[31/12/2022, 8:10 AM] Pandit Venkatesh. Astrologer. Kannada: ದುರ್ಗಾ ಪಂಚ ರತ್ನಂ
ತೇ ಧ್ಯಾನಯೋಗಾನುಗತಾ ಅಪಶ್ಯನ್
ತ್ವಾಮೇವ ದೇವೀಂ ಸ್ವಗುಣೈರ್ನಿಗೂಢಾಮ್ ।
ತ್ವಮೇವ ಶಕ್ತಿಃ ಪರಮೇಶ್ವರಸ್ಯ
ಮಾಂ ಪಾಹಿ ಸರ್ವೇಶ್ವರಿ ಮೋಕ್ಷದಾತ್ರಿ ॥ 1 ॥
ದೇವಾತ್ಮಶಕ್ತಿಃ ಶ್ರುತಿವಾಕ್ಯಗೀತಾ
ಮಹರ್ಷಿಲೋಕಸ್ಯ ಪುರಃ ಪ್ರಸನ್ನಾ ।
ಗುಹಾ ಪರಂ ವ್ಯೋಮ ಸತಃ ಪ್ರತಿಷ್ಠಾ
ಮಾಂ ಪಾಹಿ ಸರ್ವೇಶ್ವರಿ ಮೋಕ್ಷದಾತ್ರಿ ॥ 2 ॥
ಪರಾಸ್ಯ ಶಕ್ತಿಃ ವಿವಿಧೈವ ಶ್ರೂಯಸೇ
ಶ್ವೇತಾಶ್ವವಾಕ್ಯೋದಿತದೇವಿ ದುರ್ಗೇ ।
ಸ್ವಾಭಾವಿಕೀ ಜ್ಞಾನಬಲಕ್ರಿಯಾ ತೇ
ಮಾಂ ಪಾಹಿ ಸರ್ವೇಶ್ವರಿ ಮೋಕ್ಷದಾತ್ರಿ ॥ 3 ॥
ದೇವಾತ್ಮಶಬ್ದೇನ ಶಿವಾತ್ಮಭೂತಾ
ಯತ್ಕೂರ್ಮವಾಯವ್ಯವಚೋವಿವೃತ್ಯಾ
ತ್ವಂ ಪಾಶವಿಚ್ಛೇದಕರೀ ಪ್ರಸಿದ್ಧಾ
ಮಾಂ ಪಾಹಿ ಸರ್ವೇಶ್ವರಿ ಮೋಕ್ಷದಾತ್ರಿ ॥ 4 ॥
ತ್ವಂ ಬ್ರಹ್ಮಪುಚ್ಛಾ ವಿವಿಧಾ ಮಯೂರೀ
ಬ್ರಹ್ಮಪ್ರತಿಷ್ಠಾಸ್ಯುಪದಿಷ್ಟಗೀತಾ ।
ಜ್ಞಾನಸ್ವರೂಪಾತ್ಮತಯಾಖಿಲಾನಾಂ
ಮಾಂ ಪಾಹಿ ಸರ್ವೇಶ್ವರಿ ಮೋಕ್ಷದಾತ್ರಿ ॥ 5 ॥
ಇತಿ ಪರಮಪೂಜ್ಯ ಶ್ರೀ ಚಂದ್ರಶೇಖರೇಂದ್ರ ಸರಸ್ವತೀ ಸ್ವಾಮಿ ಕೃತಂ ದುರ್ಗಾ ಪಂಚರತ್ನಂ ಸಂಪೂರ್ಣಮ್ ।
🌹🙏🌹ಓಂ ನಮೋ ಶ್ರೀ ಮಹಾ ದುರ್ಗಾ ಪರಮೇಶ್ವರಿ ದೇವಿಯೇ ನಮಃ.🌹🙏🌹
🌹🙏🌹. ಶ್ರೀ ಕೃಷ್ಣಾರ್ಪಣಮಸ್ತು.🌹🙏🌹
