[22/01, 5:31 PM] Cm Ps: *ಚಿರತೆ ದಾಳಿ: ತೀವ್ರ ಹುಡುಕಾಟಕ್ಕೆ ವಿಶೇಷ ಪಡೆ ರಚನೆ*ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*
ಮೈಸೂರು, (ನಂಜನಗೂಡು) ಜನವರಿ 22: ತೀವ್ರ 12 ವರ್ಷದ ಬಾಲಕನನ್ನು ಕೊಂಡಿರುವ ಚಿರತೆಯನ್ನು ಸೆರೆ ಹಿಡಿಯಲು ತೀವ್ರ ಹುಡುಕಾಟ ನಡೆಸಲು ಸೂಚಿಸಲಾಗಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ನಂಜನಗೂಡಿನ ಹೆಲಿಪ್ಯಾಡಿನ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದರು.
*ಇನ್ನು ಹೆಚ್ಚಿನ ಬಳಿ ನೀಡಲು ಸಾಧ್ಯವಿಲ್ಲ*
ನಿನ್ನೆ ಮತ್ತೊಂದು ಚಿರತೆ 12 ವರ್ಷದ ಮಗುವಿನ ಮೇಲೆ ದಾಳಿ ಮಾಡಿ ಇಂದು ಅತ್ಯಂತ ಕೆಟ್ಟ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಚಿರತೆ ಕಳೆದ ಮೂರು ಬಾರಿ ದಾಳಿ ಮಾಡಿರುವ ಪ್ರದೇಶಗಳು ಸುಮಾರು 2 ಕಿ.ಮೀ ವ್ಯಾಪ್ತಿಯಲ್ಲಿ ಇದೆ. ಬೆಳಿಗ್ಗೆ ಯೇ ನಮ್ಮ ಅರಣ್ಯ ಸಂರಕ್ಷಣಾಧಿಕಾರಿಗಳ ಬಳಿ ಮಾತನಾಡಿ 2 ರಿಂದ 3 ಕಿಮೀ ವ್ಯಾಪ್ತಿಯಲ್ಲಿ ವಿಶೇಷ ಪಡೆಗಳನ್ನು ಬಳಸಿ, ಚಿರತೆಗಳನ್ನು ಸೆರೆ ಹಿಡಿಯಲು ಅಗತ್ಯವಿರುವ ಕ್ರಮಗಳನ್ನು ತೆಗೆದುಕೊಳ್ಳಲು ಆದೇಶ ನೀಡಿದ್ದು, ಗಡಿ ಪ್ರದೇಶದಲ್ಲಿ ವಿಶೇಷ ಕಾವಲುಗಾರರನ್ನು ನೇಮಿಸಿ, ಜನರಲ್ಲಿ ಜಾಗೃತಿ ಮೂಡಿಸುವುದು, ಸಂಜೆ ಮೇಲೆ ಹೊರಗೆ ತೆರಳದಂತೆ ತಿಳಿಸುವುದು ಮಾಡಬೇಕು. ಗಡಿ ಪ್ರದೇಶದಲ್ಲಿ ಅರಣ್ಯ ಮತ್ತು ಪೊಲೀಸ್ ಇಲಾಖೆಯವರು ಬಂದೂಕುಧಾರಿಗಳಾಗಿ ಕಾವಲು ಕಾಯಬೇಕು. ಇನ್ನು ಹೆಚ್ಚಿನ ಬಳಿ ನೀಡಲು ಸಾಧ್ಯವಿಲ್ಲ. ಕೂಡಲೇ ಕ್ರಮಕೈಗೊಳ್ಳಲು ವಿಶೇಷ ತಂಡ ರಚಿಸಿ ಮೃತರ ಕುಟುಂಬಗಳಿಗೆ ನೀಡುವ ಪರಿಹಾರವನ್ನು ಹೆಚ್ಚಿಸಲಾಗಿದ್ದು ಕೂಡಲೇ ಕುಟುಂಬದವರಿಗೆ ನೀಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಖಂಡಿತವಾಗಿಯೂ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಮೊನ್ನೆಯಷ್ಟೇ ಒಂದು ಚಿರತೆಯನ್ನು ಹಿಡಿಯಲಾಗಿದೆ. ಇದನ್ನೂ ಆದಷ್ಟು ಬೇಗ ಸೆರೆ ಹಿಡಿಯಲು ಕ್ರಮ ವಹಿಸಲಾಗುವುದು ಎಂದರು.
[22/01, 6:33 PM] Cm Ps: ಬೆಂಗಳೂರು, ಜನವರಿ 22: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಿರುವ ನ್ಯಾಯಾಧೀಶರು, ಸರ್ಕಾರಿ ಅಭಿಯೋಜಕರು ಹಾಗೂ ವಕೀಲರುಗಳಿಗೆ 2019-20 ಮತ್ತು 2020-21ನೇ ಸಾಲಿನ ನ್ಯಾಯಾಂಗದಲ್ಲಿ ಕನ್ನಡ ಪ್ರಶಸ್ತಿ ಪ್ರದಾನ ಮಾಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಜಿ.ನರೇಂದರ್, ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನೀಲ್ ಕುಮಾರ್, ಪ್ರೊ.ಮಲ್ಲಪುರಂ ವೆಂಕಟೇಶ್, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಶಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಡಾ: ಎನ್ ಮಂಜುಳಾ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ;ಸಂತೋಷ್ ಹಾನಗಲ್ಲ ಉಪಸ್ಥಿತರಿದ್ದರು.
[22/01, 8:02 PM] Cm Ps: *ಕನ್ನಡದ ಕಾನೂನು ನಿಘಂಟನ್ನು ಸಿದ್ಧಪಡಿಸಲು ತಜ್ಞರ ಸಮಿತಿ ರಚಿಸಲು* *ಸಿಎಂ ಬೊಮ್ಮಾಯಿ ಸಲಹೆ*
ಬೆಂಗಳೂರು, ಜನವರಿ22: ಕನ್ನಡದ ಕಾನೂನು ನಿಘಂಟನ್ನು ಸಿದ್ಧಪಡಿಸಲು ತಜ್ಞರ ಸಮಿತಿ ರಚಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಲಹೆ ನೀಡಿದರು.
ಅವರು ಇಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಿರುವ ನ್ಯಾಯಾಧೀಶರು, ಸರ್ಕಾರಿ ಅಭಿಯೋಜಕರು ಹಾಗೂ ವಕೀಲರುಗಳಿಗೆ 2019-20 ಮತ್ತು 2020-21ನೇ ಸಾಲಿನ ನ್ಯಾಯಾಂಗದಲ್ಲಿ ಕನ್ನಡ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ದಿನನಿತ್ಯ ನ್ಯಾಯಾಲಯದಲ್ಲಿ ಕನ್ನಡದ ಬಳಕೆಯಾಗಲು ಕನ್ನಡದ ಕಾನೂನು ನಿಘಂಟನ್ನು ಸಿದ್ಧಪಡಿಸಲು ತಜ್ಞರ ಸಮಿತಿ ರಚಿಸಬೇಕು. ಸಮಾನಾಂತರ ಕನ್ನಡ ಶಬ್ದಗಳು ಸ್ಥಾಪಿತವಾದರೆ ಬಳಸಲು ನ್ಯಾಯಾಧೀಶರಿಗೆ ಅನುಕೂಲವಾಗಲಿದೆ. ಹಲವಾರು ಇಂಗ್ಲಿಷ್ ಶಬ್ಧ ಗಳಿಗೆ ನೇರವಾದ ಕನ್ನಡದ ಪದಗಳಿಲ್ಲ. ಮಾತೃಭಾಷೆಯಲ್ಲಿ ತೀರ್ಪು ಬರುವ ಅವಶ್ಯಕತೆ ಇದೆ ಎಂದರು.
*ವಕೀಲರ ಮಗ*
ನಾನು ವಕೀಲ ಅಲ್ಲ ಆದರೆ ವಕೀಲರ ಮಗ. ಹತ್ತಿರದಿಂದ ಈ ವೃತ್ತಿಯನ್ನು ಕಂಡಿದ್ದೇನೆ. ನಮ್ಮ ತಂದೆಯವರ ಬಳಿ ಗೆ 28 ಕಿರಿಯ ವಕೀಲರಿದ್ದರು. ಮೊದಲು ಜನರು ಬಹಳ ಮುಗ್ಧರಿದ್ದರು. ಅವರು ವಕೀಲರು ಏನು ಹೇಳಿದರೂ ಮಾಡುತ್ತಿದ್ದರು ಎಂದು ಸ್ಮರಿಸಿದರು.
*ಕನ್ನಡದಲ್ಲಿ ತರ್ಜುಮೆ*
ಪ್ರಕರಣಗಳ ತೀರ್ಪು ಕನ್ನಡದಲ್ಲಿ ಬಾರದಿದ್ದರೆ ಎಷ್ಟೊ ಸಮಸ್ಯೆಗಳಾಗುತ್ತವೆ. ತೀರ್ಪುಗಳನ್ನು ಕನ್ನಡದಲ್ಲಿ ತರ್ಜುಮೆಗೊಳಿಸುವ ವ್ಯವಸ್ಥೆಯಾಗಬೇಕು. ಅವುಗಳನ್ನು ಎಲ್ಲಾ ನ್ಯಾಯಾಲಯಗಳ ಗ್ರಂಥಾಲಯಗಳಿಗೆ ಕಳುಹಿಸಬೇಕು ಎಂದರು. ಕನಿಷ್ಠ ಪಕ್ಷ ತರ್ಜುಮೆಯಾದ ತೀರ್ಪು ಗಳನ್ನು ನೋಡಿಕೊಳ್ಳುವ ಅವಕಾಶವಿರಬೇಕು ಎಂದರು.
