*ಹರಿದಾಸರತ್ನಂ ಶ್ರೀಗೋಪಾಲದಾಸರು*ಶ್ರೀ ವಿಘ್ನೇಶ್ವರ ಅಂಶ ಸಂಭೂತರಾದ ಶ್ರೀ ಗೋಪಾಲದಾಸರ ಮಧ್ಯಾರಾಧನೆ ವಿಶೇಷ "

[15/01, 6:26 PM] +91 91644 68888: *ಶ್ರೀಗೋಪಾಲದಾಸಾರ್ಯ ವಿರಚಿತ* 

 *ಪ್ರಾರ್ಥನಾ ಸುಳಾದಿ* 

 *ರಾಗ ಪಂತುವರಾಳಿ* 

 *ಧ್ರುವತಾಳ* 

https://drive.google.com/file/d/1nzppfGPEvL3xJ9VNkv8o2XNARoMB6lt7/view?usp=drivesdk

ನೀನೆ ಏನೋ ವಿಠಲ ನಿಗಮವು ತಂದವನು
ನೀನೆ ಏನೋ ವಿಠಲ ನಗವನ್ನು ಪೊತ್ತವನು
ನೀನೆ ಏನೋ ವಿಠಲ ವರಹ ರೂಪನಾದವ
ನೀನೆ ಏನೋ ವಿಠಲ ನರಮೃಗ ರೂಪಾದದ್ದು
ನೀನೆ ಏನೋ ವಿಠಲ ವಟುರೂಪ ತಾಳಿದವ
ನೀನೆ ಏನೋ ವಿಠಲ ಪರುಶವ ಪಿಡಿದವ
ನೀನೆ ಏನೋ ವಿಠಲ ಶಿಲೆಯನ್ನುದ್ಧರಿಸಿದವ
ನೀನೆ ಏನೋ ವಿಠಲ ಪಾಂಡವರ ಕಾಯ್ದವ
ನೀನೆ ಏನೋ ವಿಠಲ ಬೌದ್ಧ ರೂಪನಾದದ್ದು
ನೀನೆ ಏನೋ ವಿಠಲ ತುರಗವನೇರಿದವ
ನೀನೆ ಏನೋ ವಿಠಲ ಚತುರಮೂರ್ತಿ ಆದವ
ನೀನೆ ಏನೋ ವಿಠಲ ಅಷ್ಟಮೂರ್ತಿ ಆದವ
ನೀನೆ ಏನೋ ವಿಠಲ ಕೇಶವಾದಿ ಆದವ
ನೀನೆ ಏನೋ ವಿಠಲ ಅಜಾದಿ ಮೂರ್ತ್ಯಾದವ
ನೀನೆ ಏನೋ ವಿಠಲ ವಿಶ್ವಮೂರ್ತಿ ಆದವ
ನೀನೆ ಏನೋ ವಿಠಲ ಅನಂತಾನಂತರೂಪ
ನೀನೆ ಏನೋ ವಿಠಲ ಸಿರಿಅಜಭವರಿಂದ
ನಾನಾಕು ಪರಿಯಲ್ಲಿ ಸೇವೆಯ ಕೊಂಬುವನೆ
ನೀನೆ ಏನೋ ವಿಠಲ ಆತ್ಮ ಅಂತರಾತ್ಮ
ಕಾಣಿಸುವೆ ಎನ್ನಲ್ಲಿ ಅನಂತ ಒಂದೇ ಆಗಿ
ಖೂನ ಪಿಡಿದು ಬಿಡೆ ಯೆಂದಿನವನೆ ನಾನು
ಏನೊ ಈಗ ನೋಡಲು ಆರೊ ಅಂಬಂಥ ವಿಧಿ
ಜಾಣ ಚನ್ನಿಗರಾಯ *ಗೋಪಾಲವಿಟ್ಠಲ* 
ಪ್ರಾಣದೊಲ್ಲಭ ನಿನ್ನ ಕಾಣದೆ ನಿಲ್ಲಲಾರೆ ॥ 1 ॥