🌹🙏🌹ಸರ್ವೇ ಜನಾಃ ಸುಖಿನೋ ಭವಂತು.🌹🙏🌹🙏🌹🙏🌹🙏🌹🙏🌹🙏🌹🙏🌹🙏🌹
[31/12/2022, 8:15 AM] Pandit Venkatesh. Astrologer. Kannada: 🙏ನಿಮಿಷದಲ್ಲಿ ಕಷ್ಟ ಕಳೆಯೋ ನಿಮಿಷಾಂಬಾ ದೇವಿ 🙏 ಶುಭ ಶುಕ್ರವಾರ ವರಕೊಡುವ ವರಮಹಾಲಕ್ಷ್ಮಿ ನಿಮಿಷಾಂಬಾ ಮಹಾತಾಯಿಯೇ ನಿನಗೆ ನಮಸ್ಕಾರ
ಸಕ್ಕರೆ ನಾಡು ಮಂಡ್ಯ ಜಿಲ್ಲೆಯ "ರಂಗನಾಥನ" ನೆಲೆವೀಡಾದ ಪುರಾಣ ಪ್ರಸಿದ್ಧ ಪುಣ್ಯಕ್ಷೇತ್ರ ಶ್ರೀರಂಗಪಟ್ಟಣ. 🙏 ಇಲ್ಲಿಂದ ಎರಡು ಕಿಲೋಮೀಟರ್ ದೂರದಲ್ಲಿ ಕಾವೇರಿ ನದಿಯ ತಟದಲ್ಲಿರುವ 'ಗಂಜಾಂ' ಎಂಬ ಗ್ರಾಮವು ತನ್ನದೇ ಆದ ಶಕ್ತಿ , ಅಪಾರ ಮಹಿಮೆ ಹೊಂದಿದಿರುವ 'ನಿಮಿಷಾಂಬಾ' ದೇವಿ ನೆಲೆಸಿರುವ ಪುಣ್ಯ ಪವಿತ್ರ ಕ್ಷೇತ್ರವಾಗಿದೆ.🙏ನಿಮಿಷಾಂಬಾ ದೇವಿಯನ್ನು ಜಾಗೃತ ದೇವಿ, ಕಾರಣಿಕ ದೇವಿ, ನಿಮಿಷದಲ್ಲಿ ಕಷ್ಟ ಪರಿಹರಿಸುವ ಆದಿ ಪರಾಶಕ್ತಿ ಎಂದು ಕರೆಯುತ್ತಾರೆ. 🙏ನಿಮಿಷಾಂಬಾ ದೇವಿ, ಶಕ್ತಿದೇವಿ ಪಾರ್ವತಿಯ ಅವತಾರವಾಗಿದೆ. 🙏ಈ ಕ್ಷೇತ್ರಕ್ಕೆ ಯಾರೇ ಭಕ್ತರು ಬಂದು ದರ್ಶನ ಮಾಡಿ, ಶ್ರದ್ಧಾ ಭಕ್ತಿಯಿಂದ ದೇವಿಯನ್ನು ಪ್ರಾರ್ಥಿಸಿದರೆ ನಿಮಿಷದಲ್ಲಿಯೇ ಕಷ್ಟವನ್ನು ಪರಿಹರಿಸುವಳು ಎಂಬ ಭಕ್ತರ ನಂಬಿಕೆ ಇಂದಿಗೂ ನಿಜವಾಗಿದೆ.🙏