*ಆಡಳಿತಗಾರರಿಗೂ ಕಾನೂನಿನ ಅರಿವು ಅಗತ್ಯ*
ಈ ಪ್ರಕ್ರಿಯೆಯಲ್ಲಿ ನ್ಯಾಯ ಸುಲಭವಾಗಿ ಕೊಡುವ ವ್ಯವಸ್ಥೆ ಯಾಗಲಿದೆ. ಇಂದಿನ ಕಾಲದಲ್ಲಿ ತೀರ್ಪುಗಳ ಅರ್ಥೈಸುವಿಕೆ ಬಹಳ ಕಷ್ಟ. ಆಡಲಿತಗಾರರಿಗೂ ಕಾನೂನಿನ ಅರಿವು ಅಗತ್ಯ. ಪ್ರಾಥಮಿಕ ಮಾಹಿತಿ ಇದ್ದರೆ ನ್ಯಾಯ ನೀಡಲು ಸಾಧ್ಯ. ನ್ಯಾಯ ದಾನ ತೀರ್ಪಿನಿಂದ ಪ್ರಾರಂಭವಾಗಿ, ಕಕ್ಷಿದಾರಣಿಗೆ ಮುಟ್ಟಿದಾಗ ಪೂರ್ಣವಾಗುತ್ತದೆ ಎಂದರು.
*ನ್ಯಾಯಾಂಗ ವ್ಯವಸ್ಥೆಯ ಮೇಲೆ ಭರವಸೆ*
ತೀರ್ಪು, ಅಭಿಪ್ರಾಯಗಳ ವ್ಯತ್ಯಾಸ ಗೊತ್ತಿರಬೇಕು. ಅದಕ್ಕಾಗಿ ತರಬೇತಿ ಅಗತ್ಯವಿದೆ. ದೇಶದಲ್ಲಿ ಪ್ರಜಾಪ್ರಭುತ್ವ ಗಟ್ಟಿಯಾಗಿ ಉಳಿದಿದ್ದರೆ, ನ್ಯಾಯದ ಬಗ್ಗೆ ನಂಬಿಕೆ ಉಳಿದಿದ್ದರೆ, ಯಾರಿಗಾದರೂ ಅನ್ಯಾಯವಾಗಿದ್ದರೆ ನಮಗೆ ನ್ಯಾಯ ಸಿಗುತ್ತದೆ ಎನ್ನುವ ಭರವಸೆ ಇರುವುದು ನ್ಯಾಯಾಂಗ ವ್ಯವಸ್ಥೆಯ ಮೇಲೆ ಮಾತ್ರ. ಅಂತರರಾಷ್ಟ್ರೀಯ ಮಟ್ಟದ ನ್ಯಾಯಾಂಗ ವ್ಯವಸ್ಥೆ ಇಲ್ಲಿ ಇರುವುದರಿಂದ ವಿದೇಶಿ ಹೂಡಿಕೆದಾರರು ಇಲ್ಲಿಗೆ ಬರುತ್ತಾರೆ. ನಮ್ಮ ದೇಶದ ಪ್ರಗತಿಯಲ್ಲಿ ನ್ಯಾಯಾಂಗದ ಕೊಡುಗೆ ಬಹಳ ಇದೆ. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ವಿಚಾರಗಳಲ್ಲಿ ತನ್ನದೇ ಆದ ಕೊಡುಗೆ ನೀಡುತ್ತಿದೆ. ದೇಶದಲ್ಲಿ ಸ್ಥಿರತೆಯನ್ನು ತಂದು ಸುಸ್ಥಿರ ಬೆಳವಣಿಗೆಗೆ ನ್ಯಾಯಾಂಗ ಕೊಡುಗೆ ನೀಡುತ್ತಿದೆ. ಪ್ರಮುಖ ಪಾತ್ರ ವಹಿಸಿದೆ. ಕಕ್ಷಿದಾರರಿಗೆ ನ್ಯಾಯ ಕೊಡುವುದಷ್ಟೆ ಅಲ್ಲ ಕನ್ನಡದಲ್ಲಿ ನ್ಯಾಯ ಕೊಡುವ ಒಳ್ಳೆಯ ಕೆಲಸ ಮಾಡಿದ್ದೀರಿ ಎಂದರು.
