KPCC 2

[20/01, 2:21 PM] Kpcc official: ಬಿಜೆಪಿ ಎಂಎಲ್ಸಿ, ಮಾಜಿ ಸಚಿವ ಎಚ್ ವಿಶ್ವನಾಥ್ ಅವರು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರನ್ನು ಸದಾಶಿವನಗರ ನಿವಾಸದಲ್ಲಿ ಶುಕ್ರವಾರ ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಮಾಜಿ ಸಚಿವರಾದ ಟಿ ಬಿ ಜಯಚಂದ್ರ, ಎಚ್ ಎಂ ರೇವಣ್ಣ, ಎಐಸಿಸಿ ಕಾರ್ಯದರ್ಶಿ ಅಭಿಷೇಕ್ ದತ್ ಉಪಸ್ಥಿತರಿದ್ದರು.
[20/01, 3:52 PM] Kpcc official: *ಬೀದಿ ವ್ಯಾಪಾರಿ ಸಂಘಟನೆಗಳ ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಮಾತುಗಳು:*

ಸರ್ವಜ್ಞ ಒಂದು ಮಾತು ಹೇಳಿದ್ದಾರೆ, ನಿಂಬೆಗಿಂತ ಶ್ರೇಷ್ಠವಾದ ಹುಳಿಯಿಲ್ಲ, ದುಂಬಿಗಿಂತ ಶ್ರೇಷ್ಠವಾದ ಕಪ್ಪು ಬಣ್ಣ ಇಲ್ಲ, ಈಶ್ವರನಿಗಿಂತ ಶ್ರೇಷ್ಠವಾದ ದೇವರಿಲ್ಲ, ನಂಬಿಕೆಗಿಂತ ಶ್ರೇಷ್ಠವಾದ ಗುಣವಿಲ್ಲ'.

ನೀವು ಬೀದಿಯಲ್ಲಿ ವ್ಯಾಪಾರ ಮಾಡುತ್ತಿರುವ ಜನರು ಕಾಂಗ್ರೆಸ್ ಪಕ್ಷ ಮಾತ್ರ ನಿಮಗೆ ನೆಮ್ಮದಿ ಬದುಕು ನೀಡಲಿದೆ ಎಂದು ನಂಬಿಕೆ ಇಟ್ಟು ಇಲ್ಲಿಗೆ ಬಂದಿದ್ದೀರಿ. ನಿಮಗೆ ಕೋಟಿ ನಮನಗಳು.

ನಿಮ್ಮ ಜನಸಂಖ್ಯೆ ಕಮ್ಮಿ ಇಲ್ಲ. ನೀವು ಸ್ವಂತ ಅಂಗಡಿ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ನೀವು ಕೆಟ್ಟ ದಾರಿ ಹಿಡಿಯದೇ, ಸಮಾಜದಲ್ಲಿ ಗೌರವಯುತವಾಗಿ, ಸ್ವಾಭಿಮಾನದ ಬದುಕು, ಬದುಕಲು ಈ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದೀರಿ. ನಿಮಗೆ ಹೃತ್ಪೂರ್ವಕ ಅಭಿನಂದನೆಗಳು.

ನಿಮ್ಮ ನಾಯಕರು ನಿಮ್ಮ ನೋವನ್ನು ತಿಳಿಸಿದ್ದಾರೆ. ಆಮೂಲಕ ತಮ್ಮ ಸಮಸ್ಯೆಗಳನ್ನು ನಮ್ಮ ಮುಂದೆ ಇಟ್ಟಿದ್ದಾರೆ. ನಿಮಗೆ ಸ್ವಾಭಿಮಾನದ ಬದುಕಿಗೆ ಧಕ್ಕೆಯಾಗದಂತೆ ವ್ಯವಸ್ಥೆ ಕಲ್ಪಿಸುವುದು ನಮ್ಮ ಜವಾಬ್ದಾರಿ. 

ಈ ದೇಶಕ್ಕೆ ನೀವೆಲ್ಲರೂ ಆಸ್ತಿ. ಮಾಲ್ ಗಳಲ್ಲಿ, ಎಸಿ ಮಳಿಗೆಗಳಲ್ಲಿ ಖರೀದಿ ಮಾಡುವುದು ಒಂದು ಕಡೆಯಾದರೆ, ಅದೇ ಗುಣಮಟ್ಟದ ಆಹಾರ, ವಸ್ತುಗಳನ್ನು ಅವರಿಗಿಂತ ಕಡಿಮೆ ಬೆಲೆಗೆ ಮಾರಾಟ ಮಾಡಿಕೊಂಡು ಬರುತ್ತಿದ್ದೀರಿ.

ನಾನು ವಿದ್ಯಾರ್ಥಿ ನಾಯಕನಾಗಿದ್ದಾಗ ರಾತ್ರಿ ವೇಳೆ ಬೀದಿ ಬಡಿ ವ್ಯಾಪಾರಿಗಳ ಬಳಿ ಹೋಗಿ ಚಿತ್ರಾನ್ನ ತಿಂದು ಬದುಕುತ್ತಿದ್ದೇವು. ಆಗ 1 ರೂ.ಗೆ ಒಂದು ಪ್ಯಾಕೆಟ್ ಚಿತ್ರಾನ್ನ ಸಿಗುತ್ತಿತ್ತು. ನಾವು ಎಷ್ಟೇ ಎತ್ತರಕ್ಕೆ ಬೆಳೆದರು ನಾವು ಬಂದ ಹಾದಿ ಮರೆಯಬಾರದು.

ಕಾಂಗ್ರೆಸ್ ಪಕ್ಷ ಈ ವರ್ಗದ ಬಗ್ಗೆ ಅಪಾರ ಕಾಳಜಿ ಇಟ್ಟುಕೊಂಡು ಬಂದಿದೆ. ಕಾಂಗ್ರೆಸ್ ಪಕ್ಷ ಸದಾ ನೊಂದು ಬೆಂದ ಬಡವರ ಪರವಾದ ಪಕ್ಷ. ನಿಮ್ಮ ಬದುಕನ್ನು ದಿನ ಬಡ್ಡಿ ನಿಯಂತ್ರಣದಿಂದ ತಪ್ಪಿಸಬೇಕು.

ಇಂದಿರಾಗಾಂಧಿ ಅವರು ಬ್ಯಾಂಕ್ ರಾಷ್ಟ್ರೀಕರಣ ಮಾಡಿ, ನಿಮಗೆ ಬಂಡವಾಳಶಾಹಿಗಳ ಕಾಟ ತಪ್ಪಿಸಿದರು. ಆಮೂಲಕ ಜನರಿಗೆ ಸುಲಭ ಸಾಲ ಸೌಲಭ್ಯ ಕಲ್ಪಿಸುವಂತೆ ಮಾಡಿದರು. ಈಗ ಬ್ಯಾಂಕ್ ಗಳು 10-15 ಸಾವಿರದಷ್ಟು ಸಣ್ಣ ಸಾಲ ನೀಡುವ ವ್ಯವಸ್ಥೆ ಮಾಡಿಕೊಡಲಾಗಿದೆ.

ಇನ್ನು ದೇಶದಲ್ಲಿ ಉಳುವವನೇ ಭೂಮಿಯ ಒಡೆಯ ಎಂದು ಮಾಡಿದ್ದು, ನಿವೇಶನ ಇಲ್ಲದವರಿಗೆ ನಿವೇಶನ ಕೊಟ್ಟಿದ್ದು, ನಿರುದ್ಯೋಗ ಸಮಸ್ಯೆ ಬಗೆಹರಿಸಲು ಕಾಯ್ದೆ ತಂದಿದ್ದರೆ, ಆಹಾರ ಬದ್ಧತೆ ಕಾಯ್ದೆ ಮೂಲಕ ನಿಮಗೆ 5-7 ಕೆ.ಜಿ ಅಕ್ಕಿ ನೀಡುತ್ತಿರುವುದು ಕಾಂಗ್ರೆಸ್ ಪಕ್ಷ ಮಾತ್ರ. ಇದೇ ಕಾರಣಕ್ಕೆ ನಾವು ನಿಮ್ಮ ಮುಂದೆ ಧೈರ್ಯವಾಗಿ ನಿಂತಿದ್ದೇವೆ. 

ರಂಗಸ್ವಾಮಿ ಅವರು ನಿಮ್ಮ ಸಮಸ್ಯೆಗಳ ಬಗೆಹರಿಸಲು ಒಂದು ಪಟ್ಟಿ ನೀಡಿದ್ದಾರೆ. ಇದರಲ್ಲಿ ಪ್ರಮುಖವಾದುದು, ಪಾಲಿಕೆ ಹಾಗೂ ಪೊಲೀಸರಿಂದ ಆಗುತ್ತಿರುವ ಕಿರುಕುಳವನ್ನು ತಪ್ಪಿಸುವುದು. ಇದನ್ನು ತಪ್ಪಿಸಲು ಅಗತ್ಯ ಕ್ರಮ ಕೈಗೊಳ್ಳುತ್ತೇವೆ. 

ಕೋವಿಡ್ ಸಮಯದಲ್ಲಿ ನಾವು ನಿಮ್ಮ ಪರ ಧ್ವನಿ ಎತ್ತಿದ್ದೇವು. ವಲಸೆ ಕಾರ್ಮಿಕರಿಂದ ಸರ್ಕಾರ ಬಸ್ ಟಿಕೆಟ್ ದುಪ್ಪಟ್ಟು ಮಾಡಿ ಸುಲಿಗೆ ಮಾಡಲು ಮುಂದಾದಾಗ, ಈ ಕಾರ್ಮಿಕರು ದೇಶ ನಿರ್ಮಾತೃಗಳು ಅವರಿಗೆ ಉಚಿತ ಸಾರಿಗೆ ವ್ಯವಸ್ಥೆ ನೀಡಿ ಎಂದು ನಾವು ಪಕ್ಷದ ವತಿಯಿಂದ 1 ಕೋಟಿ ಚೆಕ್ ನೀಡಿದೆವು. ನಂತರ ಉತ್ತರ ಕರ್ನಾಟಕದ ಭಾಗದ ಕಾರ್ಮಿಕರಿಗೆ ಉಚಿತ ಸಾರಿಗೆ ವ್ಯವಸ್ಥೆ ಮಾಡಲಾಯಿತು.

ಇನ್ನು ಸಾಂಪ್ರದಾಯಿಕ ವೃತ್ತಿ ಮಾಡಿಕೊಂಡು ಬಂದಿರುವ ಕಾರ್ಮಿಕರಿಗೆ ಸಹಾಯ ಮಾಡಲು ಸರ್ಕಾರದಿಂದ ಸಾಧ್ಯವಾಗಲಿಲ್ಲ. ಕೆಲವರಿಗೆ ಒಂದಿಷ್ಟು ಹಣ ಕೊಟ್ಟು ಮುಗಿಸಿದರು. ರಂಗಸ್ವಾಮಿ ಅವರು ತಮ್ಮ ಬೇಡಿಕೆ ಪಟ್ಟಿಯಲ್ಲಿ ಬೀದಿ ಬದಿ ವ್ಯಾಪಾರಿಗಳ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು ಎಂದು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಅಭಿವೃದ್ಧಿ ನಿಗಮ ಸ್ಥಾಪನೆ ವಿಚಾರ ಸೇರ್ಪಡೆ ಮಾಡುತ್ತೇವೆ.

ನಿಮಗೆ ಪ್ರತ್ಯೇಕ ಮಾರುಕಟ್ಟೆ ಸ್ಥಾಪಿಸಿದರೆ ನೀವು ಅಲ್ಲಿ ಹೋಗಲು ಸಿದ್ಧರಿಲ್ಲ. ಹೀಗಾಗಿ ನಗರದ ಸೌಂದರ್ಯ ಕಾಪಾಡಿ, ನಿಮಗೂ ರಕ್ಷಣೆ ಸಿಗಬೇಕು. ಇದನ್ನು ಯಾವ ರೀತಿ ಮಾಡಬೇಕು ಎಂದು ನಿಮ್ಮ ಜತೆಯೇ ಚರ್ಚೆ ಮಾಡಿ ನಿಮ್ಮ ವಾರ್ಡ್ ಗಳಲ್ಲಿ ನಿಮ್ಮ ವಿಶ್ವಾಸ ತೆಗೆದುಕೊಂಡು ಸಮಿತಿ ಜತೆ ಸಭೆ ಮಾಡಿ ಸಹಾಯ ಮಾಡಬೇಕು. ಇದಕ್ಕೆ ಕಾನೂನು ಚೌಕಟ್ಟನ್ನು ಕಾಂಗ್ರೆಸ್ ಕಟ್ಟಿಕೊಡಲಿದೆ.

ನಿಮ್ಮ ನೆಮ್ಮದಿಯ ಬದುಕಿಗಾಗಿ ನಿಮ್ಮ ಮಕ್ಕಳ ಆರೋಗ್ಯ ಹಾಗೂ ಶಿಕ್ಷಣ ಸಿಗಲು ಚುನಾವಣೆ ಪ್ರಣಾಳಿಕೆಯಲ್ಲಿ ಕಾರ್ಯಕ್ರಮ ನೀಡಲಾಗುವುದು. 

ಈ ಜನರ ಸಮಸ್ಯೆ ಅರ್ಥ ಮಾಡಿಕೊಂಡು ಕಾರ್ಯಕ್ರಮ ರೂಪಿಸುತ್ತಿದೆ. ಕಳೆದ ಮೂರೂವರೆ ವರ್ಷ ಆಡಳಿತದಲ್ಲಿ ಸರ್ಕಾರ ಬಡವರಿಗಾಗಿ ಯಾವುದಾದರೂ ಒಂದು ಕಾರ್ಯಕ್ರಮದ ಕೊಟ್ಟಿದ್ದರೆ, ಕೋವಿಡ್ ಸತ್ತವರ ಕುಟುಂಬಕ್ಕೆ ಪರಿಹಾರ, ಆಸ್ಪತ್ರೆ ವೆಚ್ಚ ಭರಿಸುತ್ತೇವೆ, ಚಾಲಕರಿಗೆ ಸಹಾಯಧನ, ಬೀದಿ ವ್ಯಾಪಾರಿಗಳಿಗೆ ಆರ್ಥಿಕ ನೆರವು ನೀಡುತ್ತೇವೆ ಎಂದಿದ್ದರು. ಯಾರಿಗಾದರೂ ಅನುಕೂಲ ಆಯಿತಾ? ಸರ್ಕಾರ ಕೊಡುವ ಆಹಾರ ಸಾಮಾಗ್ರಿಗೆ ಶಾಸಕರು ತಾವು ಹಂಚುತ್ತಿದ್ದೇವೆ ಎಂದು ಅವರ ಫೋಟೋ ಹಾಕಿ ಹಂಚಿದರು. 

ನಮ್ಮ ನಾಯಕರಾದ ರಾಮಲಿಂಗಾ ರೆಡ್ಡಿ, ಪದ್ಮಾವತಿ, ದೇವರಾಜ್, ಜಮೀರ್, ಕೃಷ್ಣ ಭೈರೆಗೌಡ ಸೇರಿದಂತೆ ಹಲವರು  ತಮ್ಮ ಜೇಬಿನ ಹಣದಿಂದ ನಿಮಗೆ ನೆರವು ನೀಡಿದ್ದಾರೆ.

ಈಗ ನಾವು ಜನರ ಧ್ವನಿಯಾಗಲು ಪ್ರಜಾಧ್ವನಿ ಯಾತ್ರೆ ಮಾಡುತ್ತಿದ್ದೇವೆ. ನಾವು ನಿಮ್ಮ ನೋವು ಕೇಳಲು ಇಲ್ಲಿಗೆ ಬಂದಿದ್ದೇವೆ. ನಿಮ್ಮ ಧ್ವನಿ ನಮ್ಮ ಧ್ವನಿ. 

ಮಹಾತ್ಮ ಗಾಂಧಿ ಅವರು ಕಾಂಗ್ರೆಸ್ ಪಕ್ಷದ ನೇತೃತ್ವ ವಹಿಸಿದ್ದ ಬೆಳಗಾವಿಯ ವೀರಸೌಧದಿಂದ ಯಾತ್ರೆ ಆರಂಭಿಸಿ ಅಲ್ಲಿ ಕಾಂಗ್ರೆಸ್ ಪಕ್ಷದ ಮೊದಲ ಗ್ಯಾರೆಂಟಿ ಯೋಜನೆ ಘೋಷಣೆ ಮಾಡಿದೆವು. ಅದೇನೆಂದರೆ ಗೃಹಜ್ಯೋತಿ ಯೋಜನೆ ಮೂಲಕ ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ನೀಡಲು ತೀರ್ಮಾನಿಸಲಾಗಿದೆ. ಆಮೂಲಕ ತಿಂಗಳಿಗೆ 1500 ರೂಪಾಯಿ ಉಳಿತಾಯ ಆಗಲಿದೆ.

ಇನ್ನು ಮಹಿಳೆಯರು ಬೆಲೆ ಏರಿಕೆಯಿಂದ ತತ್ತರಿಸಿದ್ದಾರೆ. ಅವರಿಗೆ ಮನೆ ನಡೆಸಲು ಸಮಸ್ಯೆ ಎದುರಾಗಿದೆ. ಹೀಗಾಗಿ ಅವರಿಗೆ ನೆರವಾಗಲು ಪ್ರತಿ ಮನೆಯೋಡತಿಗೆ ತಿಂಗಳಿಗೆ 2 ಸಾವಿರಾದಂತೆ ವರ್ಷಕ್ಕೆ 24 ಸಾವಿರ ಹಣ ನೀಡಲಾಗುವುದು.

ರಾಹುಲ್ ಗಾಂಧಿ ಅವರು ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ಪಾದಯಾತ್ರೆ ಮಾಡುತ್ತಿದ್ದಾರೆ. ಅವರು ಹರಿಯಾಣದಲ್ಲಿ ಪಾದಯಾತ್ರೆ ಮಾಡುವಾಗ ನಾನು ಅಲ್ಲಿಗೆ ಹೋಗಿ ಅವರ ಜತೆ ಚರ್ಚೆ ಮಾಡಿದೆ. ನಂತರ ಪ್ರಿಯಾಂಕಾ ಗಾಂಧಿ ಅವರು ಈ ಯೋಜನೆ ಘೋಷಣೆ ಮಾಡಿದರು.

ಈ ಬೀದಿ ಬದಿ ವ್ಯಾಪಾರಿಗಳಲ್ಲಿ ಮಹಿಳೆಯರೇ ಹೆಚ್ಚು. ಆಕೆಯೇ ಮನೆಯ ಜವಾಬ್ದಾರಿ ನಿಭಾಯಿಸುತ್ತಾರೆ. ನಿಮಗೆ ನೆರವಾಗಲು ನಮ್ಮ ಪಕ್ಷ ಬದ್ಧವಾಗಿದೆ.

ಈ ಸರ್ಕಾರಕ್ಕೆ ಕೋವಿಡ್ ಸಂತ್ರಸ್ತರಿಗೆ ನೆರವಾಗಲು ಸಾಧ್ಯವಾಗಲಿಲ್ಲ. ಚಾಮರಾಜನಗರದಲ್ಲಿ ಆಕ್ಸಿಜನ್ ಇಲ್ಲದೆ ಸುಮಾರು 36 ಜನ ಸತ್ತಿದ್ದಾರೆ. ನಾನು ಸಿದ್ದರಾಮಯ್ಯ ಅವರು ಅಲ್ಲಿ ಪರಿಶೀಲನೆ ನಡೆಸಿದೆವು. ನಾನು ಎಲ್ಲಾ ಮನೆಗೂ ಹೋಗಿ ತಲಾ ಒಂದು ಲಕ್ಷ ಪರಿಹಾರ ಕೊಟ್ಟು ಬಂದೆವು.

ಬಿಜೆಪಿಗೆ ಅಧಿಕಾರ ಇದ್ದಾಗ ಜನರಿಗೆ ಯಾವುದೇ ಸಹಾಯ ಮಾಡಲಿಲ್ಲ. ನಾವು ಅನ್ನಭಾಗ್ಯ, ಶಾಲೆಯಲ್ಲಿ ಬಿಸಿಯೂಟ ಕಾರ್ಯಕ್ರಮ ಹೀಗೆ ಜನಪರ ಕಾರ್ಯಕ್ರಮ ಕೊಟ್ಟಾಗ ಜಾತಿ ನೋಡಿ ಕೊಡಲಿಲ್ಲ. ಹೀಗೆ ಕಾಂಗ್ರೆಸ್ ಪಕ್ಷ ನಿಮ್ಮ ಬದುಕಲ್ಲಿ ಬದಲಾವಣೆ ತರಲು ಬದ್ಧವಾಗಿದೆ. ನೀವು ನಮಗೆ ಶಕ್ತಿ ತುಂಬಬೇಕು.
[21/01, 11:19 AM] Kpcc official: *ನಳಿನ್ ಕುಮಾರ್ ಕಟೀಲ್ ಅವರದು ಬಚ್ಚಲು ಬಾಯಿ: ಡಿ.ಕೆ. ಶಿವಕುಮಾರ್ ತಿರುಗೇಟು*

ನಳಿನ್ ಕುಮಾರ್ ಕಟೀಲ್ ಅವರ ನಾಲಿಗೆಯಲ್ಲಿ ಮೂಳೆ ಮಾತ್ರವಲ್ಲ, ನಿಯಂತ್ರಣವೂ ಇಲ್ಲ. ನಮ್ಮ ಹಳ್ಳಿ ಕಡೆ ಇಂತಹವರಿಗೆ ಬಚ್ಚಲು ಬಾಯಿ ಅಂತಾರೆ. ಕಟೀಲ್ ಒಂದು ಪಕ್ಷದ ರಾಜ್ಯಾಧ್ಯಕ್ಷರು, ಸಂಸದರು. ಅವರು ಮಾತನಾಡಿದರೆ ಅದಕ್ಕೆ ಸಾಕ್ಷಿ ಇರಬೇಕು.  ಅವರು ಇದುವರೆಗೂ ಮಾತನಾಡಿರುವ ಯಾವುದಾದರೂ ವಿಚಾರದಲ್ಲಿ ಏನಾದರೂ ಸಾಕ್ಷಿ ಇದೆಯಾ? 

