*#ಶ್ರೀ #ನರಹರಿತೀರ್ಥರ #ಆರಾಧನಾ ಮಹೋತ್ಸವ*.

[15/01, 9:07 PM] +91 89713 62063: 🌺🌺🌺🌺🌺🌺🌺
*#ಶ್ರೀ #ನರಹರಿತೀರ್ಥರ #ಆರಾಧನಾ ಮಹೋತ್ಸವ*.
🌺🌺🌺🌺🌺🌺🌺
ಗಜಪತಿ ಆಸ್ಥಾನದಲ್ಲಿದ್ದ ಶ್ರೀಸೀತಾಸಮೇತ ರಾಮಚಂದ್ರದೇವರ ವಿಗ್ರಹವನ್ನು ಸಮಸ್ತ ಮಧ್ವ ಪರಂಪರೆಗೆ ಸಮರ್ಪಿಸಿದ ಧೀಮಂತ ಯತಿಗಳಾದ ಪ್ರಾತ:ಸ್ಮರಣೀಯ ಶ್ರೀ ನರಹರಿತೀರ್ಥರ ಪಾದಕಮಲಗಳಿಗೆ ನಮೋ ನಮ: ||
[15/01, 9:12 PM] +91 89713 62063: 🌺🌺🌺🌺🌺🌺🌺
*#ಶ್ರೀನರಹರಿತೀರ್ಥರು*
🌺🌺🌺🌺🌺🌺🌺
ಶ್ರೀಮಧ್ವಾಚಾರ್ಯರ ನೇರ ಶಿಷ್ಯರಲ್ಲಿ ಒಬ್ಬರಾದ ಶ್ರೀನರಹರಿತೀರ್ಥರು ದಾಸ ಸಾಹಿತ್ಯದ ಆದ್ಯ ಪ್ರವರ್ತಕರು. ಇವರ ಪೂರ್ವಾಶ್ರಮದ ಹೆಸರು ಸ್ವಾಮಿಶಾಸ್ತ್ರಿಗಳೆಂದು. ಇವರು ಒರಿಸ್ಸಾ ದೇಶದ ಗಜಪತಿ ಅರಸರಲ್ಲಿ ದಫ್ತರರಾಗಿದವ್ದು ದಕ್ಷ ಆಡಳಿತಗಾರರಾಗಿದ್ದರು. ಶ್ರೀಮದಾಚಾರ್ಯರು ಬದರಿಯಾತ್ರೆ ಮಾಡಿ ಒರಿಸ್ಸಾ ರಾಜಧಾನಿಗೆ ಬಂದಾಗ ಶಾಸ್ತ್ರಿಗಳು ವಾದಭೂಮಿಗಿಳಿದು ಆಚಾರ್ಯರ ಪಾಂಡಿತ್ಯಕ್ಕೆ ಮನಸೋತು ಅವರ ಶಿಷ್ಯರಾದರು. ನರಹರಿ ತೀರ್ಥರೆಂದು ಆಚಾರ್ಯರ ಆದೇಶದಂತೆ  ಅಲ್ಲಿಯೆ ಮುಂದುವರಿದರು. ಕಾಲಕ್ರಮೇಣ ಗಜಪತಿರಾಜ ಅಕಾಲಮರಣಹೊಂದಿದ. ರಾಣಿ ತುಂಬು ಗರ್ಭವತಿ. ಸಂಪೂರ್ಣ ಅರಾಜಕತೆ. ರಾಜಕುಲದಲ್ಲಿ ಕಿತ್ತಾಟ,ಪಟ್ಟಕ್ಕೆ ಯಾರಲ್ಲಿಯೂ ಸಮ್ಮತ,ಒಮ್ಮತ ಸುತಾರಾಂ ಇಲ್ಲ. ಈ ಸಮಯದಲ್ಲಿ ಪಟ್ಟದ ಆನೆಯ ಪುಷ್ಪಸ್ವೀಕರಿಸವವರೇ ರಾಜ್ಯಭಾರ ಮಾಡಬೇಕೆಂದು ನಿಶ್ಚಯವಾಯಿತು.
