[14/01, 2:14 PM] Kpcc official: ಸಿಎಂ @BSBommai ಅವರಿಗೆ "ಮೊಸಗಾರ" ಎಂಬ ಬಿರುದು ಸಿಕ್ಕಿದೆ.
ಇದನ್ನು ಕಾಂಗ್ರೆಸ್ ಹೇಳಿದ್ದಲ್ಲ, ಅವರ ಪಕ್ಷದ ಶಾಸಕರೇ ನೀಡಿದ ಬಿರುದು.
ಶಾಸಕರನ್ನೇ ಮೊಸಗೊಳಿಸುವ ಸಿಎಂಗೆ ಜನರನ್ನು ಮೊಸಗೊಳಿಸುವುದು ನೀರು ಕುಡಿದಷ್ಟು ಸುಲಭ!
ತಮ್ಮದೇ ಪಕ್ಷದ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ #PuppetCM ರಿಂದ ಇನ್ಯಾವ ಸಾಧನೆ ಸಾಧ್ಯ?
#BJPvsBJP
[14/01, 2:14 PM] Kpcc official: ರಾಜ್ಯ ಬಿಜೆಪಿ ಸರ್ಕಾರದ ಭವಿಷ್ಯ ಬಿಜೆಪಿ ನಾಯಕರ ಬಾಯಲ್ಲೇ ಕಾಣಿಸುತ್ತಿದೆ. ಈ ಭ್ರಷ್ಟ ಬಿಜೆಪಿ ಸರ್ಕಾರಕ್ಕೆ ಜನಾಭಿಪ್ರಾಯ ಇಲ್ಲ, ಮುಂದೆ ಅಧಿಕಾರಕ್ಕೆ ಬರುವುದೂ ಇಲ್ಲ ಎಂಬ ಸತ್ಯ ಅವರಿಗೂ ಗೊತ್ತಿದೆ.
ಡಬಲ್ ಇಂಜಿನ್ ಸರ್ಕಾರ ತನ್ನ ಕೊನೆಯ ದಿನಗಳನ್ನು ಎಣಿಸುತ್ತಿದೆ. #BJPvsBJP
[14/01, 2:14 PM] Kpcc official: ಕಪೋಲ ಕಲ್ಪಿತ 'ಚುನಾವಣಾ ಚಾಣಕ್ಯ'ನ ವಾಸ್ತವ ನಡವಳಿಕೆ ಬಿಜೆಪಿ ನಾಯಕರಿಗೇ ಗೊತ್ತಿದೆ.
ಕ್ರಿಮಿನಲ್ ಪ್ರಕರಣದಲ್ಲಿ ಜೈಲು ಸೇರಿ ಬಂದವರ ರೌಡಿಸಂ ವರ್ತನೆ ಸಹಜ. ನಾಯಕರೇ ರೌಡಿಗಳಾಗಿರುವಾಗ ಅವರ ಪಕ್ಷಕ್ಕೆ ರೌಡಿಗಳ ಸೇರ್ಪಡೆಯೂ ಸಹಜವೇ.
ಬಿಜೆಪಿ ಪಕ್ಷ ರೌಡಿಗಳ ಪಕ್ಷ ಎಂಬುದು ಅವರ ನಾಯಕರಿಂದಲೇ ಮತ್ತೊಮ್ಮೆ ಸಾಬೀತಾಗಿದೆ. #BJPvsBJP
[14/01, 2:14 PM] Kpcc official: ಆಪರೇಷನ್ ಕಮಲದ ಮೂಲಕ ಅಧಿಕಾರ ಪಡೆದ ಬಿಜೆಪಿ ನಿಜ ಬಣ್ಣ ದಿನೇ ದಿನೇ ಬಟಾ ಬಯಲಾಗುತ್ತಿದೆ! ವಾಮ ಮಾರ್ಗದ ಮೂಲಕ ಅಧಿಕಾರ ಪಡೆದ ಬಿಜೆಪಿ ತನ್ನದೇ ಪಕ್ಷದ ಶಾಸಕರ ಹೇಳಿಕೆಗಳಿಂದ ಪ್ರತಿ ದಿನ ಬೆತ್ತಲಾಗುತ್ತಿದೆ.
ರಾಜ್ಯದ ಜನ ಬಿಜೆಪಿ ಗೆ ಪಾಠ ಕಲಿಸಲು ಕಾಯ್ತಿತಿದ್ದಾರೆ! #BJPvsBJP
[14/01, 2:39 PM] Kpcc official: ಈ ಭ್ರಷ್ಟ ಬಿಜೆಪಿ ಸರ್ಕಾರಕ್ಕೆ ಜನಾಭಿಪ್ರಾಯ ಇಲ್ಲವೇ ಇಲ್ಲ. ಸ್ವಂತ ಶಕ್ತಿಯ ಮೇಲೆ ಗೆಲ್ಲುವ ಸಾಮರ್ಥ್ಯವೂ ಇಲ್ಲ.
ಆಪರೇಷನ್ ಕಮಲದಂತಹ ಅನಿಷ್ಟಗಳ ಮೂಲಕ ಸರ್ಕಾರ ಮಾಡುತ್ತೇವೆ ಎಂದು ಘಂಟಾಘೋಷವಾಗಿ ಲಜ್ಜೆಯಿಲ್ಲದೆ ಹೇಳಿಕೊಳ್ಳುವ ಪ್ರಪಂಚದ ಏಕೈಕ ಪಕ್ಷ ಬಿಜೆಪಿ. #BJPvsBJP
[14/01, 4:25 PM] Kpcc official: ಇದೇನಿದು ಹೊಸ ಸಂಗತಿ @BJP4Karnataka?
#BJPvsBJP ಕಿತ್ತಾಟದಲ್ಲಿ ಒಂದೊಂದೇ ರಹಸ್ಯ ಹೊರಬೀಳುತ್ತಿವೆ.
ಯತ್ನಾಳ್‌ರ ಕಾರುಚಾಲಕನ ಕೊಲೆ ನಡೆದಿದ್ದು ಯಾವಾಗ?
ಕೊಲೆ ಮಾಡಿದವರು ಯಾರು?
ಏಕೆ ಮುಚ್ಚಿ ಹಾಕಲಾಯ್ತು?
ಕೊಲೆಯ ಹಿಂದಿನ ರಹಸ್ಯವೇನು?
ಕೊಲೆಯ ತನಿಖೆ ಮಾಡಲಿಲ್ಲವೇಕೆ?
@BSBommai ಅವರೇ, ಈ ಗಂಭೀರ ವಿಷಯದ ಬಗ್ಗೆ ಉತ್ತರಿಸುವ ಹೊಣೆ ನಿಮ್ಮದು
[14/01, 4:25 PM] Kpcc official: ಚುನಾವಣೆ ಸಮೀಪಿಸುತ್ತಿದ್ದಂತೆಯೇ #BJPvsBJP ಕದನ ಜೋರಾಗಿ ಪಿಂಪ್, ನೀಚದಂತಹ ಪದಗಳು ಧಾರಾಳವಾಗಿ ಹೊರಬರುತ್ತಿವೆ.
ಡಿ.ಕೆ ಶಿವಕುಮಾರ್‌ರವರ ಬಗ್ಗೆ, ಸಿದ್ದರಾಮಯ್ಯನವರ ಬಗ್ಗೆ ಮನಬಂದಂತೆ ಮಾತನಾಡುವ @nalinkateel ಅವರೇ, ಎಲ್ಲಿದ್ದೀರಿ?
ಮುಳುಗುವ ಬಿಜೆಪಿಗೆ ಹುಲ್ಲುಕಡ್ಡಿ ಹುಡುಕುವ ಬದಲು ಲವ್ ಜಿಹಾದ್ ಹಿಂದೆ ಬಿದ್ದರೆ ಪಕ್ಷ ಉಳಿಯುವುದೇ!
[14/01, 5:32 PM] Kpcc official: ಕನಕಪುರದಲ್ಲಿ ಕನಕೋತ್ಸವದ ಅಂಗವಾಗಿ ಶನಿವಾರ ನಡೆದ ನೌಕರರ ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಮಾತುಗಳು...
[14/01, 5:36 PM] Kpcc official: ಮುಂಬರುವ ವಿಧಾನಸಭೆ ಚುನಾವಣೆ ಪ್ರಯುಕ್ತ ರಾಜ್ಯದ ಎಐಸಿಸಿಯಿಂದ ನೇಮಕವಾಗಿರು ಲೋಕಸಭಾ ಕ್ಷೇತ್ರವಾರು ಚುನಾವಣೆ ಉಸ್ತುವಾರಿಗಳಾಗಿ ನೇಮಕಗೊಂಡಿರುವ ನಾಯಕರ ಸಭೆ ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ನಡೆಯಿತು. ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ ಸಿ ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ್, ಕಾರ್ಯಾಧ್ಯಕ್ಷರಾದ ರಾಮಲಿಂಗಾ ರೆಡ್ಡಿ, ಸಲೀಮ್ ಅಹ್ಮದ್, ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ, ಧ್ರುವನಾರಾಯಣ್ ಮತ್ತಿತರರು ಭಾಗವಹಿಸಿದ್ದರು.
[14/01, 6:40 PM] Kpcc official: *ಕನಕಪುರದಲ್ಲಿ ನಡೆದ ಸರ್ಕಾರಿ ನೌಕರರ ಸಮಾವೇಶದಲ್ಲಿ ಡಿ.ಕೆ. ಶಿವಕುಮಾರ್ ಅವರ ಮಾತುಗಳು:*
ನಮ್ಮ ಕಾರ್ಯಕ್ರಮಕ್ಕೆ ಸಿಕ್ಕಿರುವ ಯಶಸ್ಸು ನೋಡಿ ಅದನ್ನು ಮಾದರಿಯಾಗಿ ಇಟ್ಟುಕೊಂಡು ಬೇರೆ ಬೇರೆ ಜಿಲ್ಲೆ ತಾಲೂಕುಗಳಲ್ಲಿ ಬೇರೆ ಬೇರೆ ರೀತಿ ಮಾಡಲಾಗುತ್ತಿದೆ.
ರಾಜಕಾರಣಿಗಳು ಕೇವಲ ಪಕ್ಷದ ಬಗ್ಗೆ ಮಾತ್ರ ಗಮನ ಹರಿಸದೇ ಅಧಿಕಾರಕ್ಕೆ ಬಂದಾಗ ಎಲ್ಲರನ್ನೂ ಸಮಾನವಾಗಿ ನೋಡಿಕೊಂಡು ಹೋಗಬೇಕು. ಈ ದೃಷ್ಟಿಯಿಂದ ಚಿಕ್ಕ ಮಕ್ಕಳಿಂದ ಹಿರಿಯರವರೆಗೆ, ದೇವಸ್ಥಾನದಲ್ಲಿ ಪೂಜೆ ಮಾಡುವವರಿಂದ ತಮಟೆ ಬಾರಿಸುವವರೆಗೆ, ಕೊಂಡ ಹಾಯುವವರಿಂದ ಸವಿತಾ ಸಮಾಜದವರಿಗೆ ಎಲ್ಲರಿಗೂ ಗೌರವ ನೀಡುವಂತೆ ಕನಕಪುರದ ಕನಕೋತ್ಸವ ರಾಜ್ಯದ ಇತಿಹಾಸ ಪುಟ ಸೇರಿದೆ.
ಈ ಕಾರ್ಯಕ್ರಮಕ್ಕೆ ನೀವೆಲ್ಲರೂ ಸಹಕಾರ ನೀಡಿದ್ದೀರಿ. ನಾನು ಆಗಾಗ್ಗೆ ಒಂದು ಮಾತು ಹೇಳುತ್ತಿರುತ್ತೇನೆ. ದೇವರು ನಮಗೆ ವರವನ್ನು ನೀಡಲ್ಲ, ಶಾಪವನ್ನು ನೀಡಲ್ಲ. ಆದರೆ ಕೇವಲ ಅವಕಾಶ ಮಾತ್ರ ನೀಡುತ್ತಾನೆ. ಆ ಅವಕಾಶವನ್ನು ಯಾವ ರೀತಿ ಬಳಸಿಕೊಳ್ಳುತ್ತೇವೆ ಎಂಬುದು ಮುಖ್ಯ. ನಾವು ಹೋಗುವಾಗ ಎಲ್ಲವನ್ನೂ ತೆಗೆದುಕೊಂಡು ಹೋಗುವುದಿಲ್ಲ. ಎಲ್ಲವನ್ನೂ ಬಿಟ್ಟು ಹೋಗಬೇಕು.
ಇಂದು ಇಲ್ಲಿ ಸರ್ಕಾರಿ ನೌಕರರು ಸೇರಿದ್ದೀರಿ. ಕನಕಪುರ ನಂಜುಡಪ್ಪ ವರದಿಯಲ್ಲಿ ಅತಿ ಹಿಂದುಳಿದ ತಾಲೂಕು ಪಟ್ಟಿಯಲ್ಲಿ, ಹನೂರು ನಂತರ ಕನಕಪುರ ಎರಡನೇ ಸ್ಥಾನದಲ್ಲಿತ್ತು. ಈಗ ಆ ಪರಿಸ್ಥಿತಿ ಇಲ್ಲ. ನಮ್ಮ ತಾಲೂಕಿನಲ್ಲಿ ಮಾಡಿರುವ ಸಂಪರ್ಕ, ಅಂತರ್ಜಲ ಹೆಚ್ಚಳ, ಕೆರೆ ಕಟ್ಟೆ ನಿರ್ಮಾಣ, ಪ್ರತಿ ಪಂಚಾಯ್ತಿಯಲ್ಲಿ ಒಂದು ವರ್ಷಕ್ಕೆ 2-5 ಕೋಟಿ ಖರ್ಚು ಮಾಡಿ ರಸ್ತೆ, ಚೆಕ್ ಡ್ಯಾಂ ಸೇರಿದಂತೆ ಅನೇಕ ಅಭಿವೃದ್ಧಿ ಮಾಡಿದ್ದೇವೆ.
ಯಾವುದೇ ಯೋಜನೆ ಇದ್ದರೂ ಅದನ್ನು ಕಾರ್ಯರೂಪಕ್ಕೆ ತಂದವರು ನೀವುಗಳು. ನೀವು ಕೊಟ್ಟ ಸಹಕಾರದಿಂದ ನರೇಗಾ ಯೋಜನೆ ಪರಿಣಾಮಕಾರಿ ಜಾರಿ ಮಾಡಿದ ತಾಲೂಕು ಎಂಬ ಹೆಸರು ಬಂದಿದೆ. ಒಂದೊಂದು ತಾಲೂಕು ಪಂಚಾಯ್ತಿಗೆ 5 ಕೋಟಿ ನೀಡಲಾಗಿದ್ದು ಇಲ್ಲಿ ದುರ್ಬಳಕೆ ಆಗಿದೆ ಎಂದು ಕೇಂದ್ರ ಸರ್ಕಾರ ತನಿಖಾ ತಂಡ ಕಳಿಸಿ ತನಿಖೆ ಮಾಡಿಸಿತ್ತು. ಅವರು ಇಲ್ಲಿ ಅಭಿವೃದ್ಧಿ ನೋಡಿ ಸುಮ್ಮನಾದರು.
ಈ ಸಮಯದಲ್ಲಿ ನನಗೆ ಅಕ್ಬರ್ ಹಾಗೂ ಬೀರಬಲ್ ಅವರ ಸಂಭಾಷಣೆ ನೆನಪಾಗುತ್ತದೆ. ಸತ್ಯಕ್ಕೂ ಸುಳ್ಳಿಗೂ ಎಷ್ಟು ಅನಂತರ ಇದೆ ಎಂದು ಅಕ್ಬರ್ ಕೇಳಿದಾಗ ಬೀರಬಲ್ ಕೇವಲ ನಾಲ್ಕು ಬೆರಳುಗಳ ಅಂತರ ಎಂದು ಹೇಳಿದ. ಅಂದರೆ ಕಣ್ಣಲ್ಲಿ ನೋಡುವುದು ಸತ್ಯ, ಕಿವಿಯಲ್ಲಿ ಕೇಳುವುದು ಸುಳ್ಳು. ಇವೆರಡರ ನಡುವೆ ನಾಲ್ಕು ಬೆರಳುಗಳ ಅಂತರವಿದೆ ಎಂದು ಉತ್ತರಿಸಿದ. ಅದೇರೀತಿ ಕನಕಪುರ ಕ್ಷೇತ್ರದಲ್ಲಿನ ಕೆಲಸ ಕಣ್ಣಲ್ಲಿ ನೋಡಬಹುದೇ ಹೊರತು, ಕೇವಲ ಕಿವಿಯಲ್ಲಿ ಕೆಳುವಂತಹದ್ದು ಏನೂ ಇಲ್ಲ.
ಪಾಲಿಕೆಯವರು ದಿನಬೆಳಗಾದರೆ ಸ್ವಚ್ಛತೆ ಕಾಪಾಡುತ್ತಾರೆ. ಪಿಡಬ್ಲ್ಯೂಡಿ, ಜಿಲ್ಲಾ ಪಂಚಾಯ್ತಿ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಬಹಳ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಾ ಬಂದಿದ್ದಾರೆ.