*ಕನ್ನಡದಲ್ಲಿ ತೀರ್ಪು ನೀಡುವುದು ಸುಲಭದ ಮಾತಲ್ಲ*
ಆಡಳಿತದಲ್ಲಿ ಕನ್ನಡವನ್ನು ಅನುಷ್ಠಾನಕ್ಕೆ ತರಲು ಸುದೀರ್ಘ ಹೋರಾಟ ನಡೆದಿದೆ. ವಿ.ಕೃ ಗೋಕಾಕ್ ನೇತೃತ್ವದ ಸಮಿತಿಯ ವರದಿಯನ್ನು ಅನುಷ್ಠಾನಆಡಲು ದೊಡ್ಡ ಚಳವಳಿ ನಡೆದಿದೆ. ಇಂದು ಬಹುತೇಕವಾಗಿ ಆಡಳಿತ ಕನ್ನಡದಲ್ಲಿ ಆಗುತ್ತಿರುವುದು ಗಮನಿಸುತ್ತಿದ್ದೇವೆ. ಶಿಕ್ಷಣದಲ್ಲಿ ಕನ್ನಡದ ಬಗ್ಗೆ ಕರ್ನಾಟಕ ಸರ್ಕಾರ ಹಲವಾರು ಕಾನೂನು ಗಳನ್ನು ರೂಪಿಸಿದೆ. ಹಲವಾರು ಸುತ್ತೋಲೆ ಹೊರಡಿಸಿದೆ. ಆದರೂ ಸರ್ವೋಚ್ಚ ನ್ಯಾಯಾಲಯ ಶಿಕ್ಷಣ ದಲ್ಲಿ ಸ್ವಾತಂತ್ರ್ಯವಿರಬೇಕು ಎಂದಿರುವ ಕಾರಣ ಸಂಪೂರ್ಣವಾಗಿ ಅನುಷ್ಠಾನ ಮಾಡಲು ಸಾಧ್ಯವಿಲ್ಲ.. ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕೆ, ಕನ್ನದಲ್ಲಿ ಪ್ರಾಥಮಿಕ ಶಿಕ್ಷಣಕ್ಕೆ 1-5 ವರೆಗೆ ಮಾತೃಭಾಷೆ ಯಲ್ಲಿ ಕಲಿಯಬೇಕೆಂದು ಒತ್ತಾಯಿಸಲಾಗಿದೆ. ಕೇಂದ್ರ ಸರ್ಕಾರದ ನೂತನ ಶಿಕ್ಷಣ ನೀತಿ ಮಾತೃಭಾಷೆಗೆ ಒತ್ತು ನೀಡಿದೆ. ಪ್ರಾಥಮಿಕ ಮತ್ತು ಇಂಜಿನಿಯರಿಂಗ್ ನಲ್ಲಿಯೂ ಕನ್ನಡದಲ್ಲಿಯೇ ವ್ಯಾಸಂಗ ಮಾಡಲು ಅವಕಾಶವಿದೆ. ಕನ್ನಡ ಕಾಯುವ,ಉಳಿಸುವ,ಬೆಳೆಸಲು ಸಮಗ್ರ ಕನ್ನಡದ ವಿಧೇಯಕವನ್ನು ಈಗಾಗಲೇ ವಿಧಾನಮಂಡಲದಲ್ಲಿ ಮಂಡಿಸಿದ್ದು, ಬರುವ ದಿನಗಳಲ್ಲಿ ಅನುಮೋದಿಸಿ, ಎಲ್ಲಾ ರಂಗಗಳಲ್ಲಿ ಕಾನೂತಾತ್ಮಕವಾಗಿ ಕನ್ನಡದ ಅನುಷ್ಠಾನಕ್ಕೆ ಪ್ರಥಮ ಬಾರಿಗೆ ಪ್ರಯತ್ನ ಮಾಡಲಾಗುತ್ತಿದೆ. ನ್ಯಾಯಾಂಗದಲ್ಲಿ ಕನ್ನಡ ಸ್ವಲ್ಪ ಕಷ್ಟಸಾಧ್ಯ. ಕನ್ನಡ ಭಾಷೆ ಯಲ್ಲಿ ಕಲಿತ ಮಕ್ಕಳು ಎಲ್ಲಾ ರಂಗದಲ್ಲಿಯೂ ಮುಂದೆ ಬರುತ್ತಿದ್ದಾರೆ. ಅದು ಅವರ ಸಾಮರ್ಥ್ಯವನ್ನು ತೋರಿಸುತ್ತದೆ. ಹಲವಾರು ದೇಶಗಳ ಪ್ರಮುಖ ನೀತಿಗಳಿಂದ ಕೂಡಿದ ಕಾನೂನು, ಪ್ರಜಾಪ್ರಭುತ್ವದಲ್ಲಿ ಚರ್ಚೆಯಾಗಿ ವ್ಯವಸ್ಥಿತ ರೂಪ ನೀಡಲಾಗಿದೆ. ಕನ್ನಡದಲ್ಲಿ ತೀರ್ಪು ನೀಡುವುದು ಸುಲಭದ ಮಾತಲ್ಲ. ಆದರೆ ಕನ್ನಡ ದಲ್ಲಿ ತೀರ್ಪು ನೀಡಿರುವುದು ಅಭೂತಪೂರ್ವ ಸಾಧನೆ ಎಂದು ಅಭಿನಂದಿಸಿದರು. ಕನ್ನಡ ಅರಿವಿನಿಂದ ಮಾಡಿರುವ ಈ ಕಾರ್ಯ ವಿಸ್ತರಿಸಬೇಕು. ಉಚ್ಛ ನ್ಯಾಯಾಲಯದಲ್ಲಿಯೂ ಇದಾಗಬೇಕು ಎಂಬ ಅಪೇಕ್ಷೆ ಕನ್ನಡಿಗರದ್ದು ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಜಿ.ನರೇಂದರ್, ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನೀಲ್ ಕುಮಾರ್, ಪ್ರೊ.ಮಲ್ಲಪುರಂ ವೆಂಕಟೇಶ್, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಶಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಡಾ: ಎನ್ ಮಂಜುಳಾ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ;ಸಂತೋಷ್ ಹಾನಗಲ್ಲ ಉಪಸ್ಥಿತರಿದ್ದರು.
