cm ವಿಶೇಷ

[15/01, 3:38 PM] Cm Ps: ಹಾವೇರಿ (ರಾಣೀಬೆನ್ನೂರು), ಜನವರಿ 15: *ಮಾನ್ಯ* *ಮುಖ್ಯಮಂತ್ರಿ ಶ್ರೀ ಬಸವರಾಜ* *ಬೊಮ್ಮಾಯಿ* ಅವರು *ಶ್ರೀ ನಿಜಶರಣ ಅಂಬಿಗರ* *ಚೌಡಯ್ಯನವರ* *ಗುರುಪೀಠ (ರಿ) ವತಿಯಿಂದ* *ಸುಕ್ಷೇತ್ರ ನರಸೀಪುರದ* ಗುರುಪೀಠದಲ್ಲಿ ಆಯೋಜಿಸಿರುವ ಶ್ರೀ *ನಿಜಶರಣ* *ಅಂಬಿಗರಚೌಡಯ್ಯನವರ* *5ನೇ ಶರಣ ಸಂಸ್ಕøತಿ ಉತ್ಸವ* , ಹಾಗೂ ಶ್ರೀ ನಿಜಶರಣ *ಅಂಬಿಗರಚೌಡಯ್ಯನವರ 903ನೇ* *ಜಯಂತೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು* ಮಾತನಾಡಿದರು.
[15/01, 4:08 PM] Cm Ps: *ಜೀವನೋತ್ಸಾಹವಿರುವ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಅಪರೂಪದ ವ್ಯಕ್ತಿ – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*

ಉತ್ತರಕನ್ನಡ , ಜನವರಿ 15 : 

 ದೇಶದ ಬಗ್ಗೆ ಅಭಿಮಾನ, ದೇಶಪ್ರೇಮಗಳ , ನಾಡಿನ ನೆಲ, ಜಲ , ಭಾಷೆಗಳ ಬಗ್ಗೆ ಗಟ್ಟಿ ನಿಲುವು ಉಳ್ಳವರು. ಬಡಜನರ, ತುಳಿತಕ್ಕೊಳಗಾದವರ ಹಿತರಕ್ಷಣೆಗೆ  ತುಡಿಯುವ ಶ್ರೀಯುತರು ಮಾನವತಾವಾದಿಯಾಗಿದ್ದಾರೆ.  ಜೀವನೋತ್ಸಾಹವಿರುವ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಅಪರೂಪದ ವ್ಯಕ್ತಿ.  ಅವರ ಅಗಾಧ ಅನುಭವದ ಮಾರ್ಗದರ್ಶನದಲ್ಲಿ ರಾಜ್ಯ ಅಭಿವೃದ್ಧಿ ಕಾಣಬಹುದಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಶಿರಸಿಯ ತಾಲ್ಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ  ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಕಾರ್ಯಕ್ರಮ ಹಾಗೂ ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ಸನ್ಮಾನ್ಯ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು  ಮಾತನಾಡಿದರು.


*ಸಂಘಟನೆಯೇ ಕಾಗೇರಿಯವರ ಗಾಡ್ ಫಾದರ್ :*
ವಿಶ್ವೇಶ್ವರ ಹೆಗಡೆ ಕಾಗೇರಿಯವರು ಅಪರೂಪದ ವ್ಯಕ್ತಿತ್ವ. ಸಾರ್ವಜನಿಕ ಜೀವನಕ್ಕೆ ಬಂದಿರುವುದು ಹಗಲಿರುಳು ಕೆಲಸ ಮಾಡುವ ಕಾರ್ಯಕರ್ತನಾಗಿ, ಸಂಘಟನಾ ಚತುರನಾಗಿ ಪ್ರತಿಯೊಬ್ಬರ ಮನದಲ್ಲಿ ಸ್ಥಾನ ಗಳಿಸಿರುವವರು. ವ್ಯಕ್ತಿಗತ ಯಾವುದೇ ಗಾಡ್ ಫಾದರ್ ಇಲ್ಲದವರು. ನಿರಂತರವಾಗಿ ಪರಿಶ್ರಮಿಸಿ, ಎಲ್ಲರಿಗೂ ಬೇಕಾಗಿರುವವರು, ತನ್ನ ಕಾಯಕ, ಸಾಮರ್ಥ್ಯದಿಮದ  ಮುಂದೆ ಬಂದಿರುವವರು. ಸಂಘಟನೆಯೇ ಕಾಗೇರಿಯವರ ಗಾಡ್ ಫಾದರ್.   ಯಾವುದೇ ರೀತಿಯ ರಾಜಿಮಾಡಿಕೊಳ್ಳದೇ ಜೀವನದಲ್ಲಿ ಏಳು ಬೀಳುಗಳನ್ನು ಕಂಡುಕೊಂಡವರು. ಯಾವುದೇ ಆಸೆ ಆಮಿಷಗಳಿಗೆ ಬಲಿಯಾದವರಲ್ಲ. ಗಟ್ಟಿ ನಿಲುವಿನ, ಜನಹಿತ ಸಲುವಾಗಿ ಸಹಕಾರವನ್ನು ನೀಡುವಂಥವರು. ಸ್ಥಿತಪ್ರಜ್ಞೆಯ ವ್ಯಕ್ತಿಯಾದವರು ಎಂದೂ ತಪ್ಪು ಮಾಡುವುದಿಲ್ಲ. 6 ಬಾರಿ ಶಾಸಕರಾಗಿದ್ದು, 7 ನೇ ಬಾರಿಯೂ ಗೆಲ್ಲುವ ವಿಶ್ವಾಸವಿದೆ.

*ಶಿಕ್ಷಣ ಕ್ಷೇತ್ರಕ್ಕೆ ಹೊಸ ದಿಕ್ಸೂಚಿ :*

ವಿಶ್ವೇಶ್ವರ ಹೆಗಡೆ ಕಾಗೇರಿಯವರು ಸಚಿವರಾಗಿ, ಸಭಾಧ್ಯಕ್ಷರಾಗಿ ಕೆಲಸ ನಿರ್ವಹಿಸಿದ್ದು, ಕರ್ತವ್ಯದ ಸಂಬಂಧವೇ ಹೊರತು ಎಂದು ತಮ್ಮ ಸ್ಥಾನದ ಅಹಂ ಎಂದೂ ಇರಲಿಲ್ಲ. ವಿಷಯಾಧಾರಿತ ಚರ್ಚೆಗಳಲ್ಲಿ ಗಟ್ಟಿತನವನ್ನು ತೋರಿದರೂ, ಸ್ನೇಹಕ್ಕೆ ಎಂದೂ ಕೊರತೆ ಮಾಡಿಲ್ಲ. ಸ್ಥಾನದ ಬಗ್ಗೆ ಯಾವ ಮೋಹವೂ ಇಲ್ಲ. ತಮಗೆ ವಹಿಸಿದ ಯಾವುದೇ ಕರ್ತವ್ಯವನ್ನು ಪ್ರಾಮಾಣಿಕವಾಗಿ ಕೆಲಸ ಮಾಡುವ ಪ್ರವೃತ್ತಿ  ಹಾಗೂ ಬದ್ಧತೆಯುವಳ್ಳವರು. ಬಸವರಾಜ ಹೊರಟ್ಟಿ ಹಾಗೂ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಶಿಕ್ಷಣ ಸಚಿವರಾಗಿ ಕರ್ತವ್ಯ ನಿರ್ವಹಿಸಿ, ಶಿಕ್ಷಣ ಕ್ಷೇತ್ರಕ್ಕೆ ಹೊಸ ದಿಕ್ಸೂಚಿಯನ್ನು ನೀಡಿದವರು. ಶ್ರೀಯುತರು ಕೇವಲ ಸಭಾಧ್ಯಕ್ಷರಾಗಿ ದುಡಿಯಬಹುದಾಗಿತ್ತು. ಆದರೆ ಮೌಲ್ಯಾಧಾರಿತ ಪ್ರಜಾಪ್ರಭುತ್ವ ಉಳಿಸುವ ಕಾರ್ಯವನ್ನು  ಮಾಡಿದವರು. ಶ್ರೀಯುತರು ಸಂವಿಧಾನದ ಆಶಯ, ಸಾಮಾಜಿಕ ನ್ಯಾಯ,  ಹಕ್ಕುಬಾಧ್ಯತೆ ಗಳ ಬಗ್ಗೆ, ಸಂವಿಧಾನದ ಎಲ್ಲ ರಂಗಗಳ ಬಗ್ಗೆ ಕರ್ತವ್ಯ ಪ್ರಜ್ಞೆ ಮೂಡಿಸುವ ಚಿಂತನ ಮಂಥನ ಕಾರ್ಯಕ್ರಮವನ್ನು ಮಾಡಿದರು.
 