ಇಂಧನ ಇಲಾಖೆ ಲೈನ್ ಮ್ಯಾನ್ ಸಿಬ್ಬಂದಿ ಮೊದಲು ಲಂಚ ನೀಡಿ ವರ್ಗಾವಣೆ ಮಾಡಿಸಿಕೊಳ್ಳಲು ತೊಂದರೆ ಅನುಭವಿಸುತ್ತಿದ್ದರು. ನಾವು ಅದನ್ನು ನಿಲ್ಲಿಸುವ ಕೆಲಸ ಮಾಡಿದ್ದೇವೆ. ಬೆಂಗಳೂರಿಗೆ ಉದ್ಯೋಗ ಹುಡುಕಿ ಹೋಗುವುದನ್ನು ತಪ್ಪಿಸಲು ಹಾರೋಹಳ್ಳಿ ಕೈಗಾರಿಕಾ ಪ್ರದೇಶ ಸ್ಥಾಪಿಸಿ ವಿದ್ಯುತ್ ಸಂಪರ್ಕ ನೀಡಿದ್ದೇವೆ. ಅಲ್ಲಿ ಖಾಸಗಿ ಕೈಗಾರಿಕೆ ಸ್ಥಾಪನೆ ಆಗಿ ಉದ್ಯೋಗ ಸೃಷ್ಟಿ ಆಗಿವೆ.
ಕನಕಪುರದಲ್ಲಿ ಹುಟ್ಟಿ ಬೆಳೆದು ಬೇರೆ ಊರುಗಳಲ್ಲಿ ನೆಲೆಸಿರುವ ಸುಮಾರು 20 ಸಾವಿರ ಕುಟುಂಬಗಳು ನಾಳೆ ಇಲ್ಲಿಗೆ ಆಗಮಿಸುತ್ತಿದ್ದಾರೆ. ದೊಡ್ದ ವೃತ್ತಿಯಿಂದ ಸಣ್ಣ ಪುಟ್ಟ ವೃತ್ತಿ ಮಾಡುತ್ತಿರುವವರಿಗೆ ಸನ್ಮಾನ ಮಾಡಿ ಅವರಿಗೆ ಸಮಾನ ಗೌರವ ನೀಡಲಾಗುವುದು.
ಇನ್ನು ಕನಕಪುರದ ಡೈರಿ ನೀಡಿದ್ದೀರಿ. ಮೊನ್ನೆ ಅಮಿತ್ ಶಾ ಅವರು ರಾಜ್ಯಕ್ಕೆ ಬಂದು ನಂದಿನಿಯನ್ನು ಅಮೂಲ್ ಜತೆ ವಿಲೀನ ಮಾಡುತ್ತೇವೆ ಎಂದು ಹೇಳಿ ಹೋಗಿದ್ದಾರೆ. ಆದರೆ ಕನಕಪುರದ ಡೈರಿ ಅಮೂಲ್ ಡೈರಿಗಿಂತ ಅತ್ಯುತ್ತಮವಾಗಿದೆ. ನೀವು ನಿಮ್ಮ ಮಕ್ಕಳನ್ನು ಕರೆದುಕೊಂಡು ಅಲ್ಲಿಗೆ ಭೇಟಿ ನೀಡಿ ಅದನ್ನು ತೋರಿಸುವ ಕೆಲಸ ಮಾಡಬೇಕು. ನಮ್ಮ ರೈತರು ಅತಿ ಹೆಚ್ಚು ಹೈನುಗಾರಿಕೆ ಮಾಡುತ್ತಿದ್ದಾರೆ.
ಈ ಕ್ಷೇತ್ರದ ಜನ silk ಹಾಗೂ milk ಹೆಚ್ಚಿನ ಉತ್ಪಾದನೆ ಮಾಡುತ್ತಿದ್ದಾರೆ. ರೇಷ್ಮೆಯನ್ನು ಹೊರಗಡೆಯಿಂದ ಆಮದು ಮಾಡದೆ ಇಲ್ಲಿನ ರೈತರಿಗೆ ಆರ್ಥಿಕವಾಗಿ ಶಕ್ತಿ ತುಂಬಬೇಕು.
ಇಡೀ ರಾಜ್ಯಕ್ಕೆ ಅತಿ ಹೆಚ್ಚು ರೇಷ್ಮೆ ಉತ್ಪಾದನೆ ಮಾಡುವ ಕ್ಷೇತ್ರ ಕನಕಪುರ ಆಗಿದೆ. ಖಾಸಗಿ ಉದ್ಯೋಗಿಗಳು ಕೂಡ ಬಂದು ರೇಷ್ಮೆ ಬೆಳೆ ಬೆಳೆಯುತ್ತಿದ್ದಾರೆ. ನಾನು ಮಾದರಿ ಆಗಬೇಕು ಎಂದು ನನ್ನ ತಮ್ಮ ಕೂಡ ರೇಷ್ಮೆ ನೂಲು ತೆಗೆಯುವ ಸಣ್ಣ ಕೈಗಾರಿಕೆ ಸ್ಥಾಪನೆ ಮಾಡಿ ಇಲ್ಲಿನ ಜನರಿಗೆ ಉದ್ಯೋಗ ನೀಡಬೇಕು ಎಂದು ಮುಂದಾಗಿದ್ದಾರೆ.
ನಿಮ್ಮ ಬದುಕು ಹಸನಾಗಬೇಕು. ನಾವು ನಿಮ್ಮ ಜೇಬಿಗೆ ಹಣ ನೀಡದಿದ್ದರೂ ನಮ್ಮ ಅಭಿವೃದ್ಧಿ ಕಾರ್ಯದಿಂದ ನಿಮ್ಮ ಆಸ್ತಿ ಮೌಲ್ಯ ದುಪ್ಪಟ್ಟಾಗಿದೆ. ನೀವು ನಿಮ್ಮ ಆಸ್ತಿ ಮಾರಿಕೊಳ್ಳಬೇಡಿ. ನಾನು ಆರಂಭದಲ್ಲಿ ಬಂದಾಗ 2 ಲಕ್ಷ ಇದ್ದ ಬೆಲೆ ಈಗ 2 ಕೋಟಿ ಕೊಟ್ಟರೂ ಸಿಗುತ್ತಿಲ್ಲ. ಅಷ್ಟರ ಮಟ್ಟಿಗೆ ಅಭಿವೃದ್ಧಿ ಆಗಿದೆ. ನಿಮ್ಮ ತಾಲೂಕಿನ ಭವಿಷ್ಯ ನೀವೇ ನೋಡಿಕೊಳ್ಳಬೇಕು. ನಿಮ್ಮಂತೆ ನಾನು ಹಾಗೂ ಸುರೇಶ್ ಸರ್ಕಾರಿ ನೌಕರರೆಂದು ಭಾವಿಸಿ ನಿಮ್ಮ ಸೇವೆ ಮಾಡುತ್ತಿದ್ದೇವೆ.
ಕೋವಿಡ್ ಸಮಯದಲ್ಲಿ ನೀವು ಕೊಟ್ಟ ಸಹಕಾರ ನಾವು ಮರೆಯಲು ಸಾಧ್ಯವಿಲ್ಲ. ನಾನು ಸಾಕಷ್ಟು ಜನರಿಗೆ ಉದ್ಯೋಗ ಹಾಗೂ ಪೋಸ್ಟಿಂಗ್ ಕೊಡಿಸಿರಬಹುದು. ಆದರೆ ಯಾರಾದರೂ ಒಬ್ಬರು ಡಿ.ಕೆ. ಶಿವಕುಮಾರ್ ಹಾಗೂ ಸುರೇಶ್ ಗೆ ಕಮಿಷನ್ ಲಂಚ ನೀಡಿದ್ದೇನೆ ಎಂದು ಹೇಳಿದರೆ ಇಂದು ಈ ವೇದಿಕೆಯಲ್ಲಿ ರಾಜಕೀಯದಿಂದ ನಿವೃತ್ತಿ ಆಗುತ್ತೇನೆ.
ಬಿಜೆಪಿ ಅವರು ನಾನು ಲಂಚ ತಿಂದಿದ್ದೇನೆ ಎಂದು ನನ್ನ ವಿರುದ್ಧ ಕೇಸ್ ಹಾಕಿ ಕಿರುಕುಳ ನೀಡುತ್ತಿದ್ದಾರೆ. ನೀವು ನೋಡಿದಂತೆ ನಾನು ಎಂದಾದರೂ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದೇನಾ? ಯಾರಿಂದಲಾದರೂ ಒಂದು ರೂಪಾಯಿ ಲಂಚ ಕೇಳಿದ್ದೀನಾ? 35 ವರ್ಷಗಳಿಂದ ಈ ಕ್ಷೇತ್ರದ ಜನ ಜನ ನನ್ನನ್ನು ಸಾಕಿ ಬೆಳೆಸಿದ್ದೀರಿ. ಇಂದು ಕಾಂಗ್ರೆಸ್ ಪಕ್ಷದ ರಾಜ್ಯ ಅಧ್ಯಕ್ಷನಾಗಿದ್ದೇನೆ. ನಿಮ್ಮ ಹತ್ತಿರ ಅಲ್ಲದೆ ಬೇರೆ ಯಾರ ಬಳಿ ನಾನು ನನ್ನ ಸಂತೋಷ, ದುಃಖ, ನೋವು ಹೇಳಿಕೊಳ್ಳಲಿ?
ನಮ್ಮ ಜಿಲ್ಲೆ ಕೆಂಗಲ್ ಹನುಮಂತಯ್ಯ, ರಾಮಕೃಷ್ಣ ಹೆಗಡೆ, ದೇವೇಗೌಡರು, ಕುಮಾರಸ್ವಾಮಿ, ಪಕ್ಕದ ತಾಲೂಕಿನಿಂದ ಎಸ್.ಎಂ ಕೃಷ್ಣ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದೆ. ನಿಮ್ಮ ಕನಕಪುರದ ನಿಮ್ಮ ಪ್ರತಿನಿಧಿ ರಾಜ್ಯದಲ್ಲಿ ನಿಮ್ಮ ಕೈ ಬಲ ಪಡಿಸಿ ರಾಜ್ಯಕ್ಕೆ ಸೇವೆ ಮಾಡುವ ಶಕ್ತಿ ತುಂಬುವುದು ನಿಮ್ಮ ಕೈಯಲ್ಲಿದೆ.
ಎಲ್ಲಾ ಸಮುದಾಯದವರಿಗೆ ಜಾಗ ನೀಡಲು ನಾವು ಸ್ಥಳವನ್ನು ಗುರುತಿಸಿದ್ದೇವೆ. ಈ ಸರ್ಕಾರದ ವ್ಯವಸ್ಥೆಯಲ್ಲಿ ಬೇಕಾದಷ್ಟು ಸಮಸ್ಯೆ ಇವೆ. ಇನ್ನು 60 ದಿನ ಮಾತ್ರ ಈ ಸರ್ಕಾರ ಇರುತ್ತದೆ. ನಂತರ ನಿಮ್ಮ ಸರ್ಕಾರ ಅಧಿಕಾರಕ್ಕೆ ಬರಲಿದೆ.
ಸರ್ಕಾರಿ ನೌಕರರ ಭವನ ಬೇಕು ಎಂದು ನೀವು ಕೇಳಿದ್ದು, ಇದು ನಿಮ್ಮ ಭವನ ಅಲ್ಲ, ನಮ್ಮ ಭವನ. ಈ ಭವನಕ್ಕೆ ನಿವೇಶನ ನೀಡಿ ಅದನ್ನು ಕಟ್ಟಿಕೊಡುವುದು ಹೇಗೆ ಎಂದು ನನಗೆ ಗೊತ್ತಿದೆ.
ನಾನು ಈ ತಾಲೂಕಿನಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಅನುಮೋದನೆ ನೀಡಿದ್ದೆ. ನಾನು ಅಧಿಕಾರದಿಂದ ಕೆಳಗೆ ಇಳಿದ ತಕ್ಷಣ, ಸುಧಾಕರ್ ಅವರು ಅದನ್ನು ರದ್ದು ಮಾಡಿ ಚಿಕ್ಕಬಳ್ಳಾಪುರದಲ್ಲಿ ಕಟ್ಟಿದ್ದಾರೆ. ನಾನು ಬೇಕಾದಷ್ಟು ಹೋರಾಟ ಮಾಡಿದ್ದೇನೆ. ಹೀಗಾಗಿ ದಯಾನಂದ ಸಂಸ್ಥೆ ಜತೆ ಮಾತನಾಡಿ ಆಸ್ಪತ್ರೆ ಕಟ್ಟಿಸುತ್ತಿದ್ದೇವೆ. ಮುಂದೆ ಒಳ್ಳೆ ಕಾಲ ಬರಲಿದೆ.
ಸುರೇಶ್ ಅವರು ಇನ್ಫೋಸಿಸ್ ಅವರನ್ನು ಭೇಟಿ ಮಾಡಿ 50 ಕೋಟಿ ವೆಚ್ಚದಲ್ಲಿ ತಾಯಿ ಮಗು ಆಸ್ಪತ್ರೆ ನಿರ್ಮಾಣ ಆಗಿದೆ. ಅಲ್ಲಿ ಯಂತ್ರೋಪಕರಣಗಳು ಬರಬೇಕಿದೆ. ಹೀಗಾಗಿ ಅದರ ಉದ್ಘಾಟನೆ ಬಾಕಿ ಉಳಿದಿದೆ.
ಇನ್ನು ಶಿಕ್ಷಣಕ್ಕೆ ಜನ ವಲಸೆ ಹೋಗುವುದನ್ನು ತಪ್ಪಿಸಬೇಕು, ಪಂಚಾಯ್ತಿ ಮಟ್ಟದಲ್ಲಿ ಹೆಚ್ಚಿನ ಶಿಕ್ಷಣ ಸಂಸ್ಥೆ ಬರಬೇಕಿದೆ. ಇದಕ್ಕಾಗಿ ದೊಡ್ಡಲಹಳ್ಳಿ ಯಲ್ಲಿ 10 ಎಕರೆ ಜಮೀನು ಸೇರಿದಂತೆ 20-25 ಎಕರೆ ಜಮೀನು ದಾನ ನೀಡಿದ್ದೇವೆ.
ಇನ್ನು ಸರ್ಕಾರ ನೌಕರರಿಗೆ ಎನ್ ಪಿಎಸ್, ಒಪಿಎಸ್ ವಿಚಾರವಾಗಿ ರಾಜಸ್ಥಾನ ಹಾಗೂ ಹಿಮಾಚಲ ಪ್ರದೇಶದಲ್ಲಿ ನಮ್ಮ ಸರ್ಕಾರ ತೀರ್ಮಾನ ಕೈಗೊಂಡಿದೆ. ನಾವು ನಮ್ಮ ಪ್ರಣಾಳಿಕೆಯಲ್ಲಿ ಈ ವಿಚಾರವಾಗಿ ನಮ್ಮ ವಚನ ನೀಡುತ್ತೇವೆ.
ನಮ್ಮ ರಾಜ್ಯದಲ್ಲಿ ನೀಡುವ ತೀರ್ಮಾನ ರಾಷ್ಟ್ರಕ್ಕೆ ಮಾದರಿ ಆಗಲಿ.
ಕಾಂಗ್ರೆಸ್ ಪಕ್ಷದ ವತಿಯಿಂದ ಮಾಡಲಾಗಿರುವ ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡುವ ಗೃಹ ಜ್ಯೋತಿ ಯೋಜನೆ ನನಗಾಗಿ ಅಲ್ಲ. ಈ ರಾಜ್ಯದ ಜನರಿಗಾಗಿ. ಇದು ಕಾಂಗ್ರೆಸ್ ಪಕ್ಷದ ಮೊದಲ ಖಚಿತ ಘೋಷಣೆ.
ಒಂದು ಯೂನಿಟ್ ಗೆ 7.20 ರೂಪಾಯಿ ಇದ್ದು, 200 ಯೂನಿಟ್ ಗೆ ಸುಮಾರು 1500 ರೂಪಾಯಿ ಆಗಲಿದೆ. ಈ ಯೋಜನೆಗೆ ಬಿಜೆಪಿ ನಾಯಕರು ಟೀಕೆ ಮಾಡುತ್ತಿದ್ದಾರೆ. ಅವರು ಯಾವುದ್ಯಾವುದೋ ಆಶ್ವಾಸನೆ ನೀಡಿದ್ದು, ಯಾವುದೂ ಈಡೇರಿಲ್ಲ. ಸಿದ್ದರಾಮಯ್ಯ ಅವರ ಸರ್ಕಾರ ಬಂದಾಗ ನಾವು 169 ಆಶ್ವಾಸನೆ ನೀಡಿದ್ದು, ಅದರಲ್ಲಿ 159 ಈಡೆರಿಸಿದ್ದೆವಿ. ನಾನು ಇಂಧನ ಸಚಿವನಾಗಿ ಅಧಿಕಾರ ಸ್ವೀಕರಿಸಿದಾಗ ವಿದ್ಯುತ್ ಅಭಾವ ಇತ್ತು. ನಾನು ಅಧಿಕಾರದಿಂದ ಇಳಿಯುವ ಮುನ್ನ ಹೆಚ್ಚುವರಿ ವಿದ್ಯುತ್ ಉತ್ಪಾದನೆ ಮಾಡುತ್ತಿದ್ದೆವು.
ನಮ್ಮ ರಾಜ್ಯದಲ್ಲಿ 10 ಸಾವಿರ ಮೆಗವ್ಯಾಟ್ ವಿದ್ಯುತ್ ಹೆಚ್ಚಾಗಿ ಉತ್ಪಾದನೆ ಮಾಡಿದ್ದೆ. ವಿಶ್ವದ ಅತಿ ದೊಡ್ಡ ಸೋಲಾರ್ ಪಾರ್ಕ್ ಅನ್ನು ಪಾವಗಡದಲ್ಲಿ 13 ಸಾವಿರ ಎಕರೆಯಲ್ಲಿ ಮಾಡಿದ್ದೇವೆ.