ಸುಂದರವಾದ ರಾಜಗೋಪುರ 🙏ಹೊಂದಿರುವ ದೇವಾಲಯದಲ್ಲಿ, ಭೂಪ್ರಸ್ತಾರ ಕೃಷ್ಣ ಶಿಲೆಯಲ್ಲಿ ನಿರ್ಮಾಣ ಮಾಡಿ, 🙏ಎಲ್ಲಾ ದಳಗಳ ಮೇಲೆ ಬೀಜಾಕ್ಷರಿ ಮಂತ್ರ ಸಹಿತ ಇರುವ ಶ್ರೀಚಕ್ರದ ಮೇಲೆ ಮಂದಸ್ಮಿತಳಾಗಿ ವಿರಾಜಮಾನಳಾಗಿರುವ 'ನಿಮಿಷಾಂಬಾ ದೇವಿ' ವಿಗ್ರಹವನ್ನು ಪ್ರತಿಷ್ಠಾ ಪಿಸಲಾಗಿದೆ. 🙏ಇದನ್ನು ಶಿವ ಪಂಚಾಯತನ ಕ್ರಮದಲ್ಲಿ ದೇವಾಲಯವನ್ನು ನಿರ್ಮಿಸಿದ್ದಾರೆ. ಶಿವ ಪಂಚಾಯತನ ಎಂದರೆ, ಹಿಂದೂ ಧರ್ಮದ ಸ್ಮಾರ್ತ ಸಂಪ್ರದಾಯದ ಈ ಪೂಜಾ ವಿಧಾನವನ್ನು, ಆದಿ ಸದ್ಗುರು ಶ್ರೀ ಶಂಕರಾ ಚಾರ್ಯರು ಪ್ರಚುರಪಡಿಸಿರುವ ಇದು ಒಂದೇ ಸ್ಥಳದಲ್ಲಿ ಐದು ದೇವತೆಗಳ ಪೂಜೆ ಮಾಡುವ ವಿಧಾನವಾಗಿದೆ. ಮುಖ್ಯವಾದ ದೇವರುಗಳು 🙏ಗಣೇಶ, ಸೂರ್ಯ, ಅಂಬಿಕಾ ಅಥವಾ ದುರ್ಗಾ, ಶಿವ, ವಿಷ್ಣು, 🙏ಹೀಗೆ ಐದು ದೇವತೆ ಗಳ ಪೂಜೆ ಮಾಡುವುದು. ಈ ದೇವಾಲಯದ ಪ್ರವೇಶ ದ್ವಾರದೊಳಗೆ ಮೌಕ್ತಿಕೇಶ್ವರ ಸ್ವಾಮಿ, ಮತ್ತು ಲಕ್ಷ್ಮೀನಾರಾಯಣ ಸ್ವಾಮಿ ಸನ್ನಿಧಿಗಳಿವೆ. 🙏
'ನಿಮಿಷಾಂಬಾ ದೇವಿ' ಯ ಪೌರಾಣಿಕ ಹಿನ್ನೆಲೆ ಪ್ರಕಾರ, ಬಹಳ ಹಿಂದೆ ಶ್ರೀ ರಂಗಪಟ್ಟಣವನ್ನು, ಸುಮನಸ್ಕಾ ಎಂಬ ರಾಜನು ಆಳುತ್ತಿದ್ದನು. ಅವನು ಪ್ರಜೆಗಳ ಕ್ಷೇಮಾಭಿವೃದ್ಧಿಗಾಗಿ ಯಾಗ ಯಜ್ಞಗಳನ್ನು ಮಾಡಿಸುತ್ತಿದ್ದನು. ಎಷ್ಟೇ ಯಾಗ ಯಜ್ಞಗಳನ್ನು ಮಾಡಿಸಿದರು, ಅಸುರರ ಹಾವಳಿ ಇದ್ದೇ ಇರುತ್ತಿತ್ತು. ಆದಕಾರಣ ಈ ಸಲ ಅವನು ಯಾಗವನ್ನು ಮಾಡಲು ಹೊರಡುವ ಮುನ್ನ ಯಾಗ ಆರಂಭಿಸಿದ ಮೇಲೆ ಯಾವುದೇ ತೊಂದರೆ ಆಗಬಾರದೆಂದು ಪರಮೇಶ್ವರನ ಹೃದಯಭಾಗದಿಂದ ಜನಿಸಿದ ಪ್ರಭಾವ ಶಾಲಿ, ಪರಾಕ್ರಮಿ, ಶಕ್ತಿಶಾಲಿಯಾದ ಮೌಕ್ತಿಕೇಶ್ವರ ಎಂಬ ಮುನಿಗೆ ಯಾಗದ ನೇತೃತ್ವ ವನ್ನು ವಹಿಸಿ ಮಹರ್ಷಿಗಳಿಂದ ದೊಡ್ಡ ಯಾಗವನ್ನು ಆರಂಭಿಸಿದನು. ಸ್ವಲ್ಪಕಾಲ ಯಾಗ ಸರಾಗವಾಗಿ ನಡೆಯಿತು. ಆ ಹೊತ್ತಿಗೆ ಜಾನು ಮತ್ತು ಮಂಡಲ ಎಂಬ ಘೋರ ರಾಕ್ಷಸರು ಬ್ರಹ್ಮನನ್ನು ಕುರಿತು ತಪಸ್ಸು ಮಾಡಿ ಬ್ರಹ್ಮನನ್ನು ಒಲಿಸಿ ಕೊಂಡು, ಏನು ವರ ಬೇಕು ಎಂದು ಬ್ರಹ್ಮ ಕೇಳಿದಾಗ, ಎಲ್ಲಾ ದುಷ್ಟ ರಾಕ್ಷಸ ರಂತೆ ತಮಗೆ ನೀರಿನಿಂದಾಗಲಿ, ಭೂಮಿ, ಜಲಚರ, ಆಯುಧಗಳು, ಪಶು ಪಕ್ಷಿ, ಪ್ರಕೃತಿ, ಹಾಗೂ ಅಗ್ನಿ ಹೀಗೆ ಜಗತ್ತಿನಲ್ಲಿರುವ ಯಾವುದರಿಂದಲೂ ತಮಗೆ ಪ್ರಾಣ ಹಾನಿ ಆಗಬಾರದು ಎಂಬ ವರವನ್ನು ಪಡೆದರು. ಬ್ರಹ್ಮ ತಥಾಸ್ತು ಎಂದನು. ಅಸುರರು ದೇವರನ್ನು ಒಲಿಸಿಕೊಂಡ ವರ ಪಡೆಯುವವರಿಗೆ ಮಾತ್ರ ಸಾತ್ವಿಕತನ ಬಲವಂತವಾಗಿ ತಂದುಕೊಂಡು, ರಾಕ್ಷಸ ರೀತಿಯಲ್ಲಿ ತಪಸ್ಸು ಮಾಡಿ ಉಪಾಯವಾಗಿ ವರ ಪಡೆದುಬಿಡುತ್ತಾರೆ. ವರ ಪಡೆದ ಕೂಡಲೇ ತಮ್ಮ ದುರ್ನಡತೆಯಿಂದ ಎಲ್ಲವನ್ನು ನಾಶ ಮಾಡಲು ವರದ ಬಳಕೆಯನ್ನು ಮಾಡಿಕೊಳ್ಳುತ್ತಾರೆ. ದೇವತೆಗಳಿಗೆ ಶಕ್ತಿ ಕೊಡುವ ಸಲುವಾಗಿ ಋಷಿಮುನಿ ಗಳು ಮಾಡುವ ಯಾಗ ಯಜ್ಞಗಳನ್ನು ತಪ್ಪಿಸುವುದು, ರಾಜರಿಗೆ, ಸಾಮಾನ್ಯ ಜನರಿಗೆ ಹಿಂಸೆ ಕೊಡುವುದು, ಪ್ರಕೃತಿ ನಾಶ, ಒಟ್ಟಾರೆ ಜಗತ್ತಿಗೆ ಹಾನಿಯಾಗುವ ಕೆಲಸವನ್ನು ಮಾಡುವುದೇ ಅವರ ಕಾಯಕವಾಗುತ್ತದೆ.
