಯಾಧಿಕರಣ ಮಾಡಲಾಯಿತು. 2002ರಲ್ಲಿ ವಾಜಪೇಯಿ ಅವರ ಸರ್ಕಾರ ಈ ಯೋಜನೆಗೆ ಅಡ್ಡಿಪಡಿಸಿ ದ್ರೋಹಬಗೆದಿದ್ದರು. ಇದೇ ದೋಖೆಬಾಜಿಗಳು 8 ವರ್ಷಗಳಿಂದ ದೆಹಲಿಯಲ್ಲಿ ಆಡಳಿತ ನಡೆಸುತ್ತಿದ್ದರೂ ಈ ಯೋಜನೆಯನ್ನು ಪೂರ್ಣಗೊಳಿಸುವುದಿರಲಿ, ಆರಂಭವನ್ನೇ ಮಾಡಿಲ್ಲ. ಬೊಮ್ಮಾಯಿ ಅವರು ಬಿಜೆಪಿ ನಾಯಕರು, ಪ್ರಹ್ಲಾದ್ ಜೋಷಿ ಅವರು ಉತ್ತರ ನೀಡುತ್ತಾರಾ? ಇವರು ಸುಳ್ಳು ಟ್ವೀಟ್ ಮಾಡುತ್ತಾರೆಯೇ ಹೊರತು ಜನರಿಗೆ ಉತ್ತರ ನೀಡುವುದಿಲ್ಲ. ಇದುವರೆಗೂ ಈ ಸರ್ಕಾರ ಅರಣ್ಯ, ಪರಿಸರ ಇಲಾಖೆಯ ಅನುಮತಿ ಪತ್ರ ಪಡೆದಿಲ್ಲ. ಯಾಕೆ? ಇಂದು ಬಿಜೆಪಿ ಸರ್ಕಾರ ಉತ್ತರಿಸಬೇಕು. ಬಿಜೆಪಿ ಸರ್ಕಾರ ಅಂತಿಮ ಗಳಿಗೆ ಬಂದಿದೆ.
ಬಿಜೆಪಿಯವರು ಈ ಯೋಜನೆಗೆ ಅನುಮತಿ ನೀಡಿ, ಅಱಣ್ಯ, ಪರಿಸರ ಇಲಾಖೆ ಅನುಮತಿ ಪಡೆದು ಈ ಯೋಜನೆ ಪೂರ್ಣಗೊಳ್ಲುವುದು ಯಾವಾಗ ಎಂದು ಬೊಮ್ಮಾಯಿ ಅವರು ಉತ್ತರ ನೀಡುವರೇ? ಈ ಯೋಜನೆಯಲ್ಲಿ ವಿದ್ಯುತ್ ಉತ್ಪಾದನೆ ಕೂಡ ಒಂದು ಪ್ರಮುಖ ಭಾಗವಾಗಿದೆ, ಇನ್ನು ಸಂರಕ್ಷಣಾ ಯೋಜನೆಯೂ ಆಗಿದ್ದು, ಇದರ ಬಗ್ಗೆ ರಾಜ್ಯ ಸರ್ಕಾರ ಈವರೆಗೂ ಅರ್ಜಿ ಸಲ್ಲಿಸಿಲ್ಲ ಯಾಕೆ? ಸತ್ಯ ಏನೆಂದರೆ ಇವರು ದ್ರೋಹಬಗೆಯುತ್ತಾರೆ. ಇವರಿಂದ ಮಹದಾಯಿ ನೀರು ತರಲು ಸಾಧ್ಯವಿಲ್ಲ. ಹೀಗಾಗಿ ನಾವು ಹೊಸ ಸಂಕಲ್ಪದೊಂದಿಗೆ ಇಲ್ಲಿಗೆ ಬಂದಿದ್ದೇವೆ. ಆ ಸಂಕಲ್ಪ ಏನೆಂದರೆ ಕಾಂಗ್ರೆಸ್ ಮುಂದಿನ ಸರ್ಕಾರ ಮೊದಲ ಸಂಪುಟದಲ್ಲಿ 500 ಕೋಟಿ ಅನುದಾನ ನೀಡಿ ಯೋಜನೆಗೆ ಚಾಲನೆ ನೀಡಲಾಗುವುದು. ಒಟ್ಟು 3 ಸಾವಿರ ಕೋಟಿ ಅನುದಾನ ನೀಡಿ ಯೋಜನೆ ಪೂರ್ಣಗೊಳಿಸುತ್ತೇವೆ.
ಈ ಭಾಗದಲ್ಲಿ 5-7 ದಿನ ನೀರು ಸಿಗುವುದಿಲ್ಲ. ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ 24 ಗಂಟೆಗಳ ನೀರು ಹರಿಸುವ ಭರವಸೆ ಬಿಜೆಪಿ ನೀಡಿದ್ದು, ಆದನ್ನು ಸಾಕಾರಗೊಳಿಸುವ ಪ್ರಯತ್ನ ಮಾಡಿಲ್ಲ. ಇದು ಸಾಧ್ಯವಾಗುವುದಾದರೆ ಅದು ಕಾಂಗ್ರೆಸ್ ಸರ್ಕಾರದಿಂದ ಮಾತ್ರ. ಹುಬ್ಬಳ್ಳಿ ಧಾರವಾಡದಿಂದ ಸರ್ಕಾರ ಬದಲಾವಣೆ ಮಾಡುವ ಸಂಕಲ್ಪ ಮಾಡೋಣ. ಇಂದು ನಾವು ಹುಬ್ಬಳ್ಳಿ ಧಾರವಾಡ ಪ್ರದೇಶದಲ್ಲಿರುವ ನಲ್ಲಿಗಳಲ್ಲಿ ಮಹದಾಯಿ ನೀರು ಬಾರದಿದ್ದರೆ ಬಿಜೆಪಿ ಸರ್ಕಾರ ಓಡಿಸಿ, ಕಾಂಗ್ರೆಸ್ ಸರ್ಕಾರಕ್ಕೆ ಅವಕಾಶ ನೀಡಿ. ಕುಡಿಯುವ ನೀರು, ವಿದ್ಯುತ್, ಕೃಷಿಗೆ ನೀರು ನೀಡುವ ಕೆಲಸವನ್ನು ನಾವು ಮಾಡುತ್ತೇವೆ.