ಕಟೀಲ್ ಅವರು ಮೊದಲು ಯತ್ನಾಳ್, ನಿರಾಣಿ, ವಿಶ್ವನಾಥ್, ಯೋಗೇಶ್ವರ್ ಅವರ ಮಾತಿಗೆ ಉತ್ತರ ನೀಡಲಿ. ಕಟೀಲ್ ಅವರಿಗೆ ಪಕ್ಷದಲ್ಲಿ ಹಿಡಿತವಿಲ್ಲ. ಅವರು ಪಕ್ಷದ ಅಧ್ಯಕ್ಷರು, ನಮ್ಮ ಪಕ್ಷದ ಬಗ್ಗೆ ಮಾತನಾಡಿದ್ದಾರೆ ಎಂಬ ಕಾರಣಕ್ಕೆ ನಾನು ಪ್ರತಿಕ್ರಿಯೆ ನೀಡುತ್ತಿದ್ದೇನೆ. ಇಲ್ಲದಿದ್ದರೆ ನನ್ನಂತಹವರ ಪ್ರತಿಕ್ರಿಯೆ ಪಡೆಯಲು ಅವರು ಯೋಗ್ಯರಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.

ಕಾಂಗ್ರೆಸ್ ನಾಯಕರು ಸಭೆ ಮಾಡಿದರೆ ಚಪ್ಪಲಿಗಳು ಕೈಗೆ ಬರುತ್ತವೆ ಎಂಬ ಕಟೀಲ್ ಅವರ ಹೇಳಿಕೆ ಬಗ್ಗೆ ಮಾಧ್ಯಮದವರು ಕೆಪಿಸಿಸಿ ಕಚೇರಿ ಬಳಿ ಶನಿವಾರ ಪ್ರಶ್ನೆ ಮಾಡಿದಾಗ ಶಿವಕುಮಾರ್ ಅವರಿಂದ ಈ ಪ್ರತಿಕ್ರಿಯೆ ವ್ಯಕ್ತವಾಯಿತು.

ಕಾಂಗ್ರೆಸ್ ಒಡೆಯಲು ಟಿಆರ್ ಎಸ್ ನಾಯಕ ಕೆ.ಸಿ ಚಂದ್ರಶೇಖರರಾವ್ ಅವರು ಹಣ ನೀಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ' ಈ ಬಗ್ಗೆ ನನಗೆ ಗೊತ್ತಿಲ್ಲ. ಹಣ್ಣ ಕೊಟ್ಟಿರುವವರು ಹಾಗೂ ತೆಗೆದುಕೊಂಡವರನ್ನು ಕೇಳಿ. ಬೇರೆಯವರು ವೈಯಕ್ತಿಕ ವಿಚಾರವಾಗಿ ಚಂದ್ರಶೇಖರ್ ಅವರನ್ನು ಭೇಟಿ ಮಾಡಿರಬಹುದು, ಅದಕ್ಕೆ ನಾವು ಪ್ರಶ್ನೆ ಮಾಡಲು ಆಗುವುದಿಲ್ಲ ' ಎಂದು ತಿಳಿಸಿದರು.

ಮೊದಲ ಟಿಕೆಟ್ ಪಟ್ಟಿ ಬಗ್ಗೆ ಕೇಳಿದಾಗ, ' ಫೆ.2 ರಂದು ಕಾಂಗ್ರೆಸ್ ಚುನಾವಣಾ ಸಮಿತಿ ಸಭೆ ನಡೆಯಲಿದೆ. ಈಗಾಗಲೇ ನಮ್ಮ ನಾಯಕರು ಆಕಾಂಕ್ಷಿಗಳ ಜತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ನಾವು ನಮ್ಮ ಪ್ರವಾಸ ಮುಗಿಸಿ ಚರ್ಚೆ ಮಾಡಿ ಆದಷ್ಟು ಬೇಗ ತೀರ್ಮಾನ ಮಾಡುತ್ತೇವೆ' ಎಂದು ತಿಳಿಸಿದರು. 

ಕಾಂಗ್ರೆಸ್ ಪಕ್ಷದಿಂದ ತಮ್ಮ ಪಕ್ಷಕ್ಕೆ ನಾಯಕರು ಬರುವವರಿದ್ದಾರೆ ಎಂಬ ಮುಖ್ಯಮಂತ್ರಿ ಹೇಳಿಕೆ ಬಗ್ಗೆ ಕೇಳಿದಾಗ, ' ತಡಮಾಡದೆ ಆದಷ್ಟು ಬೇಗ ಕರೆದುಕೊಳ್ಳಲಿ' ಎಂದು ತಿಳಿಸಿದರು.

ರಾಜ್ಯ ಬಿಜೆಪಿಯಲ್ಲಿ ನಾಯಕತ್ವದ ಕೊರತೆ ಬಗ್ಗೆ ಕೇಳಿದಾಗ, ' ಅಮಿತ್ ಶಾ ಅವರು ಮೊದಲು ಬೊಮ್ಮಾಯಿ ಅವರ ನೇತತ್ವದಲ್ಲಿ ರಾಜ್ಯ ಚುನಾವಣೆ ಎದುರಿಸಲಾಗುವುದು ಎಂದು ತಿಳಿಸಿದರು. ಆದರೆ ಈಗ ಮೋದಿ ಅವರ ನೇತೃತ್ವದಲ್ಲಿ ಚುನಾವಣೆ ನಡೆಸಲಾಗುವುದು ಎಂದು ಹೇಳಿದ್ದಾರೆ. ಆ ಮೂಲಕ ರಾಜ್ಯ ನಾಯಕತ್ವ ವಿಫಲವಾಗಿದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ನಾವು ಜನರ ಭಾವನೆ ಅರಿತು ಪ್ರಜಾಧ್ವನಿ ಕಾರ್ಯಕ್ರಮ ಘೋಷಣೆ ಮಾಡಿದ್ದೇವೆ. ಅದಾದ ನಂತರ ಬಿಜೆಪಿಯವರು ನಾವು ಕೂಡ ಕಾರ್ಯಕ್ರಮ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಕಳೆದ ಮೂರೂವರೆ ವರ್ಷಗಳಿಂದ ಅಧಿಕಾರದಲ್ಲಿ ಇದ್ದರೂ ಯಾಕೆ ಮಾಡಲಿಲ್ಲ? ನಾವು ಗೃಹಜ್ಯೋತಿ ಯೋಜನೆ ಮೂಲಕ ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಉಚಿತ ನೀಡಲಾಗುವುದು ಎಂದು ಗ್ಯಾರೆಂಟಿ ಯೋಜನೆ ಘೋಷಣೆ ಮಾಡಿದ್ದೇವೆ. ಇನ್ನು ಎರಡನೇ ಗ್ಯಾರೆಂಟಿ ಯೋಜನೆ ಮೂಲಕ ಬೆಲೆ ಏರಿಕೆಯಿಂದ ತತ್ತರಿಸಿರುವ ಮಹಿಳೆಯರಿಗೆ ನೆರವಾಗಲು ಮನೆಯೊಡತಿಗೆ ತಿಂಗಳಿಗೆ 2 ಸಾವಿರದಂತೆ ವರ್ಷಕ್ಕೆ 24 ಸಾವಿರ ಆರ್ಥಿಕ ನೆರವು ನೀಡಲು ನಿರ್ಧರಿಸಿದ್ದೇವೆ.  ಈ ಯೋಜನೆ ಎಲ್ಲರಿಗೂ ಅನ್ವಯ ಆಗುತ್ತದೆ. ಕೆಲವರು ಈ ಸೌಲಭ್ಯ ಬೇಡ ಎಂದರೆ ನಾವು ಏನೂ ಮಾಡಲು ಸಾಧ್ಯವಿಲ್ಲ ' ಎಂದರು.
[21/01, 1:05 PM] Kpcc official: https://youtu.be/OYqLnHMmsnM
[21/01, 1:05 PM] Kpcc official: ಅಮಿತ್ ಶಾ, ಮೋದಿ ಕರ್ನಾಟಕಕ್ಕೆ ಬರುವುದು ಚುನಾವಣಾ ಪ್ರಚಾರಕ್ಕೆ ಮಾತ್ರವಲ್ಲ, ರಾಜ್ಯದ ಸೌಲಭ್ಯಗಳನ್ನು ಕಿತ್ತುಕೊಂಡು ಹೋಗಲು ಬರುತ್ತಾರೆ.

ಯುಜಿಸಿ ಪ್ರಾದೇಶಿಕ ಕಚೇರಿಯನ್ನು ದೆಹಲಿಗೆ ಸ್ಥಳಾಂತರಿಸಿದರೂ 25 ಬಿಜೆಪಿ ಸಂಸದರು, @BSBommai ಸರ್ಕಾರ ಬಾಯ್ಮುಚ್ಚಿರುವುದೇಕೆ?

@BJP4Karnataka ಗೆ ರಾಜ್ಯದ ಮುಖ್ಯವೋ, ಮೋದಿಯ ಗುಲಾಮಗಿರಿ ಮುಖ್ಯವೋ?
[21/01, 2:13 PM] Kpcc official: *ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗ ಪ್ರಿಯಾಂಕ್ ಖರ್ಗೆ ಹಾಗೂ ಪ್ರೋ. ಬಿ.ಕೆ. ಚಂದ್ರಶೇಖರ್ ಅವರ ಜಂಟಿ ಪತ್ರಿಕಾಗೋಷ್ಠಿ ಮುಖ್ಯಾಂಶಗಳು:*

*ಪ್ರೊ.ಬಿ.ಕೆ. ಚಂದ್ರಶೇಖರ್:*

ಭಾರತದ ಸಂವಿಧಾನವನ್ನು ಬಿಜೆಪಿಯವರು ವ್ಯವಸ್ಥಿತವಾಗಿ ನಾಶ ಮಾಡಲು ಮುಂದಾಗುತ್ತಿದೆ.

ಈ ಹಿಂದೆ ಮುರುಳಿ ಮನೋಹರ್ ಜೋಷಿ ಅವರು ನಾವು ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ತಿಳಿಸಿದರು. ಇನ್ನು ಅನಂತ ಕುಮಾರ್ ಹೆಗಡೆ ಅವರು ಯಾವುದೇ ಮುಸಲ್ಮಾನ ಹುಡುಗ ಹಿಂದೂ ಹೆಣ್ಣಿನ ಜತೆ ಮಾತನಾಡಿದರೆ ಆತನ ಕೈ ಕತ್ತರಿಸಬೇಕು ಎಂದು ಹೇಳಿಕೆ ನೀಡಿದ್ದರು. ಈ ಬಗ್ಗೆ ಮುರಳಿ ಮನೋಹರ್ ಜೋಷಿ ಅವರಿಗೆ ಪತ್ರಕರ್ತರು ದೆಹಲಿಯಲ್ಲಿ ಪ್ರಶ್ನೆ ಮಾಡಿದಾಗ, ನಾವು ಸಂವಿಧಾನ ಬದಲಾವಣೆಗೆ ಬದ್ಧ ಎಂದು ಹೇಳಿದ್ದರು.

ಬಿಜೆಪಿ ಅವರು ನಮ್ಮ ಸಂವಿಧಾನ ನಮ್ಮ ಸಂಸ್ಕೃತಿಯಲ್ಲ ಅದು ಬ್ರಿಟನ್ ನ್ನಿಂದ ಪರಭಾರೆ ಮಾಡಿಕೊಂಡಿರುವ ಸಂವಿಧಾನ ಎಂದು ಹೇಳುತ್ತಾರೆ. ನಮ್ಮ ಸಂವಿಧಾನವನ್ನು ದೇಶದ ಪ್ರಮುಖರು ಸೇರಿ ರಚನೆ ಮಾಡಿದ್ದಾರೆ. ಇಲ್ಲಿ ಸಾವಿರಾರು ವರ್ಷಗಳಿಂದ ಶೋಷಣೆಗೆ ಒಳಗಾದ ವರ್ಗದ ಜನರಿಗೆ ಮೀಸಲಾತಿ ನೀಡಿದೆ. ಬ್ರಿಟನ್ ಸಂವಿಧಾನದಲ್ಲಿ ಮೀಸಲಾತಿ ಇದೆಯೇ? ನಮ್ಮದು ಪಾಶ್ಚಿಮಾತ್ಯ ಸಂವಿಧಾನದ ಪರಭಾರೆಯಲ್ಲ. ಬೇರೆ ದೇಶಗಳಲ್ಲಿನ ಕೆಲ ಅಂಶಗಳನ್ನು ತೆಗೆದುಕೊಳ್ಳಲಾಗಿದೆ.

ಈಗ ದೇಶದ ನ್ಯಾಯಾಂಗ ವ್ಯವ್ಥೆಯ ಮೇಲೆ ದಾಳಿ ನಡೆಯುತ್ತಿದೆ. ಉಪರಾಷ್ಟ್ರಪತಿ ದಂಕರ್ ಅವರು ನ್ಯಾಯಾಂಗ ವ್ಯವಸ್ಥೆ ಮೇಲೆ ದಾಳಿ ಆರಂಭಿಸಿದರು. ಇವರಿಗೆ ತಾಳ ಮದ್ದಳೆಯಂತೆ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರು ನ್ಯಾಯಾಂಗದ ಮೇಲೆ ಮುಗಿ ಬಿದ್ದಿದ್ದಾರೆ. ನ್ಯಾಯಾಂಗ ವ್ಯವಸ್ಥೆಗಿಂತ ಸಂಸತ್ತು ಶ್ರೇಷ್ಠ ಎಂದು ಹೇಳುತ್ತಿದ್ದಾರೆ. 

ರಾಜ್ಯದಲ್ಲಿ ಅಧಿವೇಶನಗಳಲ್ಲಿ ಮಾಧ್ಯಮಗಳಿಗೆ ಪ್ರವೇಶ ನಿರ್ಬಂಧ ಹೇರಲಾಗಿದೆ. ಆಮೂಲಕ ಯಾವುದೇ ವಿಚಾರ ಜನರಿಗೆ ತಲುಪದಂತೆ ಮಾಡುತ್ತಿದ್ದಾರೆ.

ರಿಜಿಜು ಅವರ ಪ್ರಕಾರ ನ್ಯಾಯಾಧೀಶ ನೇಮಕಾತಿಯಲ್ಲಿ ಪಾರದರ್ಶಕತೆ ಇಲ್ಲವಂತೆ. ಕತ್ತಲಲ್ಲಿ ನೋಟು ರದ್ದತಿ ತೀರ್ಮಾನ ಮಾಡಿದ ಬಿಜೆಪಿಯವರು ಈಗ ಈ ರೀತಿ ಹೇಳುತ್ತಿದ್ದಾರೆ. ಪಿಎಂ ಕೇರ್ ನಿಧಿಯಲ್ಲಿ ಪಾರದರ್ಶಕತೆ ಇಲ್ಲ. 

 ಈ ಕಾರಣಕ್ಕೆ ಸುಪ್ರೀಂ ಕೋರ್ಟ್ ನಿನ್ನೆ ನ್ಯಾಯಾಧೀಶರ ನೇಮಕಕ್ಕೆ ಶಿಫಾರಸ್ಸು ಮಾಡಿರುವ ಪಟ್ಟಿಯನ್ನು ಬಿಡುಗಡೆ ಮಾಡಿದೆ. ನ್ಯಾಯಾಧೀಶರ ನೇಮಕಾತಿಯಲ್ಲಿ ಸರ್ಕಾರದ ಪ್ರತಿನಿಧಿ ಇರಬೇಕು ಎಂದು ಹೇಳುತ್ತಿದ್ದಾರೆ. ಆಮೂಲಕ ನ್ಯಾಯಾಂಗ ವ್ಯವಸ್ಥೆಯನ್ನೆ ತನ್ನ ಇಲಾಖೆ ಮಾಡಿಕೊಳ್ಳಲು ಬಿಜೆಪಿ ಸರ್ಕಾರ ಮುಂದಾಗಿದೆ.

ಇದನ್ನು ಕಾಂಗ್ರೆಸ್ ಪಕ್ಷ ತೀವ್ರವಾಗಿ ಖಂಡಿಸಬೇಕಿದೆ. ನ್ಯಾಯಾಂಗ ವ್ಯವಸ್ಥೆ ಮೇಲಿನ ದಬ್ಬಾಳಿಕೆ ವಿರುದ್ಧ ಸಮಾವೇಶ ಮಾಡಬೇಕು.

*ಪ್ರಿಯಾಂಕ್ ಖರ್ಗೆ:*

ರಾಜ್ಯದಲ್ಲಿ ಬಿಜೆಪಿ ಆರ್ ಎಸ್ ಎಸ್ ತತ್ವ ಸಿದ್ಧಾಂತವನ್ನು ಸರ್ಕಾರದ ನೀತಿಯಾಗಿ ಮಾಡಲಾಗುತ್ತಿದೆ ಎಂದು ನಾನು ಸದನದಲ್ಲಿ ಪ್ರಶ್ನೆ ಎತ್ತಿದಾಗ ಸಿ. ಟಿ ರವಿ ಅವರು ಇದನ್ನು ಒಪ್ಪದೇ, ಆರ್ ಎಸ್ ಎಸ್ ಎಂದಿಗೂ ಸಂವಿಧಾನ ವಿರೋಧ ಮಾಡಿಲ್ಲ. ಮನುಸ್ಮೃತಿಯನ್ನು ಸಮರ್ಥಿಸಿಕೊಂಡಿಲ್ಲ. ಈ ಬಗ್ಗೆ ದಾಖಲೆ ನೀಡುವಂತೆ ಆಗ್ರಹಿಸಿದರು. ದುರಾದೃಷ್ಟವಶಾತ್ ಇದಕ್ಕೆ ಸ್ಪೀಕರ್ ಅವರು ಅವಕಾಶ ನೀಡಿ, ದಾಖಲಾತಿ ನೀಡದಿದ್ದರೆ ನನ್ನ ಹೇಳಿಕೆಯನ್ನು ದಾಖಲೆಯಿಂದ ತೆಗೆದುಹಾಕುವುದಾಗಿ ಹೇಳಿದರು. ನಾನು ಅಲ್ಲಿಗೆ ನಿಲ್ಲಿಸಿದೆ, ಮರು ದಿನ ಸಂವಿಧಾನ ಜಾರಿ ಸಂದರ್ಭದಲ್ಲಿ ಆರ್ ಎಸ್ ಎಸ್ ಮುಖಂಡರು, ಆರ್ ಎಸ್ ಎಸ್ ನ ಮುಖವಾಣಿಗಳಲ್ಲಿ ಬಂದಿರುವ ಲೇಖನಗಳನ್ನು ಕಲೆಹಾಕಿ ಸ್ಪೀಕರ್ ಅವರಿಗೆ ನೀಡಿದ್ದೆ.

ಬಿಜೆಪಿ ಹೆಸರಲ್ಲಿ ಕೇಶವಕೃಪ ಆಡಳಿತ ಮಾಡುತ್ತಿದೆ. ಬಿಜೆಪಿ ಇಲ್ಲದ ರಾಜ್ಯಗಳಲ್ಲಿ ರಾಜ್ಯಪಾಲರನ್ನು ನಾಗ್ಪುರದ ನೌಕರರಂತೆ ನಡೆಸಿಕೊಳ್ಳುತ್ತಿದ್ದಾರೆ.

ಬಿಜೆಪಿ ಹೇಗೆ ಸಂವಿಧಾನದ ಮೇಲೆ ದಬ್ಬಾಳಿಕೆ ಮಾಡುತ್ತಿದೆ ಎಂಬ ವಿಚಾರವಾಗಿ ನಾವು ಸಾರ್ವಜನಿಕ ಚರ್ಚೆ ಮಾಡಬೇಕು. ಜನರ ಮುಂದೆ ಬಿಜೆಪಿಯವರ ಬಣ್ಣ ಬಯಲು ಮಾಡಬೇಕು. 

ಇದೆಲ್ಲದರ ವಿರುದ್ಧ ನಾವು ಸಂವಿಧಾನ ಜಾರಿಯಾದ ದಿನವಾದ ಜನವರಿ 26ರಂದು ಸಮಾವೇಶ ಮಾಡುವ ಬಗ್ಗೆ ನಮ್ಮ ನಾಯಕರ ಜತೆ ಚರ್ಚೆ ಮಾಡುತ್ತೇವೆ.