ಇಲ್ಲೂ ಸಹ ಸುಮನಸ್ಕ ರಾಜ ಆರಂಭಿಸಿದ ಯಾಗ ಮಾಡುವಲ್ಲಿ ಮಹರ್ಷಿ ಗಳು ನಿರತರಾಗಿದ್ದರು, ಈ ವಿಚಾರವನ್ನು ದೇವರ್ಷಿ ನಾರದದರಿಂದ ರಾಕ್ಷಸರಾದ ಜಾನು ಮತ್ತು ಸುಮಂಡಲರಿಗೆ ತಿಳಿದು, ರಾಕ್ಷಸರು ಯಾಗವನ್ನು ಕೆಡಿಸಬೇಕೆಂದು, ತಮ್ಮ ಗುರುಗಳಾದ ಶುಕ್ರಾಚಾರ್ಯರ ಬಳಿ ಸಮಾಲೋಚನೆ ನಡೆಸಿ, ಮಂತ್ರಿಗಳಾದ ಶೂರ ಬಾಹು ಮತ್ತು ಘಟೋದರರನ್ನು ಕರೆದು ಸೈನ್ಯ ಕಟ್ಟಿಕೊಂಡು ಬಂದು ಯಾಗವನ್ನು ನಾಶಪಡಿಸಲು ಆದೇಶಿಸಿದರು. ಆದರೆ ಆ ಮಂತ್ರಿಗಳಿಬ್ಬರನ್ನು ಮೌಕ್ತಿಕೇಶ್ವರರು ಆಯುಧಗಳಿಂದ ಸುಲಭವಾಗಿ ಕೊಂದರು. ಇದು ರಾಕ್ಷಸರಿಗೆ ತಿಳಿದು, ಕೊಡಲೇ ಬಂದರು. ಈಗ ಮೌಕ್ತಿಕೇಶ್ವರ ಶಕ್ತಿಯುತವಾಗಿ ಹೋರಾಟ ನಡೆಸಿದರೂ ಅದು ನಿಷ್ಪ್ರಯೋ ಜಕವಾಯಿತು. ಏಕೆಂದರೆ ಬ್ರಹ್ಮನಿಂದ ವರ ಪಡೆದ ಜಾನು ಮತ್ತು ಮಂಡಲ, ಎಂತಹ ಶಕ್ತಿಗೂ ಬಗ್ಗುವುದಿಲ್ಲ. ಹೀಗಿರುವಾಗ ಮುಂದೇನು ಗತಿ ಎಂದು ಯೋಚಿಸಿ ಮೌಕ್ತೆಶ್ವರರ ಒಡಗೂಡಿ ಮಹರ್ಷಿಗಳೆಲ್ಲ ಆದಿ ಸ್ವರೂಪಿಣಿ ಪರಾಶಕ್ತಿ ಪಾರ್ವತಿ ದೇವಿಯನ್ನು ಕುರಿತು ಮೂರು ದಿನಗಳ ಕಾಲ ತಪಸ್ಸು ಆಚರಿಸಿದರು. ಅವರ ಧ್ಯಾನ ತಪಸ್ಸಿ ಗೆ ಸಂತುಷ್ಟಳಾದ ಪಾರ್ವತಿ ದೇವಿಯು ಯಜ್ಞ ಕುಂಡದಿಂದಲೇ ಆವಿರ್ಭವಿಸಿ ಬಂದಳು. ದೇವಿ ಬಂದವಳೇ ತನ್ನ ತೇಜೋಮಯವಾದ ದೃಷ್ಟಿ ಮಾತ್ರದಿಂದಲೆ ಇಬ್ಬರು ರಾಕ್ಷಸರನ್ನು ಭಸ್ಮ ಮಾಡಿದಳು. ಕಣ್ಣೋಟದ ತೇಜಸ್ಸು ಎಷ್ಟು ಭಯಾನಕವಾಗಿತ್ತೆಂದರೆ ದೇವಿ ಅವರನ್ನು ದೃಷ್ಟಿಸಿ ನೋಡಿದ ಮಾತ್ರ ದಲ್ಲಿಯೇ ಆ ರಕ್ಕಸ ಸೋದರದಿಬ್ಬರು ದೇವಿಯ ದೃಷ್ಟಿಗೆ ನಿಮಿಷದಲ್ಲಿಯೇ ಅಸುನೀಗಿದರು. ಕಾರಣ ನಿಮಿಷಾಂಬಿಕಾ ದೇವಿ ಎಂಬ ಹೆಸರು ಬಂದಿತು
ಯಾಗದಲ್ಲಿ ನೆರದಿದ್ದ ರಾಜ, ಋಷಿಮುನಿಗಳು, ಪ್ರಜೆಗಳು ಸಂತೋಷ ಭರಿತರಾದರು. ಹಾಗೆ ಬಂದ ಪಾರ್ವತಿ ದೇವಿ ನಿಮಿಷಾಂಬಾ ದೇವಿಯಾಗಿ ಅಲ್ಲಿಯೇ ನೆಲೆಸಿದಳು. ಮೊದಲು ಸಾಧಾರಣವಾಗಿದ್ದ ದೇವಸ್ಥಾನ ಮುಂದೆ ಮೈಸೂರು ಮಹಾರಾಜರ ಕಾಲದಲ್ಲಿ ಸುಂದರವಾಗಿ ನಿರ್ಮಾಣಗೊಂಡಿತು.