 *ಮಟ್ಟತಾಳ* 

ಆವ ನಿನ್ನ ಶಿರವು ಅಂತಿಯ ತೋರದು
ಆವ ನಿನ್ನ ನಯನ ಅಂತಿಯ ತೋರದು
ಆವ ನಿನ್ನ ಮುಖ ಅಂತಿಯ ತೋರದು
ಆವ ನಿನ್ನ ಕರಗಳಂತಿಯ ತೋರದು
ಆವ ನಿನ್ನ ಅವಯವಂಗಳಿಗೆ ಅಂತ್ಯವಿಲ್ಲ
ಆವ ನಿನ್ನ ಪಾದಂಗಳಿಗೆ ಅಂತೆಯಿಲ್ಲ
ದೇವ ನಿನ್ನ ಆವ ಅವಯವಕೆಲ್ಲ ಪೂರ್ಣ
ಆವ ದಿಕ್ಕು ನೋಡಲಿ ನಿನ್ನ ನೋಟ ವ್ಯಾಪ್ತಿ
ಧಾವತೆಯು ಇಲ್ಲ ಆವಲ್ಲಿ ನಿನಗೆ
ಕಾವು ಬಹಳ ಭಕುತರನ್ನ ಪಾಲಿಪಲ್ಲಿ
ದೇವ ಬಾರೋ ಗೋವಳರಾಯ ನಿನಗೆ
ಆವ ತಂದಿ ಕಾಣೋ ಆವ ತಾಯಿ ನಿನಗೆ
ಜೀವ ಜಡ ಭಿನ್ನ *ಗೋಪಾಲವಿಟ್ಠಲ* 
ದೇವ ನಿನ್ನ ಚರಿಯ ಕೋವಿದರಿಗೆ ಪ್ರಿಯಾ ॥ 2 ॥

 *ರೂಪಕತಾಳ* 

ನಿನ್ನ ಕರುಣದಿಂದೆ ಎನ್ನ ಸೃಷ್ಟಿಸಿದದ್ದು
ನಿನ್ನ ಕರುಣದಿಂದೆ ಎನ್ನ ಪಾಲಿಸುವದು
ನಿನ್ನ ಕರುಣದಿಂದೆ ದೇಹ ವಿಯೋಗವು
ನಿನ್ನ ಕರುಣದಿಂದೆ ಎನ್ನ ಬಾಳವಿ ಬದುಕು
ನಿನ್ನ ಕರುಣದಿಂದೆ ಮಾನಾಪಮಾನವು
ನಿನ್ನ ಕರುಣದಿಂದೆ ಲಾಭಾಪಜಯಗಳು
ನಿನ್ನ ಕರುಣದಿಂದೆ ಸಾಧನ ಸಂಪತ್ತು
ನಿನ್ನ ಕರುಣದಿಂದೆ ಬಂಧನ ನಿವೃತ್ತಿ
ನಿನ್ನ ಕರುಣದಿಂದೆ ಆಗುವದೋ ರಂಗ
ಎನ್ನಿಂದ ನಿನಗಿನ್ನು ಲೇಶಾಪೇಕ್ಷೆಯು ಇಲ್ಲ
ನಿನ್ನ ಹಂಗಿನೊಳು ಮುಳುಗಿ ಆಡುವೆನಯ್ಯಾ
ಇನ್ನು ಇಲ್ಲಿಗೆ ಸರಿ ಆಯಿತೆಂಬುವೆನೇ
ಇನ್ನು ಮುನ್ನೆ ಇದೆ ಆಗಲಿ ಆಗಲಿ
ಚಿನ್ನುಮಯ ಮೂರ್ತಿ *ಗೋಪಾಲವಿಟ್ಠಲ* 
ಜನುಮ ಜನುಮಕ್ಕೆ ನೀನೆ ಎನಗೆ ದಾತಾ ॥ 3 ॥