*ಪ್ರಶ್ನೋತ್ತರ*

ಕಾಂಗ್ರೆಸ್ ಪಕ್ಷದ ಬಗ್ಗೆ ನಳೀನ್ ಕುಮಾರ್ ಕಟೀಲ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, 'ಯತ್ನಾಳ್ ಅವರು ಸರ್ಕಾರದ ಸಚಿವರನ್ನು ಪಿಂಪ್ ಎಂದು ಕರೆದಿದ್ದಾರೆ. ಈಶ್ವರಪ್ಪ ಅವರು ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಇವರ ವಿರುದ್ಧ ಕ್ರಮ ಕೈಗೊಳ್ಳದ ಕಟೀಲ್ ಅವರು ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡುತ್ತಾರೆ. ನಳೀನ್ ಕುಮಾರ್ ಕಟೀಲ್ ಅವರು ಎಂದಾದರೂ ನಾವು ಕಳೆದ ಮೂರೂವರೆ ವರ್ಷಗಳಿಂದ ಇಂತಹ ಜನಪರ ಕಾರ್ಯಕ್ರಮ ಕೊಟ್ಟಿದ್ದೇವೆ, ನಾವು ಮುಂದಿನ ಬಾರಿ ಸರ್ಕಾರ ಬಂದರೆ ಯಾವ ರೀತಿಯ ಕಾರ್ಯಕ್ರಮ ರೂಪಿಸುತ್ತೇವೆ ಎಂಬ ನೀಲ ನಕ್ಷೆ ಕುರಿತು ಮಾತನಾಡಿದ್ದಾರಾ? ಅವರು ಅಭಿವೃದ್ಧಿಯ ವಿಚಾರ ಬಿಟ್ಟು ಲವ್ ಜಿಹಾದ್ ಬಗ್ಗೆ ಮಾತನಾಡಿ ಎನ್ನುತ್ತಾರೆ. ಇಂತಹವರು ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡಿದರೆ ನಾವು ಕೇಳಬೇಕೆ? ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಇಲ್ಲವಾಗಿದೆ ಇದೇ ಕಾರಣಕ್ಕೆ ಪ್ರಧಾನಿ ಮೋದಿ ಅವರು ಚುನಾವಣೆ ಸಮಯದಲ್ಲಿ 40 ಬಾರಿ, ಜೆಪಿ ನಡ್ಡಾ ಹಾಗೂ ಅಮಿತ್ ಶಾ 25ಕ್ಕೂ ಹೆಚ್ಚು ಬಾರಿ ರಾಜ್ಯಕ್ಕೆ ಪೊಲಿಟಿಕಲ್ ಟೂರ್ ಮಾಡುತ್ತಿದ್ದಾರೆ' ಎಂದು ಹರಿಹಾಯ್ದರು.
[21/01, 3:45 PM] Kpcc official: ◆ಅಂಗನವಾಡಿಗಳಿಗೆ ಅನುದಾನವಿಲ್ಲ,
◆ಮೊಟ್ಟೆ ಖರೀದಿಯಲ್ಲಿ ಹಗರಣ,
◆ಮಕ್ಕಳಿಗೆ ಹುಳು ಹಿಡಿದ ಆಹಾರ,
◆ಈಗ ಕಾರ್ಯಕರ್ತೆಯರ ಮೇಲೆ ಅಮಾನುಷ ಹಲ್ಲೆ.

@BSBommai ಅವರೇ, ನಿಮ್ಮ ಸರ್ಕಾರ ನಡೆಸಿದ ಈ ದೌರ್ಜನ್ಯಕ್ಕೆ ಕ್ಷಮೆ ಇಲ್ಲ.

ಭ್ರಷ್ಟರು, ಬ್ರೋಕರ್‌ಗಳು, ರೌಡಿಗಳಿಗೆ ಘನ ಮರ್ಯಾದೆ ನೀಡುವ ಬಿಜೆಪಿಗೆ ಅಂಗನವಾಡಿ ತಾಯಂದಿರೆಂದರೆ ತಾತ್ಸಾರವೇ?
[21/01, 3:53 PM] Kpcc official: ಸಮಯ ಮುಗಿದಿದ್ದು ಬಿಜೆಪಿ ಸರ್ಕಾರದ್ದು,
ಸಮಯ ಮುಗಿದಿದ್ದು @BSBommai ಅವರ ಅಧಿಕಾರದ್ದು,
ಅಂಗನವಾಡಿ ಕಾರ್ಯಕರ್ತೆಯರದ್ದಲ್ಲ,

ಪೊಲೀಸರೆದುರೇ PSI ಹಗರಣದ ಆರೋಪಿಯನ್ನು ಓಡಿಹೋಗಲು ಬಿಡುವ ಸರ್ಕಾರ ಅಂಗನವಾಡಿ ತಾಯಂದಿರ ಮೇಲೆ ದೌರ್ಜನ್ಯ ಎಸಗಿದೆ.

ಸಂವಿಧಾನದತ್ತವಾಗಿರುವ ಪ್ರತಿಭಟನೆ ಹಕ್ಕು ಕಸಿಯುತ್ತಿರುವ ಬೊಮ್ಮಾಯಿಯವರು ಕರ್ನಾಟಕದ ಹಿಟ್ಲರ್!
[21/01, 4:53 PM] Kpcc official: ಹಾಸನದಲ್ಲಿ ಶನಿವಾರ ನಡೆದ ಪ್ರಜಾಧ್ವನಿ ಯಾತ್ರೆ ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ ಕೆ ಹರಿಪ್ರಸಾದ್,  ಹಾಸನ ಜಿಲ್ಲೆ ಕಾಂಗ್ರೆಸ್ ಉಸ್ತುವಾರಿ, ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಸದಸ್ಯ ಡಿ ಕೆ ಸುರೇಶ್, ರಾಜ್ಯಸಭೆ ಸದಸ್ಯ ಜಿ ಸಿ ಚಂದ್ರಶೇಖರ್, ಮಾಜಿ ಸಚಿವ ಎಚ್ ಎಂ ರೇವಣ್ಣ, ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮೊಹಮ್ಮದ್ ಹ್ಯಾರಿಸ್ ನಲಪಾಡ್, ಮಾಜಿ ಎಂಎಲ್ಸಿ ಗೋಪಾಲಸ್ವಾಮಿ, ಜಿಲ್ಲಾಧ್ಯಕ್ಷ ಮಂಜುನಾಥ್ ಮತ್ತಿತರರು ಭಾಗವಹಿಸಿದ್ದರು.
[21/01, 6:13 PM] Kpcc official: *ಹಾಸನ ಪ್ರಜಾಧ್ವನಿ ಸಮಾವೇಶದಲ್ಲಿ ಡಿ.ಕೆ. ಶಿವಕುಮಾರ್ ಅವರ ಮಾತುಗಳು:*

ಹಾಸನದ ಜನ ಕೊಟ್ಟ ಸ್ವಾಗತ, ಪ್ರೀತಿ ಜಿಲ್ಲೆಯ ರಾಜಕೀಯ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆಯಲಿದೆ. ಈ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಒಬ್ಬ ಶಾಸಕರು ಇಲ್ಲದಿದ್ದರೂ ಇಷ್ಟು ದೊಡ್ಡ ಜನಸಾಗರ ಸೇರುವ ಮೂಲಕ ಹಾಸನದಲ್ಲಿ ಬದಲಾವಣೆ ತರುತ್ತೇವೆ ಎಂಬ ಸಂದೇಶ ನೀಡಿದ್ದೀರಿ. ಇದು ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಶಕ್ತಿ ಆಗಿದೆ.

ರಾಜ್ಯದ ಜನರ ನೋವು, ಅಭಿಪ್ರಾಯವನ್ನು ಆಲಿಸಿ ನಿಮ್ಮ ಪರ ಧ್ವನಿಯಾಗಲು ನಾವು ಪ್ರಜಾಧ್ವನಿ ಯಾತ್ರೆ ಮಾಡುತ್ತಿದ್ದೇವೆ. ರಾಜ್ಯದ ರೈತರು, ಕಾರ್ಮಿಕರು, ಮಕ್ಕಳು ಯುವಕರು ತಮ್ಮದೇ ಆದ ನೋವು ಅನುಭವಿಸುತ್ತಿದ್ದಾರೆ.

ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ 80 ಸೀಟುಗಳು ಬಂದಿದ್ದವು.  ಬಹುಮತ ಬರಲಿಲ್ಲ. ಹೀಗಾಗಿ ಈ ರಾಜ್ಯದ ಆಡಳಿತ ಕೆಟ್ಟ ಬಿಜೆಪಿ ಸರ್ಕಾರದ ಕೈಗೆ ಹೋಗಬಾರದು ಎಂದು ನಾವು ಜಾತ್ಯಾತೀತ ತತ್ವದ ಆಧಾರದ ಮೇಲೆ ಎಲ್ಲಾ ವರ್ಗದವರ ರಕ್ಷಣೆ ಮಾಡಲೆಂದು ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡು 5 ವರ್ಷಗಳ ಕಾಲ ಅಧಿಕಾರ ಮಾಡಿ ಎಂದು ಬೆಂಬಲ ನೀಡಿದೆವು. 

ಸಿದ್ದರಾಮಯ್ಯ ಅವರು ಶಾಸಕಾಂಗ ಪಕ್ಷದ ನಾಯಕರಾಗಿ, ನಾನು ಪಕ್ಷದ ನಾಯಕನಾಗಿ ಕುಮಾರಸ್ವಾಮಿ ಅವರ ಜತೆ ಸರ್ಕಾರ ಮಾಡುವುದಾಗಿ  ರಾಜ್ಯಪಾಲರಿಗೆ ಪತ್ರ ನೀಡಿದೆವು.

ಕುಮಾರಸ್ವಾಮಿ ಅವರ ಮೇಲೆ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವ ಜವಾಬ್ದಾರಿ ಇತ್ತು. ಬಿಜೆಪಿ ಆಪರೇಷನ್ ಕಮಲ ಮಾಡಿದ ಪರಿಣಾಮ ಸರ್ಕಾರ ಉಳಿಸಿಕೊಳ್ಳಲು ಆಗಲಿಲ್ಲ. ಕೆಟ್ಟ ಬಿಜೆಪಿ ಕೈಗೆ ಅಧಿಕಾರ ಹೋಗಬಾರದು ಎಂದು ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದೆವು. ನಾವು ತಪ್ಪು ಮಾಡಿದ್ದರೆ, ನಿಮ್ಮ ವಿವೇಚನೆಗೆ ತಕ್ಕಂತೆ ಶಿಕ್ಷೆ ನೀಡಿ, ಅನುಭವಿಸುತ್ತೇವೆ. ನಾಯಕನಾದವನಿಗೆ ಯೋಗಕ್ಕಿಂತ ಯೋಗಕ್ಷೇಮ ಮುಖ್ಯ. ಆಪರೇಶನ್ ಕಮಲದಲ್ಲಿ ನಮ್ಮ ಹಾಗೂ ಜೆಡಿಎಸ್ ಪಕ್ಷದ ಶಾಸಕರು ಬಲಿಯಾಗಿ ಇಂದು ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ.

ರಾಜ್ಯದಲ್ಲಿ ಈಗ ಅತ್ಯಂತ ಭ್ರಷ್ಟ ಸರ್ಕಾರ ಇದೆ. ಇದು ಕಳಂಕಿತ ಸರ್ಕಾರ. ರೈತರ ಆದಾಯ ಡಬಲ್ ಮಾಡುತ್ತೇವೆ ಎಂದರು, ಮಾಡಲಿಲ್ಲ. ಪೊಲೀಸ್, ಇಂಜಿನಿಯರ್, ಸಹಾಯಕ ಪ್ರಾಧ್ಯಾಪಕ ಹುದ್ದೆಯಿಂದ ಹಿಡಿದು ಎಲ್ಲಾ ನೇಮಕಾತಿಯಲ್ಲೂ ಅಕ್ರಮ ಮಾಡಿದರು. ಈ ಸರ್ಕಾರ ಬರಲು ಯಾರು ಕಾರಣ, ಇದನ್ನು ನೀವೇ ಆಲೋಚಿಸಿ.

ನಮ್ಮ ಆಡಳಿತ ನಾವು ಸರಿಯಾಗಿ ನಡೆಸಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ನಾವು ಕಳೆದ ಚುನಾವಣೆ ಸೋಲು ಒಪ್ಪಿದ್ದೇವೆ. ಈ ಜಿಲ್ಲೆಯಲ್ಲಿ ಒಂದು ಬಿಜೆಪಿ, ಉಳಿದ ಎಲ್ಲರನ್ನೂ ಜೆಡಿಎಸ್ ಪಕ್ಷದಿಂದ ಆರಿಸಿದ್ದೀರಿ.

ಇತ್ತೀಚೆಗೆ ನಿಮ್ಮ ಜಿಲ್ಲೆಯ ನಾಯಕರಾದ ವೈಎಸ್ ವಿ ದತ್ತಾ ಅವರು ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಇನ್ನು ಇಬ್ಬರು ಶಾಸಕರು ಸಂಪರ್ಕದಲ್ಲಿ ಇದ್ದಾರೆ . ಅವರ ಹೆಸರು ಹೇಳುವುದಿಲ್ಲ. ಪಕ್ಕದ ಜಿಲ್ಲೆಯ ಗುಬ್ಬಿ ಶಾಸಕ ಶ್ರೀನಿವಾಸ್, ಶಿವಮೊಗ್ಗದಲ್ಲಿ ಮಧು ಬಂಗಾರಪ್ಪ, ಕೋಲಾರದ ಶ್ರೀನಿವಾಸಗೌಡರು, ದಾವಣಗೆರೆಯ ದೇವೇಂದ್ರಪ್ಪ ಸೇರಿದಂತೆ ಹಲವು ನಾಯಕರು ಪಕ್ಷ ಸೇರಿದ್ದಾರೆ. ಇವರು ಸುಮ್ಮನೆ ಕಾಂಗ್ರೆಸ್ ಸೇರಲು ದಡ್ಡರೇ? ಕಳೆದ ಚುನಾವಣೆಯಲ್ಲಿ ಪರಿಷತ್ ಸದಸ್ಯರಾಗಿದ್ದ, ಕೋಲಾರದ ಮನೋಹರ್ ಕೂಡ ಪಕ್ಷ ಸೇರಿದ್ದಾರೆ.

ನೀವು ಕುಮಾರಸ್ವಾಮಿ ಹಾಗೂ ದೇವೇಗೌಡರಿಗೆ ಆಶೀರ್ವಾದ ಮಾಡಿದ್ದೀರಿ. ಕುಮಾರಸ್ವಾಮಿ ಅವರನ್ನು ಎರಡು ಬಾರಿ ಮುಖ್ಯಮಂತ್ರಿ ಮಾಡಿದ್ದೀರಿ. ಕಾಂಗ್ರೆಸ್ ಬೆಂಬಲದೊಂದಿಗೆ ದೇವೇಗೌಡರು ಪ್ರಧಾನಮಂತ್ರಿ ಆದರು. ನೀವು ಅವರಿಗೆ ಅವಕಾಶ ನೀಡಿದ್ದೀರಿ. ಈಗ ಕಾಂಗ್ರೆಸ್ ಪಕ್ಷ ಹಾಗೂ ಡಿ.ಕೆ ಶಿವಕುಮಾರ್ ನಿಮಗೆ ಕೈ ಮುಗಿದು ಕೇಳುತ್ತಿದ್ದೇನೆ. ನಿಮ್ಮ ಸೇವೆ ಮಾಡಲು, ಅಧಿಕಾರಕ್ಕೆ ಬಂದು ನಿಮ್ಮ ಋಣ ತೀರಿಸಲು ಒಂದು ಅವಕಾಶ ಮಾಡಿ ಕೊಡಿ.

ಕಾಂಗ್ರೆಸ್ ಪಕ್ಷ ಜನರಿಗೆ ಉತ್ತಮವಾದ, ಭ್ರಷ್ಟ ರಹಿತ, ನುಡಿದಂತೆ ನಡೆವ ಆಡಳಿತ ನೀಡುತ್ತದೆ. ಭ್ರಷ್ಟಾಚಾರ ನಿರ್ಮೂಲನೆ ಮಾಡುತ್ತೇವೆ. ರೈತರ ಬದುಕು ಹಸನ ಮಾಡುತ್ತೇವೆ. ಇದು ನಮ್ಮ ಸಂಕಲ್ಪ. ಅದಕ್ಕಾಗಿ ನಮಗೆ ಶಕ್ತಿ ನೀಡಿ ಎಂದು ಕೇಳುತ್ತಿದ್ದೇನೆ. ಕುಮಾರಸ್ವಾಮಿ ಅವರ ಸರ್ಕಾರದಲ್ಲಿ ರೈತರಿಗೆ ಅನುಕೂಲ ಮಾಡಿಕೊಡಲು ಬೆಂಬಲ ನೀಡಿದೆವು. ಆದರೆ ಅಧಿಕಾರ ಉಳಿಸಿಕೊಳ್ಳಲು ಆಗಲಿಲ್ಲ ಯಾಕೆ ಎಂದು ನೀವು ಅವರನ್ನು ಕೇಳಬೇಕು.

ಹಾಸನದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಕಾರ್ಯಕರ್ತರಿಗೆ ಕೈ ಮುಗಿದು ಕೇಳುತ್ತಿದ್ದೇನೆ, ಹೊಸ ಬದಲಾವಣೆ ನೀಡಲು ನೀವು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿ. ಎಸ್.ಎಂ ಕೃಷ್ಣ ಅವರ ನಾಯಕತ್ವದಲ್ಲಿ ನೀವು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದ್ದೀರಿ. ಅದೇ ರೀತಿ ಈ ಬಾರಿ ನನ್ನ ಹಾಗೂ ಸಿದ್ದರಾಮಯ್ಯ ಅವರ ನಾಯಕತ್ವದ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಬೇಕು. 

ಕರ್ನಾಟಕದಿಂದ ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿದ್ದು, ಅವರ ನಾಯಕತ್ವಕ್ಕೆ ಶಕ್ತಿ ನೀಡಬೇಕು.

ರೈತರ ಬದುಕು ಹಸನು ಮಾಡಲು, ಕೃಷ್ಣ, ಮಹದಾಯಿ, ಮೇಕೆದಾಟು ಸೇರಿದಂತೆ ಎಲ್ಲ ನೀರಾವರಿ ಯೋಜನೆ ಪೂರ್ಣಗೊಳಿಸಲು ಐದು ವರ್ಷಗಳಲ್ಲಿ 2 ಲಕ್ಷ ಕೋಟಿ ರೂ. ಮೀಸಲಿಟ್ಟು, ನಿಮ್ಮ ಬದುಕಿನಲ್ಲಿ ಬದಲಾವಣೆ ತರುವ ಸಂಕಲ್ಪ ಮಾಡಿದ್ದೇವೆ. ಇದಲ್ಲದೆ ಪ್ರಜಾಧ್ವನಿ ಯಾತ್ರೆ ಆರಂಭದ ಸಮಯದಲ್ಲಿ ರಾಜ್ಯಕ್ಕೆ ಕಾಂಗ್ರೆಸ್ ಪಕ್ಷದ ಮೊದಲ ಗ್ಯಾರೆಂಟಿ ಯೋಜನೆ ಗೃಹ ಜ್ಯೋತಿ ಕಾರ್ಯಕ್ರಮದ ಮೂಲಕ ಪ್ರತಿ ಮನೆಗೆ ಪ್ರತಿ ತಿಂಗಳು 200 ಯೂನಿಟ್ ವಿದ್ಯುತ್ ಉಚಿತ ನೀಡಲು ಘೋಷಣೆ ಮಾಡಿದ್ದೇವೆ. ಅಂದರೆ ತಿಂಗಳಿಗೆ 1500 ರಂತೆ ವರ್ಷಕ್ಕೆ 18 ಸಾವಿರ ಉಳಿತಾಯವಾಗುತ್ತದೆ. ಇನ್ನು ಮಹಿಳೆಯರ ಕಷ್ಟ ಅರಿತು ಪ್ರತಿ ಮನೆಯೊಡತಿಗೆ ಪ್ರತಿ ತಿಂಗಳು 2 ಸಾವಿರದಂತೆ ವರ್ಷಕ್ಕೆ 24 ಸಾವಿರ ರೂ ನೀಡುವ ಗೃಹಲಕ್ಷ್ಮಿ ಯೋಜನೆಯನ್ನು ಪಕ್ಷದ ಎರಡನೇ ಗ್ಯಾರೆಂಟಿ ಯೋಜನೆ ಆಗಿ ಘೋಷಣೆ ಮಾಡಿದ್ದೇವೆ. ಇಂದಿರಾ ಗಾಂಧಿ ಅವರ ಮೊಮ್ಮಗಳು, ರಾಜೀವ್ ಗಾಂಧಿ ಹಾಗೂ 10 ವರ್ಷ ಪ್ರಧಾನ ಮಂತ್ರಿ ಹುದ್ದೆ ತ್ಯಾಗ ಮಾಡಿದ ಸೋನಿಯಾ ಗಾಂಧಿ ಅವರ ಮಗಳು ಪ್ರಿಯಾಂಕಾ ಗಾಂಧಿ ಅವರು ಈ ಯೋಜನೆ ಘೋಷಣೆ ಮಾಡಿದರು. ನಮ್ಮ ಪಕ್ಷದ ಎಲ್ಲಾ ನಾಯಕರು ಸೇರಿ ಚರ್ಚೆ ಮಾಡಿ ಈ ತೀರ್ಮಾನ ಮಾಡಿದ್ದೇವೆ. ಇದು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ.