ಆನೆಯ ಪುಷ್ಪವು ರಾಜ್ಯದ ಸರ್ವ ಕಾಲಕ್ಕೂ ಹಿತೈಷಿಗಳಾದ ನರಹರಿತೀರ್ಥರ ಕೊರಳನ್ನುಅಲಂಕರಿಸಿತು. ಈ ನಿರ್ಧಾರ ಸರ್ವಸಮ್ಮತವಾಯಿತು.ಕ್ರಿ.ಶ.೧೨೬೩ರಲ್ಲಿ ಗಜಪತಿ ರಾಜ್ಯಭಾರ ವನ್ನು ವಹಿಸಿದರು.ರಾಣಿಗೆ ಪುತ್ರಸಂತಾನವಾಯಿತು.
ನರಹರಿತೀರ್ಥರು ರಾಜಕುಮಾರನು ಪ್ರಾಪ್ತ ವಯಸ್ಕನಾಗುವವರೆಗೂ ವಿಚಕ್ಷಣೆಯಿಂದ ರಾಜ್ಯವಾಳಿದರು.ಇದಕ್ಕೆ ಆಧಾರ 
"Indian Antiquary , vol xliii page 264, 1914,
ಮಧ್ವಾರ್ಚಾಯರ ಅಣತಿಯಂತೆ ಮೂಲ ರಾಮಸೀತಾ ವಿಗ್ರಹಗಳನ್ನು ರಾಜನಿಂದ ಪಾರಿತೋಷಕವಾಗಿ ಪಡೆದರು.ಮತ್ತೆ ಆ ರಾಜ್ಯ ಬಿಟ್ಟು ಉಡುಪಿಗೆ ಬಂದು ತಾವು ತಂದಿದ್ದ ವಿಗ್ರಹಗಳನ್ನು ಆರ್ಚಾಯರಿಗೆ ಒಪ್ಪಿಸಿದರು. ಆಚಾರ್ಯರು ಆ ವಿಗ್ರಹಗಳನ್ನು ೮೦ ದಿವಸ ಆರಾಧನೆ ಮಾಡಿ ತಮ್ಮ ಸಂಸ್ಥಾನವನ್ನು ಪದ್ಮನಾಭತೀರ್ಥರಿಗೆ ಒಪ್ಪಿಸಿ ಬದರಿಕಾಶ್ರಮಕ್ಕೆ ಪ್ರಯಾಣ ಮಾಡಿದರು. ಪದ್ಮನಾಭತೀರ್ಥರು ೧೩೨೪ ನೇ ನವಂಬರ್ ಹದಿನಾರಕ್ಕೆ ಸಲ್ಲುವ ರಕ್ತಾಕ್ಷಿ ಸಂ. ಕಾರ್ತೀಕ ಬಹುಳ ಚತುರ್ದಶಿವರೆಗೆ ಸಂಸ್ಥಾನ ಪಾಲನೆ ಮಾಡಿದರು. ನಂತರ ನರಹರಿತೀರ್ಥರ ಪಟ್ಟವಾಯಿತು.
ಅನೇಕ ಕನ್ನಡ ದೇವರನಾಮರಚಿಸಿ
ಹರಿದಾಸ ಪೀಳಿಗೆಯಲ್ಲಿ ಅಗ್ರಸ್ಥಾನ ಪಡೆದ ಮಹಾಮಹಿಮರು,
ಪ್ರಾತಃಸ್ಮರಣೀಯರು.