 *ಝಂಪೆತಾಳ* 

ಎನಗೆ ಪಶು ಜನ್ಮವು ಬಂದಾಗೆ ನೀನಿದ್ದು
ಎನಗೆ ಸ್ಥಾವರ ಜನುಮವು ಬಂದಾಗೆ ನೀನಿದ್ದು
ಎನಗೆ ಶ್ವಾನ ಸೂಕರ ಜನ್ಮ ಬಂದಾಗೆ ನೀನಿದ್ದು
ಎನಗೆ ಜಲಚರ ಜೀವ ಜನುಮ ಬಂದಾಗಿದ್ದು
ಎನಗೀಗ ಆವಾವ ದೇಹದಲ್ಲನುಭೋಗ
ಅನುವಾಗಿ ನೀನಿದ್ದು ಅಲ್ಲಿ ಉಣಿಸಿ
ಎನಗೆ ಅನುಭೋಗಕ್ಕೆ ಆಗ ತಂದು ಕೊಡದೆ
ದಣಿಸಿ ನೋಡಿದಿ ಅಲ್ಲವೇನೋ ಕೃಪಾಳು
ಎನಗೆ ನಿನ್ನ ಮಹಿಮೆ ಎಣಿಸಲಾಗೋದರವು
ದಣಿದೆ ದಣಿದೆ ನಾನಾ ಜನುಮಗಳಲ್ಲಿ ಬಂದು
ಎನಗೀಗ ಮಾನಿಸ ಜನುಮ ಲಾಭವಿನ್ನು
ಅನುವಾಗಿ ಇತ್ತದಕ್ಕನುಕೂಲವಾಗಿನ್ನು
ಘನವಾದ ಸಾಧನವನ್ನು ಎನ್ನಿಂದಲಿ
ದಿನದಿನದಿ ಮಾಡಿಸಿ ನೂತನವಾಗಿನ್ನು
ಕ್ಷಣಕ್ಷಣಕೆ ನಿನ್ನ ಸ್ಮರಣೆ ಎನಗೆಯಿತ್ತು
ಜನನಿಯ ಜಠರದಿ ಜನಿಸದಂದದಿ ಮಾಡು
ಘನದೇವ ಕೇಳು *ಗೋಪಾಲವಿಟ್ಠಲರೇಯ* 
ಎನಗೆ ನಿನ್ನರ್ಚಿಸೊ ಗುಣ ಉಪಾಸನೆ ಈಯೋ ॥ 4 ॥

 *ತ್ರಿವಿಡಿತಾಳ* 

ಪ್ರಾಕೃತ ರಹಿತನೆ ಎಲೋ ದೇವ ನಿನಗೆ ಈ
ಪ್ರಾಕೃತ ಉದಕದಿ ಮಜ್ಜನವೆ
ಪ್ರಾಕೃತ ರಹಿತನೆ ಎಲೋ ದೇವ ನಿನಗೆ ಈ
ಪ್ರಾಕೃತ ಉಡಗಿಯ ವಸನಂಗಳೆ
ಪ್ರಾಕೃತ ರಹಿತನೆ ಎಲೋ ದೇವ ನಿನಗೆ ಈ
ಪ್ರಾಕೃತ ಜಡಗಳು ಆಭರಣವೇ
ಪ್ರಾಕೃತ ರಹಿತನೆ ಎಲೋ ದೇವ ನಿನಗೆ ಈ
ಪ್ರಾಕೃತ ಗಂಧ ತುಲಸಿ ಪುಷ್ಫವೇ
ಪ್ರಾಕೃತ ರಹಿತನೆ ಎಲೋ ದೇವ ನಿನಗೆ ಈ
ಪ್ರಾಕೃತ ಧೂಪ ದೀಪದಾರ್ತಿಯೆ
ಪ್ರಾಕೃತ ರಹಿತನೆ ಎಲೋ ದೇವ ನಿನಗೆ ಈ
ಪ್ರಾಕೃತದನ್ನವು ನೈವೇದ್ಯವೇ
ಪ್ರಾಕೃತ ಬದ್ಧನ ಮಾಡಿ ಎನ್ನಿಂದಲಿ
ಪ್ರಾಕೃತ ಪೂಜಿಯ ಕೈಕೊಂಬಿ
ಪ್ರಾಕೃತದೊಳು ನೀನು ಅಪ್ರಾಕೃತನಾಗಿದ್ದು
ಈ ಪರಿಯಲಿ ನಿತ್ಯ ಪೂಜಿಗೊಂಬೆ 
ಪ್ರಾಕೃತ ರಹಿತನಾಗಿ ನಿನ್ನ ದಾಸರು
ಪ್ರಾಕೃತದೊಳಗಿನ್ನು ಇಪ್ಪುವರು
ಪ್ರಾಕೃತರಹಿತನೆಂದೀಪರಿ ಚಿಂತಿಪರ
ಪ್ರಾಕೃತ ಬದ್ಧದಿ ರಹಿತರ ಮಾಡುವಿ ಅ -
ಪಾರ ಮಹಿಮನೆ *ಗೋಪಾಲವಿಟ್ಠಲ* 
ಈ ಪರಿಯಲಿ ನಿನ್ನ ಚಿಂತಿಪರೊಡನಿಡಿಸೊ ॥ 5 ॥