*ಸಿದ್ದರಾಮಯ್ಯ*
ಕಾಂಗ್ರೆಸ್ ಪಕ್ಷ ಇಡೀ ರಾಜ್ಯದಲ್ಲಿ ಜನಪರ ಹೋರಾಟ ಮಾಡಿಕೊಂಡು ಹುಬ್ಬಳ್ಳಿಯಲ್ಲಿ ಮಹದಾಯಿ ಯೋಜನೆ ತ್ವರಿತ ಜಾರಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಒತ್ತಾಯ ಮಾಡಲು ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಡಿ.30ರಂದು ವಿಜಯಪುರದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ಆರಂಭಿಸಲು ಒತ್ತಾಯಿಸಿ ಪ್ರತಿಭಟನೆ ಮಾಡಿದ್ದೆವು.
ಕಳಸಾ ಬಂಡೂರಿ ನಾಲಾ ಯೋಜನೆಯನ್ನು ತೀವ್ರಗತಿಯಲ್ಲಿ ಪ್ರಾರಂಭಿಸುವಂತೆ ಆಗ್ರಹಿಸಲು ಹುಬ್ಬಳ್ಳಿಯಲ್ಲಿ ಈ ಕಾರ್ಯಕ್ರಮ ಮಾಡಲು 15 ದಿನಗಳ ಹಿಂದೆ ಕಾಂಗ್ರೆಸ್ ಎಲ್ಲ ನಾಯಕರು ದೆಹಲಿಯಲ್ಲಿ ತೀರ್ಮಾನ ಮಾಡಿದ್ದೆವು. ನಾವು ಇಲ್ಲಿ ಸಮಾವೇಶ ಘೋಷಣೆ ಮಾಡಿದ ನಂತರ ಬಿಜೆಪಿಯವರು ಎಚ್ಛೆತ್ತುಕೊಂಡು ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿರುವ ಕಾರಣ ಈಗ ಈ ಯೋಜನೆ ಡಿಪಿಆರ್ ಅನುಮೋದನೆ ಮಾಡಿದ್ದೇವೆ ಎಂದು ನಿನ್ನೆ ವಿಜಯೋತ್ಸವ ಆಚರಿಸಿದ್ದಾರೆ.
ಗೆಜೆಟ್ ನೋಟಿಫಿಕೇಷನ್ ಆಗಿದ್ದು ಯಾವಾಗ? 27-2-2020. ಕೇಂದ್ರ, ರಾಜ್ಯ, ಗೋವಾ, ಮಹಾರಾಷ್ಟ್ರದಲ್ಲಿ ನಿಮ್ಮದೇ ಸರ್ಕಾರ ಇದ್ದರೂ 2 ವರ್ಷ 10 ತಿಂಗಳು ಯಾಕೆ ಪ್ರಾರಂಭ ಮಾಡಲಿಲ್ಲ? ಡಿಪಿಆರ್ ಗೆ ಈ ಹಿಂದೆ ಅನುಮೋದನೆ ನೀಡಲಿಲ್ಲ ಯಾಕೆ? ಜೋಷಿ ಅವರು, ಬೊಮ್ಮಾಯಿ ಅವರೇ ನೀವು ರಾಜ್ಯದ ಜನರಿಗೆ ಸುಳ್ಳು ಹೇಳುತ್ತಿದ್ದೀರಿ. ನ್ಯಾಯಾಧೀಕರಣ 14-8-2018ರಲ್ಲಿ ತನ್ನ ತೀರ್ಮಾನ ನೀಡಿತು. ಐದು ವರ್ಷಗಳಲ್ಲಿ ನಾವು ಗೋವಾ ಮಹಾರಾಷ್ಟ್ರದವರು ಮೇಲ್ಮನವಿ ಸಲ್ಲಿಸಿದ್ದೇವೆ. ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿ ಎಂದು ಐಎಎಂ ಅರ್ಜಿ ಹಾಕಿದೆವು. ನಮ್ಮ ಅರ್ಜಿಯನ್ನು ಒಪ್ಪಿ ಸುಪ್ರೀಂ ಕೋರ್ಟ್ 27-2-2020ರಲ್ಲಿ ಗೆಜೆಟ್ ನೋಟಿಫಿಕೇಷನ್ ಆಯಿತು. ಬೊಮ್ಮಾಯಿ ಹಾಗೂ ಯಡಿಯೂರಪ್ಪನವರೇ ನಿಮ್ಮದೇ ಸರ್ಕಾರವಿತ್ತು. ಆದರೂ ಈ ವಿಚಾರವಾಗಿ ನಿದ್ದೆ ಮಾಡಿದ್ದು ಯಾಕೆ? ಸುಳ್ಳು ಹೇಳಿ ವಿಜಯೋತ್ಸವ ಮಾಡಲು ನಿಮಗೆ ನಾಚಿಕೆಯಾಗುವುದಿಲ್ಲವೇ? 2013ರಲ್ಲಿ ನಾವು ಅದಿಕಾರಕ್ಕೆ ಬಂದಾಗ ನ್ಯಾಯಾಧಿಕರಣದ ಮುಂದೆ ಸಮರ್ಥ ಸಾಕ್ಷ್ಯ ಒದಗಿಸಿ ವಾದ ಮಂಡಿಸಿದ ಪರಿಣಾಮ ನಮಗೆ 13.42 ಟಿಎಂಸಿ ನೀರು ಸಿಕ್ಕಿದೆ. ಗೋವಾದವರಿಗೆ 24 ಟಿಎಂಸಿ, ಮಹಾರಾಷ್ಟ್ರದವರಿಗೆ 1.3 ಟಿಎಂಸಿ ಸಿಕ್ಕಿತು. ಈ ತೀರ್ಪು ಸಮಾಧಾನವಿಲ್ಲದಿದ್ದರೂ ಅದನ್ನು ಒಪ್ಪಿದ್ದೇವೆ.