"ಹರೇ ಶ್ರೀನಿವಾಸ"
[15/01, 9:17 PM] +91 89713 62063: 🌺🌺🌺🌺🌺🌺🌺
*#ಶ್ರೀನರಹರಿ #ತೀರ್ಥರ #ಆರಾಧನೆ*
🌺🌺🌺🌺🌺🌺🌺
ಇಂದು, ಜಗದ್ಗುರು ಶ್ರೀಮನ್ಮಧ್ವಾಚಾರ್ಯರ ನೇರ ಶಿಷ್ಯರು, ಶ್ರೀ ರಾಯರ ಮಠದ ಪೂರ್ವೀಕ ಗುರುಗಳಾದ ಶ್ರೀನರಹರಿ ತೀರ್ಥರ ಆರಾಧನೆ.

ಸಸೀತಾ ಮೂಲರಾಮಾರ್ಚಾ ಕೋಶೇ ಗಜಪತೇಃ ಸ್ಥಿತಾ |
 ಯೇನಾನೀತಾ ನಮಸ್ತಸ್ಮೈ ಶ್ರೀಮನ್ನೃಹರಿಭಿಕ್ಷವೇ ||

   ಕಳಿಂಗ (ಈಗಿನ ಒಡಿಸ್ಸಾ)1243ರಲ್ಲಿ ಜನಿಸಿದ ಇವರ ಪೂರ್ವಾಶ್ರಮದ ಹೆಸರು ಶ್ರೀಶ್ಯಾಮಾಶಾಸ್ತ್ರಿ.
  ಸಕಲ ಶಾಸ್ತ್ರಗಳಲ್ಲಿ  ಮೇಧಾವಿಗಳಾಗಿದ್ದ ಇವರು, ಕತ್ತಿವರಸೆಯಲ್ಲಿ ನೈಪುಣ್ಯ ಹೊಂದಿದ್ದ ಯುದ್ಧ ವಿಶಾರದರೂ ಹೌದು.
 ಪೂರ್ವಾಂಚಲದ ರಾಜರಿಗೆ ಕೆಲ ಕಾಲ ಮಂತ್ರಿಗಳಾಗಿ, ರಾಜ ನರಸಿಂಹನಿಗೆ 23 ವರ್ಷಗಳು ( ಕ್ರಿ ಶ 1263 - 1286 ) ರಾಜ ತಾಂತ್ರಿಕ ಸಲಹೆಗಾರರಾಗಿದ್ದರು.

 ಒಂದು ದಿನ ಶ್ರೀಮಧ್ವಾಚಾರ್ಯರು ಬದರಿಯಿಂದ ಮರಳಿ ಬರುವಾಗ ರಾಜಮಹೇಂದ್ರನಗರ(ರಾಜಮಂಡ್ರಿ)ದಲ್ಲಿ ನಡೆದ ವಾಕ್ಯಾರ್ಥ ಸಭೆಯಲ್ಲಿ ಭಾಗವಹಿಸಿದರು.  ಇವರನ್ನು ಎದುರುಗೊಂಡ ಶ್ಯಾಮಾಶಾಸ್ತ್ರಿಗಳು ವಾದದಲ್ಲಿ ಆಚಾರ್ಯರ ಮುಂದೆ ಸೋತು ಮಂಡಿಯೂರಿದರು. 

 ಆಚಾರ್ಯರ ವ್ಯಕ್ತಿತ್ವ ಹಾಗೂ ಅವರ ತತ್ವ ಸಿದ್ಧಾಂತಕ್ಕೆ ಮನಸೋತು 1324 ರಲ್ಲಿ ಆಚಾರ್ಯರ ಚರಣಕ್ಕೆರಗಿ ಸನ್ಯಾಸ ನೀಡುವಂತೆ ಕೋರಿದರು. ಶ್ಯಾಮಾಶಾಸ್ತ್ರಿಗಳಲ್ಲಿದ್ದ ಜ್ಞಾನ, ಭಕ್ತಿ, ವೈರಾಗ್ಯಗಳನ್ನು ಅರಿತು ತಥಾಸ್ತು ಎಂದರು.
  ಶ್ರೀ ನರಹರಿ ತೀರ್ಥರೆಂಬ ಆಶ್ರಮನಾಮದ ಅಭಿದಾನ ಪಡೆದು, ಶ್ರೀಮಧ್ವಾಚಾರ್ಯರ ಮೊದಲ ಸಾಲಿನ ಶಿಷ್ಯರಲ್ಲಿ ಶ್ರೀಪದ್ಮನಾಭತೀರ್ಥರ ನಂತರದ ಸ್ಥಾನ ಅಲಂಕರಿಸಿದರು.

ಶ್ರೀ ನರಹರಿ ತೀರ್ಥರು ಶ್ರೀಮಧ್ವಾಚಾರ್ಯರ ಹಲವು ಗ್ರಂಥಗಳಿಗೆ ಟೀಕೆ ಬರೆದಿದ್ದಾರೆ. ಇವುಗಳಲ್ಲಿ ‘ಯಮಕ ಭಾರತ’ ಹಾಗೂ  'ಶ್ರೀಕೃಷ್ಣ ಪ್ರಕಾಶಿಕಾ'  ತುಂಬಾ ಸುಂದರವಾದ ಗ್ರಂಥಗಳಾಗಿವೆ. ಉಳಿದಂತೆ,
1.      ಗೀತಾಭಾಷ್ಯ ಭಾವಪ್ರಕಾಶಿಕಾ
2.     ವಿಷ್ಣುತತ್ತ್ವವಿನಿರ್ಣಯ ಟೀಕಾ
3.     ಕರ್ಮನಿರ್ಣಯ ಟೀಕಾ
4.    ಬ್ರಹ್ಮಸೂತ್ರ ಭಾಷ್ಯ ಭಾವಪ್ರಕಾಶಿಕಾ
5.     ಶ್ರೀಕೃಷ್ಣಪ್ರಕಾಶಿಕಾ