 *ಅಟ್ಟತಾಳ* 

ಧನದ ಅಪೇಕ್ಷಕ್ಕೆ ನಿನ್ನ ಪೂಜೆಯು ಬೇಡ
ವನುತೆ ಅಪೇಕ್ಷಿಸಿ ನಿನ್ನ ಪೂಜೆಯು ಬೇಡ
ಮನೆಯು ಅಪೇಕ್ಷಿಸಿ ನಿನ್ನ ಪೂಜೆಯು ಬೇಡ
ತನುವು ಅಪೇಕ್ಷಿಸಿ ನಿನ್ನ ಪೂಜೆಯು ಬೇಡ
ಘನ ಸುತರಿಗಾಗಿ ನಿನ್ನ ಪೂಜೆಯು ಬೇಡ
ಕನಸಿನೊಳಾದರೂ ಕಾಮ್ಯ ಫಲಕೆ ನಿನ್ನ
ನೆನೆಸದಂತೆ ಮಾಡು ನ್ಯಾಯದಲೆ ಇನ್ನು
ಎನಗೆ ಈ ದೇಹದಲ್ಲೇನೇನು ಅನುಭೋಗ
ಅನುವಾಗಿ ಇದ್ದದ್ದು ಉಣಿಸದೆ ಬಿಡಿ ಇನ್ನು
ಎನಗೇನು ಈ ದೇಹ ಹೇಗೆ ಬಂದೀತೆಂದು
ಕ್ಷಣವು ಆದರು ನಿನ್ನ ಚಿಂತಿಸಿ ಇದ್ದೇನೆ
ತನುವು ಕೊಟ್ಟವಗೆ ತಾಪತ್ರಯದ ಚಿಂತೆ
ಎನಗೆ ಎನಗೇನು ಯೋಚನಿಲ್ಲ
ತನುಮನದೊಡಿಯನೆ *ಗೋಪಾಲವಿಟ್ಠಲ* 
ಎನಗೆ ನಿಷ್ಕಾಮಕ ನಿನ್ನಾರಾಧನೆ ಈಯೋ ॥ 6 ॥

 *ಆದಿತಾಳ* 

ಶುಭವೆಂದು ಪಿಡಿಯೆ ಶುಭದೊಳಶುಭವುಂಟು ಅ -
ಶುಭವೆಂದು ಬಿಡಲು ಅಶುಭದೊಳು ಶುಭವುಂಟು
ಶುಭವು ಅಶುಭವು ಎರಡಿಂದು ಎನಗೆ
ವಿಭಾಗ ತಿಳಿಯದು ವಿವರಸಿ ನೋಡಲು
ಶುಭಕೆ ಕಾರಣ ನೀನೆ ಅಶುಭಕೆ ಕಾರಣನೆಂದು
ದ್ವಿಭಾಗವು ವಿವರಣೆ ನಭದವರೆ ಮಾಡಿಹರು
ಇಭರಾಜ ಪಾಲಕ *ಗೋಪಾಲವಿಟ್ಠಲ* 
ಶುಭ ಅಶುಭವು ನಿನ್ನಾಧೀನ ಇಪ್ಪವು ॥ 7 ॥