ನಾನು ಸಿಎಂ ಆಗಿದ್ದಾಗ ಸರ್ವಪಕ್ಷ ನಿಯೋಗ ಕರೆದುಕೊಂಡು ಹೋಗಿದ್ದೆ. ಪ್ರಹ್ಲಾದ್ ಜೋಷಿ, ಯಡಿಯೂರಪ್ಪ, ಅನಂತ ಕುಮಾರ್, ಸದಾನಂದ ಗೌಡ, ಶೋಭಾ ಕರಂದ್ಲಾಜೆ ಅವರೆಲ್ಲರೂ ಬಂದಿದ್ದರು. ಆ ಯೋಜನೆಗಾಗಿ ಹೋರಾಟ ಮಾಡುತ್ತಿದ್ದ ರೈತ ಮುಖಂಡರು ಬಂದಿದ್ದರು. ಸ್ವಾಮೀಜಿಗಳು ಬಂದಿದ್ದರು. ಇವರೆಲ್ಲರ ಸಮ್ಮುಖದಲ್ಲಿ ನಾನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೈಮುಗಿದು ಪ್ರಾರ್ಥನೆ ಮಾಡಿ, ಮೋದಿ ಅವರೇ ಗೋವಾದಲ್ಲಿ, ಮಹಾರಾಷ್ಟ್ರದಲ್ಲಿ ನಿಮ್ಮ ಪಕ್ಷ ಅಧಿಕಾರದಲ್ಲಿದೆ. ನಾನು ಕಾಂಗ್ರೆಸ್ ಪಕ್ಷದಿಂದ ಸಿಎಂ ಆಗಿದ್ದು, ನೀವು ಯಾವುದೇ ತೀರ್ಮಾನ ಕೊಟ್ಟರೂ ನಾವು ಒಪ್ಪಲು ಸಿದ್ಧನಿದ್ದೇನೆ. ನಿಮ್ಮ ಮುಖ್ಯಮಂತ್ರಿಗಳನ್ನು ಕರೆದು ಚರ್ಚೆ ಮಾಡಿ. ನೀವು ನಿಮ್ಮ ಮುಖ್ಯಮಂತ್ರಿಗಳನ್ನು ಒಪ್ಪಿಸಿ ಇದನ್ನು ಇತ್ಯಾರ್ಥ ಮಾಡಿ ಎಂದು ಪರಿಪರಿಯಾಗಿ ಗೋಗರೆದೆ. ಆದರೂ ಒಪ್ಪಲಿಲ್ಲ. ಆಗ ಬಿಜೆಪಿ ನಾಯಕರು ಒಳಗಡೆ ಹೋಗಿ ಮಾತನಾಡಿ ಬಂದರು. ಸಿದ್ದರಾಮಯ್ಯ ಅವರ ಮನವಿ ಒಪ್ಪಬೇಡಿ ಎಂದು ಮೋದಿ ಅವರಿಗೆ ಹೇಳಿ ಬಂದರು. ಇದಕ್ಕೆ ಸ್ವಾಮೀಜಿಗಳು, ರೈತ ಮುಖಂಡರೇ ಸಾಕ್ಷಿ.
ಅಂದು ನರೇಂದ್ರ ಮೋದಿ ಅವರು ಒಪ್ಪಲಿಲ್ಲ. ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ತೆಲುಗು ಗಂಗಾ ಯೋಜನೆಗೆ, ಆಂಧ್ರ, ಕರ್ನಾಟಕ, ತಮಿಳುನಾಡು ಮುಖ್ಯಮಂತ್ರಿ ಕರೆದು ಇತ್ಯರ್ಥ ಮಾಡಿದ್ದಾರೆ. ಅದೇ ರೀತಿ ನೀವು ಮಾಡಿ ಮೋದಿಯವರೇ ಎಂದು ಗೋಗರೆದಿದ್ದೆ. ಆಗ ಮೋದಿ ಅವರು ನೀವು ಗೋವಾ ಕಾಂಗ್ರೆಸ್ ಒಪ್ಪಿಸಿಕೊಂಡು ಬನ್ನಿ ಆಗ ನಾನು ನೋಡುತ್ತೇನೆ ಎಂದರು. ಇಂದಿರಾ ಗಾಂಧಿ ಅವರಿಗೆ ಸಾಧ್ಯವಾಗುವುದಾದರೆ ನಿಮ್ಮ ಕೈಯಲ್ಲಿ ಯಾಕೆ ಸಾಧ್ಯವಾಗಲಿಲ್ಲ? ನೀವು ಪ್ರಯತ್ನವನ್ನೇ ಮಾಡಲಿಲ್ಲ. ಗೋವಾದ ನಿಯೋಗ ಪ್ರಧಾನಿ ಭೇಟಿಗೆ ಹೋಗುತ್ತಿದ್ದಾರೆ. ಒಮ್ಮೆ ವಾಜಪೇಯಿ ಸರ್ಕಾರ ಇದ್ದಾಗ ಅನುಮತಿ ನೀಡಿ ಅದನ್ನು 2 ತಿಂಗಳಲ್ಲಿ ಹಿಂಪಡೆದಿದ್ದರು. 2018ರಲ್ಲಿ ಯಡಿಯೂರಪ್ಪ ಇದೇ ಮೈದಾನದಲ್ಲಿ ಏನು ಹೇಳಿದ್ದರು. ನಾವು ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಮಹದಾಯಿ ಯೋಜನೆ ಬಗೆಹರಿಸಿ ಕೆಲಸ ಆರಂಭಿಸುವುದಾಗಿ ರಕ್ತದಲ್ಲಿ ಬರೆದುಕೊಡುವುದಾಗಿ ಹೇಳಿದ್ದರು.