ನಾನು ಚುನಾವಣೆ ಸಮಯದಲ್ಲಿ ರಾಜ್ಯ ಪ್ರವಾಸ ಮಾಡಬೇಕು. ನಾನು ಹೆಚ್ಚಾಗಿ ನಿಮ್ಮ ಬಳಿಗೆ ಬಂದು ಮತ ಕೇಳಲು ಸಾಧ್ಯವಿಲ್ಲ. ನೀವು ನಮಗೆ ಬೆಂಬಲ ನೀಡಿ.
ಸೋಮವಾರ ಪ್ರಿಯಾಂಕಾ ಗಾಂಧಿ ಅವರು ರಾಜ್ಯಕ್ಕೆ ಆಗಮಿಸುತ್ತಿದ್ದು, ನಾ ನಾಯಕಿ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಮಹಿಳೆಯರ ಸಬಲೀಕರಣಕ್ಕೆ ಏನು ಮಾಡಬಹುದು ಎಂಬ ಸಲಹೆಯನ್ನು ನೀವುಗಳು ನಮಗೆ ಕಳುಹಿಸಬಹುದು. ಪ್ರಿಯಾಂಕಾ ಗಾಂಧಿ ಅವರು ಕಾಂಗ್ರೆಸ್ ಪಕ್ಷ ಮಹಿಳೆಯರಿಗೆ ಯಾವ ರೀತಿ ಸಹಾಯ ಮಾಡಲಿದೆ ಎಂಬುದನ್ನು ಹೇಳಲಿದ್ದಾರೆ.
ಹೆಣ್ಣು ಕುಟುಂಬದ ಕಣ್ಣು. ಈ ದೇಶ, ರಾಜ್ಯಕ್ಕೆ ಹೆಣ್ಣು ಆಸ್ತಿ. ನಾವು ಈ ಭೂಮಿಯನ್ನು ತಾಯಿಗೆ ಹೋಲಿಸುತ್ತೇವೆ. ಶೇ.50ರಷ್ಟು ಜನಸಂಖ್ಯೆ ಇರುವ ಮಹಿಳೆಯರಿಗೆ ಶಕ್ತಿ ತುಂಬಬೇಕು, ಆರ್ಥಿಕ, ಸಾಮಾಜಿಕವಾಗಿ ಮೇಲೆತ್ತಲು ಹಲವು ಕಾರ್ಯಕ್ರಮ ಕೊಟ್ಟಿದ್ದೇವೆ.
ನಾವು ಘೋಷಣೆ ಮಾಡಿರುವ ಮೊದಲ ಕಾರ್ಯಕ್ರಮ ನಮಗಾಗಿ ಅಲ್ಲ. ನಿಮಗೆ ಹಾಗೂ ರಾಜ್ಯದ ಜನರಿಗಾಗಿ. ರಾಜ್ಯದ ಎಲ್ಲಾ ಕುಟುಂಬಕ್ಕೆ 200 ಯೂನಿಟ್ ಉಚಿತ ವಿದ್ಯುತ್ ನೀಡಲಾಗುವುದು.
7 ಕೆ.ಜಿ ಅಕ್ಕಿಯನ್ನು ಉಚಿತವಾಗಿ ನೀಡುವಾಗ ಎಲ್ಲಾ ಬಡವರಿಗೂ ನೀಡಿದ್ದೆವು. ಅದೇರೀತಿ ವಿದ್ಯುತ್ ಅನ್ನು ಎಲ್ಲರಿಗೂ ಉಚಿತವಾಗಿ ನೀಡಲಾಗುವುದು.
ಮೊದಲಿಗೆ ರಾಜ್ಯದ ಜನರ ಬದುಕಲ್ಲಿ ದೀಪ ಹಚ್ಚುವ ಉದ್ದೇಶದಿಂದ ಈ ಘೋಷಣೆ ಮಾಡಿ ಪ್ರಜಾಧ್ವನಿ ಯಾತ್ರೆ ಆರಂಭಿಸಿದ್ದೇವೆ. ಇದಕ್ಕೆ ನಿಮ್ಮೆಲ್ಲರ ಸಹಕಾರ ಆಶೀರ್ವಾದ ನಮಗಿರಲಿ.
[14/01, 6:48 PM] Kpcc official: ಮುಳಬಾಗಿಲು ನಾಗೇಶ್, ಜೆಡಿಎಸ್ ಮುಖಂಡ, ಮಾಜಿ ಎಂಎಲ್ಸಿ ವೈ.ಎಸ್.ವಿ ದತ್ತ, ಮೈಸೂರಿನ ಬಿಜೆಪಿ ಮುಖಂಡ, ಮೂಡ ಮಾಜಿ ಅಧ್ಯಕ್ಷ ಮೋಹನ್ ಕುಮಾರ್ ಅವರು ತಮ್ಮ ಬೆಂಬಲಿಗರ ಜತೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆದರು. ಕಾರ್ಯಾಧ್ಯಕ್ಷರಾದ ಸಲೀಮ್ ಅಹ್ಮದ್, ಧ್ರುವನಾರಾಯಣ್, ಹಿರಿಯ ಮುಖಂಡ ಡಾ. ಬಿ ಎಲ್ ಶಂಕರ್, ಮಾಜಿ ಎಂಎಲ್ಸಿ ರಮೇಶ್ ಬಾಬು ಮತ್ತಿತರ ಮುಖಂಡರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಡಿ ಕೆ ಶಿವಕುಮಾರ್, ಸಿದ್ದರಾಮಯ್ಯ ಅವರು ಮಾತನಾಡಿದರು.
[14/01, 8:22 PM] Kpcc official: "ಯತ್ನಾಳ್ ನಾಲಿಗೆ ಕತ್ತರಿಸಬೇಕಾಗುತ್ತದೆ" - ನಿರಾಣಿ
ಮೇಲೆ ರೌಡಿ ಮೋರ್ಚಾದ ಪ್ರಭಾವ ಪರಿಣಾಮಕಾರಿಯಾಗಿದೆ!
ಹೊಡಿ, ಬಡಿ, ಕಡಿ, ಕತ್ತರಿಸು..
ಇದೇ ಬಿಜೆಪಿಯ ಅಸಲಿ ರೌಡಿ ಸಂಸ್ಕೃತಿ
ನಿತ್ಯ ಬೀದಿ ಜಗಳ ಮಾಡಿಕೊಂಡಿರುವ
ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ಬೇಕಿಲ್ಲ, ಬಿಜೆಪಿಯೇ ಬಿಜೆಪಿಯನ್ನು ಸೋಲಿಸಲಿದೆ!
ಜೊತೆಗೆ @nalinkateel ಸಹ!
#BJPvsBJP
[14/01, 8:22 PM] Kpcc official: ಬಿಜೆಪಿ ಕಾರ್ಯಕರ್ತನಾಗಿ "ಸಮಾಜಸೇವೆ" ಮಾಡ್ತಿದ್ದ ಸ್ಯಾಂಟ್ರೋ ರವಿ ಬಿಜೆಪಿಯಿಂದ MLC ಆಗುವ ತಯಾರಿಯೂ ನಡೆಸಿದ್ದನಂತೆ!
ಬಿಜೆಪಿ ಟಿಕೆಟ್‌ಗೆ ಬೇಕಿರುವ ಮಾನದಂಡದಲ್ಲಿ ಆತ ಸಂಪೂರ್ಣ ಅರ್ಹತೆ ಹೊಂದಿದ್ದಾನೆ!
ಸಿಎಂ @BSBommai ಅವರ ಕೃಪೆಯೂ ಇದೆ.
Dear @BJP4Karnataka,
ಸಮಾಜಸೇವೆ ಕೋಟಾದಡಿ ಸ್ಯಾಂಟ್ರೋ ರವಿಯ MLC ಟಿಕೆಟ್ ರೆಡಿಯಾಗಿದೆಯೇ?
[14/01, 8:22 PM] Kpcc official: ಯತ್ನಾಳ್ ಅವರ ವಾಗ್ದಾಳಿ 👇
>ಯಡಿಯೂರಪ್ಪನವರ ವಿರುದ್ಧ
>ಸಿಎಂ ಬೊಮ್ಮಾಯಿ ವಿರುದ್ಧ
>ನಿರಾಣಿ ವಿರುದ್ಧ
>ಸ್ವತಃ ತಮ್ಮದೇ ಸರ್ಕಾರದ ವಿರುದ್ಧ
ಇವರೆಲ್ಲರ ಮೇಲೆ ಆರೋಪಿಸಿದ, ಟೀಕಿಸಿದ, ಕಟು ಪದ ಪ್ರಯೋಗ ಮಾಡಿದ ಯತ್ನಾಳರಿಗೆ ಕನಿಷ್ಠ ನೋಟಿಸ್ ಕೂಡ ನೀಡದಿರುವುದೇಕೆ @BJP4Karnataka?
ಇದೆಲ್ಲವೂ "ಸಂತೋಷ"ಕ್ಕಾಗಿ ಆಡುತ್ತಿರುವ ಆಟವೇ?
#BJPvsBJP
[14/01, 8:46 PM] Kpcc official: *ನಾಗೇಶ್, ವೈಎಸ್ವಿ ದತ್ತಾ, ಮೋಹನ್ ಕುಮಾರ್ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಡಿ.ಕೆ. ಶಿವಕುಮಾರ್ ಅವರ ಮಾತುಗಳು:*
ಸಂಕ್ರಮಣ, ರೈತರ ಬದುಕು ಶುಭಾರಂಭವಾಗುವ ಪವಿತ್ರ ದಿನ ನಾವೆಲ್ಲ ಪವಿತ್ರ ಕಚೇರಿಯಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮಕ್ಕೆ ಸೇರಿದ್ದೇವೆ.
ಬಿಜೆಪಿ ಸರಕಾರದ ದುರಾಡಳಿತದಿಂದ ರಾಜ್ಯದಲ್ಲಿ ಅತಂತ್ರ ಸ್ಥಿತಿ ಎದುರಾಗಿದೆ. ಆಡಳಿತ ಪಕ್ಷದ ಮೇಲೆ ಜನರ ವಿಶ್ವಾಸ ಕಡಿಮೆ ಆಗುತ್ತಿದೆ. ಬೇರೆ ಪಕ್ಷಗಳ ಅನೇಕ ನಾಯಕರು ಕಾಂಗ್ರೆಸ್ ಸೇರಲು ಮುಂದೆ ಬಂದಿದ್ದಾರೆ.
ಬಿಜೆಪಿಗೆ ಸರ್ಕಾರ ನಡೆಸಲು, ಜನರಿಗೆ ಉತ್ತಮ ಆಡಳಿತ ನೀಡಲು ಆಗುತ್ತಿಲ್ಲ. ಜನ ನಿತ್ಯ ನೋವು ಅನುಭವಿಸುತ್ತಿದ್ದಾರೆ ಎಂದು ಇಂದು ಅನೇಕ ನಾಯಕರು ಕಾಂಗ್ರೆಸ್ ಸೇರಲು ನಿರ್ಧರಿಸಿದ್ದಾರೆ.
ಬಿಜೆಪಿ ಸೇರಿದವರು, ಬಿಜೆಪಿಯಲ್ಲಿ ಇರುವ ಬಹಳ ನಾಯಕರು ಒಳಗೊಳಗೇ ಅನೇಕ ಚರ್ಚೆ ಮಾಡುತ್ತಿದ್ದು, ಆ ಬಗ್ಗೆ ನಾನು ಈಗ ಮಾತನಾಡುವುದಿಲ್ಲ.
ಇಂದು ಮೂವರು ಪ್ರಮುಖ ನಾಯಕರು ಕಾಂಗ್ರೆಸ್ ಸೇರಲು ಬಂದಿದ್ದಾರೆ. ಜೆಡಿಎಸ್ ಪಕ್ಷದಲ್ಲಿ ನಾಯಕರಾಗಿದ್ದ ವೈಎಸ್ ವಿ ದತ್ತಾ ಅವರು, ಬಿಜೆಪಿ ಸಹ ಸದಸ್ಯರಾಗಿ, ಮಂತ್ರಿಯಾಗಿ ಕೆಲಸ ಮಾಡಿದ್ದ ಹಾಲಿ ಶಾಸಕ ನಾಗೇಶ್ ಕಾಂಗ್ರೆಸ್ ಪಕ್ಷದ ಸಹ ಸದಸ್ಯರಾಗಿ ವಿಧಾನಸಭೆಯಲ್ಲಿ ಸ್ಥಾನ ಪಡೆಯಲಿದ್ದಾರೆ.
ಇವರಿಗೆ ಕಾಂಗ್ರೆಸ್ ಪಕ್ಷದ ಸಹ ಸದಸ್ಯತ್ವ ನೀಡುತ್ತಿದ್ದೇವೆ.
ಇನ್ನು ದತ್ತಾ ಅವರನ್ನು ಕಳೆದ 48 ವರ್ಷಗಳಿಂದ ನಾನು ಬಲ್ಲೆ. ದತ್ತಾ ಅವರು ಪಾಠ ಮಾಡುವಾಗ ನಾನು ನ್ಯಾಷನಲ್ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದೆ. ಬಾಲ್ಯದಿಂದ ನಾವು ಆತ್ಮೀಯರು. ಅನೇಕ ಸಂಘಟನೆಯಲ್ಲಿ ಒಟ್ಟಿಗೆ ಕೆಲಸ ಮಾಡಿದ್ದೇವೆ. ಅವರು ಕಡೂರು ಕ್ಷೇತ್ರದಿಂದ 2 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಜೆಡಿಎಸ್ ಪಕ್ಷದ ವಿವಿಧ ಹುದ್ದೆಗಳ ನಿರ್ವಹಣೆ ಮಾಡಿದ್ದಾರೆ. ಅವರು ರಾಜ್ಯ ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.
ಜನತಾದಳದಲ್ಲಿ ಭವಿಷ್ಯ ಇಲ್ಲ ರಾಜ್ಯಕ್ಕೆ ಒಳ್ಳೆಯದಾಗಲಿ ಎಂದು ರಾಹುಲ್ ಗಾಂಧಿ ಅವರ ಶ್ರಮ, ಮಲ್ಲಿಕಾರ್ಜುನ ಖರ್ಗೆ ಅವರ ನಾಯಕತ್ವ ಗಮನದಲ್ಲಿ ಇಟ್ಟುಕೊಂಡು ನಮ್ಮ ಪಕ್ಷಕ್ಕೆ ಸೇರುತ್ತಿದ್ದು, ಅವರನ್ನು ತುಂಬು ಹೃದಯದಿಂದ ಸ್ವಾಗತಿಸುತ್ತೇನೆ.
ಇವರಿಬ್ಬರ ಜತೆಯಲ್ಲಿ ಹಲವು ಪ್ರಮುಖ ನಾಯಕರು ಪಕ್ಷ ಸೇರುತ್ತಿದ್ದು, ಅವರನ್ನು ಪಕ್ಷಕ್ಕೆ ಸ್ವಾಗತಿಸುತ್ತೇನೆ.
ಇವರೆಲ್ಲರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಮುನ್ನ ಪಕ್ಷದ ಸ್ಥಳೀಯ ಮುಖಂಡರ ಜತೆ ಚರ್ಚೆ ಮಾಡಿದ್ದೇವೆ. ಪಕ್ಷ ತನ್ನ ನಾಯಕರು ಹಾಗೂ ಕಾರ್ಯಕರ್ತರನ್ನು ವಿಸ್ತರಿಸಿಕೊಳ್ಳುತ್ತಿದೆ.
ಇನ್ನು ಮೈಸೂರಿನ ಮೂಡಾ ಅಧ್ಯಕ್ಷರಾಗಿ ಕೆಲಸ ಮಾಡಿರುವ ಮೋಹನ್ ಅವರು ಈ ಹಿಂದೆ ಕಾಂಗ್ರೆಸ್ ಪಕ್ಷದ ಪದಾಧಿಕಾರಿ ಯಾಗಿದ್ದರು. ಅವರು ಕೂಡ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ ಆಗುತ್ತಿದ್ದಾರೆ.
ಕೋಲಾರ ಯುವ ಜನತಾದಳದ ಅಧ್ಯಕ್ಷರಾಗಿ ಕೆಲಸ ಮಾಡಿದ ದಯಾನಂದ್ ಅವರು ಪಕ್ಷಕ್ಕೆ ಆಗಮಿಸುತ್ತಿದ್ದಾರೆ. ಅವರನ್ನು ನಾನು ಸ್ವಾಗತಿಸುತ್ತೇನೆ.
ಇದು ಆರಂಭ. ಇನ್ನು ಮುಂದೆ ಪ್ರತಿವಾರ ಅಥವಾ ಮೂರು ದಿನಕ್ಕೆ ಒಂದೊಂದು ದಿನ ಪಕ್ಷ ಸೇರ್ಪಡೆ ಕಾರ್ಯಕ್ರಮ ಇಟ್ಟುಕೊಳ್ಳಲಾಗುವುದು.