 *ಜತೆ* 

ಎನಗೆ ನೀ ಬೇಕೆಂಬೊ ಆಶೆಯು ಘನವಯ್ಯಾ
ನಿನಗೆ ಬೇಕಿತ್ತೆ ಪೊರಿ *ಗೋಪಾಲವಿಟ್ಠಲ* ॥

 *ಈ ಸುಳಾದಿಯ ರಚನೆಯ ಸಂದರ್ಭ :* 

ಆದವಾನಿಯಲ್ಲಿ ಶ್ರೀಗೋಪಾಲದಾಸರು , ತಮ್ಮ ಗುರುಗಳ ಸನ್ನಿಧಾನದಲ್ಲಿ ಇರುವಷ್ಟರಲ್ಲಿ  ಒಂದೆರಡು ಬಾರಿ , ಶ್ರೀವಿಜಯದಾಸಾರ್ಯರು , ಶ್ರೀಗೋಪಾಲದಾಸರಿಂದ  ತಮ್ಮಲ್ಲಿದ್ದ ಶ್ರೀವಿಜಯವಿಟ್ಠಲನ ಪೂಜೆ ಮಾಡಿಸಿದ್ದರು. ಶ್ರೀಗೋಪಾಲದಾಸರು ಶ್ರೀವಿಟ್ಠಲಸ್ವಾಮಿಯನ್ನು ಅರ್ಚಿಸಿ , ಶ್ರೀದೇವರನ್ನು ಭುಜಂಗಿಸುವ ಮುನ್ನ ಆ ಸ್ವಾಮಿಯ ಸ್ತೋತ್ರವನ್ನು ಪಾಡಿ ನರ್ತಿಸುತ್ತಿದ್ದರು. ಆ ಸಮಯದಲ್ಲಿ ಭಕ್ತಿಯಿಂದ ಮೂಡಿದ ಸುಳಾದಿ ಇದು

 *ವಿವರಣೆ :* 
 *ಹರಿದಾಸರತ್ನಂ ಶ್ರೀಗೋಪಾಲದಾಸರು*


https://drive.google.com/file/d/1nzppfGPEvL3xJ9VNkv8o2XNARoMB6lt7/view?usp=drivesdk
[15/01, 6:26 PM] +91 91644 68888: " ನಮ್ಮ ಗೋಪಾಲದಾಸರ ವೈಭವ "

" ಶ್ರೀ ವಿಘ್ನೇಶ್ವರ ಅಂಶ ಸಂಭೂತರಾದ ಶ್ರೀ ಗೋಪಾಲದಾಸರ ಮಧ್ಯಾರಾಧನೆ ವಿಶೇಷ " 

ಗೋಪಪ್ರಕರ ಸಂಕಾಶಂ 
ಗೋಪಾಲಾರ್ಚನ ತತ್ಪರಮ್ ।
ಗೋದೇವ ವಂದ್ಯ ಪಾದಾಬ್ಜಂ 
ಗೋಪಾಲಾಖ್ಯ ಗುರುಂ ಭಜೇ ।। 

ದಾಸ ವಾಙ್ಞ್ಮಯದ ಚತುರ್ಮುಖ ಸೌಂದರ್ಯ ಕಂಡು ಬೆರಗಿ ಬಾಗಿದವರಿಲ್ಲ. 

ಭಕ್ತಿಯಿಂದ ತಲೆ ತಗ್ಗಿಸದವರಿಲ್ಲ. 

ದಾಸಕೂಟದ ಈ ಚತ್ವಾರಿ ಶೃಂಗ ಅರ್ಥಾತ್ ನಾಲ್ಕು ಶಿಖರಗಳೆಂದರೆ... 