ಈ ಡೋಂಗಿತನ ಬಿಟ್ಟು ಜನರಿಗೆ ಸುಳ್ಳು ಹೇಳುವುದನ್ನು ಬಿಟ್ಟು ಸತ್ಯ ಹೇಳುವುದನ್ನು ಕಲಿಯಿರಿ. ಕಾಂಗ್ರೆಸ್ ಅಧಿಕಾರದಲ್ಲಿ ಇರುವಾಗ ನುಡಿದಂತೆ ನಡೆದಿದ್ದೇವೆ. 2013ರಲ್ಲಿ ನಮ್ಮ ಪ್ರಣಾಳಿಕೆ ಮೂಲಕ 165 ಭರವಸೆ ನೀಡಿದ್ದೆವು. ಅದರಲ್ಲಿ 158 ಭರವಸೆ ಈಡೇರಿಸಿದ್ದೇವೆ. ಅದರ ಜತೆಗೆ ಪ್ರಣಾಳಿಕೆಯಲ್ಲಿ ಹೇಳದ 30 ಕಾರ್ಯಕ್ರಮ ಕೊಟ್ಟಿದ್ದೇವೆ. ನುಡಿದಂತೆ ನಡೆದ ಸರ್ಕಾರ ಇದ್ದರೆ ಅದು ಕಾಂಗ್ರೆಸ್ ಸರ್ಕಾರ ಮಾತ್ರ. ನಾವು ಕೊಟ್ಟ ಮಾತಿಗೆ ತಪ್ಪಲ್ಲ.
ಕೂಡಲಸಂಗಮದಲ್ಲಿ 5 ವರ್ಷಗಳಲ್ಲಿ ನೀರಾವರಿ ಯೋಜನೆಗೆ 50 ಸಾವಿರ ಕೋಟಿ ನೀಡುವುದಾಗಿ ಹೇಳಿದ್ದೆವು. ನಾವು ಅಧಿಕಾರದಲ್ಲಿ 50 ಸಾವಿರ ಕೋಟಿಗೂ ಹೆಚ್ಚು ಅನುದಾನ ನೀಡಿದ್ದೇವೆ. ನೀವು 2018ರಲ್ಲಿ 1.50 ಲಕ್ಷ ಕೋಟಿ ನೀರಾವರಿಗೆ ನೀಡಲಾಗುವುದು ಎಂದು ಹೇಳಿದ್ದೀರಿ. ಇಲ್ಲಿಯವರೆಗೂ ಕೇವಲ 45 ಸಾವಿರ ಕೋಟಿ ಖರ್ಚು ಮಾಡಿದ್ದೀರಿ. ಇನ್ನು 1 ಲಕ್ಷ ಕೋಟಿ ಏನಾಯ್ತು? ಕಳಸಾ ಬಂಡೂರಿ ಜನೆ ಯಾಕೆ ಆರಂಭಿಸಲಿಲ್ಲ. ನಿಮ್ಮ ಪ್ರಣಾಳಿಕೆಯಲ್ಲಿ 600 ಭರವಸೆ ಕೊಟ್ಟಿದ್ದು ಅದಲ್ಲಿ ಶೇ.10ರಷ್ಟು ಜಾರಿ ಮಾಡಲು ಆಗಿಲ್ಲ. ರಾಜ್ಯದ ಜನರಿಗೆ ಸುಳ್ಳು ಹೇಳಿ ಕೊಟ್ಟ ಮಾತಿನಂತೆ ನಡೆದುಕೊಳ್ಳದೇ ರಾಜ್ದ ಜನರಿಗೆ ದ್ರೋಹ ಮಾಡಿದ್ದೀರಿ.