[22/01, 10:44 PM] Cm Ps: *ನಮ್ಮ ಮಾತು ಮುಂದಿನ ಜನಾಂಗಕ್ಕೆ ಸಂಸ್ಕಾರ ಹೇಳಿಕೊಡುವಂತಿರಬೇಕು*:
*ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*
ಮೈಸೂರು, ಜನವರಿ 22: ನಾವಾಡುವ ಮಾತು ಮುಂದಿನ ಜನಾಂಗಕ್ಕೆ ಸಂಸ್ಕಾರ ಹೇಳಿಕೊಡುವಂತಿರಬೇಕು ಎಂದು ದೊಡ್ಡ ಸ್ಥಾನಕ್ಕೆ ಏರಿದವರು ಸಣ್ಣತನದ ಮಾತುಗಳನ್ನಾಡಬಾರದು ಎಂದುಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಸುತ್ತೂರು ಶ್ರೀಕ್ಷೇತ್ರದಲ್ಲಿ ನಡೆಯುತ್ತಿರುವ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದ ಭಜನಾ ಮೇಳದ ಸಮಾರೋಪದಲ್ಲಿ ಮಾತನಾಡಿದರು.
ಜನರ ಭಾವನೆ ಮತ್ತು ನಂಬಿಕೆಯನ್ನು ಘಾಸಿಗೊಳಿಸುವಂತೆ ಹೇಳಿಕೆ ನೀಡಬಾರದು ಎಂದ ಅವರು, ನಾನು ಸುತ್ತೂರಿಗೆ ಬಂದಾಗ ಮಾಜಿ ಸಿಎಂ ಒಬ್ಬರು ನಿಮ್ಮ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ ಎಂದು ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಲು ನಾನು ಅವರ ಮಟ್ಟಕ್ಕೆ ಇಳಿಯಬೇಕಾಗುತ್ತದೆ. ಸಣ್ಣವರು ದೊಡ್ಡವರಾದ ಅನೇಕ ಉದಾಹರಣೆ ನಮ್ಮ ಮುಂದಿದೆ. ಕರ್ನಾಟಕದ ಸಂಸ್ಕೃತಿ ಅಥವಾ ಕರ್ನಾಟಕದ ರಾಜಕೀಯ ಸಂಸ್ಕೃತಿ ಅವರ ಹೇಳಿಕೆಯಲ್ಲಿ ಇಲ್ಲ ಎಂದರು.
ಭಾರತೀಯರು ರಾಮ ಇದ್ದಾನೆ ಎಂದು ನಂಬಿದ್ದಾರೆ. ನಿಮಗೆ ನಂಬಿಕೆ ಇಲ್ಲದಿದ್ದರೆ ಬೇಡ, ಇದ್ದಾನೆ ಎಂದರೆ ಇದ್ದಾನೆ, ಇಲ್ಲ ಎಂದರೆ ಇಲ್ಲ. ಅದನ್ನು ಬಿಟ್ಟು ಬೇರೆಯವರ ಭಾವನೆ ಮತ್ತು ನಂಬಿಕೆಯನ್ನು ಘಾಸಿಗೊಳಿಸುವಂತೆ ಕೆಟ್ಟದಾಗಿ ಮಾತನಾಡಬಾರದು.
ನನ್ನ ಕಾರ್ಯ ಮತ್ತು ಸ್ಥಾನದ ಗೌರವ ಉಳಿಸಿಕೊಂಡು ಹೋಗಬೇಕು. ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಯಾರನ್ನೊ ಮೆಚ್ಚಿಸಲು ಮಾತನಾಡದೆ ಪ್ರತಿ ಶಬ್ದ ಬಳಸುವಾಗಲೂ ಯೋಚಿಸಿ ಮಾತನಾಡಬೇಕು. ಯಾರನ್ನೂ ನೋಡಿಸದಂತೆ ನಡೆದುಕೊಳ್ಳಬೇಕು. ನಮ್ಮ ದೇಶಕ್ಕೆ ಮತ್ತು ಸಂಸ್ಕೃತಿಗೆ ನೂರಾರು, ಸಾವಿರಾರು ವರ್ಷದ ಇತಿಹಾಸ, ಪರಂಪರೆ ಇದೆ ಎಂಬುದನ್ನು ಮರೆಯಬಾರದು ಎಂದು ಅವರು ಹೇಳಿದರು.
*ಸುಸಂಸ್ಕೃತವಾಗಿ ವಿರೋಧಿಸಿ*
ಭಿನ್ನಾಭಿಪ್ರಾಯವನ್ನು ಸುಸಂಸ್ಕೃತವಾಗಿಯೂ ವಿರೋಧಿಸಬಹುದು. ಆದರೆ ನಮ್ಮ ಪರಂಪರೆಯನ್ನೇ ಪ್ರಶ್ನಿಸುವ, ಕೀಳಾಗಿ ಮಾತನಾಡುವುದು ಸರಿಯಲ್ಲ. ನಮ್ಮ ವಿಚಾರ ಹೇಳುವಾಗ ಮತ್ತೋಬ್ಬರಿಗೆ ನೋವಾಗುತ್ತದೆ ಎಂಬ ವಿವೇಕ ಇಲ್ಲದಿದ್ದರೆ ಕಷ್ಟವಾಗುತ್ತದೆ. ಒಬ್ಬರ ಬಗ್ಗೆ ಕೀಳಾಗಿ ಮಾತನಾಡುವುದು ಯಾವ ಧರ್ಮ? ಯಾವ ವಿಚಾರ? ಯಾವುದು ನಿಮ್ಮ ಆದರ್ಶ? ಎಂದು ಅವರು ಪ್ರಶ್ನಿಸಿದರು.