1. ಶ್ರೀ ನಾರದ ಮಹರ್ಷಿಗಳ ಅಂಶ ಸಂಭೂತರಾದ ಶ್ರೀ ಪುರಂದರದಾಸರು 
2. ಶ್ರೀ ಭೃಗು ಮಹರ್ಷಿಗಳ ಅಂಶ ಸಂಭೂತರಾದ ಶ್ರೀ ವಿಜಯರಾಯರು. 
3. ಶ್ರೀ ಗಣೇಶಾಂಶ ಶ್ರೀ ಗೋಪಾಲದಾಸರು
4. ಶ್ರೀ ಬೃಹಸ್ಪತ್ಯಾಚಾರ್ಯರ ಅಂಶ ಸಂಭೂತರಾದ ಶ್ರೀ ಜಗನ್ನಾಥದಾಸರು

ಈ ನಾಲ್ವರು ದಾಸವರ್ಯರಾಗಿದ್ದಾರೆ. 

ಶ್ರೀ ಗೋಪಾಲದಾಸರ ವೈರಾಗ್ಯದ ಒರೆಗಲ್ಲು ನಿಜವಾಗಿಯೂ ಉಚ್ಛಮಟ್ಟದ್ದಾಗಿದೆ. 

ಶ್ರೀ ಗೋಪಾಲದಾಸರ ದೃಷ್ಟಿಯಲ್ಲಿ.... 

ತ್ಯಾಗ - ವಿರಾಗ - ಜ್ಞಾನ - ಕರ್ಮಗಳ ವ್ಯಾಖ್ಯೆಯೇ ಬೇರೆ. 

ನಿಜವಾದ ಅರ್ಥದಲ್ಲಿ ಜ್ಞಾನ - ಭಕ್ತಿ - ವೈರಾಗ್ಯಗಳನ್ನು ಜೀವನದಲ್ಲಿ ಅರಗಿಸಿಕೊಂಡ ಶ್ರೀ ಗೋಪಾಲದಾಸರಾಯರು ಈ ಎಲ್ಲ ಶಬ್ದಗಳಿಗೆ ಕೊಡುವ ನಿರ್ವಚನವೇ ಬೇರೆ. 

ಅವುಗಳ ಆಪಾತಃ ತೋರುವ - ನೀವು - ನಾವು ತಿಳಿದುಕೊಂಡಿರುವ ಸಾಮಾನ್ಯ ಅರ್ಥದಿಂದ ಆಗುವ ಅನರ್ಥವನ್ನು ತಿಳಿಸಿ ಅವುಗಳ ಶಾಸ್ತ್ರ ಶುದ್ಧವಾದ ಪರಮಾರ್ಥವನ್ನು ತಮ್ಮದೇ ಆದ ಬಿಚ್ಚು ಮಾತಿನ ಸ್ವಚ್ಛ ಸರಣಿಯಲ್ಲಿ ನಿಶ್ಚಳವಾಗಿ ತಿಳಿಸಿ ಹೇಳಿದ್ದಾರೆ. 

ಶ್ರೀ ಗೋಪಾಲದಾಸರು ಸಂತ ಕವಿಗಳು. ಅವರ ದೃಷ್ಟಿ ಮಾನವೀಯವಾದರೂ ಅದರ ಪ್ರತಿಷ್ಠೆ ಪರಮಾತ್ಮನಲ್ಲಿ. ಆದುದರಿಂದ ಅವರ ಕೃತಿಗಳಲ್ಲಿ ಮಾನವೀಯ ಭಾವನೆಗಳ ಅತಿರೇಕತೆ ಕಂಡು ಬರುವುದಿಲ್ಲ. 

ಜೀವನದ ಅನಿತ್ಯತೆಯಿಂದ ಪಾರಾಗುವದು ಅವರ ಜೀವನ ಧರ್ಮ, ಲೌಕಿಕ ಯಶಸ್ಸಿನ ದುಂಧುಭಿ ಅವರ ಕೃತಿಗಳಲ್ಲಿಲ್ಲ. 