 *ಸಭಾಧ್ಯಕ್ಷರಾಗಿ ಹಲವು ದಾಖಲೆಯ ಕಾರ್ಯಕ್ರಮಗಳು :*
ಚುನಾವಣೆಯಲ್ಲಿ ಸುಧಾರಣೆ, ಪಾರದರ್ಶಕತೆ, ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಜನರು ಭಾಗವಹಿಸಬೇಕು, ಪ್ರಭಾವ ರಹಿತ ಚುನಾವಣೆ ನಡೆಸುವಂತಾಗಬೇಕು ಎಂಬ ಬಗ್ಗೆ ಚರ್ಚೆ, ಒಂದು ದೇಶ ಒಂದು ಚುನಾವಣೆಗೆ ಒಲವು ತೋರಿದರು. ಪದೇ ಪದೇ ವಿವಿಧ ಸ್ತರಗಳಲ್ಲಿ ಚುನಾವಣೆಯಾಗುವುದರಿಂದ ವೆಚ್ಚಗಳು, ಪ್ರಗತಿ ಮೇಲೆ ವ್ಯತಿರಿಕ್ತ ಪರಿಣಾಮಗಳಾಗುತ್ತವೆ. ಜನಪ್ರತಿನಿಧಿಗಳು ಆತ್ಮಾವಲೋಕನ , ಜನಪ್ರತಿನಿಧಿಗಳ ಕರ್ತವ್ಯ, ಉತ್ತರದಾಯಿತ್ವ , ಜನರಿಗಾಗಿ ಇರುವ ನೀತಿಗಳ ಚರ್ಚೆ ನಡೆಸಿದರು. ಇಂತಹ ಹಲವು ದಾಖಲೆಯ ಕಾರ್ಯಕ್ರಮಗಳನ್ನು ಮಾಡಿದರು. ಸಭಾಧ್ಯಕ್ಷರಾಗಿ ಅತ್ಯಂತ ಕ್ರಿಯಾಶೀಲರಾಗಿ ,  ಶಾಸಕರಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಶಿವರಾಂ ಹೆಬ್ಬಾರ್ ವೂ ಸೇರಿದಂತೆ ಇಬ್ಬರ ಶ್ರಮದಿಂದ ಶಿರಸಿ ತಾಲ್ಲೂಕಿನ ಅಭಿವೃದ್ದಿ ಸಾಧ್ಯವಾಗುತ್ತಿದೆ.

ಈ ಸಂದರ್ಭದಲ್ಲಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಸಭಾಪತಿ ಬಸವರಾಜ ಹೊರಟ್ಟಿ, ಸಚಿವರಾದ ಶಿವರಾಮ್ ಹೆಬ್ಬಾರ್, ಸಿ.ಸಿ. ಪಾಟೀಲ್, ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ ಆರ್. ವಿ. ದೇಶಪಾಂಡೆ ಶಾಸಕರು ಮತ್ತಿತರ ಗಣ್ಯರು ಹಾಜರಿದ್ದರು.
[15/01, 4:10 PM] Cm Ps: *ಕುಮಟಾದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ :– ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*

ಉತ್ತರಕನ್ನಡ , ಜನವರಿ 15 : 

 ಕಾರವಾರದಲ್ಲಿ ವೈದ್ಯಕೀಯ ಕಾಲೇಜಿದೆ. ಕರಾವಳಿ ಘಟ್ಟದ ಮೇಲಿರುವ ತಾಲ್ಲೂಕುಗಳ ಜನರಿಗೆ ಅನುಕೂಲವಾಗುವಂತೆ ಕುಮಟಾ ಕ್ಷೇತ್ರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸಲು ತೀರ್ಮಾನಿಸಲಾಗಿದ್ದು, ಅವಶ್ಯವಿರುವ ಅನುದಾನಕ್ಕೆ ಮಂಜೂರಾತಿಯನ್ನು ನೀಡಲಾಗುವುದು. ಈ ಯೋಜನೆಗೆ ಶೀಘ್ರ ಅಡಿಕಲ್ಲು ಕಾರ್ಯಕ್ರಮ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಶಿರಸಿಯ ತಾಲ್ಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ  ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಕಾರ್ಯಕ್ರಮ ಹಾಗೂ ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ಸನ್ಮಾನ್ಯ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು  ಮಾತನಾಡಿದರು.