ಎಂಬ ಟೀಕಾ ಗ್ರಂಥಗಳನ್ನು ರಚಿಸಿದ್ದಾರೆ.
 ಶ್ರೀನರಹರಿ ತೀರ್ಥರ ಹೆಸರನ್ನು ಉಲ್ಲೇಖಿಸಿರುವ ಶಿಲಾ ಶಾಸನಗಳನ್ನು ಶ್ರೀಕೂರ್ಮಮ್ ಹಾಗೂ ಸಿಂಹಾಚಲಮ್ ನಲ್ಲಿ ಕಾಣಬಹುದು.

  ರಾಜರ ಮೇಲೆ ಇವರ ಪ್ರಭಾವ ಎಷ್ಟರಮಟ್ಟಿಗೆ ಇತ್ತೆಂದರೆ, ಒಡ್ಡವಾಡಿಯ ಮತ್ಸ್ಯ ವಂಶದ ದೊರೆಗಳು ವೈಷ್ಣವರಾದರು. ಅರ್ಜುನ ಎಂಬಾತ ನರಸಿಂಹ ವರ್ಧನನಾದ, ಅನ್ನಮರಾಜ ಗೋಪಾಲವರ್ಧನನಾದ. ಮುಂಜಾದಿತ್ಯ ಶ್ರೀರಂಗವರ್ಧನನಾದ. ಕಳಿಂಗ ಹಾಗೂ ಆಂಧ್ರದೇಶದ ಹಲವು ರಾಜರು, ಸಾಮಂತರು, ಸಾಮಾನ್ಯರು ವೈಷ್ಣವ ದೀಕ್ಷೆಯನ್ನು ಸ್ವೀಕರಿಸಿದ್ದರು. 

   ಶ್ರೀ ನರಹರಿ ತೀರ್ಥರು 1324ರಲ್ಲಿ ಶ್ರೀಮದಾಚಾರ್ಯರು ಶ್ರೀ ಶ್ಯಾಮಶಾಸ್ತ್ರಿಗಳಿಗೆ ತುರ್ಯಾಶ್ರಮ ನೀಡುವಾಗಲೇ " ನಿಮಗೆ ರಾಜ ಗುರುಗಳಾಗುವ ಯೋಗವಿದೆ " ಎಂದು ಹರಸಿದ್ದರಂತೆ. ಅದರಂತೆ ಅವರು ಕಳಿಂಗ ರಾಜ್ಯದ ರಾಜ ಗುರುಗಳು ಆದರು. 

   ಆ ದೇಶದ ರಾಜ  ಗಜಪತಿರಾಜನು ಅಕಾಲ ಮರಣಕ್ಕೆ ತುತ್ತಾದ. ಆಗ ಆತನ ಗಂಡು ಮಗು ಶೈಶವಾವಸ್ಥೆಯಲ್ಲಿತ್ತು. ಮಗು ಬೆಳೆದು ಪ್ರಾಪ್ತವಯಸ್ಕನಾಗುವವರೆಗೆ ರಾಜ್ಯ ನೋಡಿಕೊಳ್ಳುವ ಜವಾಬ್ದಾರಿ ಯಾರದು ಎನ್ನುವ ಸಂದರ್ಭ ಎದುರಾಯಿತು.

  ಹಿರಿಯರೆಲ್ಲಾ ಸೇರಿ ಒಂದು ನಿರ್ಣಯ ಮಾಡಿ, ಪಟ್ಟದ ಆನೆಯ ತಲೆಯ ಮೇಲೆ ನೀರು ತುಂಬಿದ ಬಂಗಾರದ ಕುಂಭ ಇಡುವುದು, ಸೊಂಡಿಲಿಗೆ ಹಾರ ಕೊಡುವುದು. ಆನೆ ಯಾರಿಗೆ ಇವುಗಳನ್ನು ಸಮರ್ಪಿಸುತ್ತದೆಯೋ ಅವರನ್ನು ರಾಜ್ಯಪಾಲಕರಾಗಿ ನಿಯೋಜಿಸುವುದಾಗಿ ತೀರ್ಮಾನಿಸಿದರು.