ನಾವು 2023ರಲ್ಲಿ ಅಧಿಕಾರಕ್ಕೆ ಬಂದರೆ ರಾಜ್ಯದ ಅಲ್ಲ ಬಾಕಿ ನೀರಾವರಿ ಯೋಜನೆಗೆ 5 ವರ್ಷಗಳಲ್ಲಿ ಪೂರೈಸಲು 2 ಲಕ್ಷ ಕೋಟಿ ಅನುದಾನ ನೀಡಲಾಗುವುದು. 93 ಕೋಟಿ ಇದ್ದ ಯೋಜನಾ ವೆಚ್ಚ ಇಂದು 1677 ಕೋಟಿ ಆಗಿದೆ. ಈ ಹಣ ನೀಡುವವರು ಯಾರು? ನಿಮ್ಮ ವಿಳಂಬ ನೀತಿ, ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಇಷ್ಟು ಹೆಚ್ಚಾಗಿದೆ. ಕೇಂದ್ರಸರ್ಕಾರ ಈ ಹಣ ನೀಡುತ್ತದೆಯಾ? ಮೋದಿ, ನಿರ್ಮಲಾ ಸೀತರಾಮನ್ ಅವರು ನೀವು ನೀಡುತ್ತೀರಾ? ನೀವು ನೀಡಬೇಕು ಎಂದು ಒತ್ತಾಯಿಸುತ್ತೇನೆ. ನಾವು 2023ರಲ್ಲಿ ಅಧಿಕಾರಕ್ಕೆ ಬಂದೇ ಬರುತ್ತೇವೆ. ಬಿಜೆಪಿ ಎಷ್ಟೇ ಸುಳ್ಳು ಹೇಳಲಿ, ಹಣದ ಹೊಳೆ ಹರಿಸಲಿ, ಕಾಂಗ್ರೆಸ್ ಅಧಿಕಾರಕ್ಕೆ ಬರುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ನಾವು ಅಧಿಕಾರಕ್ಕೆ ಬಂದ 2 ವರ್ಷದಲ್ಲಿ ಇಡೀ ಯೋಜನೆಯನ್ನು ಪೂರ್ಣಗೊಳಿಸುತ್ತೇವೆ ಎಂದು ಈ ಭಆಗದ ಜನರಿಗೆ ಹೇಳಲು ಬಯಸುತ್ತೇನೆ.
*ಬಿ.ಕೆ. ಹರಿಪ್ರಸಾದ್*
ಬಿಜೆಪಿ ಸರ್ಕಾರದಲ್ಲಿ ನಾವು ನಿರೀಕ್ಷೆ ಮಾಡುವಂತಹದ್ದು ಏನೂ ಇಲ್ಲ. ಸುಳ್ಳಿನ ಸರ್ಕಾರ ಬರೀ ಸುಳ್ಳು ಹೇಳುತ್ತಿದೆ. ಅವರು ಹೊರಡಿಸಿರುವ ಡಿಪಿಆರ್ ನಲ್ಲಿ ಎಷ್ಟು ಸತ್ಯಾಂಶವಿದೆ ಎಂದು ಹೆಚ್.ಕೆ ಪಾಟೀಲ್ ಅವರು ಹೇಳಿದ್ದಾರೆ. ಮೋದಿ ಅವರ ಡಿಗ್ರಿ ಸರ್ಟಿಫಿಕೇಟ್ ಎಷ್ಟು ನಕಲಿಯೋ ಅಷ್ಟೇ ಡಿಪಿಆರ್ ಅನುಮತಿ ಪತ್ರವೂ ನಕಲಿಯಾಗಿದೆ. ಪ್ರಧಾನಮಂತ್ರಿಗಳು ಅಧಿಕಾರಕ್ಕೆ ಬಂದು 9 ವರ್ಷ ಆಗಿದೆ. ಡಬಲ್ ಇಂಜಿನ್, ತ್ರಿಬಲ್ ಇಂಜಿನ್ ಸರ್ಕಾರ ಎನ್ನುತ್ತಾರೆ. ಅವರು ಯಾವತ್ತಾದರೂ ಸರ್ವಪಕ್ಷ ಸಭೆ ಮಾಡಿದ್ದಾರಾ? ಪ್ರಧಾನಮಂತ್ರಿಗಳೇ ನೀವು ಕೇವಲ ಬಿಜೆಪಿಗೆ ಮಾತ್ರ ಪ್ರಧಾನಿಯಲ್ಲಿ ದೇಶಕ್ಕೆ ಪ್ರಧಾನಿ. ನೀವು ಸಮಸ್ಯೆ ಬಗೆಹರಿಸಬೇಕು. ನೀವು ಸಮಸ್ಯೆ ಬಗೆಹರಿಸಲು ಸಭೆ ಮಾಡಿಲ್ಲ. ಅವರು ಪಾಳು ಬಿದ್ದಿರುವ ಮಸೀದಿ, ಮಂದಿರ ಮಾತ್ರ ಹುಡುಕುತ್ತಾರೆ. ಜನರಿಗೆ ಸ್ಪಂದಿಸುವ ಕಾರ್ಯಕ್ರಮ ಮಾಡಿಲ್ಲ. ಎವ್ರು ಮನ್ ಕಿ ಬಾತ್ ನಲ್ಲಿ ಎಷ್ಟು ಬಾರಿ ರೈತರು, ಕಾರ್ಮಿಕರು, ಮಹಿಳೆಯರ ಸುರಕ್ಷತೆ, ಮಕ್ಕಳಿಗೆ ಶಿಕ್ಷಣ, ಯುವಕರಿಗೆ ಉದ್ಯೋಗ ನೀಡುವ ವಿಚಾರ ಎಷ್ಟು ಬಾರಿ ಮಾತನಾಡಿದ್ದಾರೆ? ಈ ಹೋರಾಟ ಈ ಭಾಗದ ಜಿಲ್ಲೆಗಳ ಒಣ ಪ್ರದೇಶದಲ್ಲಿ ನೀರಿಗಾಗಿ ಆಹಾಕಾರ ಇದ್ದ ಸಂದರ್ಭದಲ್ಲಿ ಈ ಯೋಜನೆಗೆ ಮುಂದಾಗಿದ್ದಾರೆ. ಈ ಯೋಜನೆ ಅನುಷ್ಠಾನಕ್ಕೆ ಬರಬೇಕಾದರೆ ಬಿಜೆಪಿಯನ್ನು ಸೋಲಿಸಿ ಮನೆಗೆ ಕಳುಹಿಸಬೇಕು.