*ಶಿರಸಿಯಲ್ಲಿ  ಪರಿಸರ ವಿಶ್ವವಿದ್ಯಾಲಯ ಸ್ಥಾಪನೆ :*
ಶಿರಸಿಯಲ್ಲಿ ಭೂ ಕುಸಿತ, ಹಸಿರು ಪ್ರದೇಶ ವಿಸ್ತರಣೆ,  ಪಶ್ಚಿಮ ಘಟ್ಟ,ಪರಿಸರ ಸೂಕ್ಷ ವಲಯ, ವನ್ಯಜೀವಿಗಳ ಸಂರಕ್ಷಣೆ, ವನ ಮತ್ತು ಜನಗಳ ನಡುವೆ ಸಾಮರಸ್ಯದ ಸಂಬಂಧ, ಹಸಿರಿನಿಂದ ಜನರ ಆದಾಯ ಹೆಚ್ಚಳದ ಜೊತೆಗೆ ಪರಿಸರ ಸಂರಕ್ಷಣೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಅಧ್ಯಯನವನ್ನು ಸಾಧ್ಯವಾಗಿಸಲು ಪರಿಸರ ವಿಶ್ವವಿದ್ಯಾಲಯ ಸ್ಥಾಪಿಸಲಾಗುವುದು. ವಿಶ್ವವಿದ್ಯಾಲಯ ಸ್ಥಾಪನೆಗೆ ಅನುದಾನ, ರೂಪುರೇಷೆಗಳನ್ನು ಸಿದ್ಧಪಡಿಸಿ ಅಡಿಗಲ್ಲು ಹಾಕಲಾಗುವುದು ಎಂದು ಹೊಸ ತಂತ್ರಜ್ಞಾನ, ಡಿಜಟಲೀಕರಣ, ದೂರಶಿಕ್ಷಣ ವ್ಯವಸ್ಥೆ ಸೇರಿದಂತೆ ಹಲವು ಸೌಲಭ್ಯಗಳುಳ್ಳ ವಿಶ್ವವಿದ್ಯಾಲಯಗಳನ್ನು ರಾಜ್ಯದಲ್ಲಿ ಈಗಾಗಲೇ ಸ್ಥಾಪಿಸಲಾಗಿದೆ. ಈ ಭಾಗದಲ್ಲಿ ಅರಣ್ಯ, ತೋಟಗಾರಿಕಾ ಕಾಲೇಜುಗಳಿದ್ದು, ಇವುಗಳ ಮೂಲಸೌಕರ್ಯಗಳನ್ನು ಬಳಸಿಕೊಂಡು ಪರಿಸರ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗುವುದು. ಈ ಯೋಜನೆ ರಾಜ್ಯದಲ್ಲಿ ಪ್ರಥಮವಾಗಿದೆ.  ಪರಿಸರ ರಕ್ಷಣೆಯ ಅಧ್ಯಯನಕ್ಕೆ ಈ ಕಾಲೇಜು ಉಪಯುಕ್ತವಾಗಲಿದೆ. ಆಯವ್ಯಯದಲ್ಲಿ  ಹಸಿರು ಬಜೆಟ್ ಅಡಿಯಲ್ಲಿ 100 ಕೋಟಿ ಗಳನ್ನು ಮೀಸಲಿರಿಸಿದ್ದು, ಇದರಡಿ ಉತ್ತರ ಕರ್ನಾಟಕಕ್ಕೆ ಉಪಯೋಗವಾಗುವ ಕಾರ್ಯಕ್ರಮಗಳನ್ನು ಮಾಡಲಾಗುವುದು ಎಂದರು.

*ಅರಣ್ಯವಾಸಿಗಳ ರಕ್ಷಣೆ :*
800 ಕೋಟಿ ರೂ.ಗಳ  ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳು ನಡೆಯುತ್ತಿವೆ. ಇಲ್ಲಿನ ಜ್ವಲಂತ ಸಮಸ್ಯೆಗಳ ಬಗ್ಗೆ, ಅರಣ್ಯದಲ್ಲಿ ವಾಸಿಸುವವರ ಹಕ್ಕು ರಕ್ಷಣೆಗಾಗಿ , ಸುಪ್ರೀಂ ಕೋರ್ಟ್ ನಲ್ಲಿ ಈ ವಿಷಯವಿದ್ದು ಅಂತಿಮ ಹಂತದಲ್ಲಿದೆ, ರಾಜ್ಯದಿಂದ ಅಫಿಡವಿಟ್ ಸಲ್ಲಿಸಲಾಗಿದೆ. ಅರಣ್ಯವಾಸಿಗಳ ರಕ್ಷಣೆಗಾಗಿ ಕಾನೂನು ಚರ್ಚೆಗಳನ್ನು ನಡೆಸಿ,ಮತ್ತೊಂದು ಅಫಿಡೆವಿಟ್ ನ್ನು ಸಲ್ಲಿಸಲಾಗುವುದು.  ಅರಣ್ಯವಾಸಿಗಳನ್ನು ಒಕ್ಕಲ್ಲೆಬ್ಬಿಸುವ ಕೆಲಸವನ್ನು ಸರ್ಕಾರ ಮಾಡಲು ಬಿಡುವುದಿಲ್ಲ. ಈ ನಿಟ್ಟಿನಲ್ಲಿ ತೆಗೆದುಕೊಳ್ಳುವ ಯಾವುದೇ ರೀತಿಯ ಕ್ರಮಗಳನ್ನು ಅಧಿಕಾರಿಗಳು ನನ್ನ ಗಮನಕ್ಕೆ ತರಲೇಬೇಕೆಂದು ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಸಭಾಪತಿ ಬಸವರಾಜ ಹೊರಟ್ಟಿ, ಸಚಿವರಾದ ಶಿವರಾಮ್ ಹೆಬ್ಬಾರ್, ಸಿ.ಸಿ. ಪಾಟೀಲ್, ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ ಆರ್. ವಿ. ದೇಶಪಾಂಡೆ ಶಾಸಕರು ಮತ್ತಿತರ ಗಣ್ಯರು ಹಾಜರಿದ್ದರು.
[15/01, 4:12 PM] Cm Ps: *ಬಜೆಟ್ ನಲ್ಲಿ ಉತ್ತರ ಕರ್ನಾಟಕಕ್ಕೆ ಕೊಡುಗೆ: ಕಾದು ನೋಡಿ*: *ಸಿಎಂ ಬೊಮ್ಮಾಯಿ*

ಹುಬ್ಬಳ್ಳಿ, ಜನವರಿ 15: ಬಜೆಟ್  ಬಗ್ಗೆ ಇಲಾಖೆಗಳ ಚರ್ಚೆ ಪ್ರಾರಂಭವಾಗುತ್ತಿದೆ. ಪ್ರತಿ ಇಲಾಖೆಯ ನಂತರ ಸಂಘ ಸಂಸ್ಥೆಗಳೊಂದಿಗೆ ಚರ್ಚೆ ಮಾಡಲಾಗುವುದು. ಉತ್ತರ ಕರ್ನಾಟಕಕ್ಕೆ ಏನು ಕೊಡುಗೆ ನೀಡಲಾಗುವುದುದೆಂದು ಕಾದು ನೋಡಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. 

ಅವರು ಇಂದು ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. 