ಹಿಂದೆ ಸಿದ್ದರಾಮಯ್ಯ ಅವರು ನಿಮಗೆ ಉಚಿತವಾಗಿ ಅಕ್ಕಿ ನೀಡುತ್ತೇವೆ ಎಂದು ಮಾತು ಕೊಟ್ಟಿದ್ದರು. ನಾವು ಅಧಿಕಾರಕ್ಕೆ ಬಂದ ಮೊದಲ ದಿನ ಸಂಪುಟ ಸಭೆ ಮಾಡಿ 5 ಕೆ.ಜಿ ಅಕ್ಕಿ ಬಸವಣ್ಣ ಹುಟ್ಟಿದ ದಿನ ಅನ್ನಭಾಗ್ಯ ಯೋಜನೆ ಜಾರಿ ಮಾಡಿದೆವು. ಮುಂದಿನ ಬಾರಿ 10 ಕೆ.ಜಿ ಅಕ್ಕಿ ನೀಡುವ ಭರವಸೆ ನೀಡಿದ್ದೇವೆ. ಇದು ಪಕ್ಷದ ಮೂರನೇ ಗ್ಯಾರೆಂಟಿ ಯೋಜನೆ ಆಗಿದೆ. 

ಈಗ ಬಿಜೆಪಿ ಅವರು ನಾವು ಈ ಕಾರ್ಯಕ್ರಮ ನೀಡುತ್ತೇವೆ ಎಂದು ಜಾಹೀರಾತು ನೀಡುತ್ತಿದ್ದಾರೆ. ನೀವು ಮನೆ ಮನೆಗೆ ಹೋಗಿ ಇದು ಕಾಂಗ್ರೆಸ್ ಪಕ್ಷದ ಯೋಜನೆ ನಾವು ನುಡಿದಂತೆ ನಡೆಯುತ್ತೇವೆ ಎಂದು ಜನರಿಗೆ ಸಂದೇಶ ಮುಟ್ಟಿಸಬೇಕು. ಈ ಜಿಲ್ಲೆಯಲ್ಲಿ 7 ಕ್ಕೆ 7 ಸೀಟು ಗೆಲ್ಲಿಸಿ ನಮ್ಮನ್ನು ವಿಧಾನಸೌಧದ ಮೂರನೇ ಮಹಡಿಗೆ ಕೂರಿಸುವ ಜವಾಬ್ದಾರಿ ನಿಮ್ಮದು.

ನಾವು ಬಿಜೆಪಿಯ ಪಾಪದ ಪುರಾಣ ಬಿಡುಗಡೆ ಮಾಡಿದ್ದೇವೆ. ಬಿಜೆಪಿಗೆ ಮತ್ತೆ ಅವಕಾಶ ಬೇಡ, ಜನತಾ ದಳಕ್ಕೆ ಬೆಂಬಲ ಸಾಕು. ನಮಗೆ ಒಂದು ಅವಕಾಶ ಮಾಡಿಕೊಡಿ. ನಾವು ಎಲ್ಲರಿಗೂ ಅಧಿಕಾರ ಹಂಚುತ್ತೇವೆ. ಕಾಂಗ್ರೆಸ್ ಪಕ್ಷ ಇರುವುದೇ ಜನರಿಗಾಗಿ. ಜಿಲ್ಲಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಪಕ್ಷದ ವಿವಿಧ ಘಟಕಗಳ ಬೆಂಬಲದಲ್ಲಿ ಈ ಐತಿಹಾಸಿಕ ಕಾರ್ಯಕ್ರಮ ಕೊಟ್ಟಿದ್ದೀರಿ ನಿಮಗೆ ಧನ್ಯವಾದಗಳು.

ನನಗೆ ಹೊಳೆನರಸೀಪುರ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲುವ ವಿಶ್ವಾಸವಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪರ ಗಾಳಿ ಬೀಸುತ್ತಿದೆ. ಕಾಂಗ್ರೆಸ್ 135ಕ್ಕೂ ಹೆಚ್ಚು ಕ್ಷೇತ್ರ ಗೆಲ್ಲಲಿದೆ.
[21/01, 7:01 PM] Kpcc official: *ಅಂಗನವಾಡಿ ಕಾರ್ಯಕರ್ತೆಯರ ಹೋರಾಟದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾ ರೆಡ್ಡಿ ಅವರ ಮಾತುಗಳು:*

ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಸಂಘಟನೆ ಇಂದು ತಮ್ಮ ಬೇಡಿಕೆ ಈಡೇರಿಸುವಂತೆ ಪ್ರತಿಭಟನೆ ಮಾಡುತ್ತಿದ್ದಾರೆ. ನಿರಂತರ ಹೋರಾಟದ ಪರಿಣಾಮ ಅಂಗನವಾಡಿ ಕಾರ್ಯಕರ್ತೆಯರು ಇಂದು ತಿಂಗಳಿಗೆ 11 ಸಾವಿರ ವೇತನ ಪಡೆಯುತ್ತಿದ್ದಾರೆ.

ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಸರ್ಕಾರದಲ್ಲಿ 1 ಲಕ್ಷಕ್ಕೂ ಹೆಚ್ಚು ಸಂಖ್ಯೆಯಲ್ಲಿ ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಮಕ್ಕಳ ಪೋಷಣೆ, ಗರ್ಭಿಣಿಯರಿಗೆ ಪೋಷಕಾಂಶ ಆಹಾರ ತಯಾರು ಮಾಡುತ್ತಾ ಕೆಲಸ ಮಾಡುತ್ತಿದ್ದಾರೆ. ಮಕ್ಕಳು ಪ್ರಾಥಮಿಕ ಶಿಕ್ಷಣ ಪಡೆಯುವ ಮುನ್ನ ಅವರನ್ನು ನೋಡಿಕೊಳ್ಳುವ ಜವಾಬ್ದಾರಿ ಅಂಗನವಾಡಿ ಕಾರ್ಯಕರ್ತೆಯರದ್ದಾಗಿದೆ. 

ನಿಮ್ಮ ಹೋರಾಟ ನ್ಯಾಯಯುತವಾಗಿದೆ. ನಿಮಗೆ ಸಿಗಬೇಕಾದ ಸೌಕರ್ಯ ಆಗ್ರಹಿಸಿ ಹೋರಾಟ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ. ನಿಮ್ಮ ಬೇಡಿಕೆ ಈಡೇರಿಸುವಂತೆ ನಾನು ಸರ್ಕಾರಕ್ಕೆ ಒತ್ತಾಯ ಮಾಡುತ್ತೇನೆ.  ಬೇರೆ ಬೇರೆ ರಾಜ್ಯಗಳಲ್ಲಿ ಹೆಚ್ಚಿನ ವೇತನ ನೀಡಲಾಗುತ್ತಿದೆ. ಗೋವಾ ಪುದುಚೇರಿ ರಾಜ್ಯಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರನ್ನು    ಶಾಶ್ವತ ನೌಕರರನ್ನಾಗಿ ಮಾಡಲಾಗಿದೆ ಎಂದು ನೀವು ಹೇಳುತ್ತಿದ್ದೀರಿ. ಈ ಸಂದರ್ಭದಲ್ಲಿ ನಿಮ್ಮ ಹುದ್ದೆ ಖಾಯಂ ಹಾಗೂ ನೀವು ಸಂಸಾರ ಮಾಡಲು ನಿಮಗೆ ಅಗತ್ಯವಿರುವಷ್ಟು ವೇತನ, ಪಿಂಚನೆ ನೀಡಬೇಕು ಎಂದು ಸರ್ಕಾರಕ್ಕೆ ಆಗ್ರಹಿಸುತ್ತೇನೆ. ನಿಮ್ಮ ಹೋರಾಟಕ್ಕೆ ಬೆಂಬಲ ನೀಡುತ್ತೇನೆ. ಈ ಬೇಡಿಕೆಗಳ ಜತೆಗೆ ಅಂಗನವಾಡಿ ಮೂಲಸೌಕರ್ಯಕ್ಕೆ ಸರ್ಕಾರ ಆದ್ಯತೆ ನೀಡಬೇಕು ಎಂದು ನೀವು ಸರ್ಕಾರಕ್ಕೆ ಆಗ್ರಹಿಸಬೇಕು. ಅಲ್ಲಿಗೆ ಸಣ್ಣ ಮಕ್ಕಳು ಬರುತ್ತಾರೆ. ಅವರ ಸುರಕ್ಷತೆ ಹಾಗೂ ಶೌಚಾಲಯದಂತಹ ಸೌಕರ್ಯ ನೀಡಬೇಕು. ಆಗ ಮಕ್ಕಳು ಬೆಳೆಯುವ ವಾತಾವರಣ ನಿರ್ಮಾಣವಾಗುತ್ತದೆ. 

ನಿಮ್ಮ ಹೋರಾಟಕ್ಕೆ ನಾನು ವೈಯಕ್ತಿಕವಾಗಿ ಹಾಗೂ ನಮ್ಮ ಪಕ್ಷ ನಿಮ್ಮ ಬೆಂಬಲಕ್ಕೆ ನಿಲ್ಲಲಿದೆ. ನಿಮ್ಮ ಹೋರಾಟಕ್ಕೆ ಯಶಸ್ಸು ಸಿಗಲಿ ಎಂದು ಆಶಿಸುತ್ತೇನೆ.
[21/01, 7:41 PM] Kpcc official: *ವಿಧಾನ ಪರಿಷತ್ ಸದಸ್ಯ ಯು.ಬಿ. ವೆಂಕಟೇಶ್, ವಕ್ತಾರರಾದ ರಮೇಶ್ ಬಾಬು ಹಾಗೂ ಶಂಕರ್ ಗುಹಾ ಅವರ ಜಂಟಿ ಪತ್ರಿಕಾಗೋಷ್ಠಿ ಮುಖ್ಯಾಂಶಗಳು*

ಗುರು ರಾಘವೇಂದ್ರ ಬ್ಯಾಂಕ್ ಪ್ರತಿಷ್ಠಿತ ಬ್ಯಾಂಕ್ ಎಂದು ನಂಬಿ ಜನ ತಮ್ಮ ಸಂಪಾದನೆ ಹಣವನ್ನು ಹಾಕಿದ್ದರು. ಆರ್ ಬಿಐ ಕೂಡ 11 ವರ್ಷಗಳ ಕಾಲ ಈ ಬ್ಯಾಂಕ್ ಅತ್ಯುತ್ತಮ ಬ್ಯಾಂಕ್ ಎಂದು ಪ್ರಶಸ್ತಿ ನೀಡಿತ್ತು.

ಇದ್ದಕ್ಕಿದ್ದಂತೆ 2017ರಲ್ಲಿ ಇವರ ಬ್ಯಾಲೆನ್ಸ್ ನೋಡಿದಾಗ 0.5% ಎನ್ ಪಿಎ ಇತ್ತು. 2019ರಲ್ಲಿ 94.56% ಎನ್ ಪಿಎ ಆಗಿತ್ತು. ಕೇವಲ 2 ವರ್ಷಗಳಲ್ಲಿ ಇಷ್ಟು ನಷ್ಟ ಹೇಗೆ ಎಂದು ಕೇಳಿದಾಗ ಆರ್ ಬಿಐ ನವರು 2013-14ರಿಂದ ಆಡಿಟ್ ಮಾಡಬೇಕು ಎಂದು ಹೇಳಿದ್ದಾರೆ. ಪ್ರತಿ ವರ್ಷ ಆಡಿಟ್ ಮಾಡುತ್ತಿದ್ದಾರೆ. ನಾವು ವಿಧಾನ ಪರಿಷತ್ ನಲ್ಲಿ ಮೊದಲು ಈ ವಿಚಾರ ಪ್ರಸ್ತಾಪ ಮಾಡಿ ಆಗ್ರಹಿಸಿದೆವೆ. ಶಂಕರ್ ಗುಹಾ ಅವರು ಬೀದಿಗಳಲ್ಲಿ ಈ ವಿಚಾರವಾಗಿ ಹೋರಾಟ ಮಾಡಿದ್ದಾರೆ.

ಮಂತ್ರಿಗಳು ಸದನದಲ್ಲಿ ಬ್ಯಾಂಕ್ ನ ಸಾವಿರ ಕೋಟಿ ಮೌಲ್ಯದ ಆಸ್ತಿಯನ್ನು ಸೀಜ್ ಮಾಡಿದ್ದು, ಅದು ಸಿಐಡಿ ಬಳಿ ಇದೆ. ನಾವು ಹೂಡಿಕೆದಾರರಿಗೆ ನ್ಯಾಯ ಕೊಡಿಸುವುದಾಗಿ ಹೇಳಿದ್ದರು. ಕಳೆದ ಸದನದಲ್ಲಿ ನಾವು ಬಾವಿಗಿಳಿದು ಹೋರಾಟ ಮಾಡಿ ಸಿಬಿಐ ತನಿಖೆಗೆ ಆಗ್ರಹಿಸಿದ ನಂತರ ಜ.3,4,5 ಸಭೆ ಮಾಡಿ ತೀರ್ಮಾನ ಮಾಡುತ್ತೇವೆ. ಇಲ್ಲದಿದ್ದರೆ ಮುಖ್ಯಮಂತ್ರಿಗಳ ಜತೆ ಚರ್ಚೆ ಮಾಡಿ ಸಿಬಿಐ ತನಿಖೆಗೆ ನೀಡುವುದಾಗಿ ಹೇಳಿದ್ದರು.

ಈ ಸಭೆ ಕಳೆದ ಮಂಗಳವಾರ ಸಚಿವರು, ಶಾಸಕರು, ಸೌಮ್ಯರೆಡ್ಡಿ ಅಧಿಕಾರಿಗಳ ಸಮ್ಮುಖದಲ್ಲಿ ಚರ್ಚೆ ನಡೆಯಿತು. ಈ ಸಮಯದಲ್ಲಿ ಈ ಬ್ಯಾಂಕ್ ಮುಚ್ಚಿ 3 ವರ್ಷವಾಗಿದೆ ಇಲ್ಲಿಯವರೆಗೆ ಎಷ್ಟು ಪ್ರಗತಿ ಆಗಿದೆ ಎಂದು ಕೇಳಿದಾಗ, ಇದುವರೆಗೂ ಒಂದೂ ರೂಪಾಯಿ ವಸೂಲಿ ಆಗಿಲ್ಲ. ಆದರೆ ನಷ್ಟ 1294 ಕೋಟಿ ಆಗಿದೆ. 

ಪ್ರತಿ ಬಾರಿ 1000 ಕೋಟಿ ಆಸ್ತಿ ಜಪ್ತಿ ಎನ್ನುತ್ತೀರಿ. ಅದನ್ನು ಹರಾಜಿಗೆ ಹಾಕಿ ಠೇವಣಿದಾರರ ಹಣ ನೀಡಿ ಎಂದು ಹೇಳಿದೆ. ವಿಜಯ ಎಂಬ ಹಿರಿಯ ಮಹಿಳೆ ತಮ್ಮ ಗಂಡನಿಗೆ ಮಿದುಳು ಸಮಸ್ಯೆ ಎದುರಾಗಿ ಇದುವರೆಗೂ 30 ಲಕ್ಷ ವೆಚ್ಚವಾಗಿದೆ. ಆಸ್ಪತ್ರೆಯವರಿಗೆ ಇನ್ನೂ 5-6 ಲಕ್ಷ ಬಾಕಿ ಇದೆ. ಬೇರೆ ಆಸ್ಪತ್ರೆ ಸೇರಿಸಲು ಹಣ ಇಲ್ಲ. ಇಲ್ಲಿ ಇಟ್ಟಿರುವ ಹಣ ಬಂದರೆ ದಾನ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಹೇಳಿದರು. ಇಂತಹ ಅನೇಕ ಜನ ಸಂಕಷ್ಟದಲ್ಲಿ ಇದ್ದಾರೆ. 

ಇಲ್ಲಿ ಮೊದಲ ತಪ್ಪಿತಸ್ಥರು ಆರ್ಬಿಐ. ಅವರು ಹೇಳಿದಂತೆ ಬ್ಯಾಂಕ್ ನಡೆಯುತ್ತಿದೆ. ಪಿಎಂಸಿ ಬ್ಯಾಂಕ್ 8 ಸಾವಿರ ಕೋಟಿ ನಷ್ಟವಾದರೂ ಸರ್ಕಾರ ಎಷ್ಟು ಬೇಗ ಸಮಸ್ಯೆ ಬಗೆಹರಿಸಿದೆ. ಆದರೆ ಇಲ್ಲಿ 1300 ಕೋಟಿ ನಷ್ಟವಾಗಿದ್ದು, ಇದನ್ನು ಬಗೆಹರಿಸಲು ಮುಂದಾಗಿ ಎಂದು ವಿವರಿಸಿದೆವು. ಇದುವರೆಗೂ ಅನೇಕ ಮಂದಿ ಸತ್ತಿದ್ದು, ಇನ್ನು ಎಷ್ಟು ಮಂದಿ ಸಾಯುತ್ತಾರೋ ಗೊತ್ತಿಲ್ಲ. 

ಇಲ್ಲಿ ಬಹುತೇಕ ಬೋಗಸ್ ಲೋನ್ ನೀಡಲಾಗಿದೆ. ಇವರು ಯಾರು ಎಂದು ಸರ್ಕಾರಕ್ಕೂ ಗೊತ್ತಿದೆ. ವರದಕ್ಷಿಣೆ ಕಿರುಕುಳ ದೂರು ಬಂದರೆ ಇಡೀ ಮನೆಯವರನ್ನು ಪೊಲೀಸರು ಕರೆದೊಯ್ಯುತ್ತಾರೆ. ಆದರೆ ಇಲ್ಲಿ ಸಾಲ ಮಾಡಿರುವವರ ಮನೆಯವರು ಹಾಗೂ ಅವರ ಆಸ್ತಿ ಯಾಕೆ ಮುಟ್ಟುಗೋಲು ಹಾಕಿಕೊಳ್ಳುವುದಿಲ್ಲ?

ನಾವು ಹೋರಾಟ ಮಾಡಿದ್ದಕ್ಕೆ ಸಿಬಿಐ ತನಿಖೆಗೆ ನೀಡುವುದಾಗಿ ಭರವಸೆ ನೀಡಿದ್ದಾರೆ. ಆದರೆ ನಿನ್ನೆಯ ಸಂಪುಟ ಸಭೆಯಲ್ಲಿ ಪ್ರಸ್ತಾಪ ಆಗಿಲ್ಲ. ಇನ್ನು ಮುಂದಿನ ಸಭೆಯಲ್ಲಿ ನಿರ್ಣಯವಾಗುವುದೆ ಎಂದು ಕಾಯುತ್ತಿದ್ದೇವೆ. 

ಜನರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸುತ್ತಿಲ್ಲ. ಸರಿಯಾದ ತನಿಖೆ ಮಾಡಿದರೆ ಸರ್ಕಾರ ಯಾರ ರಕ್ಷಣೆ ಮಾಡುತ್ತಿದೆ ಎಂದು ಗೊತ್ತಾಗುತ್ತದೆ. ಇಲ್ಲಿ ಕಾನೂನಾತ್ಮಕವಾಗಿ ಏನೂ ನಡೆದಿಲ್ಲ. ಇದರಲ್ಲಿ ದೊಡ್ಡವರ ಪಾತ್ರ ಇದೆ. ಸಿಬಿಐ ತನಿಖೆಗೆ ನೀಡಿದರೆ ನಾವು ನಮ್ಮ ಬಳಿ ಇರುವ ಸಾಕ್ಷಿ ನೀಡುತ್ತೇವೆ.

*ಶಂಕರ್ ಗುಹಾ:*

ಇಲ್ಲಿ ಫಲಾನುಭವಿಗಳ ಬಗ್ಗೆ ನೋಡುವುದಾದರೆ ನರಸಿಂಹ ಎಂಬುವವರಿಗೆ ಒಂದು ಬಾರಿ 51 ಕೋಟಿ, ಮತ್ತೊಂದು ಬಾರಿ 52 ಕೋಟಿ ಸಾಲ ನೀಡಲಾಗಿದೆ. ಇವರಿಗೆ ಬ್ಯಾಂಕ್ ಖಾತೆಯಿಂದ ಅವರ ಖಾತೆಗೆ ಹೋಗಿರುವ ಹಣ ಕೇವಲ 8-10 ಕೋಟಿ ಮಾತ್ರ. ಮತ್ತೊಂದು ಪ್ರಕರಣದಲ್ಲಿ ಎಮೆಸ್ಕೆ ಷೆಲ್ಟರ್ಸ್ ಎಂಬ ಸಂಸ್ಥೆಯ ಸುರೇಶ್ ಕುಮಾರ್ ಎಂಬುವವರಿಗೆ 150 ಕೋಟಿ ಸಾಲ ನೀಡಲಾಗಿದ್ದು, ಇವರಿಗೆ ಅಧಿಕೃತವಾಗಿ ವರ್ಗಾವಣೆ ಆಗಿರುವುದು ಕೇವಲ 10 ಕೋಟಿ ಮಾತ್ರ. ಉಳಿದ ಹಣ ಯಾರು ಬಳಸಿಕೊಂಡಿದ್ದಾರೆ? ಇವರು ಎಲ್ಲಿದ್ದಾರೆ ಏನು ಮಾಡುತ್ತಿದ್ದಾರೆ  ಎಂದು ತನಿಖಾ ಸಂಸ್ಥೆಗಳಿಂದ ತಿಳಿಯಬೇಕು. ಸಿನಿಮಾ ನಿರ್ದೇಶಕರು 300 ಕೋಟಿ ಸಾಲ ಮಾಡಿದ್ದು, ಬಡ್ಡಿ ಎಲ್ಲಾ ಬೆಳೆದು 800 ಕೋಟಿ ಆಗಿದ್ದೆ. ಬಿಜೆಪಿ ಎಂಎಲ್ಸಿ 12 ಕೋಟಿ ಸಾಲ ಇದೆ. ಇವರ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಇವರೆಲ್ಲರ ಪ್ರಕರಣ ಇಡಿಗೆ ರವಾನೆಯಾಗಿದೆ.