  ದಢ‌ದಢನೆ ನಡೆದ ಆನೆ, ಜಲಾಶಯದ ಬಳಿ  ಸ್ನಾನಕ್ಕೆಂದ ಸಿದ್ಧರಾಗಿದ್ದ ಶ್ರೀನರಹರಿತೀರ್ಥರ ಕೊರಳಿಗೆ ಹಾಕಿ, ಕುಂಭದ ನೀರಿನಿಂದ ಅಭಿಷೇಕ ಮಾಡಿತು. ಇದಾದ ಬಳಿಕ ಗುರುಗಳ ಮುಂದೆ ಬಾಗಿ, ಅವರನ್ನು ತನ್ನ ಬೆನ್ನ ಮೇಲೆ ಕೂರಿಸಿಕೊಂಡು ಅರಮನೆಯತ್ತ ಸಾಗಿತು. 

  ರಾಜ್ಯಭಾರದ ಜವಾಬ್ದಾರಿ ವಹಿಸಿಕೊಂಡು 12 ವರ್ಷಗಳ ರಾಜ್ಯಭಾರ ಮಾಡಿ, ರಾಜಕುಮಾರನಿಗೆ ರಾಜ್ಯವನ್ನೊಪ್ಪಿಸಿ ತೆರಳಲು ಮುಂದಾದರು. ಗಜಪತಿ ರಾಜನ ಪತ್ನಿ, ಮಹಾರಾಣಿ ಗುರುಗಳ ಬಳಿ ಬಂದು ಮಾಡಿದ ಉಪಕಾರಕ್ಕೆ ಪ್ರತಿಫಲ ರೂಪದಲ್ಲಿ ಧನ, ಕನಕ, ಮುತ್ತು, ಮಾಣಿಕ್ಯ, ರತ್ನಗಳನ್ನು ಕೊಂಡೊಯ್ಯುವಂತೆ ಮನವಿ ಮಾಡಿದಳು. 

   ನಸುನಕ್ಕ ಗುರುಗಳು, ಅಮ್ಮಾ ನಾವು ಸನ್ಯಾಸಿಗಳು ನಮಗಿದು ಬೇಡ ಎಂದು ನಯವಾಗಿ ತಿರಸ್ಕರಿಸಿದರು. ಪಟ್ಟು ಬಿಡದೆ ಆಕೆ ವಿನಮ್ರವಾಗಿ ಬೇಡಿಕೊಂಡು, ಕೋಶಾಗಾರದಲ್ಲಿ ಇರುವ ವಸ್ತುಗಳಲ್ಲಿ ಸನ್ಯಾಸಿಗಳು ಬಳಸುವಂತಹ ವಸ್ತುಗಳಲ್ಲಿ ತಮಗೇನು ಬೇಕೋ ಕೊಂಡೊಯ್ಯಿರಿ ಎಂದು ಚರಣಗಳಿಗೆರಗಿದಳು.

 ಆಕೆಯ ಭಕ್ತಿಯಿಂದ ಆನಂದತುಂದಿಲರಾದ ಶ್ರೀಗಳು ನರಹರಿಯನ್ನು ಪ್ರಾರ್ಥಿಸಿದರು. ಕೂಡಲೇ, ಕೋಶಾಗಾರದಲ್ಲಿ ಬ್ರಹ್ಮಕರಾರ್ಚಿತ ಶ್ರೀಮೂಲರಾಮದೇವರು(ರಮಯತೇ ಇತಿ ರಾಮಃ) ಹಾಗೂ ಮೂಲಸೀತಾದೇವಿಯ ಪ್ರತಿಮೆಗಳಿವೆ. ಅವುಗಳನ್ನು ಕೊಂಡೊಯ್ದು, ಇವುಗಳನ್ನು ಪೂಜಿಸಲು ಅಪೇಕ್ಷಿತರಾಗಿರುವ ಶ್ರೀಮದಾನಂದತೀರ್ಥರಿಗೆ ಒಪ್ಪಿಸುವಂತೆ ಸೂಚನೆಯಾಯಿತು. 