*ನಾಡಿನ ಜನತೆಗೆ ಸಿದ್ದಪ್ಪಜ್ಜನ ಆಶೀರ್ವಾದ*
ಸಿದ್ದಪ್ಪಜ್ಜ ಹುಬ್ಬಳ್ಳಿಯ ಆರಾಧ್ಯ ದೇವರು, ಪವಾಡ ಪುರುಷರು. ಬಾಲ್ಯದಿಂದಲೂ ಸಿದ್ದಪ್ಪಜ್ಜನ ಮಠಕ್ಕೆ ಬರುತ್ತಿದ್ದು, ಆಶೀರ್ವಾದ ಪಡೆಯುತ್ತಿದ್ದೆವು. ಸಂಕ್ರಮಣದ ಮೊದಲ ದಿನ ಸಿದ್ದಪ್ಪಜ್ಜ ದರ್ಶನ ಪಡೆದು ಆಶೀರ್ವಾದ ಪಡೆದಿದ್ದೇನೆ. ನಾಡಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿಕೊಂಡಿದ್ದೇನೆ. ಸಿದ್ದಪ್ಪಜ್ಜ ನಾಡಿನ ಜನತೆಗೆ ಆಶೀರ್ವಾದ ಮಾಡುತ್ತಾರೆ ಎಂಬ ನಂಬಿಕೆ ಇದೆ ಎಂದರು.
[15/01, 6:26 PM] Cm Ps: ತುಮಕೂರು ( *ತಿಪಟೂರು* ), ಜನವರಿ 15: *ಮಾನ್ಯ* *ಮುಖ್ಯಮಂತ್ರಿ ಶ್ರೀ ಬಸವರಾಜ* *ಬೊಮ್ಮಾಯಿ* ಅವರು *ನೊಳಂಬ ಲಿಂಗಾಯತ* ಸಂಘ (ರಿ) ಇವರ ವತಿಯಿಂದ ಶ್ರೀ *ಸಿದ್ಧರಾಮೇಶ್ವರ ಪಾಲಿಟೆಕ್ನಿಕ್* ಕಾಲೇಜು ಆವರಣದಲ್ಲಿ ಆಯೋಜಿಸಿರುವ “ಶ್ರೀ *ಗುರು* *ಸಿದ್ಧರಾಮೇಶ್ವರರವರ 850ನೇ* *ಸುವರ್ಣ ಜಯಂತಿ* *ಮಹೋತ್ಸವ”ದ ಸಮಾರೋಪ* ಸಮಾರಂಭದಲ್ಲಿ ಪಾಲ್ಗೊಂಡು *ಮಾತನಾಡಿದರು* .
[15/01, 8:42 PM] Cm Ps: *ಶೀಘ್ರದಲ್ಲೇ ಗಂಗಾಮತಸ್ತ ಸಮುದಾಯ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ: ಸಿಎಂ ಬೊಮ್ಮಾಯಿ*
ಹಾವೇರಿ (ರಾಣೀಬೆನ್ನೂರು), ಜನವರಿ 15: ಶೀಘ್ರಲ್ಲಿಯೇ ಗಂಗಾಮತಸ್ತ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ  ಸೇರ್ಪಡೆಗೊಳಿಸಲು ಕ್ರಮಕೈಗೊಳ್ಳಲಾಗಿದೆ ಎಂದು 
 ಮುಖ್ಯಮಂತ್ರಿ  ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠ (ರಿ) ವತಿಯಿಂದ ಸುಕ್ಷೇತ್ರ ನರಸೀಪುರದ  ಗುರುಪೀಠದಲ್ಲಿ ಆಯೋಜಿಸಿರುವ ಶ್ರೀ *ನಿಜಶರಣ* *ಅಂಬಿಗರಚೌಡಯ್ಯನವರ* *5ನೇ ಶರಣ ಸಂಸ್ಕøತಿ ಉತ್ಸವ* , ಹಾಗೂ ಶ್ರೀ ನಿಜಶರಣ *ಅಂಬಿಗರಚೌಡಯ್ಯನವರ 903ನೇ ಜಯಂತ್ಯುತ್ಸವ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ಈಗಾಗಲೇ ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ ಬಳಿ ಎಸ್.ಟಿ ಗೆ ಸೇರಿಸುವ ಕಡತವಿದ್ದು, ಕೇಂದ್ರ ಬುಡಕಟ್ಟು  ಸಚಿವ ಅರ್ಜುನ್ ಮುಂಡ ಅವರನ್ನು ಭೇಟಿಯಾಗಿ ಚರ್ಚಿಸಿದ್ದು, ಅಂತಿಮ ಘಟ್ಟದಲ್ಲಿದೆ. ಸಚಿವ ಸಂಪುಟದಲ್ಲಿ ಅನುಮೋದಿಸಲಾಗುವುದು.  ಅವರು ಕೇಳಿದ್ದ  ಕೆಲವು ವಿವರಣೆಗಳನ್ನು  ಕಳುಹಿಸಿಕೊಡಲಾಗಿದೆ. ಮಾತು ಕೊಟ್ಟಿದ್ದಂತೆ ಕೆಲಸ ಪ್ರಗತಿಯಲ್ಲಿದೆ. ಆದಷ್ಟು ಬೇಗನೆ  ಅನುಮೋದನೆ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

*ಒಗ್ಗಟ್ಟಿನಲ್ಲಿ ಬಲ*
28 ಉಪಕುಲಗಳನ್ನು ಒಟ್ಟು ಮಾಡುವ ಕೇಂದ್ರ. ಒಗ್ಗಟ್ಟಿನಲ್ಲಿ ಬಲವಿದೆ. ಈ ಮಠದ ಬೆಳವಣಿಗೆ ಈ ಕುಲದ ಬೆಳವಣಿಗೆಯೊಂದಿಗೆ ಸೇರಿದೆ. ಈ ಮಠದಿಂದ ಸ್ಫೂರ್ತಿ ಪಡೆಯಬೇಕಿದ್ದು, ಇದಕ್ಕೆ ಶಕ್ತಿ ತುಂಬುವ ಕೆಲಸವನ್ನು ಮಾಡುತ್ತೇವೆ. ಗುರುಕುಲ ನಿರ್ಮಾಣವಾಗುತ್ತಿದ್ದು, ಮಠಕ್ಕೆ 5 ಕೋಟಿ ರೂ.ಗಳನ್ನು ಈಗಾಗಲೇ ಬಿಡುಗಡೆ ಮಾಡಿದೆ. 15 ಕೋಟಿ ರೂ.ಗಳನ್ನು ಬಿಡುಗಡೆ ಮಾಡುವುದಾಗಿ  ಹೇಳಿದರು. ಹಿಂದುಳಿದ ಮಠಗಳಿಗೆ ಅನುದಾನ ಬಿಡುಗಡೆ ಮಾಡಿದಾಗಲೂ 2 ಕೋಟಿ ರೂ.ಗಳ ಮಂಜೂರಾತಿ ಆಗಿದೆ. ಅದನ್ನೂ ಕೂಡ ಬೇಗ ಬಿಡುಗಡೆ ಮಾಡಲಾಗುವುದು.ಇಲ್ಲಿನ ಮಠ ಹಾಗೂ ವಿದ್ಯಾರ್ಥಿ ನಿಲಯವಾಗಬೇಕು, ಜ್ಞಾನಾರ್ಜನೆ ಅನ್ನದಾಸೋಹವಾಗಬೇಕು. ಇದು ನಮ್ಮ ಶರಣರ ಪರಂಪರೆ ನಿತ್ಯ ನಿರಂತರವಾಗಿ ಮಠದಿಂದ ಆಗಬೇಕು. ಈ ಸಮಾಜ ಬೇರೆ ವೃತ್ತಿ ಗಳನ್ನು ಮಾಡುತ್ತಿದೆ. ಒಳನಾಡು ಮೀನುಗಾರಿಕೆಯನ್ನು ದೊಡ್ಡ ಪ್ರಮಾಣದಲ್ಲಿ ಮಾಡುತ್ತಿದೆ. ಕಾಲ ಬದಲಾಗಿದ್ದು, ನಾವೆಲ್ಲರೂ ಜ್ಞಾನಾರ್ಜನೆ ಮಾಡಿದಾಗ ಸಮಕಾಲೀನ ಸವಾಲುಗಳನ್ನು ಎದುರಿಸಬಹುದು. ಮಕ್ಕಳು. ಮುಂದುವರೆದು, ಇತರೆ ವೃತ್ತಿಗಳನ್ನು ಮಾಡಿದಾಗ ಈ ಗಂಗಾಮತಸ್ತ ಕುಲ ಮುಂದುವರೆಯುತ್ತದೆ. ಮಕ್ಕಳಿಗೆ  ವಿದ್ಯಾಭ್ಯಾಸ ಎಷ್ಟೇ ಕಷ್ಟವಿದ್ದರೂ ಓದಿಸಬೇಕು ಎಂದರು. ನಾವು ಗಂಗಾಮತಸ್ತ ಗುರುಗಳ ಭಕ್ತನಾಗಿ ಇಲ್ಲಿಗೆ ಬಂದಿದ್ದೇನೆ ಎಂದರು.  ಸಮುದಾಯ ಭವನಕ್ಕೆ ಬರುವ ಬಜೆಟ್ ನಲ್ಲಿ ಮೀಸಲಿಡಲಾಗುವುದು ಎಂದು ಭರವಸೆ ನೀಡಿದರು.