ಈ ಪ್ರಕರಣದಲ್ಲಿ ಜನ ಸಂಸದರ ಬಳಿ ಹೋದರು. ಅವರು ಆರಂಭದಲ್ಲಿ ಎಲ್ಲಾ ಸರಿ ಮಾಡುತ್ತೇವೆ ಎಂದರು. ಆದರೆ ನಂತರದ ಆರು ತಿಂಗಳು ಕಳ್ಳರೇ ಆ ಬ್ಯಾಂಕ್ ಆಡಳಿತ ನಡೆಸಿದ್ದಾರೆ. ಈ ವಿಚಾರದಲ್ಲಿ ಸಂಸದರು ಯಾವುದೇ ರಾಜ್ಯ ನಾಯಕರನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ. ತೇಜಸ್ವಿ ಸೂರ್ಯ ಹಾಗೂ ರವಿ ಸುಬ್ರಮಣ್ಯ ಹೊರತಾಗಿ ಬೇರೆ ಯಾವ ನಾಯಕರು ಈ ಬಗ್ಗೆ ಮಾತನಾಡಲಿಲ್ಲ. ಮುಖ್ಯಮಂತ್ರಿಗಳು ಆರ್ಬಿಐ ಅಥವಾ ಕೇಂದ್ರ ಹಣಕಾಸು ಮಂತ್ರಿ ಬಳಿ ಮಾತನಾಡುವುದಕ್ಕೆ ಹಾಗೂ ಸಂಸದರು ಮಾತನಾಡುವುದಕ್ಕೆ ಬಹಳ ವ್ಯತ್ಯಸವಿದೆ. ಈ ವಿಚಾರದಲ್ಲಿ ಸಂಸದರು ವಿಫಲರಾಗಿದ್ದಾರೆ. ನಾನು ಹಲವು ಬಾರಿ ಸಿಬಿಐಗೆ ವಿಚಾರಣೆ ನೀಡಿ ಎಂದು ಮನವಿ ಮಾಡಿದರೂ ಇದುವರೆಗೂ ಪರಿಗಣಿಸಲಿಲ್ಲ. ಆದರೆ ಈಗ ಮುಂದಾಗಿರುವುದು ರಾಜಕೀಯ ಪ್ರೇರಣೆಯೋ, ಅಥವಾ ಇಲ್ಲಿ ಏನೂ ಸಿಗಲ್ಲ ಬ ಖಚಿತತೆ ಸಿಕ್ಕಿದೆಯೇ ಗೊತ್ತಿಲ್ಲ. 

ವಸಿಷ್ಠ ಹಗರಣ ಕೂಡ ಇದರ ಜತೆಗೆ ಬಂದರು 2013-14, 2014-15ರ ಆಡಿಟ್ ಆಗಿತ್ತು. ಅಲ್ಲಿ 91 ಕೋಟಿ ಮೋಸ ಆಗಿದೆ ಎಂದು ತಿಳಿಯಿತು. ನಂತರ ಆಡಿಟ್ ನಡೆಯಲಿಲ್ಲ. ವಸಿಷ್ಠ ಸಂಸ್ಥೆ ಹಾಗೂ ಅಲ್ಲಿನ ಶಾಸಕರಿಗೆ ಉತ್ತಮ ಸಂಬಂಧವಿತ್ತು. 2021ರ ಏಪ್ರಿಲ್ ನಲ್ಲಿ ಹಣ ಬಾರದೆ ಠೇವಣಿದಾರರು ಆಕ್ರೋಶ ವ್ಯಕ್ತಪಡಿಸಿದಾಗ ಆ ಸಭೆಯಲ್ಲಿ ಶಾಸಕರು ಭಾಗಿಯಾಗಿ ಇದು ರಾಘವೇಂದ್ರ ಬ್ಯಾಂಕ್ ನಂತೆ ಆಗುವುದಿಲ್ಲ ಎಲ್ಲರಿಗೂ ಹಣ ಬರಲಿದೆ ಎಂದರು. ಎರಡು ವರ್ಷ ಕಳೆದರೂ ಇದುವರೆಗೂ ಯಾರಿಗೂ ಹಣ ಬಂದಿಲ್ಲ.

ಇನ್ನು ಸಚಿವರು ಸದನದಲ್ಲಿ 28 ಕೋಟಿ ಹಣ ಪಾವತಿ ಮಾಡಲಾಗಿದೆ ಎಂದು ಹೇಳಿದ್ದಾರೆ. ಯಾರಿಗೆ ಈ ಹಣ ನೀಡಲಾಗಿದೆ ಎಂದು ಪಟ್ಟಿ ನೀಡಿದರೆ ನಾವು ಅದನ್ನು ಪರಿಶೀಲನೆ ಮಾಡುತ್ತೇವೆ. ಈ ಹಣ ಯಾರಿಗೂ ಸಿಕ್ಕಿಲ್ಲ. ಇದೆಲ್ಲವೂ ಶುದ್ಧ ಸುಳ್ಳು.

ಯಾರಿಗೆ ಎಷ್ಟು ನೀಡಿದ್ದಾರೆ, ಸಮಾನ ಹಂಚಿಕೆ ಆಗಿದೆಯಾ ಎಂಬ ಮಾಹಿತಿ ಇಲ್ಲ. ಸಾಲ ತೆಗೆದುಕೊಂಡಿರುವ ದಾಖಲೆ ಇದೆ, ಅದಕ್ಕೆ ನೀಡಿರುವ ಆಸ್ತಿ ದಾಖಲೆ ಇದೆ. ಆದರೆ ಸಾಲದ ಹಣ ವರ್ಗಾವಣೆ ಆಗಿರುವ ದಾಖಲೆ ಇಲ್ಲವಾಗಿದೆ.

ಕಣ್ವ ಹಗರಣ 2019ರಲ್ಲಿ ಬೆಳಕಿಗೆ ಬಂದಿದ್ದು, ಇದುವರೆಗೂ ಸುಮಾರು 150 ಮಂದಿ ಸತ್ತಿದ್ದಾರೆ. ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ.

*ರಮೇಶ್ ಬಾಬು:*

ಬ್ಯಾಂಕ್ ಆಡಳಿತಾಧಿಕಾರಿ ಮಾಹಿತಿ ಪ್ರಕಾರ 2000 ಕೋಟಿ ರೂಪಾಯಿ ಮಾಹಿತಿ ನೀಡಿದ್ದೇವೆ. ಕಾಂಗ್ರೆಸ್ ಪಕ್ಷ ಠೇವಣಿದಾರರಿಗೆ ನ್ಯಾಯ ಒದಗಿಸಲು ಬದ್ಧವಾಗಿದೆ. ಇದಕ್ಕಾಗಿ ನಮ್ಮ ನಾಯಕರು ನಿರಂತರ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಇದು ಚುನಾವಣೆ ಪ್ರಕ್ರಿಯೆಗೆ ಸೀಮಿತವಾಗಿಲ್ಲ. 

ಇಂತಹ ಹಗರಣ ಬಯಲು ಮಾಡಿ ಸತ್ಯಾಂಶ ಹೊರ ತರುವುದು ಕಾಂಗ್ರೆಸ್ ಉದ್ದೇಶ. ಸಚಿವರು ಈಗ ಸಿಬಿಐ ತನಿಖೆಗೆ ನೀಡಲು ನಿರ್ಧರಿಸಿದ್ದು, ನಾವು ಸ್ವಾಗತಿಸುತ್ತೇವೆ. ಆದರೆ ಈ ವಿಚಾರ ಇನ್ನು ಸಂಪುಟ ಸಭೆ ಮುಂದೆ ಬರಬೇಕಿದೆ. 

ಗುರು ರಾಘವೇಂದ್ರ ಬ್ಯಾಂಕ್ ಠೇವಣಿದಾರರ ಸಂಕಟ ಜೊತೆ ಚರ್ಚೆ ನಡೆಸಿ ಕ್ಲೇಮ್ ಮಾಡಬೇಕೆ ಹೊರತು ಈ ವಿಚಾರದಲ್ಲಿ ಸುಳ್ಳು ಮಾಹಿತಿ ನೀಡಲಾಗುತ್ತಿದೆ. ಹೀಗಾಗಿ ಪಕ್ಷದ ನಾಯಕರಾದ ಯುಬಿ  ವೆಂಕಟೇಶ್, ಶಾಸಕಿ ಸೌಮ್ಯ ರೆಡ್ಡಿ ಹಾಗೂ ಶಂಕರ್ ಗುಹಾ ಅವರು ಹೋರಾಟ ಮುಂದುವರಿಸಿದ್ದಾರೆ.

ಪ್ರಕರಣವನ್ನು ಕೂಡಲೇ ಸಿಪಿಐ ತನಿಖೆಗೆ ನೀಡಿ ಠೇವಣಿದಾರರಿಗೆ ನ್ಯಾಯ ಒದಗಿಸಬೇಕು ಎಂಬುದು ಕಾಂಗ್ರೆಸ್ ಪಕ್ಷದ ಅಗ್ರಹ. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಹಾಗೂ ಠೇವಣಿ ದಾರರಿಗೆ ತಮ್ಮ ಹಣ ವಾಪಸ್ ಸಿಗುವಂತೆ ಮಾಡಬೇಕು. ಇದು ಕಾಂಗ್ರೆಸ್ ಆಗ್ರಹ.
[21/01, 9:40 PM] Kpcc official: ಚಿಕ್ಕಮಗಳೂರಿನಲ್ಲಿ ಶನಿವಾರ ನಡೆದ ಪ್ರಜಾಧ್ವನಿ ಯಾತ್ರೆ ಸಮಾವೇಶದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ ಕೆ ಹರಿಪ್ರಸಾದ್, ಮಾಜಿ ಸಚಿವೆ ಡಿ ಕೆ ತಾರಾದೇವಿ, ಕಿಸಾನ್ ಘಟಕದ ಅಧ್ಯಕ್ಷ ಸಚಿನ್ ಮಿಗಾ, ಮಾಜಿ ಎಂಎಲ್ಸಿ ಗಾಯತ್ರಿ ಶಾಂತೇಗೌಡ , ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮೊಹಮ್ಮದ್ ಹ್ಯಾರಿಸ್ ನಲಪಾಡ್, ಡಿಸಿಸಿ ಅಧ್ಯಕ್ಷ ಡಾ. ಅನ್ಸುಮಾನ್ ಮತ್ತಿತರರು ಭಾಗವಹಿಸಿದ್ದರು.
[22/01, 12:25 PM] Kpcc official: ಪುತ್ತೂರಿನಲ್ಲಿ ಭಾನುವಾರ ನಡೆದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳ ವರ್ಧಂತ್ಯೋತ್ಸವ ಹಾಗೂ ಶ್ರೀ ನಿರ್ಮಲಾನಂದ ಸ್ವಾಮೀಜಿಗಳ ಪಟ್ಟಾಭಿಷೇಕದ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಶ್ರೀ ನಿರ್ಮಲಾನಂದ ಸ್ವಾಮೀಜಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತ್ತಿತರರು ಭಾಗವಹಿಸಿದ್ದರು.
[22/01, 2:46 PM] Kpcc official: *ಜ.23ಕ್ಕೆ ಬೆಂಗಳೂರಿನ 300ಕ್ಕೂ ಹೆಚ್ಚು ಕಡೆಗಳಲ್ಲಿ ಭ್ರಷ್ಟಾಚಾರದ ವಿರುದ್ಧ ಕಾಂಗ್ರೆಸ್ ಮೌನ ಪ್ರತಿಭಟನೆ*

*ಬೆಂಗಳೂರು:*

'ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಜನಜಾಗೃತಿ ಮೂಡಿಸಲು ಕಾಂಗ್ರೆಸ್ ಪಕ್ಷ ಜ.23, ಸೋಮವಾರ ಬೆಳಗ್ಗೆ 10 ಗಂಟೆಯಿಂದ 12 ಗಂಟೆವರೆಗೂ ನಗರದ 300ಕ್ಕೂ ಹೆಚ್ಚು ಕಡೆಗಳಲ್ಲಿ ಭ್ರಷ್ಟಾಚಾರ ತೊಲಗಿಸಿ, ಬೆಂಗಳೂರು ಉಳಿಸಿ ಎಂಬ ಮೌನ ಪ್ರತಿಭಟನೆ ಮಾಡಲಾಗುವುದು' ಎಂದು ಕಾಂಗ್ರೆಸ್ ಶಾಸಕರಾದ ಎನ್.ಎ ಹ್ಯಾರಿಸ್ ಅವರು ತಿಳಿಸಿದ್ದಾರೆ.

ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಎಐಸಿಸಿ ಕಾರ್ಯದರ್ಶಿ ಅಭಿಶೇಕ್ ದತ್ ಅವರ ಜತೆ ಈ ವಿಚಾರವಾಗಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹ್ಯಾರಿಸ್ ಅವರು, ಗಂಟೆವರೆಗೆ 51 ಮೆಟ್ರೋ ನಿಲ್ದಾಣಗಳಲ್ಲಿ, 26 ಫ್ಲೈ ಓವರ್, 200 ಟ್ರಾಫಿಕ್ ಸಿಗ್ನಲ್ ಗಳಲ್ಲಿ ನಾವು ಮೌನ ಪ್ರತಿಭಟನೆ ಮಾಡುತ್ತಿದ್ದೇವೆ. ನಾವು ಗಲಾಟೆ ಮಾಡಿ, ಸಂಚಾರಕ್ಕೆ ಅಡ್ಡಿ ಮಾಡಿ ಹೋರಾಟ ಮಾಡುವುದಿಲ್ಲ. ನಮ್ಮ ಕಾರ್ಯಕರ್ತರು ಪ್ಲೆಕಾರ್ಡ್ ಹಿಡಿದು ಹೋರಾಟ ಮಾಡುತ್ತಾರೆ’ ಎಂದು ವಿವರಿಸಿದರು. ಈ ಸಂದರ್ಭದಲ್ಲಿ ಅವರು ಹೇಳಿದ್ದಿಷ್ಟು.    

‘ರಾಜ್ಯದಲ್ಲಿ ಭ್ರಷ್ಟಾಚಾರ ಯಾವ ಮಟ್ಟಿಗೆ ಹರಡಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಹೀಗಾಗಿ ಬೆಂಗಳೂರು ಉಳಿಸುತ್ತಾ ರಾಜ್ಯವನ್ನು ಉಳಿಸಿ ಎಂಬ ಸಂದೇಶ ನೀಡುತ್ತೇವೆ. ನಾಳೆ ಈ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಮಾಡಿ ನಂತರ ರಾಜ್ಯಕ್ಕೆ ವಿಸ್ತರಿಸುತ್ತೇವೆ. 

ರಾಜ್ಯದಲ್ಲಿ 40% ಕಮಿಷನ್ ಹಾಗೂ ಲಂಚಾವತಾರ ಹೆಚ್ಚಾಗಿದ್ದು, ಇದಕ್ಕೆ ಕೊನೆ ಇಲ್ಲವೇ ಎಂಬ ಪ್ರಶ್ನೆ ಉದ್ಭವಿಸಿದೆ. ಈ ವಿಚಾರವಾಗಿ ಸರ್ಕಾರ ಯಾವುದೇ ಉತ್ತರ ನೀಡುತ್ತಿಲ್ಲ. ಮಂತ್ರಿಗಳು ಉತ್ತರ ನೀಡುತ್ತಿಲ್ಲ. ಭ್ರಷ್ಟಾಚಾರ ಆರೋಪ ಕೇಳಿಬಂದ ಮಂತ್ರಿಗಳ ವಿರುದ್ಧ ಯಾವುದೇ ಕ್ರಮ ಜರುಗಿಸುತ್ತಿಲ್ಲ. ಭ್ರಷ್ಟಾಚಾರ ಆರೋಪ ಬಂದಾಗ ಅಂತಹವರ ವಿರುದ್ಧ ಕ್ರಮಕ್ಕೆ ಮುಂದಾಗಬೇಕು. ಆದರೆ ಈ ಸರ್ಕಾರದಲ್ಲಿ ಎಷ್ಟೇ ಭ್ರಷ್ಟಾಚಾರದ ಆರೋಪ ಬಂದರೂ ಯಾವುದೇ ಕ್ರಮ ಕೈಗೊಳ್ಳದಿರುವುದನ್ನು ನೋಡಿದರೆ, ಇಡೀ ಸರ್ಕಾರವೇ ಇದರಲ್ಲಿ ಭಾಗಿಯಾಗಿದೆಯೇ ಎಂಬ ಅನುಮಾನ ಮೂಡುತ್ತದೆ. 

ವಿರೋಧ ಪಕ್ಷವಾಗಿ ಇದನ್ನೆಲ್ಲ ನೋಡಿಕೊಂಡು ಸುಮ್ಮನೆ ಕೂರಲು ಸಾಧ್ಯವಿಲ್ಲ. ವಿರೋಧ ಪಕ್ಷವಾಗಿ ನಗರ, ರಾಜ್ಯ ಹಾಗೂ ಜನರನ್ನು ರಕ್ಷಣೆ ಮಾಡಿ ಅವರ ಕೆಲಸ ಮಾಡಿಸಿಕೊಡುವುದು ನಮ್ಮ ಜವಾಬ್ದಾರಿ. ರಾಜ್ಯದಲ್ಲಿನ ಭ್ರಷ್ಟಾಚಾರ ವಿಚಾರವಾಗಿ ಮಾಧ್ಯಮಗಳು ಕೂಡ ಸಾಕಷ್ಟು ಆರೋಪ ಮಾಡಿವೆ. ಗುತ್ತಿಗೆದಾರರ ಸಂಘದ ಅದ್ಯಕ್ಷರು ಪ್ರಧಾನಿಗೆ ಕಾಗದ ಬರೆದರೂ ಪ್ರಧಾನಮಂತ್ರಿಗಳು ಉತ್ತರ ನೀಡಲಿಲ್ಲ. 

ಪಿಎಸ್ಐ, ಪಿಡ್ಬ್ಲ್ಯೂ ಡಿ ಜೆಇಇ, ಕೆಪಿಟಿಸಿಎಲ್ ಸೇರಿದಂತೆ ಭ್ರಷ್ಟಾಚಾರದ ಪರ್ವತವನ್ನೇ ನಿರ್ಮಿಸಿದ್ದಾರೆ. ಆದರೂ ಸತ್ಯಹರಿಶ್ಚಂದ್ರರ ಮೊಮ್ಮಕ್ಕಳಂತೆ ಮಾತನಾಡುತ್ತಿದ್ದಾರೆ. ಚುನಾವಣೆ ಹತ್ತಿರ ಬರುತ್ತಿದ್ದಂತೆ ಪ್ರಧಾನಿಗಳು ರಾಜ್ಯಕ್ಕೆ  ಪದೇ ಪದೆ ಬರುತ್ತಿದ್ದಾರೆ. ರಾಜ್ಯಕ್ಕೆ ಬರುವ ಮೋದಿ ಅವರು ಈ ಭ್ರಷ್ಟಾಚಾರದ ವಿಚಾರವಾಗಿ ಏನಾದರೂ ಮಾತನಾಡುತ್ತಿದ್ದಾರಾ? ಸುಳ್ಳನೇ ಹೇಳಿ ಜನರಿಗೆ ಮೋಸ ಮಾಡುತ್ತಿದ್ದಾರೆ. 

ಈ ಸರ್ಕಾರ ಕಳೆದ ಏಳೆಂಟು ತಿಂಗಳಿಂದ ವಿಧವಾ, ಅಂಗವಿಕಲರ, ವೃದ್ಧಾಪ್ಯ ವೇತನವನ್ನು ನೀಡುತ್ತಿಲ್ಲ. ಸರ್ಕಾರದ ಬಳಿ ಹಣವಿಲ್ಲವೇ? ಇದಕ್ಕೆ ಸರ್ಕಾರ ಉತ್ತರಿಸುತ್ತಿಲ್ಲ. ಹೀಗಾಗಿ ಜನರಿಗೆ ಎಚ್ಛರಿಕೆ ನೀಡಲು ಹೊಸ ಕಾರ್ಯಕ್ರಮ ಮಾಡಿದ್ದೇವೆ.

ಬಿಜೆಪಿ ಸರ್ಕಾರದ ಅವಧಿ ಕೇವಲ 100 ದಿನಗಳೂ ಇಲ್ಲ. ಆದರೂ ತನ್ನ ಪ್ರಣಾಳಿಕೆಯ ಶೇ.90ರಷ್ಟು ಭರವಸೆ ಈಡಡೇರಿಸಿಲಿಲ್ಲ. ಆದರೂ ಹೊಸ ಪ್ರಣಾಳಿಕೆ ಬಿಡುಗಡೆ ಮಾಡಲು ತಯಾರಿ ಮಾಡುತ್ತಿದ್ದಾರೆ. ಜನರಿಗೆ ಯಾವುದೇ ಅನುಕೂಲ ಮಾಡಿಕೊಡದೆ ಸರ್ಕಾರ ತನ್ನ ಆಡಳಿತ ಮುಗಿಸುತ್ತಿದೆ. ಇದನ್ನೆಲ್ಲ ಅರ್ಥ ಮಾಡಿಕೊಂಡು ಬೆಂಗಳೂರಿನ ಎಲ್ಲ ನಾಯಕರು ಕಾರ್ಯಕರ್ತರು ರಸ್ತೆಯಲ್ಲಿ ಪ್ರತಿಭಟನೆ ಮಾಡುತ್ತೇವೆ. ಬೆಂಗಳೂರಿನ ಎಲ್ಲೆಡೆ ಈ ಪ್ರತಿಭಟನೆ ಮಾಡುತ್ತೇವೆ. 