   ಈಕೆಯ ಬೇಡಿಕೆ ಸೂಕ್ತವಾದುದೇ ಎಂದು ಭಾವಿಸಿ, ಅಮ್ಮಾ ಗಜಪತಿಯ ಈ ಕೋಶಾಗಾರದಲ್ಲಿ ಎರಡು ಪ್ರತಿಮೆಗಳಿವೆ. ಅವುಗಳನ್ನು ಕೊಟ್ಟರೆ ಸಾಕೆಂದು ಅವುಗಳನ್ನು ಭಕ್ತಿಯಿಂದ ಕೈಗೆ ತೆಗೆದುಕೊಂಡು, ಆನಂದಬಾಷ್ಪಗಳನ್ನು ಸುರಿಸುತ್ತಾ ತಲೆಯ ಮೇಲಿಟ್ಟುಕೊಂಡರು

 ನಂತರ ಅಲ್ಲಿಂದ‌ ಪ್ರಯಾಣ ಬೆಳೆಸಿ ಉಡುಪಿಗೆ ಬಂದರು. ಆಚಾರ್ಯರು ಶ್ರೀಕೃಷ್ಣದೇವರ ಪೂಜೆಗೆ ಸಿದ್ಧರಾಗುತ್ತಿದ್ದ ವೇಳೆ, ಶ್ರೀಮೂಲರಾಮ ಹಾಗೂ ಮೂಲ ಸೀತಾದೇವಿಯ ಪ್ರತಿಮೆಗಳನ್ನು ಗುರುಗಳಿಗೆ ಒಪ್ಪಿಸಿದರು.

 ಶ್ರೀಮದಾಚಾರ್ಯರು ಹಲವು ಕಾಲ ಶ್ರೀಮೂಲರಾಮದೇವರನ್ನು ಸಂಸ್ಥಾನದ ಪ್ರತಿಮೆಯಾಗಿ ಪೂಜಿಸಿ, ಮೊದಲ ಶಿಷ್ಯರಾದ ಶ್ರೀಪದ್ಮನಾಭತೀರ್ಥರಿಗೆ ಸಂಸ್ಥಾನ ಸಮೇತ ಒಪ್ಪಸಿದರು.‌ ಶ್ರೀಪದ್ಮನಾಭತೀರ್ಥರ ನಂತರ ಶ್ರೀನರಹರಿತೀರ್ಥರು ಸಂಸ್ಥಾನ ಪೂಜೆ ನಡೆಸಿ ತಮ್ಮ ಪರಂಪರೆಯ ಶಿಷ್ಯರಿಗೆ ನೀಡಿದರು.

 ಶ್ರೀಮೂಲರಾಮಚಂದ್ರ ದೇವರು, ಇಂದಿಗೂ ಶ್ರೀನರಹರಿತೀರ್ಥರ ನೇರ ಪರಂಪರೆಯ ಶ್ರೀರಾಘವೇಂದ್ರತೀರ್ಥ ಗುರುಸಾರ್ವಭೌಮರ ಶ್ರೀಮಠದ ಮಹಾಸಂಸ್ಥಾನದಲ್ಲಿ ಪೂಜೆಗೊಳ್ಳುತ್ತಿದೆ.

 ಇಂತಹ ಶ್ರೀನರಹರಿತೀರ್ಥರು ಮಧ್ವರ ಭೋದನೆಗಳನ್ನು ಸರಳೀಕೃತಗೊಳಿಸಿ‌ ಹಾಡುವ  ಹರಿದಾಸ ಚಳುವಳಿಯ ಮೂಲಪುರುಷರು ಹೌದು. 
 90 ವರ್ಷಗಳ ಕಾಲ ಜೀವಿಸಿದ ಶ್ರೀನರಹರಿ ತೀರ್ಥರು ಕ್ರಿ.ಶ 1333ರಲ್ಲಿ ಶ್ರೀಹರಿಪಾದವನ್ನೈದಿದರು....

ಶ್ರೀಗುರುಗಳನ್ನು ಸ್ಮರಿಸೋಣ, ನಮಿಸೋಣ...🙏🙏

ಶ್ರೀಶ ಚರಣಾರಾಧಕ:
ಕೆ.ವಿ.ಲಕ್ಷ್ಮೀನಾರಾಯಣಾಚಾರ್ಯ,
ಆನೇಕಲ್.

Post a Comment

Previous Post Next Post