🙏ದೇವಿಯ ನೆಲೆಯಲ್ಲಿ ಒಂದು ಕ್ಷಣ ನಿಂತು ಬೇಡಿಕೊಂಡರೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ.🙏ಆದಕಾರಣ ಇವಳನ್ನು 'ನಿಮಿಷಾಂಬಿಕೆ' 'ನಿಮಿಷಾಂಬ' ಎಂದೂ ಸಹ ಕರೆಯುತ್ತಾರೆ. 🙏ಮೈಸೂರಿನ ಸುತ್ತಮುತ್ತಲ ಪ್ರದೇಶಗಳೆಲ್ಲ ಪ್ರವಾಸಿ ತಾಣವಾಗಿ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ.🙏ಅದೇ ರೀತಿ ನಿಮಿಷಾಂಬ ಕ್ಷೇತ್ರ ಗಂಜಾಂ ಗ್ರಾಮವು ಪುಣ್ಯ ಕ್ಷೇತ್ರವಾಗಿ ಭಕ್ತರ ಮನದಿಷ್ಟಾರ್ಥಗಳನ್ನು ನೆರವೇರಿಸುತ್ತಾ, 🙏 ಪ್ರತಿನಿತ್ಯ ರಾಜ್ಯ ಹೊರ ರಾಜ್ಯಗಳಿಂದ ಬಂದ ಭಕ್ತರುಗಳು ಈ ದೇವಿಯ ದರ್ಶನವನ್ನು ಪಡೆದು ಪುನೀತರಾಗಿದ್ದಾರೆ. 🙏ನಿತ್ಯ ಪೂಜಾ ಕೈಂಕರ್ಯಗಳೊಂದಿಗೆ ವೈಶಾಖ ಮಾಸದಲ್ಲಿ ವರ್ಧಂತ್ಯೋತ್ಸವ, ಜಾತ್ರೆ, ವಿಶೇಷ ಪೂಜೆಗಳು, ಹರಕೆ, ನವಮಿ, ಹುಣ್ಣಿಮೆ, ದಿನಗಳಲ್ಲಿ, ನವರಾತ್ರಿ- ಶ್ರಾವಣ, ಮಾಸಗಳಲ್ಲಿ ಈ ಶಾಲಂಕಾರದೊಂದಿಗೆ ಪೂಜೆ ನಡೆಯುತ್ತಿದ್ದು ಸಾವಿರಾರು ಭಕ್ತರು ಬಂದು ತಮ್ಮ ಮನೋಭಿಲಾಷೆಗಳನ್ನು ತಾಯಿ ನಿಮಿಷಾಂಬಾ ದೇವಿಯಿಂದ ಪಡೆದು ನೆಮ್ಮದಿ ಕಂಡುಕೊಂಡಿದ್ದಾರೆ.🙏
🙏ನ ಮಂತ್ರಂ ನೋ ಯಂತ್ರಂ ಚ ನ ಜಾನೇ ಸ್ತುತಿಮಹೋ
ನ ಚಾಹ್ವಾನಂ ಧ್ಯಾನಂ ತದಪಿ ಚ ನ ಜಾನೇ ಸ್ತುತಿಕಥಾ:
ನ ಜಾನೇ ಮುದ್ರಾಸ್ತೇ ತದಪಿ ಚ ನ ಜಾನೇ ವಿಲಪನಂ
ಪರಂ ಜಾನೇ ಮಾತ: ತ್ವದನುಸರಣಂ ಕ್ಲೇಶ ಹರಣಮ್!! 🙏
ನನಗೆ ಮಂತ್ರ ವನ್ನು ಉಚ್ಚರಿಸುವುದಾಗಲಿ ಅಥವಾ ಕ್ರಮವಾಗಲಿ ಇಲ್ಲವೇ ಹೇಗೆ ಪ್ರಾರ್ಥನೆ ಮಾಡಬೇಕೆನ್ನುವುದು ಅರಿಯೆನು. 🙏ನಿನ್ನನ್ನು ಹೇಗೆ ಆಹ್ವಾ ನಿಸುವುದು, ಧ್ಯಾನಿಸುವುದು, ಹಾಗೂ ಯಾವುದೇ ರೀತಿಯ ಸ್ತೋತ್ರ ಗಳ ಬಗ್ಗೆಯೂ ತಿಳಿದಿಲ್ಲ. 🙏ಸಂಕೇತದ ಮೂಲಕ ನಿನ್ನನ್ನು ಪ್ರಾರ್ಥಿಸು ವುದಾಗಲಿ ಹೃದಯ ಅಂತರಾಳದಿಂದ ಬೇಡಿಕೊಳ್ಳುವುದನ್ನು ಅರಿಯೇ,🙏ನನಗೆ ಗೊತ್ತಿರು ವುದು ಒಂದೇ ಮಾರ್ಗ ಅದು ಏನೆಂದರೆ ನಿನ್ನ ಪ್ರೀತಿಯ ಪರಿದಿ ಯೊಳಗಿದ್ದು ಭಕ್ತಿಯಿಂದ ನಿನ್ನನ್ನು ಅನುಸರಿಸುವುದು ಮಾತ್ರ,🙏 ಹೀಗೆ ಮಾಡಿದಲ್ಲಿ ನನಗೆ ತಿಳಿದಿರುವುದು ಏನೆಂದರೆ ನನ್ನ ಎಲ್ಲಾ ಕಷ್ಟಗಳು ದೂರ ಆಗುವುದು ಎಂಬುದು.🙏
[31/12/2022, 10:14 AM] Pandit Venkatesh. Astrologer. Kannada: 🕉️ ಓಂ ಶ್ರೀ ಗುರುಭ್ಯೋ ನಮಃ 🕉️ *ಬೆನ್ನಟ್ಟಿಕೊಂಡು ಬರುವ ಕರ್ಮಫಲ ಪೂರ್ವ ಜನ್ಮದ ಫಲ* ಇದು ಸತ್ಯ...
ಈ ಜನ್ಮದಲ್ಲಿ ಅನುಭವಿಸಿ ತೀರಲೇ ಬೇಕು.
ಶ್ರೀ ಕೃಷ್ಣ ಕಂಸನನ್ನು ಕೊಂದ ನಂತರ ತನ್ನ ಮಾತಾ ಪಿತೃಗಳಾದ ವಾಸುದೇವ ಮತ್ತು ದೇವಕಿಯರನ್ನು ಬಿಡುಗಡೆ ಮಾಡಲು ಅಲ್ಲಿನ ಸೆರೆಮನೆಗೆ ಹೋದ.