*ವಚನಗಳ ರಕ್ಷಣೆಯಲ್ಲಿ ಅಂಬಿಗರ ಚೌಡಯ್ಯ ಮಹತ್ವದ ಪಾತ್ರ :*
ಅಂಬಿಗರ ಚೌಡಯ್ಯ ಕಟುಸತ್ಯವನ್ನು ನುಡಿಯುವ ಶರಣರು. ಪ್ರಿಯವಾದ ಸತ್ಯ ಮತ್ತು ಸುಳ್ಳುಗಳಿರುವ ವ್ಯಾಖ್ಯಾನಗಳಿವೆ. ಸತ್ಯವೆಂದರೆ ಕಠೋರ. ಅಂಬಿಗರ ಚೌಡಯ್ಯ ಸತ್ಯವನ್ನು ಕಠಿಣ ಶಬ್ಧಗಳಲ್ಲಿ ಹೇಳುವಂತಹವರು .ಬಸವಣ್ಣನವರು ಇವರನ್ನು ನಿಜಶರಣೆರೆಂದು ಕರೆದರು. ಕಲ್ಯಾಣದಲ್ಲಿ ವೈಚಾರಿಕ ಕ್ರಾಂತಿಯಾಗುತ್ತದೆ ಎಂದು ನುಡಿದಿದ್ದರು. ಆಗ ವಚನಗಳ ರಕ್ಷಣೆ ಮುಖ್ಯವಾಗುತ್ತದೆ ಎಂದು ಹೇಳಿದ್ದು ನಿಜವಾಗಿದ್ದದಕ್ಕೆ ಅಂಬಿಗರ ಚೌಡಯ್ಯರನ್ನು ನಿಜಶರಣರೆಂದು ಕರೆದರು. ವಚನಗಳು ಇಂದಿಗೂ ನಮ್ಮ ನಡುವೆ ಜೀವಂತವಾಗಿರಲು ಏಕೈಕ ಕಾರಣ ಅಂಬಿಗರ ಚೌಡಯ್ಯ. ಒಂದು ಕುಲ ಅಥವಾ ಸಮಾಜದವರು ತಮ್ಮ ಸಂಸ್ಕಾರ, ಸಂಸ್ಕೃತಿ, ಇತಿಹಾಸ ಪರಂಪರೆಗಳನ್ನು ತಿಳಿದುಕೊಳ್ಳುವುದರಿಂದ ನಮ್ಮ ಭವಿಷ್ಯವನ್ನು ನಿರ್ಮಿಸಿಕೊಳ್ಳಬಹುದು. ಇಂತಹ ಶಿವಶರಣರ ಕುಲಕ್ಕೆ ತಾವುಗಳು ಸೇರಿದ್ದೀರಿ.ಅಂಬಿಗರು ಒಂದೇ ಹುಟ್ಟಿನಲ್ಲಿ ದಡ ಪಾರು ಮಾಡಿಸುವ ಶಕ್ತಿಯುಳ್ಳವರು. ಕೇವಲ ದೋಣಿಗಳನ್ನು ನಡೆಸುವುದು ಕಸುಬಲ್ಲ.  ಇಡೀ ಮಾನವಕುಲವನ್ನು ದಡ ಸೇರಿಸುವವರೇ ಅಂಬಿಗ ಚೌಡಯ್ಯ. ತಾಯಿಯ ಆಶೀರ್ವಾದದಲ್ಲಿ ಸಾತ್ವಿಕ ಚಿಂತನೆಯಿದೆ. ಇದೇ ನಮ್ಮನ್ನು ಒಳ್ಳೆಯ ಹಾದಿಯಲ್ಲಿ ನಡೆಸುತ್ತಿದೆ.
ಈ ಸಮಾಜ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಮುಂದೆ ಬರಬೇಕು. 21 ನೇ ಶತಮಾನದಲ್ಲಿ ಎಲ್ಲ ಸಮುದಾಯಗಳ ಆಶೋತ್ತರಗಳು ಹೆಚ್ಚಾಗಿದೆ. ತುಳಿತಕ್ಕೊಳಗಾದ ಸಮಾಜದವರು ಶಿಕ್ಷಣ ಪಡೆದು, ವಿವಿಧ ವೃತ್ತಿಯಲ್ಲಿ  ದುಡಿದು ಸ್ವಾಭಿಮಾನದ ಬದುಕನ್ನು ಬದುಕುವಂತಾಗಬೇಕು ಎಂದರು.
[15/01, 10:42 PM] Cm Ps: ಚಿಕ್ಕಬಳ್ಳಾಪುರ: ಇಶಾ ಫೌಂಡೇಶನ್ ವತಿಯಿಂದ ಏರ್ಪಡಿಸಿದ್ದ ಆದಿಯೋಗಿ ಪ್ರತಿಮೆ ಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಅನಾವರಣಗೊಳಿಸಿದರು.
ಈ ಸಂದರ್ಭದಲ್ಲಿ ಯೋಗಿ ಜಗ್ಗಿ ವಾಸುದೇವ ಹಾಗೂ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಹಾಜರಿದ್ದರು.
[16/01, 12:40 PM] Cm Ps: *ಪ್ರಿಯಾಂಕಾ ಗಾಂಧಿ ನಾಯಕಿ ಎಂದು ಸ್ವಯಂ ಘೋಷಿಸಿಕೊಳ್ಳುವ ಸ್ಥಿತಿ ಒದಗಿದೆ* *ಸಿಎಂ ಬೊಮ್ಮಾಯಿ*
ಹುಬ್ಬಳ್ಳಿ, ಜನವರಿ 16: ಪ್ರಿಯಾಂಕಾ ಗಾಂಧಿಗೆ ನಾನು ನಾಯಕಿ ಎಂದು ಸ್ವಯಂ ಹೇಳಿಕೊಳ್ಳುವ ಪರಿಸ್ಥಿತಿ ಅವರಿಗೆ ಬಂದಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. 

ಅವರು ಇಂದು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

 ರಾಜ್ಯಕ್ಕೆ ಅವರು ಬರುವ ಬಗ್ಗೆ ನಮ್ಮ ತಕರಾರಿಲ್ಲ. ಆದರೆ ಅವರ ಜಾಹೀರಾತಿನಲ್ಲಿ ನಾ ನಾಯಕಿ ಎಂದು ಹೇಳಿಕೊಂಡಿದ್ದಾರೆ. ಅವರನ್ನು ನಾಯಕಿ ಮಾಡಲು ಕರ್ನಾಟಕದ ಮಹಿಳೆಯರು ತಯಾರಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಹೀಗಾಗಿ ಅವರೇ ತಾವೇ ನಾ ನಾಯಕಿ ಎಂದು ಸ್ವಯಂ ಘೋಷಣೆ ಮಾಡಿಕೊಂಡಿದ್ದಾರೆ. ಮಹಿಳೆಯರಿಗಾಗಿ ಕಾಂಗ್ರೆಸ್ ಪ್ರತ್ಯೇಕ ಬಜೆಟ್ ಮಾಡುವ ಬಗ್ಗೆ ಪ್ರತಿಕ್ರಿಯೆ ನೀಡಿ 
ಅಧಿಕಾರಕ್ಕೆ ಬರುವುದಿಲ್ಲ ಎಂದು ಅವರಿಗೆ ಗೊತ್ತಿದೆ.  ಅದಕ್ಕೆ  ಏನು ಬೇಕಾದರೂ ಆಶ್ವಾಸನೆ ನೀಡುತ್ತಾರೆ ಎಂದರು. 