ನಾಳೆ ಟ್ರಿನಿಟಿ ಸರ್ಕಲ್ ಬಳಿ ಕೆಪಿಸಿಸಿ ಅಧ್ಯಕ್ಷರು, ಸಿಎಲ್ ಪಿ ನಾಯಕರಾದ ಸಿದ್ದರಾಮಯ್ಯ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಅಭಿಶೇಕ್ ದತ್ ಅವರು ಭಾಗವಹಿಸಲಿದ್ದಾರೆ. ಬೆಂಗಳೂರಿನ ಎಲ್ಲ 28 ಕ್ಷೇತ್ರಗಳಲ್ಲಿ ಶಆಸಕರು, ಪರಾಜಿತ ಅಭ್ಯರ್ಥಿಗಳು 300ಕ್ಕೂ ಹೆಚ್ಚು ಕಡೆಗಳಲ್ಲಿ ಪ್ರತಿಭಟನೆ ಮಾಡುತ್ತೇವೆ. ಭ್ರಷ್ಟಾಚಾರದ ವಿರುದ್ಧ ನಾವು ಹೋರಾಟ ಮಾಡುತ್ತಿದ್ದೇವೆ. ಇದರ ವಿರುದ್ಧ ಹೋರಾಟ ಮಾಡಿದರಷ್ಟೇ ನಾವು ಮುಂದೆ ಉತ್ತಮ ಆಡಳಿತ ನೀಡಲು ಸಾಧ್ಯವಾಗುತ್ತದೆ.

ಪಕ್ಷ ಅಧಿಕಾರಕ್ಕೆ ಬಂದರೆ ಮಾಡುವ ಗ್ಯಾರೆಂಟಿ ಯೋಜನೆಗಳನ್ನು ಪ್ರಕಟಿಸಲಾಗಿದೆ. 200 ಯುನಿಟ್ ವಿದ್ಯುತ್ ಉಚಿತ ನೀಡುವ ಗೃಹಜ್ಯೋತಿ ಯೋಜನೆ ಘೋಷಿಸಿದ್ದೇವೆ. ರಾಜ್ಯದ ಬಹುತೇಕ 80% ಮಂದಿಗೆ ವಿದ್ಯುತ್ ಬಿಲ್ ಪಾವತಿಸುವ ಹೊರೆ ಇರುವುದಿಲ್ಲ. ಇನ್ನು ಪ್ರತಿ ಮನೆಯೊಡತಿಗೆ ಪ್ರತಿ ತಿಂಗಳು 2 ಸಾವಿರ ಆರ್ಥಿಕ ನೆರವು ನೀಡುವ ಗೃಹಲಕ್ಷ್ಮಿ ಯೋಜನೆ ಪ್ರಕಟಿಸಿದ್ದೇವೆ. ನಾವು ಹಿಂದೆ ಹೇಳಿರುವುದನ್ನು ಮಾಡಿದ್ದೇವೆ, ಮುಂದೆಯೂ ಮಾಡುತ್ತೇವೆ. ಬಿಜೆಪಿ ಅವರು ಹೇಳಿರುವುದರಲ್ಲಿ ಯಾವುದನ್ನು ಮಾಡಿಲ್ಲ.’
[22/01, 5:02 PM] Kpcc official: *ಉಡುಪಿ ಪ್ರಜಾಧ್ವನಿ ಯಾತ್ರೆ ಸಮಾವೇಶದಲ್ಲಿ ಕಾಂಗ್ರೆಸ್ ನಾಯಕರ ಮಾತುಗಳು*

*ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ:*

ಉಡುಪಿಯ ಕ್ಷೇತ್ರ ಶ್ರೀಕೃಷ್ಣನ ಜತೆ ನಂಟು ಹೊಂದಿದೆ. ನಾವು ಕೂಡ ಶ್ರೀಕೃಷ್ಣನ ಕರ್ಮಭೂಮಿಯಿಂದ ಬಂದಿದ್ದೇನೆ. ಶ್ರೀಕೃಷ್ಣನ ವಾಣಿಯು ಕುರುಕ್ಷೇತ್ರದಲ್ಲಿ ಬಂದಿದ್ದು, ಹೀಗಾಗಿ ನಾನು ನಿಮ್ಮ ಜತೆ ವಿಶೇಷ ಸ್ನೇಹ ಹಾಗೂ ಸಂಬಂಧದ ಅನುಭವವಾಗುತ್ತದೆ. ಗಾಂಧಿ ಅವರು ಭಾರತಕ್ಕೆ ಬಂದು ಸ್ವಾತಂತ್ರ್ಯ ಹೋರಾಟದ ನೇತೃತ್ವವನ್ನು ವಹಿಸಿದ ಸ್ಥಳ ಈ ರಾಜ್ಯದ ಭಾಗವಾಗಿದೆ. ಹೀಗಾಗಿ ದೇಶದ ಸಂವಿಧಾನ, ಮೌಲ್ಯಗಳ ಜತೆ ನಿಮ್ಮ ವಿಶೇಷ ಸಂಬಂಧವಿದೆ. ಹೀಗಾಗಿ ನಾನು ನಿಮ್ಮೆಲ್ಲರಿಗೂ ಕೈಜೋಡಿಸಿ ನಮಿಸುತ್ತೇನೆ.

ಪ್ರಜಾಧ್ವನಿ ಯಾತ್ರೆಯ ಅವಶ್ಯಕತೆ ಏನಿತ್ತು? ಕಾಂಗ್ರೆಸ್ ಪಕ್ಷದ ಎಲ್ಲ ನಾಯಕರು ಒಟ್ಟಾಗಿ ಈ ಯಾತ್ರೆ ಮಾಡುತ್ತಿದ್ದಾರೆ. ಹಾಗೆಂದು ಇದು ಕೇವಲ ಕಾಂಗ್ರೆಸ್ ಪಕ್ಷದ ಯಾತ್ರೆ ಅಲ್ಲ. ಇದು ಜನರ ಧ್ವನಿಯಾಗಿದೆ. ಬಿಜೆಪಿ ಹಾಗೂ ಬೊಮ್ಮಾಯಿ ಅವರ ಸರ್ಕಾರದ ಭ್ರಷ್ಟಾಚಾರ, ನಿರುದ್ಯೋಗಿ ಯುವಕರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ, ದಲಿತರು, ದುರ್ಬಲ ವರ್ಗದವರ ಮೇಲಿನ ದೌರ್ಜನ್ಯದ ವಿರುದ್ಧದ ಹಾಗೂ ಮಹಿಳೆಯರ ಮೇಲೆ ಆಗುತ್ತಿರುವ ಅತ್ಯಾಚಾರ, ಬೆಲೆ ಏರಿಕೆ ವಿರುದ್ಧ, ಸಮಾಜ ಒಡೆಯುವ ಷಡ್ಯಂತ್ರದ ವಿರುದ್ಧ, ರೈತರ ಅನ್ನ ಕಸಿಯುವ ಪಿತೂರಿ ವಿರುದ್ಧ, ಈ ಭಾಗದ ಸಮಸ್ಯೆ ಬಗ್ಗೆ ಧ್ವನಿ ಎತ್ತುವ ಯಾತ್ರೆ ಈ ಪ್ರಜಾಧ್ವನಿ ಯಾತ್ರೆ.

ಇಂದು ಪ್ರಮುಖ ಸಮಸ್ಯೆಗಳಲ್ಲಿ ಭ್ರಷ್ಟಾಚಾರ, ಕಮಿಷನ್ ಹಾಗೂ ಕೋಮುವಾದ ಬಿಜೆಪಿ ಸರ್ಕಾರದ ಕಳೆದ ಮೂರುವರೆ ವರ್ಷಗಳ ಆಡಳಿತದ ಕೊಡುಗೆ. ಕಳೆದ ವರ್ಷ ಈ ಸರ್ಕಾರದ ಭ್ರಷ್ಟಾಚಾರ ಕಿರುಕುಳ ತಾಳಲಾರದೆ, ಬಿಜೆಪಿ ಕಾರ್ಯಾಕರ್ತ ಸಂತೋಷ್ ಪಾಟೀಲ್ ಇಲ್ಲಿಗೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದ. ಸಂತೋಷ್ ಪಾಟೀಲ್ ಉಡುಪಿಗೆ ಬಂದು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನು? ಕಾರಣ, ಸಂತೋಷ್ ಪಾಟೀಲ್ ಅವರಿಗೆ ಬಿಜೆಪಿ ಸರ್ಕಾರಕ್ಕೆ 40% ಕಮಿಷನ್ ನೀಡಲು ಸಾಧ್ಯವಾಗಲಿಲ್ಲ. ಹೀಗಾಗಿ ಆತ ಆತ್ಮಹತ್ಯೆ ಮಾಡಿಕೊಂಡ. ಬಿಜೆಪಿಯವರು ತಮ್ಮ ಕಾರ್ಯಕರ್ತರನ್ನೂ ಬಿಡದೆ ಕಮಿಷನ್ ಕಿತ್ತುಕೊಂಡಿದ್ದಾರೆ. 

ಇದು 40% ಕಮಿಷನ್ ಸರ್ಕಾರ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ಭ್ರಷ್ಟಾಚಾರ ವಿಚಾರವಾಗಿ ಗುತ್ತಿಗೆದಾರರ ಸಂಘದ ಅಧ್ಯಕ್ಷರು ಪತ್ರ ಬರೆದಿದ್ದಾರೆ. ಮೋದಿ ಅವರು ಕರ್ನಾಟಕಕ್ಕೆ ಆಗಮಿಸಿ ನಾ ಖಾವೂಂಗಾ ನಾ ಖಾನೇದೂಂಗಾ ಎಂದು ಭಾಷಣ ಮಾಡಿದ್ದರು. ಆದರೆ ರಾಜ್ಯದಲ್ಲಿ ನಾನು ತಿನ್ನುತ್ತೇನೆ, ಎಲ್ಲರಿಗೂ ತಿನ್ನಿಸುತ್ತೇನೆ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಶಾಂತ್, ರಾಜೇಂದ್ರ ಎಂಬುವವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎಲ್ಲರೂ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನು? ಕಾರಣ, ಈ ಸರ್ಕಾರದಲ್ಲಿ 40% ಕಮಿಷನ್ ಇಲ್ಲದೆ ಯಾವುದೇ ಕೆಲಸಗಳು ನಡೆಯುವುದಿಲ್ಲ. 

ಈ ಭ್ರಷ್ಟಾಚಾರದ ಬಗ್ಗೆ ನಾವು ಹೇಳುವುದಕ್ಕಿಂತ ಬಿಜೆಪಿ ಶಾಸಕ ಯತ್ನಾಳ್ ಅವರೇ ಹೇಳಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿ ಕುರ್ಚಿ 2500 ಕೋಟಿಗೆ ಮಾರಾಟವಾಗುತ್ತದೆ. ಈ ರೀತಿ ಹುದ್ದೆ ಮಾರಿದರೆ, ಜನರಕ್ಷಣೆ ಮಾಡುವವರು ಯಾರು? ಬೆಂಗಳೂರಿನಲ್ಲಿರುವ ನಾಯಕರು ಕಮಿಷನ್ ಪಡೆಯುತ್ತಿದ್ದರೆ, ಈ ಭಾಗದ ಬಿಜೆಪಿ ನಾಯಕರು, ಮರಳು ಮಾಫಿಯ, ಅಕ್ರಮ ಕಲ್ಲು ಗಣಿಗಾರಿಕೆ ಮಾಡುತ್ತಿದ್ದಾರೆ. ಇಲ್ಲಿನ ಮಂತ್ರಿಗಳು 40ರಿಂದ 70% ಕಮಿಷನ್ ಗೆ ಏರಿಕೆಯಾಗಿದ್ದಾರೆ. ಈ ಪ್ರದೇಶದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ, ಮರಳು ದಂಧೆ ಯಾರ ನಿಯಂತ್ರಣದಲ್ಲಿ ನಡೆಯುತ್ತಿದೆ. 

ಕಾಂಗ್ರೆಸ್ ಪಕ್ಷದ 200 ಯುನಿಟ್ ವಿದ್ಯುತ್ ಉಚಿತ ನೀಡುವುದನ್ನು ವಿರೋಧಿಸುತ್ತಾರೆ. ಇನ್ನು ಈ ಭಾಗದ ನಾಯಕ ರಘುಪತಿ ಭಟ್ ಅವರು ಮರಳು ದಂಧೆ ವಿರುದ್ದ ಧರಣಿ ಮಾಡಿದವರು, ಕಳೆದ ಮೂರುವರೆ ವರ್ಷಗಳಿಂದ ಏನು ಮಾಡುತ್ತಿದ್ದಾರೆ? ಈಗ ಯಾಕೆ ಧರಣಿ ಮಾಡುತ್ತಿಲ್ಲ? ಇನ್ನು ಪರಿಶಿಷ್ಟ ಸಮಾಜಡ ವೈದ್ಯೋ ಮೇಲೆ ಹಲ್ಲೆ ಮಾಡಿ ಅಅಪಮಾನ ಮಾಡುತ್ತಾರೆ. ಮಲ್ಪೆ ಬಂದರಿನಲ್ಲಿ 100ಕ್ಕೂ ಹೆಚ್ಚು ಮೊಗವೀರ ಸಮುದಾಯದ ಜನರ ಸಾವಾಗಿದೆ. 

ಕಾಂಗ್ರೆಸ್ ಪಕ್ಷ ಅಡುಗೆ ಅನಿಲ ಬೆಲೆ 450ರಿಂದ 1100ಕ್ಕೆ ಏರಿಕೆಯಾಗಿದ್ದನ್ನು ಪ್ರಶ್ನೆಸಿದರೆ, ಬಿಜೆಪಿ ನಾಯಕರು, ಬಡವರು, ಮಹಿಳೆಯರ ಬಗ್ಗೆ ಅವಹೇಳನ ಮಾಡುತ್ತಾರೆ. ಕಾಂಗ್ರೆಸ್ ಅಅವಧಿಗಿಂತ ಈಗ ಪೆಟ್ರೋಲ್ ಡೀಸೆಲ್ ಬೆಲೆ ಹೆಚ್ಚಾಗದ್ದು ಬಿಜೆಪಿ ಸರ್ಕಾರ ಏನು ಮಾಡುತ್ತಿದೆ? ಈ ಕಾರಣಕ್ಕೆ ನಾವು 2 ಗ್ಯಾರೆಂಟಿ ಯೋಜನೆ ಪ್ರಕಟಿಸಿದ್ದೇವೆ. 


*ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ*

ಇಂದು ಪ್ರಜಾಧ್ವನಿ ಯಾತ್ರೆ ನಿಮ್ಮ ಊರಿಗೆ ಬಂದಿದೆ. ಕರಾವಳಿಯ ಜನ ಶಿಕ್ಷಣದಲ್ಲಿ ಮುಂದೆ ಇದ್ದಾರೆ. ರಾಜಕೀಯವಾಗಿ ಪ್ರಬುದ್ಧರು. ಈ ಭಾಗದ ಜನ ಸಾಹಸ ಪ್ರವೃತ್ತಿ ಉಳ್ಳವರು. ದೇಶದ ಅನೇಕ ರಾಜ್ಯ ಅನೇಕ ದೇಶಗಳಲ್ಲಿ ವ್ಯಾಪಾರ ವಹಿವಾಟು, ಹೊಟೇಲ್ ವ್ಯವಹಾರ ಮಾಡುತ್ತಿರುವವರು ಕರಾವಳಿಯ ಜನರು. ಆದರೆ ಇತ್ತೀಚೆಗೆ ಈ ಭಾಗದ ಯುವಕರು, ಬಿಜೆಪಿಯ ದುರುದ್ದೇಶಪೂರ್ವ ಗಹಿಂದುತ್ವಕ್ಕೆ ಬಲಿಯಾಗುತ್ತಿರುವುದು ನೋವಿನ ವಿಚಾರ. 

ಬಿಜೆಪಿಯವರು ಹಿಂದೂಗಳ ಪರವಾಗಿರುವವರಲ್ಲ. ಹಿಂದುತ್ವದ ಪರವಾಗಿರುವವರು. ನಾನು ಕೂಡ ಅಪ್ಪಟ ಹಿಂದೂ, ಡಿ.ಕೆ. ಶಿವಕುಮಾರ್, ಸುರ್ಜೆವಾಲ, ಬಿ.ಕೆ. ಹರಿಪ್ರಸಾದ್, ವೀರಪ್ಪ ಮೋಯ್ಲಿ ಇವರೆಲ್ಲರೂ ಅಪ್ಪಟ ಹಿಂದೂಗಳೇ. ಆದರೆ ನಾವು ಹಿಂದುತ್ವವಾದಿಗಳಲ್ಲ, ಹಿಂದೂ ಧ್ರಮ, ಹಿಂದೂಗಳ ಪರವಾಗಿರುವವರು. ಅಂತದರೆ ಮನುಷ್ಯತ್ವದ ಪರವಾಗಿರುವವರು ಎಂದರ್ಥ. ಮನುಷ್ಯ, ಮನುಷ್ಯನನ್ನು ದ್ವೇಷಿಸಬಾರದು, ಪ್ರೀತಿಸಬೇಕು. ಯಾವುದೇ ಧರ್ಮ, ಜಾತಿಯವರಾದರೂ ಎಲ್ಲರೂ ಮನುಷ್ಯರು. ಯಾವ ಧರ್ಮ ಮನುಷ್ಯರನ್ನು ಕೊಲ್ಲು, ಹಿಂಸೆ ನೀಡು ಎಂದು ಹೇಳುತ್ತದೆಯೇ? ಈ ಬಿಜೆಪಿಯವರು ಹಿಂದೂ ಧರ್ಮದ ಹೆಸರಲ್ಲಿ ಕಿಚ್ಚು ಹಚ್ಚುತ್ತಿದ್ದಾರೆ.

ಹಿಂದುತ್ವ ಎಂದರೆ, ಮನುವಾದ, ಮನುಷ್ಯತ್ವ ವಿರೋಧಿ ವಾದ. ಇದನ್ನು ಅರ್ಥ ಮಾಡಿಕೊಳ್ಳಬೇಕು. ಅನೇಕ ಜನ ಕರಾವಳಿ ಭಾಗದಲ್ಲಿ ಹತ್ಯೆಯಾಗಿದ್ದರೆ ಅದರಲ್ಲಿ ಸತ್ತಿರುವವರು ಹಿಂದುಳಿದ ಜಾತಿಗೆ ಸೇರಿರುವವರು. ಯಾರಾದರೂ ಕೂಡ ಆರ್ ಎಸ್ ಎಶ್ ಪ್ರಮುಖ ನಾಯಕ, ಶಆಸಕನ ಮಗ ಕೊಲೆ ಆಗಿದ್ದಾರಾ? ಕೊಲೆ ಮಾಡುವವರು, ಕೊಲೆ ಆಗುವವರು, ಜೈಲಿಗೆ ಹೋಗುವವರು ಹಿಂದುಳಿದ ವರ್ಗದ ಜನ. ಇದನ್ನು ಅರ್ಥ ಮಾಡಿಕೊಳ್ಳಿ ಎಂದು ಕೈ ಮುಗಿದು ಪ್ರಾರ್ಥನೆ ಮಾಡಿಕೊಳ್ಳುತ್ತೇನೆ.

ಕೊಲೆಯಾದರೆ ಹೆಣಗಳ ಮೇಲೆ ರಾಜಕೀಯ ಮಾಡುತ್ತಾರೆ. ನಿಮಗೆ ಪರೇಶ್ ಮೇಸ್ತಾ ಎಂಬಾತ ಆಕಸ್ಮಿಕವಾಗಿ ಸತ್ತಿದ್ದು, ಅದನ್ನು ಕೊಲೆ ಎಂದು ಬಿಂಬಿಸಿ ಇಲ್ಲಸಲ್ಲದ ಅಪಪ್ರಚಾರ ಮಾಡಿದ್ದು ಲೋಕಸಭಾ ಸದಸ್ಯರು. ಇವರು ಲೋಕಸಭಾ ಸದಸ್ಯರಾಗಲು ಲಾಯಕ್ಕಾ, ನಾಲಾಯಕ್ಕಾ ಎಂದು ಜನ ಅರ್ಥ ಮಾಡಿಕೊಳ್ಳಬೇಕು. ನಾನು ಮುಖ್ಯಮಂತ್ರಿಯಾಗಿದ್ದಾಗ ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡಿದ್ದೆ, ಅದರ ತನಿಖೆ ವರದಿಯಲ್ಲಿ  ಏನಿದೆ? ಪರೇಶ್ ಮೇಸ್ತಾ ಸಾವು ಸಹಜ. ಅದು ಕೊಲೆಯಲ್ಲ ಎಂದು ಹೇಳಿದೆ. ಸಿಬಿಐ ಯಾರ ನಿಯಂತ್ರಣದಲ್ಲಿದೆ ಅಮಿತ್ ಶಾ, ಮೋದಿ ಅವರ ನಿಯಂತ್ರಣದಲ್ಲಿ. ಅದನ್ನು ನೀವು ವಿವಾದ ಮಾಡುತ್ತೀರಲ್ಲಾ, ನಿಮಗೆ ನಾಚಿಕೆ ಮಾನ ಮರ್ಯಾದೆ ಇದೆಯಾ?