ರಾಜ್ಯದಲ್ಲಿ ಕಾಂಗ್ರೆಸ್ ಪರ್ವ ಆರಂಭವಾಗಿದ್ದು, ರಾಜ್ಯದ ಜನ ಈಗಾಗಲೇ ತಮ್ಮ ನಿರ್ಧಾರ ಮಾಡಿದ್ದಾರೆ. ಕಾಂಗ್ರೆಸ್ ನಿರೀಕ್ಷೆಗೂ ಮೀರಿ ರಾಜ್ಯದಲ್ಲಿ ಅತಿ ಹೆಚ್ಚು ಸ್ಥಾನ ಗೆದ್ದು ಸ್ವಂತ ಬಲದಿಂದ ಅಧಿಕಾರ ಪಡೆಯಲಿದೆ.
ನಾಗೇಶ್ ಅವರು ಹಾಲಿ ಶಾಸಕರು. ಬಿಜೆಪಿಯಲ್ಲಿ ಇದ್ದುಕೊಂಡು ಕಾಂಗ್ರೆಸ್ ಪಕ್ಷದ ಕಡೆ ನೋಡಿದ್ದಾರೆ ಎಂದರೆ ಅವರ ಅನುಭವ, ಲೆಕ್ಕಾಚಾರ ಕೆಲಸ ಮಾಡಿದೆ. ಇನ್ನು ದತ್ತಾ ಅವರಿಗೆ ಜನರ ನಾಡಿ ಮಿಡಿತ ಗೊತ್ತಿದೆ. ಅವರಿಗೆ ತಮ್ಮದೇ ಆದ ಅನುಭವವಿದೆ. ದಳದ ಪರಿಸ್ಥಿತಿ ಗೊತ್ತಿದೆ. ಈ ಎಲ್ಲ ನಾಯಕರು ಯಾವುದೇ ಷರತ್ತು ಇಲ್ಲದೇ ಪಕ್ಷ ಸೇರ್ಪಡೆಯಾಗುತ್ತಿದ್ದಾರೆ.
ಕಾಂಗ್ರೆಸ್ ಪಕ್ಷ ಬೇರೆ ನಾಯಕರ ಷರತ್ತು ಒಪ್ಪಿ ಯಾರನ್ನೂ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ. ಯಾರು ಬೇಷರತ್ತಾಗಿ ಕಾಂಗ್ರೆಸ್ ಕಾರ್ಯಕರ್ತರಾಗಿ ಕೆಲಸ ಮಾಡಲು ಬಯಸುತ್ತಾರೆ ಅಂತಹವರನ್ನು ಮಾತ್ರ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತೇವೆ. ಪಕ್ಷ ಅವರ ಅರ್ಹತೆಗೆ ತಕ್ಕಂತೆ ಪಕ್ಷ ಅವರಿಗೆ ಸ್ಥಾನಮಾನ ನೀಡಲಿದೆ. ವ್ಯಕ್ತಿಗಿಂತ ನಮಗೆ ಪಕ್ಷ ಮುಖ್ಯ. ನಾವು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಎಲ್ಲಾ ರೀತಿಯ ಲೆಕ್ಕಾಚಾರ ಮಾಡಿ ನಾವು ಚುನಾವಣೆಯಲ್ಲಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುತ್ತೇವೆ.
ಇಂದು 28 ಲೋಕಸಭಾ ಕ್ಷೇತ್ರದ ವೀಕ್ಷಕರ ಜತೆ ಸಭೆ ಮಾಡಿದ್ದೇವೆ.
ನಮಗೆ ಸಮಯದ ಅಭಾವವಿದೆ. ನಾಡಿದ್ದು ಪ್ರಿಯಾಂಕಾ ಗಾಂಧಿ ಅವರು ರಾಜ್ಯಕ್ಕೆ ಆಗಮಿಸುತ್ತಿದ್ದು, ನಾ ನಾಯಕಿ ಸಮಾವೇಶ ನಡೆಯಲಿದೆ. ಇದು ಮಹಿಳೆಯರ ಸಮಾವೇಶ. ವೇದಿಕೆ ಮೇಲೆ ಮಹಿಳೆಯರಿಗೆ ಮಾತ್ರ ಅವಕಾಶ ನೀಡಿ ನಾವುಗಳು ವೇದಿಕೆ ಕೆಳಗೆ ಇರುತ್ತೇವೆ. ಈ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಮಾತ್ರ ಅವಕಾಶವಿದೆ. ನಂತರ ನಮ್ಮ ಪ್ರಜಾಧ್ವನಿ ಯಾತ್ರೆ ಆರಂಭವಾಗಲಿದೆ. ಕಾರ್ಯಕರ್ತರೇ ನಮ್ಮ ಆಧಾರಸ್ತಂಭ. ಕಾರ್ಯಕರ್ತರು ಇಲ್ಲದೆ ನಾವ್ಯಾರು ನಾಯಕರಿಲ್ಲ.
[14/01, 8:50 PM] Kpcc official: *ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರ ಮಾತುಗಳು:*
ಇಂದು ವೈಎಸ್ ವಿ ದತ್ತಾ, ನಾಗೇಶ್, ಮೋಹನ್ ಕುಮಾರ್ ಹಾಗೂ ದಯಾನಂದ ಅವರನ್ನು ಪಕ್ಷಕ್ಕೆ ಸ್ವಾಗತ ಮಾಡಿಕೊಳ್ಳಲಾಗಿದೆ. ನಾನು ಕೂಡ ಅವರಿಗೆ ಪಕ್ಷಕ್ಕೆ ಹಾರ್ದಿಕ ಸ್ವಾಗತ ಬಯಸುತ್ತೇನೆ.
ಕಾಂಗ್ರೆಸ್ ಪಕ್ಷ ಇಡೀ ದೇಶದಲ್ಲಿ ಅತಿ ಹೆಚ್ಚು ಕಾಲ ಇರುವ ಪಕ್ಷ. ಸುಮಾರು 137 ವರ್ಷಗಳ ಸಂಸ್ಥಾಪನಾ ದಿನ ಆಚರಿಸಿದ್ದೇವೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ.
ಬೇರೆ ಪಕ್ಷಗಳು ಸ್ವಾತಂತ್ರ್ಯ ಬಂದ ನಂತರ ಹುಟ್ಟಿಕೊಂಡ ಪಕ್ಷ. ಆರ್ ಎಸ್ ಎಸ್ ಹುಟ್ಟಿದ್ದು 1925ರಲ್ಲಿ, ಜನ ಸಂಘ ಹುಟ್ಟಿದ್ದು 1951ರಲ್ಲಿ, ಜೆಡಿಎಸ್ ಹುಟ್ಟಿದ್ದು 1999ರಲ್ಲಿ. ಜನತಾ ಪಾರ್ಟಿ 1977ರಲ್ಲಿ ರಚನೆ ಆಯಿತು. ನಾನು ದತ್ತಾ ಅವರು ಜನತಾ ಪಕ್ಷದಲ್ಲಿ ಇದ್ದೆವು. ನಂತರ ಪಕ್ಷ ಭಾಗ ಆಗಿ 1999ರಲ್ಲಿ ಜೆಡಿಯು ಹಾಗೂ ಜೆಡಿಎಸ್ ಆಗಿ ವಿ ಆಯಿತು. ದತ್ತಾ ಜೆಡಿಎಸ್ ನಲ್ಲಿ ಶಾಸಕರಾಗಿದ್ದರು, ಬಹಳ ಪ್ರತಿಭಾವಂತ ವ್ಯಕ್ತಿ. ದೇಶ ಹಾಗೂ ರಾಜ್ಯದ ರಾಜಕಾರಣವನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿರುವವರು. ಎಲ್ಲಾ ಸಿದ್ಧಾಂತ ಅರ್ಥ ಮಾಡಿಕೊಂಡಿದ್ದಾರೆ. ಕಾಂಗ್ರೆಸ್, ಬಿಜೆಪಿ ಹಾಗೂ ಕಮ್ಯುನಿಷ್ಟ್ ಸಿದ್ಧಾಂತ ಅರ್ಥ ಮಾಡಿಕೊಂಡಿದ್ದಾರೆ. ಜೆಡಿಎಸ್ ಗೆ ಯಾವುದೇ ಸಿದ್ಧಾಂತ ಇಲ್ಲ. ಬಿಜೆಪಿಯದು ಕೋಮುವಾದ ಸಿದ್ಧಾಂತ. ಕಾಂಗ್ರೆಸ್ ಮಾತ್ರ ಸಾಮಾಜಿಕ ನ್ಯಾಯ, ಪ್ರಜಾಪ್ರಭುತ್ವ, ಸಮಾನತೆ ಮೇಲೆ ನಂಬಿಕೆ ಇರುವ ಪಕ್ಷ. ಜೆಡಿಎಸ್ ಗೆ ಯಾವುದೇ ಸಿದ್ಧಾಂತ ಇಲ್ಲ. ಬಿಜೆಪಿ ಗೆದ್ದರೆ ಬಿಜೆಪಿ ಜತೆಗೆ, ಕಾಂಗ್ರೆಸ್ ಗೆದ್ದರೆ ಕಾಂಗ್ರೆಸ್ ಜತೆ ಬರುತ್ತಾರೆ. ಅವರು ಸ್ವಂತ ಶಕ್ತಿ ಮೇಲೆ ಅಧಿಕಾರಕ್ಕೆ ಬರಲ್ಲ. ನಾವು ಇದ್ದಾಗಲೇ 2004ರಲ್ಲಿ 59 ಸೀಟು ಗೆದ್ದಿದ್ದರು. ಅದಾದ ಮೇಲೆ ಕಡಿಮೆ ಆಗುತ್ತಿದೆಯೇ ಹೊರತು ಹೆಚ್ಚಾಗುತ್ತಿಲ್ಲ. ಅವರು ಏನೇ ಹೇಳಿದರೂ ಸ್ವಂತ ಶಕ್ತಿಯಿಂದ ಅಧಿಕಾರಕ್ಕೆ ಬರಲ್ಲ.
ಈಗ ದತ್ತಾ ಅವರು ಬಹಳ ದೀರ್ಘ ಕಾಲ ಜನತಾ ಪಕ್ಷದಲ್ಲಿದ್ದು, ಈಗ ರಾಜ್ಯ ಹಾಗೂ ದೇಶದ ರಾಜಕಾರಣದ ದೃಷ್ಟಿಯಿಂದ, ಬಡವರು, ಹಿಂದುಳಿದವರು, ಅಲ್ಪಸಂಖ್ಯಾತರು, ಪರಿಶಿಷ್ಟರಿಗೆ ನ್ಯಾಯ ನೀಡುವ ಪಕ್ಷ ಕಾಂಗ್ರೆಸ್ ಮಾತ್ರ. ಬಿಜೆಪಿ ಇಂದು ಕೋಮುವಾದ ಮೂಲಕ ಸೇಡಿನ ರಾಜಕಾರಣ ಮಾಡುತ್ತಿದ್ದಾರೆ. ಇವತ್ತು ಅವಕಾಶ ವಂಚಿತ ಜನರಿಗೆ ಅಭದ್ರತೆ ಕಾಡುತ್ತಿದೆ. ಎಲ್ಲರೂ ಆತಂಕದಲ್ಲಿ ಜೀವನ ಮಾಡುವಂತಾಗಿದೆ. ಯಾರಾದರೂ ಬಿಜೆಪಿ ಸರ್ಕಾರ ಟೀಕೆ ಮಾಡಿದರೆ, ಅವರ ಮೇಲೆ ಮೊಕದ್ದಮೆ ಹಾಕಿ ಹೆದರಿಸುತ್ತಾರೆ. ಮಾಧ್ಯಮಗಳನ್ನು ಹೆದರಿಸುತ್ತಾರೆ. ಇವತ್ತು ಪ್ರಜಾಪ್ರಭುತ್ವ, ಸಂವಿಧಾನಕ್ಕೆ ದೊಡ್ಡ ಹೊಡೆತ ಬಿದ್ದಿದೆ.
ದತ್ತಾ ಅವರು ಕಾಂಗ್ರೆಸ್ ಸಿದ್ಧಾಂತ ಒಪ್ಪಿ ಯಾವುದೇ ಷರತ್ತು ಇಲ್ಲದೇ ಪಕ್ಷ ಸೇರ್ಪಡೆಯಾಗುತ್ತಿದ್ದಾರೆ. ಅವರ ಸ್ನೇಹಿತರು ಹಿಂಬಾಲಕರು ಪಕ್ಷಕ್ಕೆ ಸೇರುತ್ತಿದ್ದಾರೆ. ಅವರ ಆಗಮನದಿಂದ ಕಡೂರು ಮಾತ್ರವಲ್ಲ ರಾಜ್ಯದಲ್ಲಿ ಪಕ್ಷಕ್ಕೆ ಶಕ್ತಿ ಹೆಚ್ಚಲಿದೆ ಎಂದು ಭಾವಿಸುತ್ತಾ ಅವರನ್ನು ಪಕ್ಷಕ್ಕೆ ಸ್ವಾಗತ ಮಾಡುತ್ತೇನೆ.
ಇನ್ನು ನಾಗೇಶ್ ಅವರು ತಾಂತ್ರಿಕ ನಿರ್ದೇಶಕರಾಗಿದ್ದರು. ನಂತರ ಮುಳಬಾಗಿಲಿನಿಂದ ಗೆದ್ದು ಬಂದಿದ್ದರು. ನಂತರ ಬಿಜೆಪಿಗೆ ಹೋಗಿ ಮಂತ್ರಿ, ನಿಗಮ ಮಂಡಳಿ ಮುಖ್ಯಸ್ಥರಾಗಿದ್ದರು. ಈಗ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರುತ್ತಿದ್ದಾರೆ. ಕಾಂಗ್ರೆಸ್ ಸಿದ್ಧಾಂತ ಒಪ್ಪಿದ್ದಾರೆ. ಅವರು ಹೇಳಿದಂತೆ ಅವರ ಪೂರ್ವಿಕರು ಕಾಂಗ್ರೆಸ್ ಸಿದ್ಧಾಂತ ಒಪ್ಪಿದ್ದರು. ಕಾಂಗ್ರೆಸ್ ಪಕ್ಷ ಮಾತ್ರ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರಿಗೆ ರಕ್ಷಣೆ ನೀಡಲು ಸಾಧ್ಯ. ಇದನ್ನು ಅರ್ಥ ಮಾಡಿಕೊಂಡು ಬೇಷರತ್ತಾಗಿ ಪಕ್ಷ ಸೇರುತ್ತಿದ್ದಾರೆ.
ಅವರು ಮಹದೇವಪುರ ಕ್ಷೇತ್ರದಲ್ಲಿ ಹುಟ್ಟಿ ಬೆಳೆದವರು. ಆ ಕ್ಷೇತ್ರ ಹಾಗೂ ಬೆಂಗಳೂರಿನಲ್ಲಿ ಇವರ ಆಗಮನದಿಂದ ಪಕ್ಷಕ್ಕೆ ಶಕ್ತಿ ಹೆಚ್ಚಲಿದೆ. ಅವರಿಗೆ ಸ್ವಾಗತ ಮಾಡುತ್ತೇನೆ.
ಮೋಹನ್ ಕುಮಾರ್ ಅವರು ನಮ್ಮ ಜತೆಯಲ್ಲಿದ್ದವರು. ಅವರು ಶ್ರೀನಿವಾಸ್ ಪ್ರಸಾದ್ ಅವರಿಗೆ ಸ್ನೇಹಿತರು. ಅವರ ಎಲ್ಲಾ ಚುನಾವಣೆಯಲ್ಲಿ ಹೆಚ್ಚಾಗಿ ಇವರು ಕೆಲಸ ಮಾಡಿದ್ದಾರೆ. ಅವರಿಗೆ ಕಾಂಗ್ರೆಸ್ ಹೊಸತಲ್ಲ. ಶ್ರೀನಿವಾಸ್ ಪ್ರಸಾದ್ ಅವರ ಜತೆ ಬಿಜೆಪಿ ಹೋಗಿದ್ದರು. ಈಗ ಮತ್ತೆ ಕಾಂಗ್ರೆಸ್ ಪಕ್ಷ ಸೇರುತ್ತಿದ್ದು ಅವರನ್ನು ಆತ್ಮೀಯವಾಗಿ ಸ್ವಾಗತಿಸುತ್ತೇನೆ.
ದಯಾನಂದ ಅವರು ನಮ್ಮ ಜತೆ ಇದ್ದವರು. ಕೋಲಾರದ ಜೆಡಿಎಸ್ ಪಕ್ಷದಲ್ಲಿ ಇದ್ದರು. ಈಗ ಜೆಡಿಎಸ್ ತೊರೆದು ಬೇಷರತ್ತಾಗಿ ಕಾಂಗ್ರೆಸ್ ಸೇರುತ್ತಿದ್ದಾರೆ. ಅವರು ಸೈದ್ಧಾಂತಿಕ ಆಲೋಚನೆ ಇರುವವರು ಅವರನ್ನು ನಾನು ಸ್ವಾಗತಿಸುತ್ತೇನೆ.
ಇವರ ಜತೆ ಆಗಮಿಸುತ್ತಿರುವ ಎಲ್ಲರನ್ನೂ ನಾನು ಪಕ್ಷಕ್ಕೆ ಸ್ವಾಗತಿಸುತ್ತೇನೆ. ನೀವಲ್ಲರೂ ಸೇರಿ ಕೋಮುವಾದಿ ಪಕ್ಷವನ್ನು ಸೋಲಿಸಿ ಕಾಂಗ್ರೆಸ್ ಅಧಿಕಾರಕ್ಕೆ ತರುವುದು ರಾಜ್ಯದ ಹಿತದೃಷ್ಟಿಯಿಂದ ಅನಿವಾರ್ಯ.