ತಾಯಿ ದೇವಕಿ ಉತ್ಸಾಹದಿಂದ ಕೇಳಿದಳು: "ಮಗು... ನೀನೇ ದೇವರು ಮತ್ತು ನಿನಗೆ ದೈವೀಕ ಶಕ್ತಿಗಳಿವೆ. ಹಾಗಾದರೆ ಕಂಸನನ್ನು ಕೊಂದು ನಮ್ಮನ್ನು ಬಿಡುಗಡೆ ಮಾಡಲು ನೀನು ಹದಿನಾಲ್ಕು ವರ್ಷ ಏಕೆ ಕಾಯುತ್ತಿದ್ದೆ?"🙏
ಶ್ರೀಕೃಷ್ಣ ಉತ್ತರಿಸಿದ: "ದೈವ ಸ್ವರೂಪಿಯಾದ ತಾಯಿಯೇ, ನನ್ನನ್ನು ಕ್ಷಮಿಸಿ. ಆದರೆ ಕಳೆದ ಜನ್ಮದಲ್ಲಿ ಹದಿನಾಲ್ಕು ವರ್ಷಗಳ ಕಾಲ ನೀನು ನನ್ನನ್ನು ಕಾಡಿಗೆ ಏಕೆ ಕಳುಹಿಸಿದೆ ?"🙏
ದೇವಕಿಯು ಆಶ್ಚರ್ಯಚಕಿತಳಾಗಿ: "ಕೃಷ್ಣ, ಇದು ಹೇಗೆ ಸಾಧ್ಯ? ನೀನು ಯಾಕೆ ಹೀಗೆ ಹೇಳುತ್ತಿದ್ದೀ?"🙏
ಕೃಷ್ಣನು ಉತ್ತರಿಸಿದ: "ಅಮ್ಮಾ ನಿಮ್ಮ ಹಿಂದಿನ ಜನ್ಮದ ಬಗ್ಗೆ ನಿಮಗೆ ಏನೂ ನೆನಪಿಲ್ಲ. ಆದರೆ ನಿಮ್ಮ ಹಿಂದಿನ ಜನ್ಮದಲ್ಲಿ ನೀವು ಕೈಕೇಯಿಯಾಗಿದ್ದೀರಿ ಮತ್ತು ನಿಮ್ಮ ಪತಿ ದಶರಥನಾಗಿದ್ದ."🙏
ದೇವಕಿಯು ಆಶ್ಚರ್ಯಚಕಿತಳಾದಳು ಮತ್ತು ಕುತೂಹಲದಿಂದ ಕೇಳಿದಳು:
"ಹಾಗಾದರೆ ಈಗ ಕೌಸಲ್ಯ ಯಾರು?"🙏
ಶ್ರೀ ಕೃಷ್ಣ ನಗುತ್ತಾ ಉತ್ತರಿಸಿದ:
"ತಾಯಿ ಯಶೋದಾ. ಹದಿನಾಲ್ಕು ವರ್ಷಗಳ ತಾಯಿಯ ಪ್ರೀತಿಯು ಅವಳ ಹಿಂದಿನ ಜನ್ಮದಲ್ಲಿ ನಿನ್ನಿಂದಾಗಿ ವಂಚಿತವಾಯಿತು. ಅದನ್ನು ಅವಳು ಈ ಜೀವನದಲ್ಲಿ ಪಡೆದುಕೊಂಡಿದ್ದಾಳೆ".🙏
*ನೆನಪಿಡಿ*
ಪ್ರತಿಯೊಬ್ಬರೂ ತಮ್ಮ ಕರ್ಮದ ಫಲವನ್ನು ಅನುಭವಿಸಬೇಕು
ದೇವತೆಗಳು ಕೂಡ ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.
ಇನ್ನು ನೀವು ಯಾವ ಕರ್ಮವನ್ನು ಸಂಪಾದಿಸಬೇಕು ಎಂಬುದರ ಮೇಲೆ ಕಣ್ಣಿಡಿ.🙏
ಹರಿ ಓಂ...!ನೀ ಮಾಡಿದ *ಪೂರ್ವ ಜನ್ಮದ ಫಲ* ಖಂಡಿತವಾಗಿಯೂ ಬಿಡದು.
Post a Comment