ಬಿಜೆಪಿ ಅಧ್ಯಕ್ಷ ದಕ್ಷಿಣ ಕನ್ನಡ ಜಿಲ್ಲೆಯವನು, ನಾನು ಅವನ್ನು ವಿದೂಶಕ ಎನ್ನುತ್ತೇನೆ. ಅವನು ಬಿಜೆಪಿ ಅಧ್ಯಕ್ಷನಾಗಲು ಲಾಯಕ್ಕಲ್ಲಾ. ಆತ ಇತ್ತೀಚೆಗೆ ರಸ್ತೆ, ಚರಂಡಿ ಬಗ್ಗೆ ಮಾತನಾಡಬೇಡಿ, ಲವ್ ಜಿಹಾದ್ ಬಗ್ಗೆ ಮಾತನಾಡಿ ಎನ್ನುತ್ತಾನೆ. ನೀವು ಈ ಹೇಳಿಕೆ ಕೇಳಿದ ಮೇಲೂ ಎಚ್ಛೆತ್ತುಕೊಳ್ಳದಿದ್ದರೆ ಏನು ಹೇಳಬೇಕು? ಈ ಕರಾವಳಿ ಪ್ರದೇಶದ ಜನರನ್ನು ಹೇಗೆ ಮನವಿ ಮಾಡಬೇಕು? ನಿಮಗೆ ಕ ಮುಗಿದು ಕೇಳಿಕೊಳ್ಳುತ್ತೇನೆ, ಅವರ ಮಾತಿಗೆ ಮರುಳಾಗಬೇಡಿ, ಅವರು ನಿಮ್ಮ ದಾರಿ ತಪ್ಪಿಸುತ್ತಾರೆ. ನಿಮ್ಮ ಭವಿಷ್ಯ ನಾಶ ಮಾಡುತ್ತಾರೆ. ಇಲ್ಲಿ ಹಿಂದುಳಿದ ಜಾತಿ, ಬಡವರು ಇದ್ದಾರೆ.

ನಾವು ಮೀನುಗಾರರಿಗೆ ದಿನಕ್ಕೆ ನಾಡದೋಣಿಗಳಿಗಾಗಿ 300 ಲೀಟರ್ ಸೀಮೆಎಣ್ಣೆ ನೀಡುತ್ತಿದ್ದೆವು. ಬಿಜೆಪಿಯವರು ಬಂದು ಅದನ್ನು ಯಾಕೆ ನಿಲ್ಲಿಸಿದ್ದಾರೆ? ಬಿಜೆಪಿಯವರಿಗೆ ನೀವು ಪ್ರಶ್ನಿಸಬೇಕು. ನಾನು ಈ ವಿಚಾರವಾಗಿ ಸದನದಲ್ಲಿ ಪ್ರಶ್ನೆ ಮಾಡಿದೆ. ಆಗ ಶ್ರೀನಿವಾಸ್ ಪೂಜಾರಿ ಅವರು ನಾಳೆಯಿಂದಲೇ ಆರಂಭಿಸುತ್ತೇವೆ ಎಂದರು. ಅಧಿವೇಶನ ಮುಗಿದು ಎಷ್ಟು ದಿನವಾಯಿತು, ಇದುವರೆಗೂ ಕೊಟ್ಟಿದ್ದಾರಾ?

ಬಿಜೆಪಿಯವರು 500 ಲೀಟರ್ ಸೀಮೆಎಣ್ಣೆ ನೀಡುವುದಾಗಿ ಹೇಳಿದ್ದರು. ಕಳೆದ 10 ತಿಂಗಳಿಂದ ಒಂದೇ ಒಂದು ಲೀಟರ್ ಸೀಮೆಎಣ್ಣೆ ನೀಡದವರು 500 ಲೀಟರ್ ನೀಡುತ್ತಾರಾ? ನೀವು ಅದನ್ನು ನಂಬುತ್ತೀರಾ? ಅದಕ್ಕೆ ವಿವೇಕಾನಂದರು ಒಂದು ಮಾತು ಹೇಳಿದ್ದಾರೆ. ಮನುವಾದಿಗಳು, ಪುರೋಹಿತಶಾಹಿಗಳು ದೇಶಕ್ಕೆ ಶಾಪ ಎಂದಿದ್ದಾರೆ. ಇದು ನಾನು ಹೇಳಿರುವುದಲ್ಲ, ವಿವೇಕಾನಂದರು ಹೇಳಿದ್ದಾರೆ. ವಿವೇಕಾಂನಂದರ ಜನ್ಮದಿನ ಆಚರಿಸಲು ಯುವಜನೋತ್ಸವ ಕಾರ್ಯಕ್ರಮ ಮಾಡುತ್ತಾರೆ. ಅದನಕ್ಕಾಗಿ ಮೋದಿ ಅವರು ಹುಬ್ಬಳ್ಳಿಗೆ ಆಗಮಿಸಿದ್ದರು. ನಾನು ಮೋದಿ ಅವರನ್ನು ಕೇಳಬಯಸುತ್ತೇನೆ, ನೀವು ಯುವಜನೋತ್ಸವ ಆಚರಿಸಲು ದೆಹಲಿಯಿಂದ ಬಂದಿದ್ದಿರಿ. ನೀವು ಯುವಕರಿಗೆ ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇವೆ ಎಂದು ಹೇಳಿದ್ದಿರಿ. ಅದನ್ನು ಕೊಟ್ಟರೆ? 9 ವರ್ಷ ಆಯಿತು, 18 ಕೋಟಿ ಉದ್ಯೋಗ ನೀಡಬೇಕಿತ್ತು, ನೀಡಿದರಾ? 

ಈ ದೇಶದಲ್ಲಿ ಮೋದಿಯಷ್ಟು ಸುಳ್ಳು ಹೇಳಿದ ಪ್ರಧಾನಿ ಯಾರೂ ಇಲ್ಲ ಎಂದು ನಾನು ಹೇಳಿದೆ. ಈ ವಿಚಾರ ಹೇಳಿದರೆ ನನ್ನ ಮೇಲೆ ಕೋಪ ಮಾಡಿಕೊಂಡು ಸಿದ್ದರಾಮಯ್ಯ ಹಿಂದೂ ವಿರೋಧಿ ಎನ್ನುತ್ತಾರೆ. ಅವರ ಪ್ರಕಾರ ಹಿಂದುಗಳೆಂದರೆ ಸಾರ್ವಕರ್ ಹಾಗೂ ಗೋಡ್ಸೆ. ನಾವು ಶೇ.95ರಷ್ಟು ಹಿಂದೂಗಳು ಯಾರು? ಗಾಂಧಿ ಕೊಂದ ಗೋಡ್ಸೆ, ಮತಾಂದ. ಗಾಂಧಿ ಅವರು ಅಪ್ಪಟ ಹಿಂದೂ, ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಗಾಂಧಿ ಅವರನ್ನೇ ಕೊಂದು ಹಾಕಿದ್ದೀರಿ. ಹಿಂದೂ ಧರ್ಮ ಸುಧಾರಣೆಗೆ ಪ್ರಯತ್ನಪಟ್ಟವರು ವಿವೇಕಾನಂದರು. ಇವರಿಗೇನಾದರೂ ಮನುಷ್ಯತ್ವ ಇದೆಯಾ? ನೀವು ಅವರ ಹಿಂದೆ ಹೋಗುತ್ತೀರಾ? ಹಿಂದೂತ್ವವನ್ನು ಆರಂಭಿಸಿದವರು ಸಾರ್ವಕರ್. ಹಿಂದೂಮಹಾಸಭಾದಲ್ಲಿ ಹಿಂದುತ್ವ ಹುಟ್ಟುಹಾಕಿದ ಸಾರ್ವಕರ್, ಬ್ರಿಟೀಷರಿಗೆ ಐದು ಬಾರಿ ಕ್ಷಮಾಪಣೆ ಪಪತ್ರ ಬರೆದುಕೊಟ್ಟು, ಬ್ರಿಟೀಷರಿಂದ ಮಾಸಾಶನ ಪಡೆದಿದ್ದರು. ನೀವು ಇವರ ಹಿಂದೆ ಹೋಗುತ್ತೀರಾ?

ಇದೇ ಜನ ಸಂವಿಧಾನ ರಚನೆಯಾದಾಗ, ಸಂಸತ್ತಿನಲ್ಲಿ ಚರ್ಚೆ ಆಗುವಾಗ ಹೊರಗಡೆ ನಿಂತು ಅಂಬೇಡ್ಕರ್ ಅವರನ್ನು ವಿರೋಧಿಸಿದವರು ಇದೇ ಹಿಂದುತ್ವವಾದಿಗಳು. ಇವರ ಮಾತನ್ನು ನೀವು ಕೇಳುತ್ತೀರಾ? ದಾರಿ ತಪ್ಪಿರುವ ಯುವಕರಲ್ಲಿ ಮನವಿ ಮಾಡುತ್ತೇನೆ, ನೀವು ಇವರ ಮಾತಿಗೆ ಮರುಳಾಗಬೇಡಿ. ಅವರು ಮಂಗಳೂರು ಉಡುಪಿಯನ್ನು ಹಿಂದುತ್ವದ ಪ್ರಯೋಗಶಾಲೆ ಮಾಡಲು ಹೊರಟಿದ್ದಾರೆ. ನೀವು ಇಂತಹವರ ಮಾತು ಕೇಳುತ್ತೀರಾ? ಇವರು ಹಿಂದುತ್ವದ ರಕ್ಷಕರಂತೆ, ನಾನು ಹಿಂದೂಗಳಲ್ಲವೇ? ಇವರು ಆರ್ ಎಸ್ಎಸ್ ತರಬೇತಿ ಪಡೆದು ಯುವಕರ ದಾರಿ ತಪ್ಪಿಸುತ್ತಿದ್ದಾರೆ. ನಮ್ಮ ವಿರೋಧ ಮನುವಾದ, ಹಿಂದುತ್ವಕ್ಕೆ ಹೊರತು, ಹಿಂದೂ ಧರ್ಮದ ವಿರುದ್ಧವಲ್ಲ.

ಮನುವಾದಿಗಳು ಒಂದು ದೇಶ, ಒಂದು ಧರ್ಮ, ಒಂದು ಭಾಷೆ ಎಂದು ಹೇಳುತ್ತಾರೆ. ಇದು ಸಾಧ್ಯವೇ? ಈ ದೇಶದಲ್ಲಿ ಅನೇಕ ಜಾತಿ ಧರ್ಮ, ಭಾಷೆಗಳಿವೆ, ಎಲ್ಲರೂ ಮನುಷ್ಯರಾಗಿ ಒಟ್ಟಾಗಿ ಸಾಗಬೇಕು. ಅದನ್ನೇ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಅವಕಾಶ, ಹಕ್ಕು, ಸಮಾನ ಅವಕಾಶ ಎಂದು ಹೇಳಿದ್ದಾರೆ. ಇದಕ್ಕೆ ವಿರುದ್ಧವಾಗಿರುವವರು ಆರ್ ಎಸ್ಎಸ್ ನವರು. ಇವರ ಗುರು ಗೋಲ್ವಾಲ್ಕರ್ ಅವರು ಚಿಂತನ ಗಂಗಾ ಎಂಬ ಪುಸ್ತಕದಲ್ಲಿ ಸಂವಿಧಾನದ ಬಗ್ಗೆ ಬರೆದಿದ್ದಾರೆ. ಆರ್ ಎಸ್ಎಸ್ ಮುಖವಾಣಿ ಆರ್ಗನೈಸರ್ ಪತ್ರಿಕೆಯಲ್ಲಿ ಸಾರ್ವಕರ್ ಸಂವಿಧಾನದ ಬಗ್ಗೆ ಏನು ಬರೆದಿದ್ದಾರೆ ಎಂದು ಓದಿ. ಯಾರಿಗೆ ಸಂವಿಧಾನದಲ್ಲಿ ಗೌರವವಿಲ್ಲ, ಯಾರು ಸಂವಿಧಾನದ ರೀತಿ ನಡೆದುಕೊಳ್ಳುವುದಿಲ್ಲ ಅವರು ಬಡವರು, ರೈತರು, ದಲಿತರು, ಅಲ್ಪಸಂಖ್ಯಾತರು, ಮಹಿಳೆಯರ ವಿರೋಧಿಗಳು. ಇವರಿಗೆ ಮನುಷ್ಯತ್ವ ಇರುವುದಿಲ್ಲ.

ನಾರಾಯಣ ಗುರುಗಳು, ವಿವೇಕಾನಂದರು, ಮಹಾತ್ಮಾ ಗಾಂಧಿ, ಅಂಬೇಡ್ಕರ್ ಇದನ್ನೇ ಹೇಳಿದ್ದರಾ? ಈ ಮಹನೀಯರು ಹೇಳಿದ್ದರ ಮೇಲೆ ನಂಬಿಕೆ ಇರುವವರು ನಾವು. ಆದರೆ ಬಿಜೆಪಿಯವರು ಈ ಮಹನೀಯರು ಹಳಿರುವುದರ ವಿರುದ್ಧವಾಗಿರುವವರು. ನಾವು ಮನುಷ್ಯತ್ವದ ಪರವಾಗಿದ್ದರೆ, ಇವರು ಮನುಷ್ಯತ್ವದ ದ್ವೇಷಿಗಳು. ನಾವು ಬಡವರಿಗಾಗಿ ಕೃಷಿ ಭಾಗ್ಯ, ಕ್ಷೀರ ಭಾಗ್ಯ, ಕ್ಷೀರಧಾರೆ, ಅನ್ನ ಭಾಗ್ಯ, ಶಾದಿ ಭಾಗ್ಯ, ಪಶು ಭಾಗ್ಯ, ವಿದ್ಯಾಸಿರಿ, ಇಂದಿರಾ ಕ್ಯಾಂಟೀನ್, ಪರಿಶಿಷ್ಟರಿಗೆ ಜನಸಂಖ್ಯೆ ಅನುಗುಣವಾಗಿ ಕಾನೂನು ನೀಡಿದ್ದೇವೆ. ಬಿಜೆಪಿಯವರು ಏನು ಮಾಡಿದ್ದಾರೆ? ಕೇವಲ ಲೂಟಿ, ಲೂಟಿ, ಲೂಟಿ.

ನೇಮಕಾತಿಯಲ್ಲಿ ಲೂಟಿ, 40% ಕಮಿಷನ್ ಲೂಟಿ, ಬಡ್ತಿಯಲ್ಲಿ ಲೂಟಿ, ಪೋಸ್ಟಿಂಗ್ ನಲ್ಲಿ ಲೂಟಿ ಮಾಡಿದ್ದಾರೆ. ಹೊಟೇಲ್ ಗಳಲ್ಲಿ ಪದಾರ್ಥಗಳಿಗೆ ದರ ನಿಗದಿ ಮಾಡಿದಂತೆ ಎಲ್ಲೆಡೆ ಲಂಚ ದರ ನಿಗದಿ ಮಾಡಿದ್ದಾರೆ. ವಿಧಾನಸೌಧದ ಗೋಡೆಗಳಿಗೆ ಕಿವಿ ಕೊಟ್ಟರೆ ಗೋಡೆಗಳು ಲಂಚ ಲಂಚ ಎಂದು ಪಿಸುಗುಡುತ್ತವೆ. ಇಂತಹ ಸರ್ಕಾರ ಬೇಕಾ?  ನೀವು ರಾಜಕೀಯ ಪ್ರಬುದ್ಧರಾಗಿರುವುದರಿಂದ ಕೈಮುಗಿದು ಪ್ರಾರ್ಥಿಸುತ್ತೇನೆ, ದಯಮಾಡಿ ಮತದಾನ ಮಾಡುವಾಗ ಒಮ್ಮೆ ಯೋಚಿಸಿ. ಬಿಜೆಪಿ, ಮನುವಾದಿಗಳಿಗೆ ಯಾವುದೇ ಸಿದ್ಧಾಂತವಿಲ್ಲ. ಮನುಷ್ಯರನ್ನು ದ್ವೇಷಿಸಿ ಧರ್ಮ, ಜಾತಿ ಗಳ ನಡುವೆ ದ್ವೇಷ ಹಚ್ಚುವುದು. ಇದರಲ್ಲಿ ಇವರು ಬರುವುದಿಲ್ಲ. ಹಿಂದುಳಿದ ವರ್ಗದ ಮಕ್ಕಳನ್ನು ಕಳುಹಿಸುತ್ತಾರೆ. ಅವರು ಕೊಲೆ ಮಾಡಿ ಜೈಲಿಗೆ ಹೋದರೆ, ನಂತರ ಅವರು ಬಂದಾಗ ಇವರೇ ಹಾರ ಹಾಕಿ ಕರೆದುಕೊಂಡು ಬರುತ್ತಾರೆ. ಬಿಜೆಪಿಯವರು ಎಂತಹ ಮಾನಗೆಟ್ಟವರು.

ನಾವೆಲ್ಲರೂ ಕಾರ್ಯಕ್ರಮ ಘೋಷಣೆ ಮಾಡಿದರೆ, ಇವರು ಲವ್ ಜಿಹಾದ್ ಎನ್ನುತ್ತಾರೆ. ನಿಮಗೆ ಅಭಿವೃದ್ಧಿ ಆಗುವುದು, ಮೀನುಗಾರರಿಗೆ ಸೀಮೆಎಣ್ಣೆ ಸಿಗುವುದು ಬೇಕಾ, ನಿಮ್ಮ ಮಕ್ಕಳನ್ನು ಜೈಲಿಗೆ ಕಳುಹಿಸುವುದು ಬೇಕಾ ನಿರ್ಧರಿಸಿ. ನಾರಾಯಣ ಗುರುಗಳ ಜಯಂತಿ ಮಾಡಿದ್ದು ಯಾರು? ಅದ್ಯಯನ ಪೀಠ ಮಾಡಿದ್ದು ಯಾರು? ಕೋಟಿ ಚನ್ನಯ್ಯ ಅವರ ಜನ್ಮಸ್ಥಳ ಅಭಿವೃದ್ಧಿಗೆ 5 ಕೋಟಿ ಅನುದಾನ ನೀಡಿದವರು ಯಾರು? ಕಾಂಗ್ರೆಸ್ ಸರ್ಕಾರವಲ್ಲವೇ? ಆದರೂ ಬಿಜೆಪಿಯವರ ಹಿಂದೆ ಹೋಗುತ್ತೀರಾ?  ಅವರು ನಿಮಗಾಗಿ ಏನು ಮಾಡಿದ್ದಾರೆ ಹೇಳಿ ನೋಡೋಣ. 

2013ರಲ್ಲಿ ನಾವು ಪಾದಯಾತ್ರೆ ಮಾಡಿದ್ದೆವು. ಕಾಂಗ್ರೆಸ್ ನಡಿಗೆ ಸೌಹಾರ್ದದ ಕಡೆಗೆ ಎಂದು ಮಾಡಿದ್ದೆವು. ಈಗಲೂ ನಾವು ಎಲ್ಲ ಜಾತಿ, ಧರ್ಮದವರು ಅಣ್ಣತಮ್ಮಂದಿರಂತೆ ಇರಬೇಕು ಎಂದು ನಂಬಿದ್ದೇವೆ. ಆಗ ಮಾತ್ರ ರಾಜ್ಯ ಹಾಗೂ ದೇಶದ ಅಭಿವೃದ್ಧಿ ಆಗಿ ಯುವಕರಿಗೆ ಉದ್ಯೋಗ ನೀಡಬಹುದಾಗಿದೆ. ನಾವು ಆಗ ಮಂಗಳೂರಿನಲ್ಲಿ 7 ಉಡುಪಿಯಲ್ಲಿ 3 ಸ್ಥಾನಗಳನ್ನು ಗೆದ್ದಿದ್ದೆವು. ಇಲ್ಲಿದ್ದ ಆಸಾಮಿಯೊಬ್ಬ ನಮ್ಮ ಪಕ್ಷದಿಂದ ಜೆಡಿಎಸ್ ಅಭ್ಯರ್ಥಿಯಾಗಲು ಪಕ್ಷ ಬಿಟ್ಟಿದ್ದ ನಂತರ ಮತ್ತೆ ಪಕ್ಷಕ್ಕೆ ವಾಪಸ್ ಬಂದ, ಈಗ ಮತ್ತೆ ಬಿಜೆಪಿಗೆ ಹೋಗಿ, ಅಲ್ಲಿ ಆರ್ ಎಸ್ಎಸ್ ನವರಿಗಿಂತ ಹೆಚ್ಚಾಗಿ ಮೋದಿಯನ್ನು ಹೊಗಳುತ್ತಿದ್ದಾನೆ. ಬಿಜೆಪಿಯವರು ಏನಾದರೂ ಅವನಿಗೆ ಟಿಕೆಟ್ ಕೊಟ್ಟರೆ ಅವನನ್ನು ಸೋಲಿಸಿ ಎಂದು ಕೇಳಿಕೊಳ್ಳುತ್ತೇನೆ. ಇಂತಹವರು ಇರಬೇಕಾ? ಬಿಜಪಿಯವರು ಆಪರೇಶನ್ ಕಮಲ ಮಾಡಿ ಶಾಸಕರಿಗೆ ದುಡ್ಡು ಕೊಟ್ಟು ಖರೀದಿ ಮಾಡುವುದರಲ್ಲಿ, ನಿಸ್ಸೀಮರು.