*ಯೋಚನೆ ಮಾಡಿ ಮಾತನಾಡಬೇಕು.*
ಹೀಗಾಗಿ ವಿಶೇಷವಾಗಿ ನಮ್ಮ ಮಾತುಗಳಿಂದ ಜನ ಪ್ರಭಾವಕ್ಕೆ ಒಳಗಾಗುತ್ತಾರೆ. ಪ್ರತಿಯೊಂದು ಶಬ್ದವನ್ನು ಯೋಚನೆ ಮಾಡಿ ಮಾತನಾಡಬೇಕು. ಒಳ್ಳೆಯ ರೀತಿಯಲ್ಲಿ ಬೇರೆಯವರ ಮನಸ್ಸನ್ನು ನೋಯಿಸದಂತೆ ನಾವು ಇವತ್ತು ನಡೆದುಕೊಳ್ಳಬೇಕು. ಈಗ ತಾನೆ ವಚನವನ್ನು ಹಾಡಿದ್ದಾರೆ. ನುಡಿದರೆ ಮುತ್ತಿನ ಹಾರದಂತಿರಬೇಕು ಎಂದು ಬಸವಣ್ಣನವರು ಹೇಳಿದ್ದಾರೆ. ಇದನ್ನು ನಮ್ಮ ಜೀವನದಲ್ಲಿ ಅಳವಡಿಸುವುದಕ್ಕೆ 700 ವರ್ಷಕ್ಕಿಂತಲೂ ಮುಂಚೆ ಈ ಒಂದು ವಿಚಾರ ಕರ್ನಾಟಕದಲ್ಲಿ ನಡೆದಿತ್ತು. ಸಾಮಾನ್ಯ ಜನತೆಗೆ ಗೊತ್ತಿರದಂತಹ ವಿಚಾರ ಅದು ಬಡವರಿಗೆ ತಿಳಿದಿರುವಂತಹ ವಿಚಾರ ಮನುಷ್ಯನಿಗೆ ಸಹಜವಾದ ಗುಣ. ಜ್ಞಾನಾರ್ಜನೆ ಮಾಡಿಕೊಳ್ಳುವುದು. ಸರ್ಕಾರ ಇರಲಿಲ್ಲ ಏನು ಇರಲಿಲ್ಲ ಅಂತಹ ಸಂದರ್ಭದಲ್ಲಿ ಶಿಕ್ಷಣ ಕೊಟ್ಟಿದ್ದಾರೆ ಅನ್ನವನ್ನು ಕೊಟ್ಟಿದ್ದಾರೆ ಮತ್ತು ಆಶ್ರಯವನ್ನು ಕೊಟ್ಟಿದ್ದಾರೆ. ಇವತ್ತು ಶಿಕ್ಷಣ ಅನ್ನ ಎಲ್ಲವನ್ನೂ ಕೊಟ್ಟಿರುವ ಉದಾಹರಣೆ ಇದೆ. ಯಾವ ಸಮಾಜದಲ್ಲಿ ಶಿಕ್ಷಣ ಇರುವುದಿಲ್ಲವೋ ಆ ಸಮಾಜ ಪ್ರಗತಿಪರ ಸಮಾಜ ಆಗುವುದಿಲ್ಲ. ಒಂದು ಸುಸಂಸ್ಕೃತವಾದ ಶೈಕ್ಷಣಿಕ ರಾಜ್ಯ ಆಳುವವರು ಅಕ್ಷರದ ಜ್ಞಾನ ಇಲ್ಲದೆ ಇರುವಾಗ ಆ ಅಕ್ಷರದ ಜ್ಞಾನವನ್ನು ಕೊಟ್ಟಿರುವಂತಹದು. ಹಸಿದವರಿಗೆ ಅನ್ನವನ್ನು ಕೊಟ್ಟಿರುವಂತಹದು. ಆಶ್ರಯ ಇಲ್ಲದವರಿಗೆ ಆಶ್ರಯವನ್ನು ಕೊಟ್ಟಿರುವಂತಹದು. ಸುತ್ತೂರು ಮಠದ ಸ್ವಾಮಿಗಳು ಬಹಳ ಈ ಭಾಗದ ಜಾತ್ರೆಯನ್ನು ಎಲ್ಲಾ ಕಾರ್ಯಕ್ರಮ ದೊಡ್ಡ ಮಟ್ಟದಲ್ಲಿ ಮಾಡಿಕೊಂಡು ಬಂದಿದ್ದಾರೆ. ಅವರು ಸದಾ ಕಾಲ ನಮಗೆ ಒಳಿತನ್ನೆ ಬಯಸಿದ್ದಾರೆ ನಾಡಿನ ಸಮಸ್ತ ಜನತೆಗೆ ಒಳಿತನ್ನೇ ಬಯಸಿದ್ದಾರೆ ಆಶೀರ್ವಾದ ಕೂಡ ಮಾಡಿದ್ದಾರೆ. ಆದ್ದರಿಂದ ನಮ್ಮ ಸಮಾಜ ಒಂದು ಸರಿಯಾದ ದಾರಿಯಲ್ಲಿ ನಡೆಯುತ್ತಿದೆ ಎಂದರು.