ಶ್ರೀ ಗೋಪಾಲದಾಸರಾಯರು ಜೀವನದ ರಹಸ್ಯವನ್ನು ಬಿಚ್ಚಿ ತೋರಿಸಿದ ಸಂತರು. 

ಜೀವನದ ರಹಸ್ಯವನ್ನು ೪ ಬಗೆಯಲ್ಲಿ ಎತ್ತಿ ತೋರಿಸಿದ್ದಾರೆ. 

1. ಸಂಸಾರದ ಅಸಾರತೆ 
2. ಸಂಸಾರದ ಭೀಕರತೆ 
3. ಮೋಹ ಮತ್ತು ತ್ಯಾಗ 
4. ದೇವರಲ್ಲಿ ಭಕ್ತಿಯಿಂದ ಆನಂದ. 

ಇವೇ ಶ್ರೀ ಗೋಪಾಲದಾಸರ ಕೃತಿಗಳ ಮೂಲ ಆಶಯ. 

" ಸಂಸ್ಕೃತ " ದೇವ ಭಾಷೆಯೆಂದು ಪೂಜಿತವಾಗಿದ್ದರೂ ಅದಕ್ಕೆ ಜೀವದ ನಿಕಟ ಸಂಪರ್ಕ ಇಲ್ಲವಾಗಿತ್ತು. ಆದುದರಿಂದ ಹರಿದಾಸರೆಲ್ಲರೂ ಕನ್ನಡ ಭಾಷೆಯನ್ನು ಆಶ್ರಯಿಸಿದರು. 

ಶ್ರೀ ಗೋಪಾಲದಾಸರೂ ಅದೇ ಮಾರ್ಗದಲ್ಲಿ ನಡೆದು ಭಕ್ತಿಯ ಅತಿಶಯತೆಯಿಂದ ಕೂಡಿದ, ತತ್ತ್ವ ಪ್ರಮೇಯಗಳಿಂದ ತುಂಬಿದ ರಚನೆಗಳನ್ನು ಕನ್ನಡಿಗರಿಗೆ ಕೊಟ್ಟಿದ್ದಾರೆ.   

ಬ್ರಹ್ಮಾಂಡದ ಪಟವನ್ನು ಮನನೀಯವಾಗುವಂತೆ ಸರ್ವ ಮಾನನೀಯವೂ ಆಗುವಂತೆ ಬರೆದಿಟ್ಟಿದ್ದಾರೆ. 

ಶ್ರೀಮದಾನಂದತೀರ್ಥರು ತಂತ್ರಸಾರದಲ್ಲಿ ಹೇಳಿದ ಮಹಾ ಮಂತ್ರಗಳ ಪ್ರತಿಪಾದ್ಯ ಭಗವನ್ಮೂರ್ತಿಗಳನ್ನೆಲ್ಲ ಶಿಲ್ಪಿ ಶಾಸ್ತ್ರಾನುಸಾರವಾಗಿ ಬರೆದು ಆ ಆ ಮಂತ್ರಾಕ್ಷರಗಳನ್ನು ಸರ್ವಜ್ಞರಿಂದ ನಿರ್ದಿಷ್ಟವಾದ, ಸರಿಯಾದ ಸ್ಥಾನದಲ್ಲಿ ಗುರುತಿಸಿ - ಇರಿಸಿ, ಆವಾಹನಾದಿ ಷೋಡಶೋಪಚಾರಗಳಿಂದ ಪೂಜಾ ಕಾಲದಲ್ಲಿ ಅರ್ಚಿಸುವದು ಶ್ರೀ ಗೋಪಾಲದಾಸರ ನಿತ್ಯ ಕಾರ್ಯಕ್ರಮವಾಗಿತ್ತು. 