[15/01, 5:37 PM] Kpcc official: ಸರ್ಕಾರಿ ಕಚೇರಿಗಳ ವಿದ್ಯುತ್ ಬಿಲ್ ವಸೂಲಿ ಬಾಕಿ ಇದೆ.
ದೊಡ್ಡ ಉದ್ಯಮಗಳ ವಿದ್ಯುತ್ ಬಿಲ್ ಬಾಕಿ ಇದೆ.
ನೌಕರರ ಪಿಂಚಣಿಗಾಗಿ ಗ್ರಾಹಕರ ಮೇಲೆ ದುಬಾರಿ ಬಿಲ್ ಹೊರಿಸಲು ತಯಾರಾಗಿದೆ ಸರ್ಕಾರ. ನಮ್ಮ #GruhaJyothi ಯೋಜನೆ ಜನರನ್ನು ಈ ಲೂಟಿಯಿಂದ ರಕ್ಷಿಸುತ್ತದೆ.
ಕಿತ್ತು ತಿನ್ನುವ ಬಿಜೆಪಿ ಸರ್ಕಾರಕ್ಕೆ ಮುಕ್ತಿ ನೀಡಿದರೆ ಜನತೆಗೆ ಶಕ್ತಿ ಸಿಕ್ಕಂತೆ.
[15/01, 5:40 PM] Kpcc official: "ರಸ್ತೆ, ಚರಂಡಿ, ಅಭಿವೃದ್ಧಿ ಬಗ್ಗೆ ಮಾತಾಡಬೇಡಿ, ಲವ್ ಜಿಹಾದ್ ಬಗ್ಗೆ ಮಾತಾಡಿ" ಎಂದ @nalinkateel ಅವರೇ,
ಬನ್ನಿ ನಿಮ್ಮ ಪಕ್ಷದವರ ಲವ್ ಜಿಹಾದ್ ಬಗ್ಗೆ ಮಾತಾಡೋಣ.
ಬಿಜೆಪಿ ಕಾರ್ಯಕರ್ತರಿಗೆ
ಪ್ರೀತಿ ಹೆಸರಲ್ಲಿ ಹೆಣ್ಣುಮಕ್ಕಳಿಗೆ ಕಿರುಕುಳ ನೀಡುವುದು, ಅತ್ಯಾಚಾರ ಮಾಡುವ ಟ್ರೈನಿಂಗ್‌ನ್ನು @BJP4Karnataka ಕಚೇರಿಯಲ್ಲಿ ನೀಡಲಾಗುತ್ತದೆಯೇ?
[15/01, 5:40 PM] Kpcc official: ಯತ್ನಾಳರ ಚಾಲಕನ ಕೊಲೆ ವಿಚಾರ ಬಿಜೆಪಿ ನಾಯಕರಿಗೆ ತಿಳಿದಿದ್ದರೂ ಇಷ್ಟು ದಿನ ಮುಚ್ಚಿಟ್ಟಿದ್ದೇಕೆ?
@BSBommai ಅವರೇ, ಏನದು ಕೊಲೆ ರಹಸ್ಯ? ತನಿಖೆ ಮಾಡಿಲ್ಲವೇಕೆ?
ಯತ್ನಾಳರನ್ನು ಕಂಡರೆ ತಮಗೆ ಏಕಿಷ್ಟು ಭಯ?
ಯತ್ನಾಳ್ ಹೇಳುತ್ತಿರುವ ಸಿಡಿ ರಹಸ್ಯ, ನಿರಾಣಿ ಹೇಳುತ್ತಿರುವ ಕೊಲೆ ರಹಸ್ಯ ಏನೆಂದು @BJP4Karnataka ಬಹಿರಂಗಪಡಿಸಬೇಕು.
#BJPvsBJP
[15/01, 6:17 PM] Kpcc official: ಕನಕಪುರದಲ್ಲಿ ಕನಕೋತ್ಸವದ ಅಂಗವಾಗಿ ಭಾನುವಾರ ನಡೆದ ಸಾಧಕರ ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಸಂಸದ ಡಿ ಕೆ ಸುರೇಶ್, ಕೆಪಿಸಿಸಿ ಸಂವಹನ ಮತ್ತು ಸಾಮಾಜಿಕ ಜಾಲತಾಣ ವಿಭಾಗದ ಅಧ್ಯಕ್ಷ ಪ್ರಿಯಾಂಕ್ ಖರ್ಗೆ, ರಾಜ್ಯಸಭೆ ಸದಸ್ಯ ಜಿ ಸಿ ಚಂದ್ರಶೇಖರ್ ಮತ್ತಿತರರು ಭಾಗವಹಿಸಿದ್ದರು.
[15/01, 6:19 PM] Kpcc official: ಸಾಧಕರ ಸಮಾವೇಶದಲ್ಲಿ ಡಿ ಕೆ ಶಿವಕುಮಾರ್, ಪ್ರಿಯಾಂಕ್ ಖರ್ಗೆ, ಜಿ ಸಿ ಚಂದ್ರಶೇಖರ್ ಅವರ ನುಡಿಗಳು...
[16/01, 1:59 PM] Kpcc official: ನಾ ನಾಯಕಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಸೋಮವಾರ ಆಗಮಿಸಿದ ಎ ಐಸಿಸಿ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಪ್ರಿಯಾಂಕಾ ಗಾಂಧಿ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ದೇವನಹಳ್ಳಿ ವಿಮಾನ ನಿಲ್ದಾಣದ ಬಳಿ ಸ್ವಾಗತಿಸಿದ್ದು...
[16/01, 2:46 PM] Kpcc official: *ಪತ್ರಿಕಾ ಪ್ರಕಟಣೆ*
*ಪ್ರಿಯಾಂಕ ಗಾಂಧಿಯವರಿಂದ ಐತಿಹಾಸಿಕ ಘೋಷಣೆ*
*ಕಾಂಗ್ರೆಸ್ ಗ್ಯಾರಂಟಿ - 2*
*ಬೆಲೆಯೇರಿಕೆಯಿಂದ ದಿಕ್ಕೆಟ್ಟ ರಾಜ್ಯದ ಪ್ರತಿ ಕುಟುಂಬದ ಗೃಹಣಿಗೆ ಪ್ರತಿ ತಿಂಗಳು ₹2,000 ಆರ್ಥಿಕ ನೆರವು*
ರಾಜ್ಯ ಹಾಗೂ ದೇಶದಲ್ಲಿ ಮಹಿಳೆಯರ ಸಬಲಿಕರಣಕ್ಕೆ ನಿರಂತರವಾಗಿ ಅಗತ್ಯ ಯೋಜನೆಗಳನ್ನು ನೀಡುತ್ತಾ ಬಂದಿರುವ ಕಾಂಗ್ರೆಸ್, ಈ ಬಾರಿ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಮಹಿಳೆಯರಿಗಾಗಿ ಪ್ರತ್ಯೇಕ ಪ್ರಣಾಳಿಕೆಯನ್ನು ಘೋಷಣೆ ಮಾಡಲು ತೀರ್ಮಾನಿಸಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಮ್ಮ ಸರ್ಕಾರದಿಂದ ರಾಜ್ಯದ ಮಹಿಳೆಯರು ಏನನ್ನು ಬಯಸುತ್ತಾರೆ? ಎಂಬುದನ್ನ ತಿಳಿಯಲು ಕೆಪಿಸಿಸಿ ಅಧ್ಯಕ್ಷರಾದ ಶ್ರೀ ಡಿಕೆ ಶಿವಕುಮಾರ್ ರಾಜ್ಯದ ಮಹಿಳೆಯರಿಗೆ ತಮ್ಮ ಭಾವನೆ, ಸಮಸ್ಯೆ, ಸಲಹೆ, ಅಭಿಪ್ರಾಯ ಹಂಚಿಕೊಳ್ಳುವಂತೆ ಕರೆ ನೀಡಿದ್ದರು.
ಈ ಕರೆಗೆ ಸ್ಪಂದಿಸಿ ಸಾಮಾಜಿಕ ಜಾಲತಾಣ, ಇ ಮೇಲ್, ವಾಟ್ಸಪ್ ಹಾಗೂ ಪಕ್ಷದ ಕಚೇರಿಗೆ ಪತ್ರದ ರೂಪದಲ್ಲಿ ಸಾವಿರಾರು ಸಲಹೆಗಳು ಸ್ವೀಕಾರವಾಗಿವೆ. ಇದರಲ್ಲಿ ಬಹುತೇಕ ಮಹಿಳೆಯರು ಬೆಲೆ ಏರಿಕೆ ಸಮಸ್ಯೆಗೆ ಕಾಂಗ್ರೆಸ್ ಪಕ್ಷದಿಂದ ಪರಿಹಾರ ನಿರೀಕ್ಷಿಸುತ್ತಿರುವುದಾಗಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಬೆಲೆ ಏರಿಕೆ ಪರಿಣಾಮವಾಗಿ ಮನೆಯಲ್ಲಿ ದುಡಿಯುವವರ ವೇತನ ಸಾಲದೇ ಸಂಕಷ್ಟ ಅನುಭವಿಸುತ್ತಿರುವುದಾಗಿ ಹೇಳಿದ್ದಾರೆ.
ಮಹಿಳೆಯರು ನಮ್ಮ ಮನೆ ಹಾಗೂ ರಾಜ್ಯದ ಶಕ್ತಿ ಮೂಲವಾಗಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕುಟುಂಬ ಹಾಗೂ ಮನೆ ನಿರ್ವಹಣೆಯಲ್ಲಿ ಅವರು ಅನುಭವಿಸುತ್ತಿರುವ ಸಂಕಷ್ಟ ಅತೀವವಾಗಿದೆ.
*ಈ ಹಿನ್ನೆಲೆಯಲ್ಲಿ ರಾಜ್ಯದ ಮಹಿಳೆಯರ ಸಂಕಷ್ಟಕ್ಕೆ ಪ್ರಮಾಣದ ನೆರವು ನೀಡುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷ ಗೃಹಲಕ್ಷ್ಮಿ ಯೋಜನೆಯನ್ನು ಘೋಷಣೆ ಮಾಡಿದ್ದು, ಈ ಯೋಜನೆ ಮೂಲಕ ರಾಜ್ಯದ ಪ್ರತಿ ಕುಟುಂಬದ ಓರ್ವ ಗೃಹಿಣಿಗೆ ಸರ್ಕಾರದ ವತಿಯಿಂದ ಪ್ರತಿ ತಿಂಗಳು ₹2,000ರಂತೆ ವರ್ಷಕ್ಕೆ ₹24 ಸಾವಿರ ಆರ್ಥಿಕ ನೆರವನ್ನು ಕಾಂಗ್ರೆಸ್ ಸರ್ಕಾರ ಒದಗಿಸಲಿದೆ.*
ಈ ಯೋಜನೆಯು ರಾಜ್ಯದ 1.5 ಕೋಟಿ ಗೃಹಣಿಯರಿಗೆ ನೆರವಾಗಲಿದೆ.
ಇದು ಕಾಂಗ್ರೆಸ್ ಗ್ಯಾರೆಂಟಿ.
[16/01, 4:01 PM] Kpcc official: *ನಾ ನಾಯಕಿ ಸಮಾವೇಶದಲ್ಲಿ ಕಾಂಗ್ರೆಸ್ ನಾಯಕ, ನಾಯಕಿಯರ ಮಾತುಗಳು*
*ಪ್ರಿಯಾಂಕಾ ಗಾಂಧಿ:*
ನನಗಾಗಿ ಇಷ್ಟು ಅಭಿಮಾನದಿಂದ ಇಲ್ಲಿಗೆ ಬಂದಿರುವ ಎಲ್ಲರಿಗೂ ನಮಸ್ಕಾರ. ನಾನು ಮೊದಲ ಬಾರಿಗೆ ಇಷ್ಟು ದೊಡ್ಡ ಮಟ್ಟದ ಅಭಿಮಾನವನ್ನು ಕಂಡಿದ್ದೇನೆ.
ನಾನು ಇಲ್ಲಿಗೆ ಆಗಮಿಸಿರುವುದು ಬಹಳ ಹೆಮ್ಮೆಯ ವಿಷಯವಾಗಿದೆ. ನೀವು ಬುದ್ಧಿವಂತರು, ಶಕ್ತಿವಂತರು, ಶ್ರಮಜೀವಿಗಳು. ಈ ದೇಶವೇ ಹೆಮ್ಮೆಪಡುವಂತೆ ರಾಜ್ಯವನ್ನು ಕಟ್ಟಿದ್ದೀರಿ. ವಿಶ್ವದ ಎಲ್ಲೆಡೆ ನಿಮ್ಮ ಪರಿಶ್ರಮ ಗುರುತಿಸಲಾಗುತ್ತಿದೆ. ಐಟಿ ಬಿಬಿ ಕ್ಷೇತ್ರ, ಕೈಗಾರಿಕಾ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ್ದೀರಿ.
ನಾನು ನಮ್ಮ ಸಹೋದರಿಯರ ಶ್ರಮದ ಬಗ್ಗೆ ಹೆಮ್ಮೆಪಡುತ್ತೇನೆ. ನಿಮ್ಮ ಶ್ರಮದಿಂದ ಈ ರಾಜ್ಯ ಇಷ್ಟು ದೊಡ್ಡ ಮಟ್ಟಿಗೆ ಬೆಳೆದಿದೆ. ನೀವು ನಿಮ್ಮ ಕುಟುಂಬಕ್ಕೆ ನೀವು ಬೆಂಬಲ ನೀಡದಿದ್ದರೆ ಈ ರಾಜ್ಯ ಬೆಳೆಯಲು ಆಗುತ್ತಿರಲಿಲ್ಲ. ಇದನ್ನು ನಾವು ಹೃದಯಪೂರ್ವಕವಾಗಿ ಹೇಳುತ್ತಿದ್ದೇನೆ.
ನೀವು ಕರ್ನಾಟಕ ಭುವನೇಶ್ವರಿ ಹಾಗೂ ತಾಯಿ ಚಾಮುಂಡೇಶ್ವರಿಯ ಮಕ್ಕಳು. ಈ ನಾಡು ಅತ್ಯಂತ ಪ್ರಬಲಶಾಲಿ ಮಹಿಳೆಯರಾದ ಕಿತ್ತೂರು ರಾಣಿ ಚೆನ್ನಮ್ಮನ ಮಕ್ಕಳು. ನಿಮ್ಮಲ್ಲಿ ಅಹಿಂಸೆಯ ಗುಣ ನಿಮ್ಮ ಇತಿಹಾಸದಲ್ಲಿ ಅಡಗಿದೆ. ಬಸವಣ್ಣ ಅವರು ಪ್ರತಿಯೊಬ್ಬ ಮನುಷ್ಯನ ಪ್ರಾಮುಖ್ಯತೆಯನ್ನು ಸಾರಿದ್ದಾರೆ. ಬಸವಣ್ಣನವರಿಗೆ ಎಲ್ಲರೂ ಸಮಾನರು. ಅವರಿಗೆ ಜಾತಿ, ಧರ್ಮ, ಲಿಂಗದ ಭೇದವಿರಲಿಲ್ಲ. ಮಹಿಳೆಯರು ನಾಡಿನ ಸಂಸ್ಕೃತಿ ಕಾಪಾಡಿ, ನಮ್ಮ ಸಮಾಜವನ್ನು ಕಟ್ಟುವಲ್ಲಿ ಮಹಿಳೆಯರು ಸದಾ ಶ್ರಮಿಸಿದ್ದಾರೆ.
ನನ್ನನ್ನು ಇಬ್ಬರು ಪ್ರಬಲ ಮಹಿಳೆಯರು ಬೆಳೆಸಿದ್ದಾರೆ. ನಾನು ಆಕೆಯನ್ನು ಎಂಟನೇ ವಯಸ್ಸಿನಲ್ಲಿ ನೋಡಿದೆ. ಆಕೆ ತನ್ನ 33 ವರ್ಷದ ಮಗನನ್ನು ಕಳೆದುಕೊಂಡಾಗ ಕುಗ್ಗದೇ ಮರು ದಿನವೇ ತನ್ನ ಕೆಲಸಕ್ಕೆ ಹಾಜರಾಗಿ ದೇಶ ಸೇವೆಗೆ ಮುಂದಾಗಿದ್ದರು. ಅದು ಆಕೆಯ ವೃತ್ತಿಧರ್ಮವಾಗಿತ್ತು. ತನ್ನ ಪುತ್ರಸೋಕದ ನಡುವೆಯೂ ಆಕೆ ದೇಶಕ್ಕಾಗಿ ತನ್ನ ಕರ್ತವ್ಯ ಮಾಡಲು ಮುಂದಾಗಿದ್ದು, ಆಕೆಯ ಮಾನಸಿಕ ಸ್ಥೈರ್ಯಕ್ಕೆ ಸಾಕ್ಷಿ. ಆಕೆ ತನ್ನ ಕೊನೆ ಉಸಿರಿರುವವರೆಗೂ ದೇಶಕ್ಕಾಗಿ ಸೇವೆ ಮುಂದುವರಿಸಿದರು.