*ಹೆಚ್.ಕೆ ಪಾಟೀಲ್*
ಈ ಕಾರ್ಯಕ್ರಮ ಚುನಾವಣೆಯಲ್ಲಿ ಮತ ಕೇಳಲು ಅಲ್ಲ. ಈ ಕಾರ್ಯಕ್ರಮ ಮಹದಾಯಿ ನದಿ ನೀರನ್ನು ಮಲಪ್ರಭ ನದಿಗೆ ತಿರುಗಿಸಲು ಹೋರಟಕ್ಕೆ ಕರೆ ನೀಡಲು ಈ ಕರೆ. ಹುಬ್ಬಳ್ಳಿ ಧಾರವಾಡದಲ್ಲಿ 15 ದಿನಕ್ಕೊಮ್ಮೆ ನೀರು ಬರುವಷ್ಟು ಸಮಸ್ಯೆ ತಲೆದೋರಿದ್ದು ಇದನ್ನು ತೀರಿಸಿಕೊಳ್ಳಲು ಹೋರಾಟ ಮಾಡಬೇಕಿದೆ. ರೋಣ, ನರಗುಂದ, ನವಲಗುಂದ, ಬೈಲಹೊಂಗಲ, ರಾಮದುರ್ಗ, ಸವದತ್ತಿ ತಾಲೂಕುಗಳಲ್ಲಿ ರೈತರು ನೀರಿನ ಕೊರತೆಯಿಂದ ಕೃಷಿ ಹಾನಿ ಮಾಡಿಕೊಳ್ಳುತ್ತಿದ್ದಾರೆ. ರೈತರಿಗೆ ಬೆಳೆ ಕೈಗೆ ಬರುವ ಹೊತ್ತಲ್ಲಿ ನೀರಿನ ಕೊರತೆಯಿಂದ ನಾಶವಾಗುತ್ತಿದೆ. ಹೀಗಾಗಿ ಮಹದಾಯಿ ನೀರನ್ನು ರೇಣುಕಾಸಾಗರಕ್ಕೆ ತಂದು ಬಿಟ್ಟು ರೈತರ ಕಲ್ಯಾಣ ಮಾಡುವ ಕಳಸಾ ಬಂಡೂರಿ ಕನಸನ್ನು ನನಸು ಮಾಡಲು ಹೋರಾಟ ಮಾಡಬೇಕಿದೆ.
ನಿನ್ನೆ ಬಿಜೆಪಿ ಅವರು ಪತ್ರಿಕೆ, ಟಿವಿಗಳಲ್ಲಿ ಪ್ರಚಾರ ನೋಡಿ ಮಹದಾಯಿ ನೀರು ಹರಿದು ಬಂದಿರುವಂತೆ ವಿಜಯೋತ್ಸವ ಆಚರಿಸಿದರು. ಇದರಿಂದ ಯಾರಿಗೆ ಮೋಸ ಮಾಡಲು ಹೊರಟಿದ್ದೀರಿ? ವಿಜಯೋತ್ಸವ ಆಚರಿಸಲು ನಿಮಗೆ ನಾಚಿಕೆಯಾಗುವುದಿಲ್ಲವೇ? ಇದೇ ಮೈದಾನದೊಳಗೆ ಯಡಿಯೂರಪ್ಪನವರು ಒಂದು ಪತ್ರ ತೋರಿಸಿ, ಗೋವಾ ಮುಖ್ಯಮಂತ್ರಿಗಳಿಂದ ನಿರಾಕ್ಷೇಪಣ ಪತ್ರ ಕೊಟ್ಟಿದ್ದಾರೆ, ನಿಮ್ಮ ಮಹದಾಯಿ ಸಮಸ್ಯೆ ಬಗೆಹರಿಯಿತು. ನಾವು ಅಧಿಕಾರಕ್ಕೆ ಬರುತ್ತಿದ್ದಂತೆ ಮಹದಾಯಿ ನೀರು ತಂದು ಕೊಡುತ್ತೇವೆ ಎಂದು ಹೇಳಿದ್ದರು.
ಪ್ರಧಾನಿ ಮೋದಿ ಅವರು ಗದಗದಲ್ಲಿ ಒಂದು ಮಾತು ಹೇಳಿದ್ದರು. ನಮ್ಮ ಸರ್ಕಾರ ಬಂದರೆ ಗೋವಾ ಹಾಗೂ ನಿಮ್ಮ ಮುಖ್ಯಮಂತ್ರಿ ಕರೆಸಿ ಮಾತನಾಡಿ ಮಹದಾಯಿ ನೀರು ಯೋಜನೆ ಜಾರಿ ಮಾಡಿಸುತ್ತೇವೆ ಎಂದು ಹೇಳಿದ್ದರು. ಈ ಮಾತನ್ನು ಚುನಾವಣೆ ಹತ್ತಿರವಿದ್ದಾಗ ಹೇಳಿದ್ದರು. ಚುನಾವಣೆ ಬಂದಾಗಲೆಲ್ಲ ಇವರಿಗೆ ಮಹದಾಯಿ ನೆನಪಾಗುತ್ತದೆ. 2018ರ ಅಂತ್ಯದಲ್ಲಿ ಮಹದಾಯಿ ನ್ಯಾಯಾಧಿಕರಣ ತೀರ್ಪು ಬಂದಿತು. 2020ರಲ್ಲಿ ಮಹದಾಯಿ ಗೆಜೆಟ್ ನೋಟಿಫಿಕೇಶನ್ ಆಗಿದೆ. 2020ರಿಂದ 2022 ಅಕ್ಟೋಬರ್ ವರೆಗೆ ಡಿಪಿಆರ್ ನೀಡಲು ಆಗಲಿಲ್ಲ ಯಾಕೆ?