*ಟೀಕೆಗಳು ಯಾರನ್ನೂ ಬಿಟ್ಟಿಲ್ಲ*
ಇತಿಹಾಸವನ್ನು ಗಮನಿಸಿದಾಗ ಟೀಕೆಗಳು ಯಾರನ್ನು ಬಿಟ್ಟಿಲ್ಲ. ಜೀಸಸನ್ನು ಶಿಲುಬೆಗೆ ಏರಿಸಿ ಮೊಳೆ ಹೊಡೆದರು, ಬಸವಣ್ಣನನ್ನು ಹೊಳೆಯಿಂದಾಚೆ ಓಡಿಸಿ ಕ್ರಾಂತಿ ಎಂದರು. ಆದರೆ ಇಂದಿಗೂ ನಾವು ಸ್ತುತಿಸುತ್ತಿರುವುದು ಬಸವಣ್ಣನ ತತ್ತ್ವವನ್ನು ಅಲ್ಲವೇ? ಆತನ ವಿಚಾರಗಳಿಗೆ ಸೋಲಾಗಿಲ್ಲ. ಕನಕದಾಸರನ್ನು ಅವರ ಸಹೋದರರೇ ಸೋಲಿಸಿದರು. ಅರಮನೆ ಬಿಟ್ಟರು, ಸೋಲಿನಿಂದ ಹಲವು ಗೆಲವು ಕಂಡೆ, ನನ್ನನ್ನು ನಾನೇ ಗೆದ್ದುಕೊಂಡೆ ಎಂದು ಕನಕರು ಆಗಲೇ ಹೇಳಿದ್ದಾಗಿ ಅವರು ತಿಳಿಸಿದರು.
*ಸಂಸ್ಕೃತಿಯ ಪ್ರತೀಕ*
ನಮ್ಮ ಮಠಗಳು ಜಾತಿಯ ವಿಷ ಬೀಜವನ್ನು ದಾಸೋಹದಿಂದಲೂ, ಮತದ ವಿಷ ಬೀಜವನ್ನು ಜ್ಞಾನದಿಂದಲೂ ಹೋಗಲಾಡಿಸಿವೆ. ಸರ್ಕಾರದ ವ್ಯವಸ್ಥೆ ಇಲ್ಲದ ಸಂದರ್ಭದಲ್ಲಿ ಅನ್ನ, ಆಶ್ರಯ ನೀಡಿವೆ. ಸುತ್ತೂರು ಮಠ ಧರ್ಮ ಆಚರಣೆ ಮತ್ತು ಸಂಸ್ಕೃತಿಯ ಪ್ರತೀಕ. ಧಾರ್ಮಾಚರಣೆಯ ಜತೆ ಜನರ ಜೀವನ ಬೆರೆತಾಗ ಸುಸಂಸ್ಕೃತ ಸಮಾಜ ನಿರ್ಮಾಣ ಆಗುತ್ತದೆ ಎಂದು ಅವರು ಹೇಳಿದರು.
*ಸಮಾನತೆಯ ಭಾವ*
ತೇರು ಎಳೆಯುವುದರಿಂದ ಸಮಾನತೆಯ ಭಾವ ಮೂಡಲಿದೆ. ಅಂತಹ ಒಂದು ಸದುದ್ದೇಶದಿಂದಲೇ ಹಿರಿಯರು ಜತ್ರೆ ಸಂಪ್ರದಾಯ ಹುಟ್ಟು ಹಾಕಿದರು. ದೊಡ್ಡ ತೇರು ನಿರ್ಮಾಣ ಮಾಡಿದರು. ತೇರು ಎಳೆಯವ ವೇಳೆ ಎಲ್ಲ ಜಾತಿ ಜನಾಂಗಗಳ ಸಮ್ಮಿಲನ ಆಗಲಿದೆ. ಇದರಿಂದ ಸಮಾನ ಭಾವ ಮೂಡಲಿದೆ ಎಂದು ಹೇಳಿದರು.
*ನಡೆ ನುಡಿಯಿಂದ ಮನುಷ್ಯ ದೊಡ್ಡವನಾಗಬೇಕು*
ಸಂಸ್ಕೃತಿ ಮತ್ತು ಸಂಸ್ಕಾರ ಬಹಳ ಜನರಿಗೆ ಗೊತ್ತಿಲ್ಲ. ಇಂದು ನಾಗರಿಕತೆ ಬೆಳವಣಿಗೆ ಆಗಿದೆ. ಆಸ್ತಿ ಅಂತಸ್ತು ಇದ್ದರೂ ನಾನು ಏನಾಗಿದ್ದೇನೆ ಎಂಬುದು ಅವರ ಸಂಸ್ಕೃತಿ ಮೇಲೆ ಅವಲಂಭಸಿರುತ್ತದೆ. ನಡೆ ನುಡಿಯಿಂದ ಮನುಷ್ಯ ದೊಡ್ಡವನಾಗಬೇಕು. ಆಸ್ತಿ ಅಂತಸ್ತಿನಿಂದ ದೊಡ್ಡ ನಾಯಕನಾಗಲು ಸಾಧ್ಯವಿಲ್ಲ ಎಂದು ತಿಳಿಸಿದರು.