*ಕಾಂಗ್ರೆಸ್ ವಿನಾಶದ ಕನಸು ಕಾಣುತ್ತಿದೆ*
ಕಾಂಗ್ರೆಸ್ ಯುವಜನೋತ್ಸವವನ್ನು ವಿನಾಶೋತ್ಸವ  ಎಂದಿರುವ  ಬಗ್ಗೆ ಪ್ರತಿಕ್ರಿಯೆ ನೀಡಿ ಯಥಾ ಬುದ್ದಿ ತಥಾ  ಮಾತುಗಳು. ಕಾಂಗ್ರೆಸ್ ವಿನಾಶದ ಕನಸು ಕಾಣುತ್ತಿದೆ.  ಎಲ್ಲದರಲ್ಲಿಯೂ ವಿನಾಶವನ್ನೇ  ಕಾಣುತ್ತಿದೆ. ಒಳ್ಳೆಯ ಕೆಲಸಗಳನ್ನು ಮೆಚ್ಚುವುದು ಅವರಿಗೆ ತಿಳಿದಿಲ್ಲ. ಇತ್ತೀಚೆಗೆ ಅವರ ಭಾಷೆ, ಚಿಂತನೆ, ನಡವಳಿಕೆ ದೇಶದ ವಿಚಾರ, ರಾಜ್ಯದ ಪ್ರಗತಿ ಬಗ್ಗೆ ಕೀಳು ಮಟ್ಟದ ಮಾತುಗಳು ಹತಾಶ ಪರಿಸ್ಥಿತಿಯನ್ನು ವ್ಯಕ್ತಪಡಿಸುತ್ತದೆ .ಇದಕ್ಕೆ ಬಹಳ ಮಹತ್ವಕೊಡುವ ಅಗತ್ಯವಿಲ್ಲ ಎಂದರು.
[16/01, 12:42 PM] Cm Ps: *ಯುವಜನೋತ್ಸವ ಅರ್ಥಪೂರ್ಣ ವಾಗಿ ಜರುಗಿದೆ* *ಸಿಎಂ ಬೊಮ್ಮಾಯಿ*
ಹುಬ್ಬಳ್ಳಿ, ಜನವರಿ 16:  ಏಳು ದಿನಗಳ ಕಾಲ ಅದ್ಭುತವಾದ ಯುವಜನೋತ್ಸವ , ಅರ್ಥಪೂರ್ಣವಾಗಿ ಜರುಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

*ರಾಜ್ಯದ ಯುವಕರಿಗೆ ಸ್ಪೂರ್ತಿ*
ಇಂದು  ಸಮಾರೋಪ ಸಮಾರಂಭ ಜರುಗುತ್ತಿದೆ. ವಿವಿಧ ರಾಜ್ಯಗಳ ಕ್ರೀಡಾ ಪಟುಗಳು ಆಗಮಿಸಿ ತಮ್ಮ ಸಾಮರ್ಥ್ಯ ಪ್ರದರ್ಶಿಸಿ  ಅರ್ಥಪೂರ್ಣವಾಗಿ  ನಡೆಸಿಕೊಟ್ಟಿದ್ದಾರೆ. ಈ ಭಾಗದಲ್ಲಿ ಈ ರೀತಿಯ ಕಾರ್ಯಕ್ರಮಗಳಿಂದ  ಯುವಕರಿಗೆ ಸಾಧನೆ ಮಾಡಲು ಸ್ಪೂರ್ತಿ ದೊರೆಯಲಿದೆ.  ನಮ್ಮ ರಾಜ್ಯದ ಯುವ ನೀತಿಯಲ್ಲಿ ಶಿಕ್ಷಣ, ಉದ್ಯೋಗ,ಕ್ರೀಡೆ ಹಾಗೂ ಸಂಸ್ಕ್ರುತಿಗೆ ಮಹತ್ವ ನೀಡಲಾಗಿದೆ.  ಯುವಕರಿಗೆ ಎಲ್ಲಾ ರಂಗಗಳಲ್ಲಿ ಅವಕಾಶ ನೀಡಲಾಗಿದೆ. ಈ ವರ್ಷ ಗ್ರಾಮೀಣ ಕ್ರೀಡೆಗಳನ್ನು ಗ್ರಾಮ, ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯತ್ ಹಾಗೂ ರಾಜ್ಯ ಮಟ್ಟದಲ್ಲಿ ಏರ್ಪಡಿಸಿದ್ದು, ಕಬ್ಬಡ್ಡಿ, ಕುಸ್ತಿ, ಖೋ ಖೋ ಮುಂತಾದ ಗ್ರಾಮೀಣ ಸೊಗಡಿರುವ ಕ್ರೀಡೆಗಳನ್ನು ಪ್ರಥಮ ಬಾರಿಗೆ ರಾಜ್ಯದಲ್ಲಿ ಏರ್ಪಡಿಸಿ ಹೊಸ ಗ್ರಾಮೀಣ ಪ್ರತಿಭೆಗಳನ್ನು  ಗುರುತಿಸಿ ಅವಕಾಶ ನೀಡಲಾಗುತ್ತಿದೆ ಎಂದರು. 

*ಗಡ್ಕರಿಯವರಿಗೆ ಬೆದರಿಕೆ:* *ಸಂಪೂರ್ಣ ತನಿಖೆ*
ಹಿಂಡಲಗ ಜೈಲಿನಿಂದ ಕೇಂದ್ರ ಸಚಿವರಿಗೆ ಬೆದರಿಕೆ ಕರೆ ಹೋಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ತಪ್ಪಿಸಿಕೊಂಡಿರುವ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಸಂಪೂರ್ಣವಾಗಿ ತನಿಖೆ ಮಾಡಲಾಗುತ್ತಿದೆ. ಅದಕ್ಕಿಂತ ಮುಖ್ಯ ವಾಗಿ ಅವರ ಹಿನ್ನೆಲೆಯನ್ನು ಪರಿಶೀಲಿಸಲಾಗುತ್ತದೆ. ಎಂದರು.
[16/01, 1:45 PM] Cm Ps: *ರಾಜ್ಯ ಯುವನೀತಿಗೆ ಸ್ವಾಮಿ ವಿವೇಕಾನಂದರ ಸಂದೇಶವೇ ಪ್ರೇರಣೆ - ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*

ಧಾರವಾಡ, ಜನವರಿ 16 : 

ರಾಜ್ಯದ ಯುವನೀತಿಯಲ್ಲಿ ಶಿಕ್ಷಣ,ಕ್ರೀಡೆ,ಸಂಸ್ಕೃತಿ,ವ್ಯಕ್ತಿತ್ವ ವಿಕಸನಕ್ಕೆ ಆದ್ಯತೆ ನೀಡಲಾಗಿದ್ದು, ಸ್ವಾಮಿ ವಿವೇಕಾನಂದರ ಸಂದೇಶದಿಂದ ಪ್ರೇರಿತವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಕೃಷಿ ವಿವಿಯಲ್ಲಿ ಆಯೋಜಿಸಿದ್ದ 26 ನೇ ರಾಷ್ಟ್ರೀಯ ಯುವಜನೋತ್ಸವ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು,