ಯಾವಾಗ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರು ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ. ರಾಜಕೀಯ ಇಚ್ಛಾಶಕ್ತಿಯಿಂದ ಈ ಯೋಜನೆ ವಿಳಂಬ ಮಾಡುತ್ತಿದ್ದಾರೆ. ಇದರ ವಿರುದ್ಧ ಹೋರಾಟ ಮಾಡಬೇಕು ಎಂದು ಹೇಳಿದ ನಂತರ ಇವರು ಡಿಪಿಆರ್ ಸಲ್ಲಿಕೆ ಮಾಡುತ್ತಾರೆ. ಈಗ ಡಿಪಿಆರ್ ಮಂಜೂರಾಗಿದೆ ಎಂದು ಹೇಳಿದ್ದಾರೆ. ಡಿಪಿಆರ್ ಮಂಜೂರಾದರೆ ಯೋಜನೆ ಮಂಜೂರಾದಂತೆಯೇ? ಡಿಪಿಆರ್ ಮಂಜೂರು ಪತ್ರದಲ್ಲಿ ಹಾಕಿರುವ ಷರತ್ತುಗಳೇನಿವೆ ಎಂದು ನೋಡಿದ್ದೀರಾ? ಕಾವೇರಿ ತೀರ್ಪು ಬಂದ ನಂತರ ಅಂದಿನ ನಾಯಕರು ತಕ್ಷಣ ವಿರೋಧ ಪಕ್ಷಗಳನ್ನು ಕರೆದು ಸಭೆ ಮಾಡಿ ಲಾಭ ನಷ್ಟದ ಚರ್ಚೆ ಮಾಡಿ ರಾಜ್ಯದ ನಿಲುವು ಏನು ಎಂದು ಅವಲೋಕಿಸಿದರು. ಆದರೆ ಇವರು ಯಾವುದೇ ಚರ್ಚೆ ಮಾಡದೇ ಗೆದ್ದುಬಿಟ್ಟಿದ್ದೇವೆ ಎಂದು ಹೇಳುತ್ತಿದ್ದೇವೆ. ಮೊನ್ನೆ ಪ್ರಹ್ಲಾದ್ ಜೋಷಿ ಅವರು ತಮ್ಮ ಹೇಳಿಕೆ ನೀಡಿದ್ದರು. ಅವರ ಹೇಳಿಕೆಯಲ್ಲಿ ದಿನಾಂಕವೇ ಇಲ್ಲ, ಅದನ್ನು ಹೇಗೆ ನಂಬೂಬೇಕು ಎಂದು ಕೇಳಿದೆವು. ಈ ರೀತಿ ಸುಳ್ಳು ಹೇಳಿದರೆ ಹೇಗೆ ಎಂದು ಕೇಳಿದರೆ ಸಿದ್ದರಾಮಯ್ಯ ಹಾಗೂ ಹೆಚ್.ಕೆ ಪಾಟೀಲ್ ಗೆ ಕಣ್ಣು ಕಾಣುವುದಿಲ್ಲ ಎಂದು ಟೀಕೆ ಮಾಡಿದ್ದಾರೆ. ನಮಗೆ ಕಣ್ಣು ಕಾಣುತ್ತಿಲ್ಲವೋ ಅಊವಾ ನಿಮ್ಮ ನೆತ್ತಿ ಮೇಲೆ ನಿಮ್ಮ ಕಣ್ಣು ಬಂದಿವೆಯೋ?
ಜೋಷಿ ಅವರು ನಿನ್ನೆ ಅರಣ್ಯ ಇಲಾಖೆ ಪರವಾನಿಗೆ ಬೇಕಿಲ್ಲ, ಯಾಕೆಂದರೆ ಅದನ್ನು ನಾವೇ ರಾಜ್ಯ ಸರ್ಕಾರ ನೀಡಬಹುದು ಎಂದು ಹೇಳಿದ್ದಾರೆ. ನಿಮ್ಮ ಅರಣ್ಯ ಇಲಾಖೆ ಹೆಚ್ಚುವರಿ ಕಾರ್ಯದರ್ಶಿಗಳು ಬೆಂಗಳೂರಿನ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ಕಚೇರಿಗೆ ಅರ್ಜಿ ಕೊಟ್ಟಿದ್ದು ಯಾಕೆ? ಅವರ ಪರವಾನಿಗೆ ಬೇಡವಾದರೆ ಅರ್ಜಿ ಕೊಟ್ಟಿದ್ದು ಯಾಕೆ? ಅವರು ಹೇಗೆ ಸುಳ್ಳು ಪೋಣಿಸುತ್ತಾರೆ ಎಂದು ರೈತರು ಅರಿಯಬೇಕು. ಗೋವಾದವರು ತಮ್ಮ ಹಸಿ ಸುಳ್ಳಿನ ಮೂಲಕ 200 ಟಿಎಂಸಿ ನೀರು ಸಮುದ್ರಕ್ಕೆ ಸೇರುತ್ತಿದೆ. ಅದನ್ನು ನಾವು ಬಳಸಿಕೊಳ್ಳಲು ಮುಂದಾದರೆ ಈ ನದಿಯಲ್ಲಿ ಕೇವಲ 60-7- ಟಿಎಂಸಿ ನೀರು ಇದೆ ಎಂದು ಸುಳ್ಳು ಹೇಳಿದ್ದರು. ನಂತರ ನಮ್ಮ ಕಾಂಗ್ರೆಸ್ ಸರ್ಕಾರ ವೈಜ್ಞಾನಿಕ ಅಧ್ಯಯನದ ಮೂಲಕ ಈ ನದಿಯಲ್ಲಿ 200 ಟಿಎಂಸಿ ನೀರು ಇದೆ ಎಂದು ಸಾಬೀತು ಮಾಡಿದೆವು.