*ಸಾಮಾಜಿಕ ಸಾಮರಸ್ಯದ ಸಂಕೇತ*
ಜಾತ್ರೆ ಎಂಬುದು ಸಮ್ಮಿಲನ ಹಾಗೂ ಸುಸಂದರ್ಭದ ಕ್ಷಣ. ಯಾವುದೇ ಜಾತಿ, ಮತ ಬೇಧವಿಲ್ಲದೆ ನಡೆಯವ ಜಾತ್ರೆ ಭಕ್ತಿ ಭಾವ ಮಾತ್ರವಾಗಿರದೆ, ಸಾಮಾಜಿಕ ಸಾಮರಸ್ಯದ ಸಂಕೇತವಾಗಿದೆ. ವಿಶೇಷವಾಗಿ ಸುತ್ತೂರು ಜಾತ್ರೆ ಒಂದು ಅರ್ಥಪೂರ್ಣ ಜಾತ್ರೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಎಲ್ಲಾ ಜನ ಜಾತ್ರೆಗೆ ಬರುತ್ತಾರೆ. ಒಂದು ರೀತಿಯಲ್ಲಿ ನಮಗೆಲ್ಲಾ ಸಮಾನವಾಗಿ ಸೇರುವಂತಹ ಒಂದು ಉತ್ಸವ ಭಕ್ತಿ ಭಾವ ಹಾಗೂ ನಡತೆಗೆ ನಮ್ಮ ಸುತ್ತೂರು ಜಾತ್ರೆ ವಿಶೇಷ. ಜನಸಮುದಾಯಕ್ಕೆ ಬೇಕಾಗುವಂತಹ ವಿಚಾರ ನಮ್ಮ ನಡವಳಿಕೆಗಳು ನಮ್ಮ ಆಚಾರ ವಿಚಾರ ನಮ್ಮ ಸಂಸ್ಕಾರ ನಮ್ಮ ಸಂಸ್ಕೃತಿ ಎಲ್ಲ ಗೊತ್ತು. ಆದರೆ ನಮಗೆ ಜಾತೀಯತೆ ಮತ್ತು ಸಂಸ್ಕೃತಿ ಇದರ ಬಗ್ಗೆ ಗೊತ್ತಿಲ್ಲ. ನಾವು ಈ ರೀತಿ ಬೆಳವಣಿಗೆ ಆದರೆ ಇದೊಂದು ಆತಂಕಕಾರಿ ಬೆಳವಣಿಗೆ ಎಂದರು.
ವೇದಿಕೆಯಲ್ಲಿ ಸುತ್ತೂರಿನ ಶ್ರೀಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಕಲ್ಬುರ್ಗಿಯ ಸಮಾದಾನ ಆಶ್ರಮದ ಮೌನ ತಪಸ್ವಿ ಶ್ರೀ ಜಡೆಶಾಂತ ಮಲ್ಲಿಕಾರ್ಜುನಸ್ವಾಮೀಜಿ, ಅರೆತಿಪ್ಪೂರು ಜೈನಮಠದ ಶ್ರೀಸಿದ್ಧಾಂತ ಕೀರ್ತಿ ಭಟ್ಟಾರಕ ಸ್ವಾಮೀಜಿ, ಭವಾನಿ ಪೀಠದ ಶ್ರೀ ಗೋಸಾಯಿ ಮಹಾಸಂಸ್ಥಾನ ಮಠದ ಶ್ರೀ ಮಂಜುನಾಥ ಸ್ವಾಮೀಜಿ, ಸಚಿವರಾದ ಆರ್. ಅಶೋಕ್, ಡಾ.ಕೆ. ಸುಧಾಕರ್, ವಸತಿ ಸಚಿವ ವಿ. ಸೋಮಣ್ಣ ,ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ. ಸಂತೋಷ್, ಶಾಸಕರಾದ ತನ್ವೀರ್ ಸೇಠ್, ಸಿ.ಎಸ್. ನಿರಂಜನಕುಮಾರ್, ಎಲ್. ನಾಗೇಂದ್ರ, ಎಂ. ಅಶ್ವಿನ್‌ಕುಮಾರ್, ಮೇಯರ್ ಶಿವಕುಮಾರ್, ವಿಧಾನ ಪರಿಷತ್ ಸದಸ್ಯ ತುಳಿಸಿ ಮುನಿರಾಜು, ಮಾಜಿ ಶಾಸಕ ಜಿ.ಎನ್. ನಂಜುಂಡಸ್ವಾಮಿ, ಎಂಡಿಎ ಅಧ್ಯಕ್ಷ ಯಶಸ್ವಿ ಸೋಮಶೇಖರ್, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ್ ಮೊದಲಾದವರು ಇದ್ದರು.
Post a Comment