ಕರ್ನಾಟಕ ಸರ್ಕಾರ  ಈ ವರ್ಷದಲ್ಲಿ ಸ್ವಾಮಿ ವಿವೇಕಾನಂದ ಯುವಶಕ್ತಿ ಸಂಘ ಯೋಜನೆಗಳನ್ನು  ರೂಪಿಸಲಾಗಿದ್ದು, ಆರ್ಥಿಕ ಸಹಾಯ, ಯೋಜನೆ ಹಾಗು ಮಾರುಕಟ್ಟೆ ವ್ಯವಸ್ಥೆ ಒದಗಿಸುವ ಮೂಲಕ 5 ಲಕ್ಷ ಯುವಕರಿಗೆ ಸ್ವಯಂ ಉದ್ಯೋಗ ನೀಡಲಾಗುತ್ತಿದೆ. ಅಮೃತ ಕ್ರೀಡಾ ಯೋಜನೆಯಡಿ 75 ಕ್ರೀಡಾ ಪಟುಗಳನ್ನು ದತ್ತ ಪಡೆದು ತರಬೇತಿ, ಶಿಕ್ಷಣ ನೀಡಲಾಗುತ್ತಿದೆ. ಗ್ರಾಮೀಣ ಕ್ರೀಡಾಕೂಟದ ಮೂಲಕ ಗ್ರಾಮೀಣ ಕ್ರೀಡಾ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.

*ಭಾರತೀಯರ ಹೃದಯ ಭಾರತ ಮಾತೆಗಾಗಿ ಮಿಡಿಯುತ್ತದೆ :*
ಯುವಜನ ಉತ್ಸವ ಯಶಸ್ವಿಯಾದ ಸ್ಮರಣೀಯ ಕಾರ್ಯಕ್ರಮವಾಗಿದೆ. ವಿಭಿನ್ನ ಪ್ರಾಂತ್ಯದಿಂದ ,ರಾಜ್ಯಗಳಿಂದ  ದೇಶದ ಮೂಲೆ ಮೂಲೆಗಳಿಂದ ಯುವಕರು ಬಂದಿದ್ದು,  ಅಲ್ಲಿನ ಸಂಸ್ಕೃತಿ ಜೀವನ ವಿಭಿನ್ನವಾಗಿದ್ದರೂ ಭಾರತೀಯರ ಹೃದಯ ಒಗ್ಗಟ್ಟಿನಿಂದ ಭಾರತ ಮಾತೆಗಾಗಿ ಮಿಡಿಯುತ್ತದೆ. ರಾಷ್ಟ್ರೀಯತೆ ನಮ್ಮೆಲ್ಲರನ್ನೂ ಜೋಡಿಸುತ್ತದೆ. ಮಾನವ ಭಾವುಕ ಜೀವಿ. ಭಾವುಕತೆ  ದೇಶವನ್ನು ಅಭಿವೃದ್ಧಿಗೊಳಿಸಲು ಇರಬೇಕು. ಬ್ರೀಟಿಷರಿಂದ ಭಾರತವನ್ನು ಸ್ವತಂತ್ರಗೊಳಿಸಲು  ದೇಶಕ್ಕಾಗಿ ಪ್ರಾಣ ನೀಡಬೇಕಾಗಿತ್ತು. ಆದರೆ ಈಗ ದೇಶಕ್ಕಾಗಿ ಜೀವವನ್ನು ನಡೆಸಬೇಕು. ಎಲ್ಲರ ಪ್ರಗತಿಯಲ್ಲಿ ದೇಶದ ಪ್ರಗತಿಯಿದೆ. ದೇಶ ಮತ್ತು ನಾವು ಪ್ರತ್ಯೇಕವಲ್ಲ. ಸಮಯ ಯಾರಿಗೂ ಕಾಯುವುದಿಲ್ಲ. ಆದ್ದರಿಂದ ಜೀವನದಲ್ಲಿ ಸಕ್ಷಮವಾಗಿರಲು ಈ ವೇಗವನ್ನು ಕಾಯ್ದುಕೊಳ್ಳಬೇಕು. ಗುರಿಯೆಡೆಗೆ ನಮ್ಮ ಲಕ್ಷ್ಯವಿರಬೇಕು. ಯುವ ಜೀವನ  ಸಂತೋಷ, ಪರಿಶ್ರಮದಿಂದ ಕೂಡಿರುತ್ತದೆ. ಯುವಜನರು ತಮ್ಮ ಶಕ್ತಿಯನ್ನು ಕನಸನ್ನು ಸಾಕಾರಗೊಳಿಸಲು, ಗುರಿಯನ್ನು ಸಾಧಿಸಲು ಬಳಸಬೇಕು ಎಂದರು.

*ಯುವಕರು ತಮ್ಮ ಗುರಿಯನ್ನು ಕಠಿಣ ಪರಿಶ್ರಮದಿಂದ ಸಾಧಿಸಬೇಕು :*
ಮೌಂಟ್ ಎವರೆಸ್ಟ್ ಮೊದಲು ಹತ್ತಿದವರು ಭಾರತದ ತೇನ್ ಸಿಂಗ್. ಕುರಿಗಾಹಿ ಕುಟುಂಬದವರಾಗಿದ್ದ ಅವರು ಪ್ರತಿದಿನ  ಕುರಿ ಕಾಯಲು ಶಿಖರದ ಬುಡಕ್ಕೆ ಅವನ ತಾಯಿ ಕರೆದೊಯ್ಯುತ್ತಿದ್ದರು. ಆ ಶಿಖರವನ್ನು ಹತ್ತಲು ಪ್ರೇರಣೆಯನ್ನು ನೀಡಿದರು. ತನ್ನ 42 ವಯಸ್ಸಿನಲ್ಲಿ ತೇನ್ ಸಿಂಗ್ ಮೌಂಟ್ ಎವರೆಸ್ಟ್ ಹತ್ತಿ ಭಾರತದ ಕೀರ್ತಿಯನ್ನು ಹೆಚ್ಚಿಸಿದರು. ಶಿಖರವನ್ನು ಏರುವುದು ಬಹಳ ಕಷ್ಟವಾದರೂ ತನ್ನ ಗುರಿಯನ್ನು  ಸಾಧಿಸಿದರು. ಇದು ಇಂದಿನ ಕನಸಲ್ಲ. ನಾನು ಹತ್ತು ವರ್ಷದ ಬಾಲಕನಾಗಿದ್ದಾಗಿನಿಂದಲೂ ನನ್ನ ಕನಸಾಗಿತ್ತು. ಯುವಕರು ತಮ್ಮ ಗುರಿಯನ್ನು ನಿಗದಿಪಡಿಸಿ, ಯಾವುದೇ ಕಷ್ಟ  ಬಂದರೂ, ಕಠಿಣ ಪರಿಶ್ರಮದಿಂದ ಸಾಧಿಸುವುದಾದಲ್ಲಿ ಯಾವುದೂ ಅಸಾಧ್ಯವಲ್ಲ. ಯುವಜನರು ಏನನ್ನು ಬೇಕಾದರೂ ಸಾಧಿಸಬಹುದು,  ಯಶಸ್ಸನ್ನು ಗಳಿಸಬಹುದು ಎಂದರು.