ಈ ಬಂಡೂರಿ ನಾಲಾ ಯೋಜನೆ ಹುಟ್ಟು ಹಾಕಿದ್ದು ಯಾರು ಎಂದು ಜಗದೀಶ್ ಶೆಟ್ಟರ್, ಸಿಸಿ ಪಾಟೀಲ್ ಅವರು ಹೇಳಬೇಕು. ಕೃಷ್ಣ ಅವರ ಸರ್ಕಾರದಲ್ಲಿ ನಾನು ನೀರಾವರಿ ಸಚಿವನಾಗಿದ್ದಾಗ ಇವರೆಲ್ಲರೂ ಬಂದು ನೀವು ಕಳಸಾ ಯೋಜನೆ ಮಾಡುಲು ಮುಂದಾಗಿದ್ದು, ಅದನ್ನು ಮಾಡಿ. ಅದರ ಜತೆಗೆ ಬಂಡೂರಿ ನಾಲಾ ನೋಡಿದರೆ ಮಹದಾಯಿಗೆ ಹೆಚ್ಚಿನ ನೀರು ತಿರುವು ನೀಡಬಹುದು ಎಂದು ಹೇಳಿದ್ದರು. ನಾವು ಅಲ್ಲಿಗೆ ಹೇಗಿ 3 ತಾಸು ನೋಡಿ ಅಲ್ಲಿ ನಮಗೆ 4 ಟಿಎಂಸಿ ನೀರು ಲಭ್ಯವಾಗುತ್ತದೆ ಎಂದು ಮನವರಿಕೆಯಾಗಿ ಕಳಸಾ ಬಂಡೂರಿ ನಾಲಾ ಯೋಜನೆ ಹುಟ್ಟುಹಾಕಿದ್ದು ಕಾಂಗ್ರೆಸ್ ಸರ್ಕಾರ.
ನಾವು ಆರಂಭಿಸಿರುವ ಯೋಜನೆ ಪೂರ್ಣಗೊಳಿಸುವ ರಾಜಕೀಯ ಇಚ್ಛಾಶಕ್ತಿ ನಿಮಗೆ ಇಲ್ಲವಾಗಿದೆ. ಜನ ನಿಮ್ಮ ಸುಳ್ಳಿಂದ ಬೇಸತ್ತಿದ್ದಾರೆ. ನೀವು ಹೇಳಿದ್ದು ನಿಜವಾಗಿದ್ದರೆ ಇಲ್ಲಿ ಹಾಕಿರುವ ಕುರ್ಚಿ, ಕ್ರೀಡಾಂಗಣವೂ ಸಾಲದಂತೆ ಇಷ್ಟು ಜನ ಯಾಕೆ ಬರುತ್ತಿದ್ದರು. ಅವರ ಪ್ರಕಾರ ನಾವು ಅಔಟ್ ಡೇಟೆಡ್ ಆಗಿದ್ದೇವಂತೆ. ಆದರೆ ನಾವು ಔಟ್ ಡೇಟೆಡ್ ಆಗಿಲ್ಲ, ಬದಲಿಗೆ ಬಿಜೆಪಿಯ ಮೇಲಿನ ನಂಬಿಕೆ ಔಟ್ ಡೇಟೆಂಡ್ ಆಗಿದೆ. ಕಾಂಗ್ರೆಸ್ ಹುಟ್ಟು ಹಾಕಿರುವ ಯೋಜನೆ ಪೂರ್ಣಗೊಳಿಸಲು ಕಾಂಗ್ರೆಸ್ ರಾಜಕೀಯ ಇಚ್ಛಾಶಕ್ತಿ ಬೇಕಾಗಿದೆ. ಅದಕ್ಕೆ ನೀವು ಶಕ್ತಿ ತುಂಬಬೇಕು.
2002ರಲ್ಲಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ, ಕಳಸಾ ಬಂಡೂರಿಗೆ ಅನುಮತಿ ಸಿಕ್ಕಿತ್ತು. ನಾನು ಬಹಳ ಖುಷಿಯಿಂದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದ್ದೆ. ನಂತರ ಆರು ತಿಂಗಳ ನಂತರ ಈ ಅನುಮತಿ ವಾಪಸ್ ಕಿತ್ತುಕೊಂಡು, ನಮ್ಮ ಕೆಲಸಕ್ಕೆ ಕಲ್ಲು ಹಾಕಿದ್ದು ಬಿಜೆಪಿಯವರಲ್ಲವೇ? ಅದರ ಮುಂದುವರಿದ ಭಾಗವಾಗಿ ನ್ಯಾಯಾಧೀಕರಣ ತೀರ್ಪಿನ ಮೇಲೆ ಡಿಪಿಆರ್ ಮಾಡಿ ಅನುಮತಿ ಪಡೆದಿದ್ದೀರಿ. ಇದು ಇನ್ನು ಸಂಪೂರ್ಣವಾಗಿಲ್ಲ ಎಂದು ಜನರಿಗೆ ಹೇಳುವುದನ್ನು ಮರೆಯಬೇಡಿ. ಮುಗ್ಧ ರೈತರಿಗೆ ಸುಳ್ಲು ಹೇಳಿ ಮೋಸ ಮಾಡಬೇಡಿ ಎಂದು ಎಚ್ಚರಿಸಲು ಬಯಸುತ್ತೇನೆ.
Post a Comment