ಶ್ರೀ ಗೋಪಾಲದಾಸರು ಬರೆದ ಆ ಚಿತ್ರದಲ್ಲಿ ಒಂದು ಮೂರ್ತಿಯನ್ನು ಒಮ್ಮೆ ಬರೆದು ಆವಾಹಿಸಿದರೆಂದರೆ ಆ ಚಿತ್ರದಲ್ಲಿ ಆ ಭಗವಂತನ ವಿಚಿತ್ರವಾದ ಸನ್ನಿಧಾನವು ಬಂದು ಬಿಡುತ್ತಿತ್ತು. 

ಮಂತ್ರಸಿದ್ಧಿ - ವಾಕ್ ಸಿದ್ಧಿ, ರಸ ಸಿದ್ಧಿ ಮೂರನ್ನೂ ಸಾಧಿಸಿಕೊಂಡು ಜನರಿಗೆಲ್ಲ ಆ ತ್ರಿವಿಧೋಪಾಯದಿಂದ ಮುಕುಂದನ ಮುಕ್ತಿ ಮಂದಿರಕ್ಕೆ ದಾರಿ ತೋರಿದ ಶ್ರೀ ಗೋಪಾಲದಾಸರು ದಾಸಕೂಟದ ಅಧ್ವರ್ಯಗಳಾಗಿದ್ದಾರೆ. 

ಆಗತಾದ್ರಿ ತ್ರಿಕಾಲಜ್ಞಂ 
ಆಗಮಾರ್ಥ ವಿಶಾರದಂ । 
ತ್ಯಾಗ ಭೋಗ ಸಮಾಯುಕ್ತಂ
ಭಾಗಣ್ಣಾರ್ಯ ಗುರೂಂಭಜೇ ।।
[15/01, 6:26 PM] +91 91644 68888: ಶ್ರೀ ಗೋಪಾಲದಾಸ ಗುರುಭ್ಯೋ ನಮಃ
🙏🙏

ಧನದಿಂದ ನೆಂಟರು ಕೆಲವರು ಎನಗಿನ್ನು
ತನುವಿನ ನೆಂಟರು ಕೆಲವರು ಎನಗಿನ್ನು
ಮನದಿಂದ ನೆಂಟರು ಕೆಲವರು ಎನಗಿನ್ನು
ದಿನದಿಂದ ನೆಂಟರು ಕೆಲವರು ಎನಗಿನ್ನು
ಗುಣದಿಂದ ನೆಂಟರು ಕೆಲವರು ಎನಗಿನ್ನು
ಇನಿತು ನೆಂಟರೊಳು ಎನಗೆ ಒಬ್ಬರ ಕಾಣೆ
ಅನುವಾಗಿ ಇದ್ದರೆ ಅಷ್ಟು ನಮ್ಮವರೆಲ್ಲ
ನನಗೆ ನಿನಗೆ ನೆಂಟತನವು ಹೀಗಲ್ಲಾ
ಅನಿಮಿಷ ಅಗಲದೆ ಅನಿಮಿತ್ಯ ಬಂಧು ಆಗಿ
ಕ್ಷಣಬಿಡದಲೆ ಕಾಯುವ *ಗೋಪಾಲವಿಟ್ಠಲ* 
ನಿನಗೆ ಮಾಡುವದೇನು ನಮೊ ನಮೊ ಎನ್ನಿಂದಾ ॥

ನಂಬಲು ನಾನಿನ್ನು ಎಷ್ಟರ ಮನುಜ ನೀ 
ನಂಬಿಸಲು ನಂಬಿದೆ *ಗೋಪಾಲವಿಟ್ಠಲ* ॥

ಜಗದ ಅಂತರಯಾಮಿ ಎನ್ನ ಅಂತರಯಾಮಿ
ಅಘದೂರ *ಗೋಪಾಲವಿಟ್ಠಲ* ಅನಿಮಿತ್ಯ ಬಂಧು ॥

ಅಪರಾಧ ಅನಂತ ಮಾಡಿ ನಾ ಮೊರೆಹೊಕ್ಕೆ
ಅಪಾರ ಕರುಣಿ *ಗೋಪಾಲವಿಟ್ಠಲ* ಕಾಯೊ ॥

Post a Comment

Previous Post Next Post