*40 % ಯುವಶಕ್ತಿಯೇ ಭಾರತದ ಶಕ್ತಿ :*

 ಭಾರತದ ಯುವಜನರ ಬುದ್ಧಿಮತ್ತೆ ಇತರ ದೇಶಗಳ ಯುವಜನರಿಗಿಂತ ಹೆಚ್ಚಿದೆ. ಭಾರತದ ಯುವಜನರ ಬುದ್ಧಿಮತ್ತೆ ಮೊದಲಿನಿಂದಲೂ ಹೆಚ್ಚಿದ್ದು, ಅದೇ ನಿಮ್ಮಶಕ್ತಿ. ಭಾರತದ ಸಂಸ್ಕಾರ, ಸಂಸ್ಕೃತಿ ಮತ್ತು ಜನಸಂಖ್ಯೆಯೇ ನಮ್ಮ ಶಕ್ತಿ. ಸ್ವಾತಂತ್ರ್ಯದ ಸಂದರ್ಭದಲ್ಲಿ ಜನಸಂಖ್ಯೆ ನಮ್ಮ ಬಹಳ ದೊಡ್ಡ ಸಂಕಷ್ಟವಾಗಿತ್ತು. ಮೊದಲು ಜನಸಂಖ್ಯೆಯನ್ನು ದೇಶದ ಅಭಿವೃದ್ಧಿಗೆ ಮಾರಕ ವೆಂದು ತಿಳಿದಿದ್ದರು. 40 % ಯುವಶಕ್ತಿಯೇ ಭಾರತದ ಶಕ್ತಿಯಾಗಿದೆ  ಎಂದರು.

*ಆತ್ಮನಿರ್ಭರ , ಆತ್ಮವಿಶ್ವಾಸದ ಭಾರತದ ನಿರ್ಮಾಣ :*

ಭಾರತದಂತಹ ಬೃಹತ್ ರಾಷ್ಟ್ರವು ನರೇಂದ್ರ ಮೋದಿಯವರ ಸಮರ್ಥ ನಾಯಕತ್ವದಲ್ಲಿ ಕೋವಿಡ್ ವಿಷಮ ಪರಿಸ್ಥಿತಿಯಲ್ಲಿಯೂ ಎಲ್ಲರಿಗೂ ಆಹಾರ,ಉದ್ಯೋಗ,ಲಸಿಕೆ ನೀಡುವಲ್ಲಿ ಯಶಸ್ವಿಯಾಗಿದೆ.ಶಿಕ್ಷಣದೊಂದಿಗೆ ಕೌಶಲ್ಯಾಭಿವೃದ್ಧಿಗೆ ಒತ್ತು ನೀಡಲಾಗಿದೆ.ಮುದ್ರಾ ಯೋಜನೆ,ಸ್ವನಿಧಿ ಯೋಜನೆಗಳ ಮೂಲಕ ಸ್ವ ಉದ್ಯೋಗಕ್ಕೆ ದೊಡ್ಡ ಪ್ರೋತ್ಸಾಹ ದೊರೆತಿದೆ. ಆತ್ಮನಿರ್ಭರ , ಆತ್ಮವಿಶ್ವಾಸದ ಭಾರತದ ನಿರ್ಮಾಣ ಸಾಧ್ಯವಾಗುತ್ತಿದೆ. ಏಕ ಭಾರತ ಶ್ರೇಷ್ಟ ಭಾರತ ಎಂಬ ಚಿಂತನೆಯಿಂದ ಭವಿಷ್ಯ ಭಾರತದ ನಿರ್ಮಾಣದಲ್ಲಿ ಪ್ರಧಾನಿ ಮೋದಿಯವರು ತೊಡಗಿದ್ದಾರೆ ಎಂದರು.

*ನಿಮ್ಮಭದ್ರ ಭವಿಷ್ಯದಿಂದ ದೇಶದ ಭವಿಷ್ಯವನ್ನು ಭದ್ರಗೊಳಿಸಬಹುದು:*

ಕ್ರೀಡೆ ಆಡುವುದರಲ್ಲಿ ಸೋಲಬಾರದು ಎಂದು ಆಡುವುದು , ಗೆಲ್ಲಲೇಬೇಕೆಂಬ ಆಕ್ರಮಣಕಾರಿಯಾಗಿ ಆಡಬೇಕು. ಕ್ರೀಡಾಪಟು ಗೆಲ್ಲಲೇಬೇಕೆಂದು ಆಡಬೇಕು. ಇಡೀ ಜೀವನ, ಯಶಸ್ಸು ನಿಮ್ಮ ಕೈಯಲ್ಲಿದೆ. ನಿಮ್ಮ ಭವಿಷ್ಯವನ್ನು ನೀವೇ ಬರೆದುಕೊಳ್ಳಿ. ಇದರಿಂದ ಭಾರತದ ಭವಿಷ್ಯವನ್ನು ಬರೆದಂತಾಗುತ್ತದೆ ಎಂದು ಮುಖ್ಯಮಂತ್ರಿಗಳು ಯುವಕರಿಗೆ ಕಿವಿಮಾತು ಹೇಳಿದರು. ಯುವಜನೋತ್ಸವ ಯಶಸ್ಸಿಗೆ ಭಾರತ ಸರ್ಕಾರ, ಕೇಂದ್ರ ಸಚಿವರು, ಕ್ರೀಡಾ ಮಂತ್ರಿಗಳು, ಅಧಿಕಾರಿಗಳು, ಧಾರವಾಡ ಜಿಲ್ಲಾ ಆಡಳಿತ, ನೆಹರೂ ಯುವಕ ಕೇಂದ್ರ, ಧಾರವಾಡದ ಸಂಘಸಂಸ್ಥೆಗಳು, ಸಾರ್ವಜನಿಕರಿಗೆ ವಿಶೇಷ ಅಭಿನಂದನೆಗಳನ್ನು ಸಲ್ಲಿಸಿದರು.
 
ಸಮಾರಂಭದಲ್ಲಿ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಯುವಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ಕೆ.ಸಿ.ನಾರಾಯಣಗೌಡ,ಗಣಿ,ಭೂವಿಜ್ಞಾನ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್,ಶಾಸಕರಾದ ಅರವಿಂದ ಬೆಲ್ಲದ,ಅಮೃತ ದೇಸಾಯಿ  ಮತ್ತಿತರರು ಉಪಸ್ಥಿತರಿದ್ದರು.
[16/01, 2:22 PM] Cm Ps: ಧಾರವಾಡ, ಜನವರಿ 16: *ಮಾನ್ಯ* *ಮುಖ್ಯಮಂತ್ರಿ ಶ್ರೀ* *ಬಸವರಾಜ  ಬೊಮ್ಮಾಯಿ* ಅವರು *ಕೃಷಿ ವಿವಿಯಲ್ಲಿ* ಆಯೋಜಿಸಿದ್ದ *26 ನೇ ರಾಷ್ಟ್ರೀಯ* *ಯುವಜನೋತ್ಸವ* *ಸಮಾರೋಪ ಸಮಾರಂಭದಲ್ಲಿ* ಪಾಲ್ಗೊಂಡು *ಮಾತನಾಡಿದರು.*

Post a Comment

Previous Post Next Post