ನಾನು ಬೆಳೆದಿದ್ದು ತಾಯಿ ಸೋನಿಯಾಗಾಂಧಿ ಅವರನ್ನು ನೋಡಿಕೊಂಡು. ತನ್ನ 21ನೇ ವಯಸ್ಸಿನಲ್ಲಿ ತಂದೆ ರಾಜೀವ್ ಗಾಂಧಿ ಅವರನ್ನು ಪ್ರೀತಿಸಿ, ತಾನು ಹುಟ್ಟಿದ ಇಟಲಿ ಬಿಟ್ಟು ಭಾರತಕ್ಕೆ ಆಗಮಿಸುತ್ತಾರೆ. ಆಕೆ ಇಲ್ಲಿನ ಸಂಸ್ಕೃತಿ, ಆಚಾರ ವಿಚಾರ, ಭಾಷೆಗಳನ್ನು ಇಂದಿರಾ ಗಾಂಧಿ ಅವರಿಂದ ಕಲಿತರು. ಆಕೆ ತನ್ನ 44ನೇ ವಯಸ್ಸಿನಲ್ಲಿ ಗಂಡನನ್ನು ಕಳೆದುಕೊಂಡರು. ಆಕೆ ರಾಜಕೀಯದ ಬಗ್ಗೆ ಆಸಕ್ತಿ ಇಲ್ಲದಿದ್ದರೂ ದೇಶದ ಸೇವೆ ಮಾಡಲು ರಾಜಕೀಯದಲ್ಲಿ ಇದ್ದಾರೆ.
ಈ ಇಬ್ಬರು ಮಹಿಳೆಯರ ಜತೆಗೆ ನಾನು ನೂರಾರೂ ಮಹಿಳೆಯರನ್ನು ನನ್ನ ಜೀವನದಲ್ಲಿ ಕಂಡಿದ್ದೇನೆ. ಇವರೆಲ್ಲರಿಂದ ನಾನು ಒಂದು ವಿಚಾರ ಕಲಿತಿದ್ದೇನೆ. ನಿಮ್ಮ ಜೀವನದಲ್ಲಿ ಏನೇ ಆಗಲಿ, ಎಷ್ಟೇ ಕಷ್ಟ ಬರಲಿ, ಅದು ಮನೆಯಲ್ಲಾಗಲಿ, ಕೆಲದ ವಿಚಾರದಲ್ಲಾಗಲಿ, ನೀವು ಅವುಗಳನ್ನು ಮೆಟ್ಟಿ ನಿಲ್ಲುವ ಸಾಮರ್ಥ್ಯ ನಿಮ್ಮಲ್ಲಿದೆ. ಇಲ್ಲಿರುವ ಪ್ರತಿ ಸಹೋದರಿಯರು ದೊಡ್ಡ ಸವಾಲು ಎದುರಿಸಿದ್ದೀರಿ ಎಂದು ನನಗೆ ಗೊತ್ತಿದೆ. ನಿಮ್ಮ ಮನೆಯನ್ನು ಒಟ್ಟಾಗಿಟ್ಟು, ನಿಮ್ಮ ಜೀವನದ ಸಮಸ್ಯೆಗಳನ್ನು ಬಹಳ ಧೈರ್ಯವಾಗಿ ಎದುರಿಸುತ್ತಿದ್ದೀರಿ. ಇಷ್ಟಾದರೂ ನಿಮ್ಮ ಜೀವನದಲ್ಲಿ ಬದಲಾವಣೆ ತರುವ ಸಾಮರ್ಥ್ಯ ನಿಮ್ಮಲ್ಲಿದೆ.
ಇದು ನಿಮ್ಮ ಜೀವನದಲ್ಲಿ ಬದಲಾವಣೆ ತರುವ ಸಮಯ ಇದಲ್ಲವೇ? ನಿಮ್ಮ ಜೀವನದಲ್ಲಿ ನಿಮಗೆ ಶಿಕ್ಷಣ, ಉದ್ಯೋಗ, ಮಕ್ಕಳಿಗೆ ಭವ್ಯ ಭವಿಷ್ಯ ನಿರ್ಮಾಣ ಮಾಡಬೇಕಲ್ಲವೇ? ಇವೆಲ್ಲವನ್ನು ನಿಮಗೆ ಯಾರು ನೀಡುತ್ತಾರೆ? ನಿಮ್ಮ ಸಾಮರ್ಥ್ಯವನ್ನು ನೀವು ಅರಿಯುತ್ತಿಲ್ಲ. ಈ ದೇಶದ ಜನಸಂಖ್ಯೆಯಲ್ಲಿ ಶೇ.50ರಷ್ಟು ಮಹಿಳೆಯರಿದ್ದೀರಿ. ಪ್ರತಿ ಮೆನೆಯಲ್ಲೂ ಗಂಡಸರಷ್ಟೇ ಹೆಣ್ಣುಮಕ್ಕಳಿದ್ದಾರೆ. ಎಲ್ಲ ಹಳ್ಳಿ, ಪಟ್ಟಣಗಳಲ್ಲಿ, ನೀವು ಬಲಿಷ್ಠರು. ಆದರೆ ನಿಮ್ಮ ಧೈರ್ಯ ಹಾಗೂ ಶಕ್ತಿ ಅಱಿಯಬೇಕು.
ನಿಮ್ಮ ದೊಡ್ಡ ಶಕ್ತಿ ರಾಜಕೀಯ. ರಾಜಕೀಯ ಪಕ್ಷಗಳು ಒಂದು ವರ್ಗದ ಓಲೈಕೆಗೆ ಮುಂದಾಗುತ್ತಾರೆ. ಆದರೆ ಮಹಿಳೆಯರ ಬಗ್ಗೆ ವಿಚಾರ ಮಾಡುವುದಿಲ್ಲ. ನೀವು ಎಲ್ಲ ರಾಜಕೀಯ ಪಕ್ಷಗಳು ನಿಮ್ಮ ಹಕ್ಕು ಸಮಾನತೆಗೆ ಆದ್ಯತೆ ನೀಡುವಂತೆ ಮಾಡಬೇಕು. ನಾನು ಬಿಜೆಪಿಯನ್ನು ಟೀಕಿಸುವುದಿಲ್ಲ. ನಾನು ಇಲ್ಲಿರುವ ಮಹಿಳೆಯರಿಗೆ ಒಂದು ಪ್ರಸ್ನೆ ಕೇಳುತ್ತೇನೆ. ಬಿಜೆಪಿ ಬಹಳ ದಿನಗಳಿಂದ ಬಿಜೆಪಿ ಅಧಿಕಾರದಲ್ಲಿದೆ ನಿಮ್ಮ ಜೀವನದಲ್ಲಿ ಸುಧಾರಣೆ ಕಂಡಿದ್ದೀರಾ? ಬೆಲೆಗಳು ಇಳಿಕೆಯಾಗಿವೆಯೇ? ನಿಮ್ಮ ಬದುಕಿನಲ್ಲಿ ಸಕಾರಾತ್ಮಕ ವಿಚಾರಗಳಿವೆಯೇ? ನೀವು ಸಂತೋಷವಾಗಿದ್ದೀರಾ? ಇದು ಬಹಳ ಸರಳವಾದ ಪ್ರಶ್ನೆ.
ಮುಂದಿನ ಕೆಲ ದಿನಗಳಲ್ಲಿ ಚುನಾವಣೆ ಬರುತ್ತಿವೆ. ನೀವು ಕಳೆದ ಕೆಲ ವರ್ಷಗಳ ಆಡಳಿತವನ್ನು ನೋಡಿ, ಯಾರು ಉತ್ತಮರು ಎಂದು ನೀವೆ ತುಲನೆ ಮಾಡಿ, ಯಾರು ನಿಮಗೆ ಅಗತ್ಯವಿರುವ ನೆರವು ನೀಡಿದ್ದಾರೆ ಎಂದು ತೀರ್ಮಾನಿಸಿ. ಕರ್ನಾಟಕದಲ್ಲಿ ಮಹಿಳೆಯರ ಪರಿಸ್ಥಿತಿ ನೀಜಕ್ಕೂ ನಾಚಿಕೆಗೇಡಿನ ವಿಚಾರವಿದೆ. ನಿಮ್ಮ ಸಚಿವರು ಉದ್ಯೋಗ ನೀಡಲು 40% ಲಂಚ ಪಡೆಯುತ್ತಿದ್ದಾರೆ ಎಂದು ಕೇಳಿದೆ. 1.50 ಲಕ್ಷ ಕೋಟಿ ನಿಮ್ಮ ಹಣವನ್ನು ಭ್ರಷ್ಟಾಚಾರದ ಮೂಲಕ ಲೂಟಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ 8 ಸಾವಿರ ಕೋಟಿ ಬಜೆಟ್ ಇದ್ದರೆ ಅದರಲ್ಲಿ 3200 ಕೋಟಿ ಇವರ ಜೇಬಿಗೆ ಹೋಗುತ್ತದೆ. ಪಿಎಸ್ಐ ಹಗರಣದಂತೆ ಹಲವು ನೇಮಕಾತಿ ಅಕ್ರಮಗಳಿವೆ. ಪಿಎಸ್ಐ ಹುದ್ದೆ ಮಾರಿಕೊಂಡಿದ್ದಾರೆ. ನೀವು ನಿಮ್ಮ ಮಕ್ಕಳು ಉತ್ತಮ ಕೆಲಸ ಪಡೆಯಲಿ ಎಂದು ಶಿಕ್ಷಣೆ ಕೊಟ್ಟು ಬೆಳೆಸುತ್ತೀರಾ? ಈ ರೀತಿ ಹಗರಣವಾದರೆ, ನೀವು ಪ್ರತಿಯೊಂದಕ್ಕೂ ಲಂಚ ಕೊಡಬೇಕಾಗಿದೆ. ಚಾಲಕರ ಪರವಾನಿಗೆ, ಪಡಿತರ ಪಡೆಯಲು ಲಂಚ ನೀಡಬೇಕು.
ಕೋವಿಡ್ ಸಮಯದಲ್ಲಿ ಸರ್ಕಾರ ಮಹಿಳೆಯರಿಗೆ ಯಾವುದೇ ರೀತಿಯ ನೆರವು ನೀಡಲಿಲ್ಲ. ಗಾರ್ಮೆಂಟ್ಸ್ ಕಾರ್ಮಿಕರಿಗೆ ಸರ್ಕಾರ ನೆರವು ನೀಡಲಿಲ್ಲ. ಬೆಂಗಳೂರಿನ ರಸ್ತೆಗಳು ಗುಂಡಿಮಯವಾಗಿವೆ. ರೈತರು ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ರಾಜ್ಯದ 2.50 ಲಕ್ಷ ಹುದ್ದೆಗಳು ಖಾಲಿ ಇದ್ದು, ಅವುಗಳನ್ನು ತುಂಬಿಲ್ಲ. ಮಹಿಳೆಯರ ಮೇಲಿನ ಅಪರಾಧ ಹೆಚ್ಚಳವಾಗಿದ್ದು, ಪ್ರತಿನಿತ್ಯ ಮಹಿಳೆಯರ ಮೇಲೆ 46 ಅಪರಾಧ ನಡೆಯುತ್ತಿವೆ.
ನೀವು ಕಾಂಗ್ರೆಸ್ ಅವಧಿಯಲ್ಲಿ ಅಡುಗೆ ಅನಿಲ ಸಿಲಿಂಡರ್ ಎಷ್ಟಕ್ಕೆ ಪಡೆಯುತ್ತಿದ್ದಿರಿ, ಈಗ ಅದು ಎಷ್ಟಾಗಿದೆ ಎಂದು ನಿಮಗೆ ಗೊತ್ತಿದೆ. ಜೀವನಸಾಗಿಸುವುದು ದುಬಾರಿಯಾಗಿದ್ದು, ಕಷ್ಟವಾಗಿದೆ. ಮಕ್ಕಳ ಶುಲ್ಕವಾಗಲಿ, ಮದುವೆ ಸಮಾರಂಭವಾಗಲಿ ಎಲ್ಲವೂ ಆರ್ಥಿಕ ಹೊರೆಯಾಗಿವೆ. ಆದರೂ ಸರ್ಕಾರದ ಹೊಣೆಗಾರಿಕೆಯನ್ನು ಪ್ರಶ್ನೆ ಮಾಡುತ್ತಿಲ್ಲ. ಹೀಗಾಗಿ ಸರ್ಕಾರ ಪಠ್ಯ ಪರಿಷ್ಕರಣೆ ಹೆಸರಲ್ಲಿ ಮಹನೀಯರ ವಿಚಾರವನ್ನು ತೆಗೆಯುವ ಮೂಲಕ ಗಮನ ಬೇರೆಡೆ ಸೆಳೆಯುತ್ತಿದ್ದಾರೆ. ಇಡೀ ಆಡಳಿಯ ಯಂತ್ರ ಕೆಲವು ಬಂಡವಾಳ ಶಾಹಿಗಳ ಹಿತ ಕಾಯಲು ಇದೆ. ಕೆಲವರು ಮಾತ್ರ ಶ್ರೀಮಂತರಾಗುತ್ತಿದ್ದರೆ, ಉಳಿದ ಭಾರತ ದಿನನಿತ್ಯ ಬಡವಾಗುತ್ತಿದೆ.
ಸಾರ್ವಜನಿಕ ಉದ್ದಿಮೆಗಳನ್ನು ಖಾಸಗಿಕರಣ ಮಾಡುತ್ತಿದ್ದಾರೆ. ಕೃಷಿಗೆ ಆರ್ಥಿಕ ನೆರವು ನೀಡದೇ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳು ಸರ್ಕಾರದ ಜಿಎಸ್ ಟಿ, ನೋಟು ರದ್ಧತಿಗಳಿಂದ ಕೆಟ್ಟ ನಿರ್ಧಾರಗಳಿಂದ ನರಳುವಂತಾಗಿವೆ. ಕಾಂಗ್ರೆಸ್ ಸರ್ಕಾರ ಭೂ ಸುಧಾರಣಾ ಕಾಯ್ದೆಯಂತಹ ಕಾರ್ಯಕ್ರಮಗಳನ್ನು ನೀಡಿತ್ತು. ರೈತರ 8 ಸಾವಿರ ಕೋಟಿ ಸಾಲ ಮನ್ನಾ, ಬೆಂಗಳೂರಿನಲ್ಲಿ ಐಟಿ ಕ್ಷೇತ್ರಗಳ ಅಭಿವೃದ್ಧಿ ಮಾಡಲಾಗಿದೆ. ಅನ್ನಭಾಗ್ಯದ ಮೂಲಕ 3.80 ಲಕ್ಷ ಜನರಿಗೆ ಅಕ್ಕಿ, ಬೇಳೆಯಂತಹ ದಿನಸಿ ನೀಡಿದೆ. ಇಂದಿರಾ ಕ್ಯಾಂಟೀನ್, ಕ್ಷೀರ ಭಾಗ್ಯ, ಮಾತೃಪೂರ್ಣದಂತಹ ಕಾರ್ಯಕ್ರಮಗಳನ್ನು ನಿಮಗಾಗಿ ಕಾಂಗ್ರೆಸ್ ಸರ್ಕಾರ ನೀಡಿತ್ತು. ಹೀಗೆ ಸ್ವಸಹಾಯಕ ಯೋಜನೆ, ಅಂಗನವಾಡಿ ಕಾರ್ಯಕರ್ತೆಯರ ವೇತನ ಹೆಚ್ಚಳಂದತಹ ಕಾರ್ಯಕ್ರಮ ನೀಡಿದೆ.
ಈ ನಾ ನಾಯಕಿ ಕಾರ್ಯಕ್ರಮ ಮೂಲಕ ನೀವು ನಾಯಕರಾಗುವ ಮೂಲಕ ನಿಮ್ಮ ಜೀವನ ಬದಲಿಸಿಕೊಳ್ಳಿ. ಗೃಹಲಕ್ಷ್ಮೀ ಯೋಜನೆ ಮೂಲಕ ಪ್ರತಿ ಕುಟುಂಬದ ಓರ್ವ ಮಹಿಳೆಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿಯಂತೆ ವರ್ಷಕ್ಕೆ 24 ಸಾವಿರ ಆರ್ಥಿಕ ನೆರವು ನೀಡಲಾಗುವುದು. ನನಗೆ ಈ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದಾಗ ನೀವು ಮಹಿಳೆಯರಿಗಾಗಿ ಪ್ರತ್ಯೇಕ ಪ್ರಣಾಳಿಕೆ ಮಾಡಿದರೆ ಮಾತ್ರ ನಾನು ಈ ಕಾರ್ಯಕ್ರಮಕ್ಕೆ ಬರುವುದಾಗಿ ಹೇಳಿದ್ದೆ. ಮಹಿಳೆಯರು ಸಶಕ್ತರಾಗಲು ಕೇವಲ ಒಂದು ಕಾರ್ಯಕ್ರಮ ನೀಡುತ್ತಿಲ್ಲ. ಅನೇಕ ವಿಚಾರವಾಗಿ ಕಾಂಗ್ರೆಸ್ ಸರ್ಕಾರ ನೆರವು ನೀಡಲು ನಿರ್ಧರಿಸಿದ್ದು, ಅದರ ಭಾಗವಾಗಿ ಇತ್ತೀಚೆಗೆ ಗೃಹಜ್ಯೋತಿ ಕಾರ್ಯಕ್ರಮದ ಮೂಲಕ ಪ್ರತಿ ಮನೆಗೆ 200 ಯುನಿಟ್ ವಿದ್ಯತ್ ಉಚಿತವಾಗಿ ನೀಡಲು ನಿರ್ಧರಿಸಲಾಗಿದೆ. ಇದರ ಜತೆಗೆ ಮಹಿಳಾ ಪ್ರಣಾಳಿಕೆ ಮೂಲಕ ಇನ್ನಷ್ಟು ಜನಪರ ಕಾರ್ಯಕ್ರಮವನ್ನು ನಮ್ಮ ನಾಯಕರು ನೀಡಲಿದ್ದಾರೆ.
ನೀವು ಬಲಿಷ್ಠ ಕರ್ನಾಟಕದ ಮೇಲೆ ನಂಬಿಕೆ ಇಟ್ಟೀದ್ದೀರಿ ಅಲ್ಲವೇ? ಇದಕ್ಕಾಗಿ ನೀವು ಬದಲಾವಣೆ ತರುತ್ತೀರಾ ಅಲ್ಲವೇ? ಇದು ನಿಮ್ಮ ಕೈಯಲ್ಲಿದೆ. ನಿಮ್ಮ ಸಮಾಜ, ರಾಜ್ಯದ ಬದಲಾವಣೆ ತರುವ ಶಕ್ತಿ ನಿಮ್ಮಲ್ಲಿದೆ. ಮುಂದಿನ ದಿನಗಳಲ್ಲಿ ಚುನಾವಣೆಗಾಗಿ ನಿಮ್ಮ ನಾಯಕರು ನಿಮ್ಮ ಬಳಿಗೆ ಬಂದಾಗ ನಿಮ್ಮ ಜೀವನದಲ್ಲಿ ಬದಲಾವಣೆಯನ್ನು ಕೇಳುವುದಾಗಿ ನನಗೆ ಮಾತು ಕೊಡಿ.
ಉತ್ತರಪ್ರದೇಶದಲ್ಲಿ ಮಹಿಳಾ ಪ್ರಣಾಳಿಕೆ ಬಿಡುಗಡೆ ಮಾಡಿದಾಗ ಹಲವರು ನಮ್ಮನ್ನು ನೋಡಿ ನಕ್ಕರು. ಆದರೂ ನಮಗೆ ಹೆಚ್ಚಿನ ಮತಗಳು ಬರಲಿಲ್ಲ. ಆದರೆ ಪ್ರತಿ ರಾಜಕೀಯ ಪಕ್ಷಗಳು ಮಹಿಳೆಯರ ಆಗತ್ಯವನ್ನು ಗುರುತಿಸಿ, ಅವುಗಳಿಗೆ ಸ್ಪಂದಿಸುವಂತೆ ಮಾಡಿದೆವು. ಪರಿಣಾಮ ಇಂದು ಬಿಜೆಪಿ ಕೂಡ ತಾನು ಮಹಿಳೆಯರಿಗಾಗಿ ಏನು ಮಾಡುತ್ತೇವೆ ಎಂದು ಜಾಹೀರಾತು ನೀಡಿದೆ. ನಾವೆಲ್ಲರೂ ಮಹಿಳೆಯರು ನಮ್ಮ ಶಕ್ತಿ ತೋರಿಸುವ ಕಾಲ ಬಂದಿದೆ. ಈ ಚುನಾವಣೆಯನ್ನು ನಿಮ್ಮ ಚುನಾವಣೆ, ನಿಮ್ಮ ಭವಿಷ್ಯಕ್ಕಾಗಿ ಮಾಡಬೇಕಾಗಿದೆ.
*ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ:*
ಪ್ರಿಯಾಂಕಾ ಗಾಂಧಿ ಅವರು ಇಂದು ಮಹಿಳೆಯರ ಧ್ವನಿಯಾಗಿದ್ದರೆ. ಅವರು ಕೇವಲ ಮಹಿಳೆಯರಿಗೆ ಮಾತ್ರ ಧ್ವನಿಯಾಗುತ್ತಾರೆ ಎಂದು ನಾವು ಹೇಳುವುದಿಲ್ಲ. ಅವರು ಈ ದೇಶದಲ್ಲಿ ಯಾರ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ಮಾಡಲಾಗುತ್ತದೆಯೋ ಅವರ ಧ್ವನಿಯಾಗುತ್ತಾರೆ.
ಈ ದೇಶದ ಮಹಿಳೆಯರು, ಯುವಕರಿಗೆ ಹೊಸ ಧ್ವನಿ ನೀಡಿರುವ, ನಾನು ಹೆಣ್ಣು ನಾನು ಹೋರಾಡಬಲ್ಲೇ ಎಂಬ ಆತ್ಮಬಲ ತುಂಬಿರುವ ಪ್ರಿಯಾಂಕಾ ಗಾಂಧಿ ಅವರ ಜತೆ ರಾಜ್ಯದ ಮಹಿಳಾ ನಾಯಕಿಯರು ಇದ್ದಾರೆ.
ಕರ್ನಾಟಕಕ್ಕೂ ಹಾಗೂ ನೆಹರೂ ಕುಟುಂಬಕ್ಕೂ ಅವಿನಾಭಾವ ಸಂಬಂಧವಿದೆ. ಇಂದಿರಾ ಗಾಂಧಿ ಅವರು ರಾಜಕೀಯದಲ್ಲಿ ಹೊಸ ಆರಂಭ ಪಡೆಯಲು ಮುಂದಾದಾಗ ಅವರು ಕರ್ನಾಟಕದ ಸಂಸದರಾಗಿದ್ದರು. ಚಿಕ್ಕಮಗಳೂರು ಆಗಲಿ, ಬಳ್ಳಾರಿ ಆಗಲಿ, ದಲಿತರು, ಅಲ್ಪಸಂಖ್ಯಾತರು, ಮಹಿಳೆಯರು, ರೈತರು, ಕಾರ್ಮಿಕರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲವಾಗಿ ನಿಂತಿದ್ದಾರೆ.
ಇಂದು ಈ ರಾಜ್ಯದ ಜನ ಬೆಲೆ ಏರಿಕೆಯಿಂದ ನೊಂದಿದ್ದು, ಕಾಂಗ್ರೆಸ್ ಪಕ್ಷ ನಾರಿ ಶಕ್ತಿ ಹಿಂದೆ ನಿಲ್ಲಲು ಹೊಸ ಕಾರ್ಯಸೂಚಿಯನ್ನು ತೆಗೆದುಕೊಳ್ಳಬೇಕಿದೆ. ಅದಕ್ಕಾಗಿ ನಾವು ಕೆಲವು ಕ್ರಮಗಳನ್ನು ಕೈಗೊಂಡಿದ್ದು, ಈ ಬಗ್ಗೆ ಕಾಂಗ್ರೆಸ್ ಪಕ್ಷ ಸುದೀರ್ಘ ಚರ್ಚೆ ನಡೆಸಿದೆ. ಈ ದಿನ ರಾಜ್ಯದ ಮಹಿಳೆಯರ ಬಡತನ, ಬೆಲೆ ಏರಿಕೆಯಿಂದ ಬಳಲಿರುವ ಮಹಿಳೆಯರಿಗೆ ಇಂದು ಈ ವೇದಿಕೆಯಿಂದ ಹೊಸ ಆಶಾ ಕಿರಣ ಮೂಡಲಿದೆ. ಹೀಗಾಗಿ ಈ ದಿನ ಒಂದು ಐತಿಹಾಸಿಕ ದಿನವಾಗಲಿದೆ.
*ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ:*
ನಾವು ರಾಜ್ಯದಲ್ಲಿ ಮಹಿಳಾ ಸಮಾವೇಶವನ್ನು ಏರ್ಪಾಡು ಮಾಡಿ, ಅದರಲ್ಲಿ ಶ್ರೀಮತಿ ಪ್ರಿಯಾಂಕಾ ಗಾಂಧಿ ಅವರು ಪಾಲ್ಗೊಳ್ಳುತ್ತಾರೆ ಎಂದು ಗೊತ್ತಾದಮೇಲೆ ರಾಜ್ಯ ಬಿಜೆಪಿ ಸರ್ಕಾರ ದೊಡ್ಡ ಜಾಹಿರಾತನ್ನು ನೀಡಿ ತಾವು ಮುಂದೆ ಮಂಡಿಸುವ ಬಜೆಟ್ ನಲ್ಲಿ ಮಹಿಳಾ ಪರವಾದ ಕಾರ್ಯಕ್ರಮಗಳನ್ನು ನೀಡುತ್ತೇವೆ ಎಂದು ಹೇಳಿದ್ದಾರೆ. ಭಾರತೀಯ ಜನತಾಪಕ್ಷ ಅಧಿಕಾರಕ್ಕೆ ಬಂದು ಮೂರುವರೆ ವರ್ಷಗಳಾಯಿತು, ಆದರೆ ಇಂದಿನ ವರೆಗೆ ಮಹಿಳೆಯರಿಗಾಗಿ ಒಂದೇ ಒಂದು ಕಾರ್ಯಕ್ರಮ ರೂಪಿಸಿ ಜಾರಿ ಮಾಡಿಲ್ಲ. 2018ರ ಚುನಾವಣೆ ವೇಳೆ ಮಹಿಳೆಯರಿಗಾಗಿ 21 ಭರವಸೆಗಳನ್ನು ನೀಡಿದ್ದರು ಅದನ್ನು ಕೂಡ ಈಡೇರಿಸಿಲ್ಲ. ಈ ವರೆಗೆ ಮಲಗಿದ್ದ ರಾಜ್ಯ ಸರ್ಕಾರ ನಾವು ರಾಜ್ಯದ ಪ್ರತಿ ಮನೆಗೆ ಉಚಿತವಾಗಿ 200 ಯುನಿಟ್ ನೀಡುತ್ತೇವೆ ಎಂದು ಘೋಷಿಸಿದ ಮೇಲೆ ಮಹಿಳೆಯರಿಗೆ ಪುಂಕಾನುಪುಂಕವಾಗಿ ಭರವಸೆಗಳನ್ನು ನೀಡಲು ಆರಂಭ ಮಾಡಿದೆ.
ಬಿಜೆಪಿ ಪಕ್ಷ 2018ರ ಚುನಾವಣಾ ಪ್ರಣಾಳಿಕೆಯಲ್ಲಿ ಜನರಿಗೆ 600 ಭರವಸೆಗಳನ್ನು ನೀಡಿತ್ತು, ಅದರಲ್ಲಿ ಶೇ.10 ಅನ್ನು ಕೂಡ ಈಡೇರಿಸಿಲ್ಲ. ಬಿಜೆಪಿಯಂಥಾ ವಚನಭ್ರಷ್ಟ ಸರ್ಕಾರ ಯಾವುದೂ ಇಲ್ಲ. ಬಿಜೆಪಿ ಸಂವಿಧಾನ ಜಾರಿಯಾಗುವ ಮೊದಲಿನಿಂದಲೂ ಮಹಿಳೆಯರ ಪರವಾಗಿ ಇಲ್ಲ. ಇದೇ ಜನ ಮನುಸ್ಮೃತಿಯ ಮೂಲಕ ಮಹಿಳೆಯರನ್ನು ದಮನ ಮಾಡಿದ್ದರು. ಬಾಬಾ ಸಾಹೇಬರು ಸಂವಿಧಾನ ರಚಿಸಿದ ಕಾರಣಕ್ಕೆ ಇಂದು ಈ ದೇಶದ ಮಹಿಳೆಯರಿಗೆ ಎಲ್ಲಾ ಹಕ್ಕುಗಳು ಸಿಗುತ್ತಿವೆ. ದೇಶದ ಮೊದಲ ಪ್ರಧಾನಿ ಜವಹರಲಾಲ್ ನೆಹರು ಅವರು “ಈ ದೇಶದ ಅಭಿವೃದ್ಧಿ ಆಗಬೇಕಾದರೆ ದೇಶದ ಅರ್ಧದಷ್ಟಿರುವ ಮಹಿಳಾ ಸಮುದಾಯ ಅಭಿವೃದ್ಧಿಯಾಗಬೇಕು” ಎಂದು ಹೇಳಿದ್ದರು. ನೆಹರು ಅವರ ಆಡಳಿತದಲ್ಲಿ ಬಾಲ್ಯ ವಿವಾಹ, ಸತಿ ಪದ್ಧತಿಗಳಂಥ ಅನಿಷ್ಟ ಪದ್ಧತಿಗಳನ್ನು ತೊಡೆದು ಹಾಕಲು ಹಿಂದೂ ವಿವಾಹ ಕಾಯ್ದೆ ಜಾರಿಗೆ ತಂದರು. ಹಿಂದೂ ಉತ್ತರಾಧಿಕಾರಿ ಕಾಯ್ದೆ, 1950ರಲ್ಲಿ ದತ್ತು ಸ್ವೀಕರಿಸುವ ಕಾಯ್ದೆ, 1961ರಲ್ಲಿ ವರದಕ್ಷಿಣೆ ನಿಷೇಧ ಕಾಯ್ದೆಯನ್ನು ಜಾರಿಗೆ ತಂದರು. ಇದನ್ನು ಮಾಡಿದ್ದು ಕಾಂಗ್ರೆಸ್ ಪಕ್ಷ. 1951ರ ಜನಗಣತಿ ಪ್ರಕಾರ ದೇಶದ ಮಹಿಳಾ ಸಾಕ್ಷರತೆ ಪ್ರಮಾಣ 8.86% ಇದ್ದದ್ದು 2011ರ ಜನಗಣತಿಯ ಪ್ರಕಾರ 65.45% ಗೆ ಹೆಚ್ಚಳವಾಗಲು ಕಾಂಗ್ರೆಸ್ ಸರ್ಕಾರ ಕಾರಣ.
ನಾವು ಅಧಿಕಾರದಲ್ಲಿದ್ದಾಗ ಮಹಿಳೆಯರಿಗೆ ಉದ್ಯೋಗದಲ್ಲಿ ಸಿಗುತ್ತಿದ್ದ 30% ಮೀಸಲಾತಿ ಪ್ರಮಾಣವನ್ನು 33% ಗೆ ಹೆಚ್ಚಿಸಿದ್ದೇವೆ. ರಾಜೀವ್ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ಸಂವಿಧಾನ ತಿದ್ದುಪಡಿ ಮಾಡಿ ಮಹಿಳೆಯರಿಗೆ, ಹಿಂದುಳಿದವರಿಗೆ ಮೀಸಲಾತಿ ನೀಡಿದ್ದು ಮತ್ತು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಹುದ್ದೆಗಳಲ್ಲಿ ಮೀಸಲಾತಿ ಕಲ್ಪಿಸಿದ್ದಾರೆ. ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಮೀಸಲಾತಿ ಸಿಗಬೇಕು. ಮಹಿಳೆಯರಿಗೆ ವಿಧಾನಸಭೆ ಮತ್ತು ಲೋಕಸಭೆಯಲ್ಲಿ 33% ಮೀಸಲಾತಿ ನೀಡಬೇಕು ಎಂಬ ಬಿಲ್ ಅನ್ನು 1995ರಲ್ಲಿ ಲೋಕಸಭೆ ಮುಂದೆ ತರಲಾಗಿದೆ. ಈ ಬಿಲ್ ಇನ್ನು ಹಾಗೆ ಇದೆ. ಒಂದು ವೇಳೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಮೀಸಲಾತಿ ನೀಡುವ ಈ ಬಿಲ್ ಅನ್ನು ಪಾಸ್ ಮಾಡಿ ಜಾರಿ ಮಾಡುವ ಕೆಲಸ ಮಾಡಬೇಕು ಎಂಬ ನಿರ್ಣಯವನ್ನು ಇಂದಿನ ಸಭೆಯಲ್ಲಿ ಕೈಗೊಳ್ಳಬೇಕು. ಇದು ನನ್ನ ಒತ್ತಾಯ.
ಬಿಜೆಪಿ ಅವರು ಮನುಸ್ಮೃತಿಯಲ್ಲಿ ನಂಬಿಕೆ ಇಟ್ಟುಕೊಂಡಿರುವವರು. ಮನುಸ್ಮೃತಿಯಲ್ಲಿ ಮಹಿಳೆಯರಿಗೆ ಸ್ಥಾನಮಾನಗಳು ಇಲ್ಲ. ಮಹಿಳೆಯರು ಗಂಡಸರ ಅಡಿಯಾಳಾಗಿ ಇರಬೇಕು ಎಂದು ಇದು ಹೇಳುತ್ತದೆ. ಮನುಸ್ಮೃತಿಯ ಅಧ್ಯಾಯ 5 ನಿಯಮ 48ರ ಪ್ರಕಾರ ಮಹಿಳೆಯೊಬ್ಬಳು ಬಾಲ್ಯದಲ್ಲಿ ತಂದೆತಾಯಿಯ ಅಧೀನದಲ್ಲಿ, ನಂತರ ಗಂಡನ ಅಧೀನದಲ್ಲಿ, ನಂತರ ಮಕ್ಕಳ ಅಧೀನದಲ್ಲಿರಬೇಕು ಎಂಬುದನ್ನು ಹೇಳುತ್ತದೆ. ಇದನ್ನು ಒಪ್ಪಿ, ಸಮಾಜದಲ್ಲಿ ಜಾರಿಗೊಳಿಸಿದವರು ಆರ್,ಎಸ್,ಎಸ್ ಮತ್ತು ಬಿಜೆಪಿ ಪಕ್ಷ. ಕಾಂಗ್ರೆಸ್ ಪಕ್ಷ ಮೊದಲಿನಿಂದಲೂ ಮಹಿಳೆಯರ ಪರವಾಗಿದೆ. ಮಹಿಳೆಯರಿಗೆ ನ್ಯಾಯಯುತ ಹಕ್ಕುಗಳು ಸಿಗಬೇಕು, ಸಮಾನ ಗೌರವ, ಅವಕಾಶಗಳು ಸಿಗಬೇಕು ಎಂದು ಕಾಂಗ್ರೆಸ್ ಮೊದಲಿನಿಂದಲೂ ಹೋರಾಟ ಮಾಡಿಕೊಂಡು ಬಂದಿದೆ, ಮುಂದೆಯೂ ಇದಕ್ಕೆ ಬದ್ಧವಾಗಿರಲಿದೆ.
*ಎಐಸಿಸಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನೆಟ್ಟಾ ಡಿಸೋಜಾ:*
ಇಂದಿನ ದಿನ ಜ.16 2023 ಇತಿಹಾಸದಲ್ಲಿ ಅವೀಸ್ಮರಣೀಯವಾಗಲಿದೆ. ನಾವೆಲ್ಲರೂ ಇಂದು ಇಲ್ಲಿ ಸಭೆ ಸೇರಿದ್ದರೆ, ಅಲ್ಲಿ ಸಹೋದರ ರಾಹುಲ್ ಗಾಂಧಿ ಅವರು ಮಹಿಳೆಯರ ಜತೆ ಸೇರಿ ಭಾರತ ಜೋಡೋ ಯಾತ್ರೆಯಲ್ಲಿ ಹೆಜ್ಜೆ ಹಾಕುತ್ತಿದ್ದಾರೆ.
ಮಹಿಳೆಯರಿಗೆ ಸರಿಯಾದ ನಾಯಕತ್ವ ನೀಡಲು ನಾ ನಾಯಕಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕಾಂಗ್ರೆಸ್ ಪಕ್ಷದ ಇತಿಹಾಸ ನೋಡಿದರೆ, 1984ರಲ್ಲಿ ಇದೇ ಸ್ಥಳದಲ್ಲಿ ಇಂದಿರಾ ಗಾಂಧಿ ಅವರು ಮಹಿಳಾ ಕಾಂಗ್ರೆಸ್ ಸ್ಥಾಪಿಸಿದ್ದರು. ಇದು ನಮಗೆ ಭಾವುಕ ವಿಚಾರ.
ರಾಜೀವ್ ಗಾಂಧಿ ಅವರು 73-74ನೇ ಸಂವಿಧಾನ ತಿದ್ದುಪಡಿಯಲ್ಲಿ ಮಹಿಳೆಯರಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ನೀಡಿದ ಪರಿಣಾಮ ಇಂದು ಸಹಕಾರ ಕ್ಷೇತ್ರ, ಪಾಲಿಕೆಗಳು, ಪಂಚಾಯ್ತಿಗಳಲ್ಲಿ ಮಹಿಳೆಯರು ನಾಯಕಿಯರಾಗಿ ಬೆಳೆಯಲು ಅವಕಾಶ ನೀಡಿದೆ. ಹೀಗಾಗಿ ಇಂದಿನ ದಿನ ನಮಗೆಲ್ಲರಿಗೂ ಬಹಳ ಜವಾಬ್ದಾರಿಯುತ ದಿನವಾಗಲಿದೆ.
ಇಂದು ಪ್ರಿಯಾಂಕಾ ಗಾಂಧಿ ಅವರು ನೀಡುವ ಸಂದೇಶವನ್ನು ನೀವು ಪ್ರತಿ ಗ್ರಾಮಗಳು, ಗಲ್ಲಿ ಗಲ್ಲಿಗೂ ತಲುಪಿಸಬೇಕು. ಆ ಜವಾಬ್ದಾರಿ ನಿಮ್ಮ ಮೇಲಿದೆ.
*ಮಾಜಿ ಸಚಿವೆ ಉಮಾಶ್ರೀ:*
ನಾ ನಾಯಕಿ ಎಂಬ ಕಾರ್ಯಕ್ರಮ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಪರಿಕಲ್ಪನೆಯಲ್ಲಿ ಮೂಡಿ ಬಂದಿರುವ ಕಾರ್ಯಕ್ರಮ. ಈ ಕಾರ್ಯಕ್ರಮ ಮಹಿಳಾ ಶಕ್ತಿಯನ್ನು ಮುಂದೆ ತಂದು, ಸದುಪಯೋಗ ಮಾಡಿಕೊಳ್ಳುವ ಮೂಲಕ ಮಹಿಳಾ ಶಕ್ತಿ ದೇಶವನ್ನು ಕಟ್ಟಲಿದೆ ಎಂದು ಸಾರಲು ಹಮ್ಮಿಕೊಳ್ಳಲಾಗಿದೆ.
ದೇಶದಲ್ಲಿರುವ ಮೋದಿ ಸರ್ಕಾರ ಹಾಗೂ ರಾಜ್ಯದಲ್ಲಿರುವ ಭ್ರಷ್ಟ ಬಿಜೆಪಿಯ ಸರ್ಕಾರವನ್ನು ಕಿತ್ತೊಗೆಯಬೇಕು. ಇಲ್ಲಿ ಬಂದಿರುವ ಎಲ್ಲ ನಾಯಕಿಯರು ನಿಮ್ಮ ಹಳ್ಳಿಗಳಲ್ಲಿ ಹೋಗಿ ನಿಮ್ಮ ಬದುಕಿನಲ್ಲಿ ಬೆಲೆ ಏರಿಕೆ, ಮಕ್ಕಳ ನಿರುದ್ಯೋಗ ಸಮಸ್ಯೆ, ಮಹಿಳೆಯರ ಮೇಲಿನ ದೌರ್ಜನ್ಯ ಸಮಯದಲ್ಲಿ ನೀವು ಬಿಜೆಪಿ ಸರ್ಕಾರ ಕಿತ್ತೊಗೆಯಲು ಪ್ರತಿಜ್ಞೆ ಮಾಡಬೇಕು.
ಇಂದು ಗ್ರಾಮದಲ್ಲಿರುವ ತಾಯಂದಿರು ಈ ದೇಶವನ್ನು ಕಟ್ಟಬೇಕಿದೆ. ವಿವಿಧ ಪಂಚಾಯ್ತಿ ಮಟ್ಟದಲ್ಲಿರುವ ಹಾಲಿ ಮತ್ತು ಮಾಜಿ ನಾಯಕಿಯರು ಈ ದೇಶವನ್ನು ಕಟ್ಟಬೇಕು. ನೀವೆಲ್ಲರೂ ಒಂದಾಗಿ ದುಡಿದರೆ ನಮ್ಮ ಪುರುಷ ಸದಸ್ಯರು ನಮಗೆ ಬೆಂಬಲವಾಗಿ ನಿಲ್ಲುತ್ತಾರೆ. ನಾವು ಯಾವುದಕ್ಕೂ ಅಂಜುವುದು, ಅಳುಕಬೇಕಾಗಿಲ್ಲ. ಮಕ್ಕಳು, ಮಹಿಳೆಯರ ಮೇಲೆ ದೌರ್ಜನ್ಯ ಎಸಗುತ್ತಿರುವ ಸರ್ಕಾರ ಕಿತ್ತೊಗೆಯಬೇಕು.
ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಗರ್ಭಿಣಿಯರಿಗೆ ಪೌಷ್ಠಿಕ ಆಙಾರ, ಬಡವರಿಗೆ ಅನ್ನ, ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಿದದ್ದರು. ಬಡವರಿಗಾಗಿ ಇರುವ ಪಕ್ಷ ಕಾಂಗ್ರೆಸ್. ಈ ಪಕ್ಷವನ್ನು ಕಿತ್ತೊಗೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ನೀವೆಲ್ಲರೂ ಇಂದು ಪಣ ತೊಡಬೇಕು. ಮುಂದೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ತಂದೇ ತರುವ ಸಂಕಲ್ಪ ಮಾಡಿ. ನಿಮ್ಮ ನೋವು, ದೇಶದ ಮಹಿಳೆಯರ ನೋವು. ಬನ್ನಿ ನಾಯಕಿಯರೇ ರಾಜ್ಯ ಹಾಗೂ ದೇಶ ಕಟ್ಟಿ, ಕಾಂಗ್ರೆಸ್ ಪಕ್ಷ ಕಟ್ಟೋಣ.
*ಶಾಸಕಿ ಸೌಮ್ಯಾ ರೆಡ್ಡಿ ಅವರಿಂದ ಪ್ರತಿಜ್ಞೆ ವಚನ:*
ನಾವು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದು, ನಮ್ಮ ದೇಶದ ಸಂವಿಧಾನಕ್ಕೆ ಸದಾ ಬದ್ಧರಾಗಿರುತ್ತೇವೆಂದು ಪ್ರಮಾಣ ಮಾಡುತ್ತೇವೆ. ಸಮಾಜದಲ್ಲಿ, ಸೌಹಾರ್ದತೆ, ಸಮಾನತೆ ಮೂಡಿಸಲು, ಪಕ್ಷದ ಸಂವಿಧಾನ, ತತ್ವ ಸಿದ್ಧಾಂತ, ಜಾತ್ಯಾತೀತ ನಿಲುವು, ಸಾಮಾಜಿಕ ನ್ಯಾಯಗಳನ್ನು ಜಾರಿಗೆ ತರಲು ಸತತವಾಗಿ ಶ್ರಮಿಸುತ್ತೇವೆ. ಮಹಿಳೆ ಸ್ವಾತಂತ್ರ್ಯವನ್ನು ಪ್ರತಿಪಾದಿಸುವ ಕೃಂಗ್ರೆಸ್ ಪಕ್ಷದ ಸಿದ್ಧಾಂತಗಳನ್ನು ಪ್ರತಿ ಮನೆಯ ಹೆಣ್ಣಿಗೂ ತಲುಪಿಸುವ ಜವಾಬ್ದಾರಿ ನಮ್ಮದು. ದ್ವೇಷ ಬಿತ್ತು, ದ್ವೇಷವನ್ನೇ ಬೆಳೆಯುತ್ತಿರುವ ಸಮಾಜಘಾತುಕ ಶಕ್ತಿಗಳ ವಿರುದ್ಧ ನಮ್ಮ ಹೋರಾಟ. ಈ ಸಮರಕ್ಕೆ ನಾವು ಸಿದ್ಧ. ರಾಜಕೀಯವಾಗಿ ಮಹಿಳಾ ಮೀಸಲಾತಿಗೆ ಧ್ವನಿ ಎತ್ತಿದ ಸೋನಿಯಾ ಗಾಂಧಿ ಅವರ ಕನಸು ನನಸಾಗಿಸುತ್ತೇವೆ. ಮಹಿಳೆಯರಲ್ಲಿ ಸ್ವಮೌಲ್ಯದ ಬಗ್ಗೆ ಜಾಗೃತಿ ಮೂಡಿಸಿ, ಸಬಲೀಕರಣಗೊಳಿಸುವ ಕಾಂಗ್ರೆಸ್ ಸಿದ್ಧಾಂತಕ್ಕೆ ನಾವು ಬದ್ಧ, ಶಕ್ತಿಯುತ ಸ್ತ್ರೀ ಸಮಾಜ ನಿರ್ಮಾಣ, ಇದೇ ನಮ್ಮ ವಾಗ್ದಾನ. ಸಶಕ್ತ ಮಹಿಳೆ, ಸಶಕ್ತ ಭಾರತ, ಇದೇ ನಮ್ಮ ಧ್ಯೇಯ. ಇದೇ ನಮ್ಮ ಪ್ರತಿಜ್ಞೆ.
[16/01, 4:13 PM] Kpcc official: *ನಾ ನಾಯಕಿ ಕಾರ್ಯಕ್ರಮದಲ್ಲಿ ಡಿ.ಕೆ. ಶಿವಕುಮಾರ್ ಅವರ ಮಾತುಗಳು:*
ಈ ಪವಿತ್ರವಾದ ಕಾರ್ಯಕ್ರಮಕ್ಕೆ ದೇಶದ ಮಹಿಳೆಯರಿಗೆ ಶಕ್ತಿ ತುಂಬಲು, ಅವರ ಧ್ವನಿಯಾಗಲು ಶ್ರೀಮತಿ ಪ್ರಿಯಾಂಕಾ ಗಾಂಧಿ ಅವರು ಇಲ್ಲಿಗೆ ಬಂದಿದ್ದಾರೆ.
ಪ್ರಿಯಾಂಕಾ ಗಾಂಧಿ ಅವರು ನವ ಭಾರತದ ನಿರ್ಮಾತೃ ನೆಹರೂ ಅವರ ಮುಮ್ಮೊಗಳು ಮಾತ್ರವಲ್ಲ, ದೇಶದ ಉಕ್ಕಿನ ಮಹಿಳೆ ಇಂದಿರಾ ಗಾಂಧಿ ಅವರ ಮೊಮ್ಮಗಳು ಮಾತ್ರವಲ್ಲ, ದೇಶದ ಹಿತಕ್ಕಾಗಿ ಎರಡು ಬಾರಿ ಪ್ರಧಾನಮಂತ್ರಿ ಹುದ್ದೆ ತ್ಯಾಗ ಮಾಡಿದ ಸೋನಿಯಾ ಗಾಂಧಿ ಅವರ ಪುತ್ರಿಯೂ ಹೌದು. ನಾವೆಲ್ಲರೂ ಸೇರಿ ಅವರನ್ನು ಹೃದಯಪೂರ್ವಕವಾಗಿ ಸ್ವಾಗತಿಸೋಣ.
ಇಂದಿರಾ ಗಾಂಧಿ ಅವರ ಮಾತನ್ನು ಸೋನಿಯಾ ಗಾಂಧಿ ಅವರು ಒಂದು ಪುಸ್ತಕದಲ್ಲಿ ಉಲ್ಲೇಖಿಸಿದ್ದು, ಕಾಂಗ್ರೆಸ್ ಒಂದು ವಿಶೇಷವಾದ ಸಂಸ್ಥೆ, ಕಾಂಗ್ರೆಸ್ ಆರಂಭದಿಂದಲೂ ನಮ್ಮ ಜನರ ಮೂಲಭೂತ ಸಮಸ್ಯೆ ಗುರುತಿಸಿಕೊಂಡು, ಅವರಿಗೆ ಸಾಮಾಜಿಕ ನ್ಯಾಯ ಒದಗಿಸಲು ಜಾತ್ಯಾತೀತತೆ, ಪ್ರಜಾಪ್ರಭುತ್ವದ ಕಡೆ ನಿಂತಿದೆ. ಇವು ಈಗಲೂ ನಮ್ಮ ಪಾಲಿನ ಮಾರ್ಗದರ್ಶಿ. ನಾವು ಕೆಳ ಮಟ್ಟದಿಂದ ಕಾರ್ಯಕರ್ತರಿಗೆ ಮಾಡಬೇಕಾದ ಕೆಲಸದ ಜವಾಬ್ದಾರಿ ವಹಿಸಿದರೆ ಕಾಂಗ್ರೆಸ್ ಬಲಿಷ್ಠವಾಗಿ ಬೆಳೆಯಲಿದೆ.
ಪುರುಷರು ನೈಜ ಸಾಮರ್ಥ್ಯವನ್ನು ಅರಿವಾಗಿಸುವ ಮೊದಲು ಮಹಿಳೆಯರಿಗೆ ಪೂರ್ಣ ಪ್ರಮಾಣದ ಸಾಮರ್ಥ್ಯ ಬೆಳೆಸಿಕೊಳ್ಳಲು ಅನುವು ಮಾಡಿಕೊಡಬೇಕು. ಇದನ್ನು ಕಲ್ಪಿಸಿದ ಕ್ಷಣದಿಂದ ಆಕೆ ಶಿಕ್ಷಕಿ ಪಾತ್ರ ವಹಿಸುತ್ತಾಳೆ. ಆಕೆ ಉತ್ತಮ ಪತ್ನಿ ಹಾಗೂ ತಾಯಿಯಾಗಿರುತ್ತಾಳೆ. ಅವಳೇ ನಾ ನಾಯಕಿ.
ಹೆಣ್ಣು ಕುಟುಂಬದ ಕಣ್ಣು, ಹೆಣ್ಣು ದೇಶದ ಶಕ್ತಿ. ಮಹಿಳೆಯರು ಯುವಕರಿಗೆ ಶಕ್ತಿ ತುಂಬಿದರೆ ದೇಶದಲ್ಲಿ ಬದಲಾವಣೆ ಖಂಡಿತವಾಗಿಯೂ ಆಗುತ್ತದೆ. ಈ ಕಾರ್ಯ ಈ ಭೂಮಿಯಿಂದ ಆಗಲಿ. ರಾಜೀವ್ ಗಾಂಧಿ ಅವರು ಇದೇ ಸ್ಥಳದಿಂದ ದೇಶದ ನಾಯಕತ್ವ ವಹಿಸಿದ್ದರು. ಅವರ ಪುತ್ರಿ ಪ್ರಿಯಾಂಕಾ ಗಾಂಧಿ ಅವರು ಈ ಕಾರ್ಯಕ್ರಮದ ಮೂಲಕ ರಾಜಕೀಯವಾಗಿ ಕರ್ನಾಟಕಕ್ಕೆ ಮೊದಲ ಬಾರಿಗೆ ಆಗಮಿಸಿದ್ದು, ಅವರಿಗೆ ಹೃತ್ಪೂರ್ವಕ ಸ್ವಾಗತ.
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಬೆಲೆ ಏರಿಕೆಯಿಂದ ನೊಂದಿರುವ ಮಹಿಳೆಯರಿಗೆ ನೆರವಾಗಲು ರಾಜ್ಯದ ಪ್ರತಿ ಮನೆಯ ಓರ್ವ ಗೃಹಿಣಿಗೆ ಶಕ್ತಿ ತುಂಬಲು ಪ್ರತಿ ತಿಂಗಳು 2 ಸಾವಿರ ರೂಪಾಯಿಯನ್ನು ನೀಡಲಾಗುವುದು.
Post a Comment