ಬಿಜೆಪಿಯವರ ಲಂಚದ ಕಿರುಕುಳ ತಾಳಲಾರದೇ ನಮ್ಮನ್ನು ಕಾಪಾಡಿ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಪತ್ರ ಬರೆದಿದ್ದರು. ಈ ಸರ್ಕಾರ 40% ಕಮಿಷನ್ ಕೇಳುತ್ತಿದ್ದು, ಗುಣಮಟ್ಟದ ಕಾಮಗಾರಿ ಅಸಾಧ್ಯ. ದಯಮಾಡಿ ಬೊಮ್ಮಾಯಿ ಅವರಿಗೆ ಹೇಳಿ ಎಂದು ಪತ್ರ ಬರೆದಿದ್ದರು. ಈ ಸರ್ಕಾರ ಸ್ಟ್ರೋ ರವಿ ಅಂತಹವರನ್ನು ಬಿಟ್ಟು ಕೆಂಪಣ್ಣನಂತಹವರನ್ನು ಜೈಲಿಗೆ ಹಾಕಿಸುತ್ತಾರೆ. ಸ್ಯಾಂಟ್ರೋ ರವಿ ಬಂಧನವಾದ ನಂತರ ಆತ ಎಲ್ಲಿ ಇವರ ಬಂಡವಾಳ ಬಾಯಿ ಬಿಡುತ್ತಾನೋ ಎಂದು ಇವರು ಪೊಲೀಸ್ ವಶಕ್ಕೆ ನೀಡುವಂತೆ ಕೇಳಲೇ ಇಲ್ಲ. ಗೃಹಮಂತ್ರಿ ಅರಗ ಜ್ಞಾನೇಂದ್ರನಿಗೆ ಜ್ಞಾನ ಎಲ್ಲಿದೆಯೋ ಗೊತ್ತಿಲ್ಲ. ರಾಜ್ಯ ಕಂಡ ಅತ್ಯಂತ ಅಪ್ರಯೋಜಕ ಸಚಿವ. ಇಂತಹ ಅನೇಕ ಕ್ರಿಮಿನಲ್ ಜತೆ ಸೇರಿಕೊಂಡಿದ್ದಾರೆ.

ಬಿಜೆಪಪಿಯವರು ಭಯೋತ್ಪಾದನೆ ಬಗ್ಗೆ ಮಾತನಾಡುತ್ತಾರೆ. ದೇಶದಲ್ಲಿ ಭಯೋತ್ಪಾದನೆ ಶುರುವಾಗಿದ್ದೇ ಮಹಾತ್ಮಾ ಗಾಂಧಿ ಅವರ ಕೊಲೆಯಾದ ನಂತರ.ದೇಶದ ಮೊದಲ ಭಯೋತ್ಪಾದಕ ಯಾರು ಎಂದರೆ ಗೋಡ್ಸೆ. ನಾವು ಎಲ್ಲ ಭಯೋತ್ಪಾದಕರ ವಿರುದ್ಧ ನಿಲ್ಲುತ್ತೇವೆ. ಅವರಿಗೆ ಕಠಿಣ ಶಿಕ್ಷೆಗೆ ಆಗ್ರಹಿಸುವವರು ಕಾಂಗ್ರೆಸ್. ಭಯೋತ್ಪಾದನೆಗೆ ಕಾಂಗ್ರೆಸ್ ಪಕ್ಷ ಶ್ರೀಮತಿ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅವರನ್ನು ಕಳೆದುಕೊಂಡಿದೆ. 

ದ್ವೇಷ ರಾಜಕಾರಣ, ಭ್ರಷ್ಟಾಚಾರ, ರೈತರ ಸಮಸ್ಯೆಗಳನ್ನು ಇಟ್ಟುಕೊಂಡು ರಾಹುಲ್ ಗಾಂಧಿ ಅವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 3570 ಕಿ.ಮೀ ಪಾದಯಾತ್ರೆ ಮಾಡುತ್ತಿದ್ದಾರೆ. ಬಿಜೆಪಿಯವರು ಇಂತಹ ಯಾತ್ರೆ ಮಾಡಿದ್ದಾರಾ? ಯಾರಾದರೂ ಸ್ವಾತಂತ್ರ್ಯ ಹೋರಾಟಕ್ಕೆ ಸತ್ತಿರುವ ಬಿಜೆಪಿ ಅಥವಾ ಆರ್ ಎಸ್ಎಸ್ ಒಬ್ಬ ನಾಯಕನ್ನ್ನು ತೋರಿಸಿ ನಾನು ನಿಮಗೆ ಶರಣಾಗುತ್ತೇನೆ. ದೇಶದಲ್ಲಿ ಸ್ವಾತಂತ್ರ್ಯ ತರಲು ಪ್ರಾಣ, ಮನೆ ಮ ಹಾಗೂ ಆಸ್ತಿ ಪಾಸ್ತಿ ಕಳೆದುಕೊಂಡಿರುವವರು ಕಾಂಗ್ರೆಸಿಗರೇ ಹೊರತು ಆರ್ ಎಸ್ಎಸ್ ಅಥವಾ ಜನಸಂಘದವರಲ್ಲ.

ಬಿಜೆಪಿಯವರು ಮಾತೆತ್ತಿದರೆ ಸಿದ್ದರಾಮಯ್ಯ ಪಿಎಫ್ಐ ಕಾರ್ಯಕರ್ತರನ್ನು ಬಿಡುಗಡೆ ಮಾಡಿದರು ಎಂದು ಹೇಳುತ್ತಾರೆ. ಅದಕ್ಕೆ ನಾನು ಮುಖ್ಯಮಂತ್ರಿ ಬೊಮ್ಮಾಯಿ ಅವರು ಗೃಹಮಂತ್ರಿಯಾಗಿದ್ದಾಗ 5-9-2020ರಲ್ಲಿ ಪತ್ರ ಬರೆದಿದ್ದೆ. ನನ್ನ ಅವಧಿಯಲ್ಲಿ ಯಾವ ಪಿಎಫ್ಐ ಹಾಗೂ ಎಸ್ ಡಿಪಿಐ ಕಾರ್ಯಕರ್ತರನ್ನು ಬಿಡುಗಡೆ ಮಾಡಿದ್ದೇನೆ ಪಟ್ಟಿ ನೀಡಿ ಎಂದು ಕೇಳಿದೆ. ಅವರು ಕೊಟ್ಟಿರುವ ಪಟ್ಟಿಯಲ್ಲಿ ವಿದ್ಯಾರ್ಥಿಗಳು, ದಲಿತರು, ದಲಿತ ಸಂಘಟೆ, ರೈತರು, ರೈತ ಸಂಘಟನೆಗಳ ಪಟ್ಟಿಯನ್ನು 16-9-2020ರಂದು ಕೊಟ್ಟರು. ನಾನು ಮತ್ತೆ ಅರಗ ಜ್ಞಾನೇಂದ್ರ ಅವರಿಗೆ 13-6-2022ರಲ್ಲಿ ಪತ್ರ ಬರೆದು ಪಟ್ಟಿ ಕೇಳಿದೆ. ಇವತ್ತಿನವರೆಗೂ ಅವರು ಪಟ್ಟಿ ನೀಡಲು ಆಗಿಲ್ಲ. ಕೇವಲ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ.

ರಾಜ್ಯದಲ್ಲಿ ಎಸ್ ಡಿಪಿಐ ಜತೆ ಸ್ನೇಹ ಸಂಬಂಧ ಹೊಂದಿದ್ದರೆ ಅದು ಬಿಜೆಪಿಯೇ ಹೊರತು ಕಾಂಗ್ರೆಸ್ ಪಕ್ಷವಲ್ಲ. ನಾವು ಅಧಿಕಾರಕ್ಕೆ ಬಂದರೆ ಪಿಎಫ್ಐ ಹಾಗೂ ಎಸ್ ಡಿಪಿಐ ನಿಷೇಧ ಮಾಡುತ್ತೇವೆ ಎಂದಿದ್ದರು. ಆದರೆ ಕೇವಲ ಪಿಎಫ್ ಐ ರದ್ದು ಮಾಡಿರುವುದು ಯಾಕೆ? ಪಿಎಫ್ಐ ಆರ್ ಎಸ್ಎಸ್, ಎಸ್ ಡಿಪಿಐ ಬಿಜೆಪಿ ಇದ್ದಂತೆ. ಇವರು ಮತ ವಿಭಜನೆ ಆಗಲಿ ಎಂದು ಎಸ್ ಡಿಪಿಐ ಅನ್ನು ಇಟ್ಟುಕೊಂಡಿದ್ದಾರೆ. ನಾವು ಇವರ ಹತ್ತಿರ ಪಾಠ ಕಲಿಯಬೇಕಾ? ಈ ದೇಶದಲ್ಲಿ ನೂರಕ್ಕೆ ನೂರರಷ್ಟು ಜಾತ್ಯಾತೀತ ಪಕ್ಷ ಇದ್ದರೆ, ಅದು ಕಾಂಗ್ರೆಸ್ ಪಕ್ಷ ಮಾತ್ರ. ನಾವು ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗುತ್ತೇವೆ. ಮೋದಿ ಅವರು ಸಬ್ ಕಾ ಸಾಥ್ ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಎನ್ನುತ್ತಾರೆ. ಅವರು ಹೇಳೋದು ಮಾತ್ರ ಬದನೆಕಾಯಿ. ಆದರೆ ಆಚರಣೆ ಇಲ್ಲ. ಆದರೆ ಕಾಂಗ್ರೆಸ್ ಹೇಳಿದಂತೆ ನಡೆಯುತ್ತದೆ. ಕೊಟ್ಟ ವಚನವನ್ನು ಉಳಿಸಿಕೊಳ್ಳುತ್ತದೆ. ನಾವು ಕೊಟ್ಟ ವಚನ ಎಷ್ಟೇ ಕಷ್ಟವಾದರೂ ಅದರ ಪರಿಪಾಲನೆಗೆ ಪ್ರಯತ್ನಿಸುತ್ತೇವೆ. 

*ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್:*

ಕಳೆದ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿಲ್ಲ. ಆಪರೇಷನ್ ಕಮಲದ ಮೂಲಕ ಬೇರೆ ಪಕ್ಷದ ಶಾಸಕರನ್ನು ಖರೀದಿ ಮಾಡಿ ಅನೈತಿಕವಾಗಿ ಸರ್ಕಾರ ರಚಿಸಿದರು. ಅವರ ರಾಜ್ಯಕ್ಕೆ ಒಳ್ಳೆಯದು ಮಾಡುತ್ತಾರೆ ಎಂದು ನಮ್ಮ ಶಾಸಕರು ಆ ಪಕ್ಷಕ್ಕೆ ಹೋದರು.

ಪ್ರಜಾಪ್ರಭುತ್ವದಲ್ಲಿ 5 ವರ್ಷಕ್ಕೊಮ್ಮೆ ಅಗ್ನಿಪರೀಕ್ಷೆ ಆಗುತ್ತದೆ. ಅಗ್ನಿಪರೀಕ್ಷೆಯಲ್ಲಿ ಕರ್ನಾಟಕಕ್ಕೆ ನಾವು ಯಾವ ರೀತಿ ಕೆಲಸ ಮಾಡಿದ್ದೇವೆ, ಅನುದಾನ ತಂದಿದ್ದೇವೆ, ಮಕ್ಕಳು ಮಹಿಳೆಯರ ಸುರಕ್ಷತೆ ಹಾಗೂ ಶಿಕ್ಷಣಕ್ಕೆ ಹೇಗೆ ಕಾರ್ಯಕ್ರಮ ರೂಪಿಸಿದ್ದೇವೆ ಎಂಬುದನ್ನು ನೀವು ನೋಡಿದ್ದೀರಿ. ಐದು ವರ್ಷಗಳಲ್ಲಿ ಸರ್ಕಾರ ಉತ್ತಮ ಕೆಲಸ ಮಾಡಿದ್ದರೆ ಪುನರಾಯ್ಕೆ ಮಾಡುತ್ತೀರಿ. ಇಲ್ಲದಿದ್ದರೆ ಅವರನ್ನು ಮನೆಗೆ ಕಳುಹಿಸುತ್ತೀರಿ. ಬಿಜೆಪಿಯವರು ಕಳೆದ ಮೂರೂವರೆ ವರ್ಷಗಳಲ್ಲಿ ಯಾವುದಾದರೂ ಉತ್ತಮ ಕೆಲಸ ಮಾಡಿದ್ದಾರಾ?

ನಿಮ್ಮ ಧ್ವನಿ ಆಲಿಸಲು ಕಾಂಗ್ರೆಸ್ ಪಕ್ಷ ಪ್ರತಿ ಜಿಲ್ಲೆಗೆ ಹೋಗಿ ಜನಸ್ತೋಮದ ಮಧ್ಯೆ ಸಭೆ ಮಾಡುತ್ತಿದ್ದೇವೆ. ಈ ಜನಸ್ತೋಮ ನೋಡಿದ ನಂತರ ಜನ ಈ ಸರ್ಕಾರ ಏನೂ ಮಾಡಿಲ್ಲ ಇವರನ್ನು ಮನೆಗೆ ಕಳುಹಿಸುವ ತೀರ್ಮಾನ ಮಾಡಿದ್ದಾರೆ ಎಂಬುದು ಸ್ಪಷ್ಟವಾಗಿದೆ. 

ದಕ್ಷಿಣ ಕನ್ನಡ ಜಿಲ್ಲೆಗೆ ಏನು ಕೆಲಸ ಮಾಡಿದ್ದೇವೆ ಎಂದು ಮೋಯ್ಲಿ ಅವರು ಹೇಳಿದ್ದಾರೆ. ದಕ್ಷಿಣ ಕನ್ನಡ ಜನ ಸರ್ಕಾರಿ ಸವಲತ್ತು, ಸರ್ಕಾರಿ ನೌಕರಿಗೆ ಕಾಯುತ್ತಾ ಕೂರುವ ಜನ ಅಲ್ಲ. ಸ್ವಂತ ಶಕ್ತಿ ಮೇಲೆ ನಿಂತು ಜೀವನ ನಡೆಸುವ ಸ್ವಾಭಿಮಾನಿ ಜನ ದಕ್ಷಿಣ ಕನ್ನಡದವರು. ಇವರಿಗೆ ಎರಡು ಹೊತ್ತಿನ ಊಟ ಸಂಪಾದಿಸುವುದು ಗೊತ್ತಿದೆ. ಈ ಜಿಲ್ಲೆ ಸರ್ಕಾರದ ಸಹಾಯ ಪಡೆಯದೇ ಐದು ದೊಡ್ಡ ಬ್ಯಾಂಕ್ ಗಳನ್ನು ಕೊಟ್ಟಿದ್ದವು. ಈ ಜಿಲ್ಲೆ ಅಭಿವೃದ್ಧಿಗೆ ಬಂಟರು, ಬ್ರಾಹ್ಮಣರು, ಬಿಲ್ಲವರು, ಮೊಗವೀರರು, ಕ್ರೈಸ್ತರು, ಬ್ಯಾರಿಗಳು ಶ್ರಮಿಸಿದ್ದಾರೆ. ಹೀಗಾಗಿ ಬೆಂಗಳೂರು ಹೊರತಾಗಿ ಅತಿ ಹೆಚ್ಚಿನ ತೆರಿಗೆ ನೀಡುವ ಜಿಲ್ಲೆ ದಕ್ಷಿಣ ಕನ್ನಡ ಜಿಲ್ಲೆ. ನೀವು ಇಷ್ಟು ದೊಡ್ಡ ಮಟ್ಟದಲ್ಲಿ ಬಿಜೆಪಿಯ ಸಂಸದರು, ಶಾಸಕರನ್ನು ಆರಿಸಿ ಕಳುಹಿಸಿದ್ದೀರಿ. ನೀವು ಬಿಜೆಪಿಯವರನ್ನು ಏನು ಮಾಡಿದ್ದೀರಿ ಎಂದು ಕೇಳಿ.

ಅತಿ ಹೆಚ್ಚಿನ ಸಾಕ್ಷರತೆ ಇರುವುದು ಅಭಾಜ್ಯ ಜಿಲ್ಲೆಯಲ್ಲಿ 10ನೇ ತರಗತಿ ಫಲಿತಾಂಶ ಬಂದಾಗ ಈ ಜಿಲ್ಲೆಯ ಮಕ್ಕಳು ಮೊದಲ ಸ್ಥಾನದಲ್ಲಿದ್ದರು. ಅದು ನಮಗೆ ಹೆಮ್ಮೆ ಇತ್ತು. ಕಳೆದ ಬಾರಿ ಅಂಕಿ ಅಂಶ ನೋಡಿ ನಾವೆಲ್ಲರೂ ತಲೆತಗ್ಗಿಸುವಂತೆಹ ಕೆಲಸವನ್ನು ಬಿಜೆಪಿ ಮಾಡಿದೆ. ಮಂಗಳೂರು, ಉಡುಪಿ ಜಿಲ್ಲೆ 16,17ನೇ ಸ್ಥಾನಕ್ಕೆ ಕುಸಿದಿದೆ. ನಮ್ಮ ಮಕ್ಕಳಿಗೆ ಏನಾಗಿದೆ? ನಮ್ಮ ನಾಯಕಿ ಸೋನಿಯಾ ಗಾಂಧಿ, ಮನಮೋಹನ್ ಸಿಂಗ್ ಅವರು ಪ್ರತಿ ಬಡ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗಬಾರದು ಎಂದು ಸರ್ವಶಿಕ್ಷಣ ಅಭಿಯಾನ ಕಾರ್ಯಕ್ರಮ ನೀಡಿದರು. ಜತೆಗೆ ಶಿಕ್ಷಣ ಹಕ್ಕು ನೀಡಿದರು. ಆದರೆ ಬಿಜೆಪಿಯವರು ದಕ್ಷಿಣ ಕನ್ನಡ ಜಿಲ್ಲೆಗೆ ಏನು ಮಾಡಿದೆ? ಕಾಂಗ್ರೆಸ್ ಪಕ್ಷದ ಯಾವುದೇ ಮುಖ್ಯಮಂತ್ರಿ ತೆಗೆದುಕೊಳ್ಳಿ ನಾವು ಶಿಕ್ಷಣ ಹಾಗೂ ಆರೋಗ್ಯಕ್ಕೆ ಒತ್ತು ನೀಡಿದ್ದೆವು. ಬಿಜೆಪಿ ಅಧ್ಯಕ್ಷರು ವಿದೂಶಕನಂತೆ ಕೆಲಸ ಮಾಡುತ್ತಿದ್ದಾರೆ. ಅವರ ಪ್ರಕಾರ ನೀವು ಜನಗಳತ್ತ ಮತ ಕೇಳುವಾಗ ಚರಂಡಿ, ರಸ್ತೆ ನೀರಿನ ಬಗ್ಗೆ ಮಾತನಾಡಬೇಡಿ, ಲವ್ ಜಿಹಾದ್ ಬಗ್ಗೆ ಮಾತನಾಡಿ ಎನ್ನುತ್ತಾರೆ. ಅವರು ನಮ್ಮ ಮಕ್ಕಳನ್ನು ಏನು ಮಾಡಬೇಕು ಎಂದುಕೊಂಡಿದ್ದಾರೆ. ಬಾವಿಯ ಆಳ ನೋಡಲು ಅವರ ಮಕ್ಕಳನ್ನು ತಬ್ಬಲಿ, ಬೇರೆಯವರ ಮಕ್ಕಳನ್ನು ದಬ್ಬುವುದು ಬೇಡ. 

ಇನ್ನು ಕಾವಿ ಬಟ್ಟೆ ಹಾಕಿಕೊಂಡು ಬಂದ ಭಯೋತ್ಪಾದಕಿ ಪ್ರಜ್ಞಾ ಠಾಕೂರ್ ಶಿವಮೊಗ್ಗಕ್ಕೆ ಬಂದು ನಮ್ಮ ಮಕ್ಕಳಿಗೆ ಪೆನ್ನು ಪೇಪರ್ ಹಿಡಿಯಿರಿ ಎನ್ನುವ ಬದಲು ನಿಮ್ಮ ಮನೆಯ ಚಾಕು ಚೂರಿ ಮೊನಚು ಮಾಡಿಕೊಳ್ಳಿ ಎಂದು ಹೇಳುತ್ತಾಳೆ. ಕಟೇಲ್ ಅವರೇ, ಮೋದಿ ಅವರೇ, ಶಾ ಅವರೇ ನಮ್ಮ ಮಕ್ಕಳನ್ನು ಶಿಕ್ಷಿತರನ್ನಾಗಿ ಮಾಡುತ್ತೀರೋ ಭಯೋತ್ಪಾದಕರನ್ನಾಗಿ ಮಾಡುತ್ತೀರಾ? ನಮ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮುಸಂಘರ್ಷ ಇರಲಿಲ್ಲ. ಆದರೆ ಈಗ ಮಾತೆತ್ತಿದರೆ ಘರ್ಷಣೆಗಳಾಗುತ್ತಿವೆ. ಇದಕ್ಕೆ ಬಲಿಯಾಗುತ್ತಿರುವುದು ಹಿಂದುಳಿದ ವರ್ಗದ ಬಿಲ್ಲವರು, ಮೊಗವೀರರು. ರಾಜಕೀಯ ಲಾಭ ಪಡೆಯುತ್ತಿರುವ ಯಾವುದೇ ನಾಯಕರ ಮಕ್ಕಳು ಇದರಲ್ಲಿ ಇಲ್ಲ.

ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರಯೋಗ ಶಾಲೆ ಮಾಡಿದ್ದಾರೆ. ಈ ಜಿಲ್ಲೆ ಅಭಿವೃದ್ಧಿ ಅರಿಗೆ ಬೇಕಾಗಿಲ್ಲ. ನೀವು ಐಎಎಸ್ ಆಗಲು ವಿದ್ಯಾಭ್ಯಾಸ ಮಾಡುವುದಿಲ್ಲ, ಸಮಾಜಿಕ ಪ್ರಜ್ಞೆ ಬೆಳೆಸಿಕೊಳ್ಳಲು ವಿದ್ಯಾಭ್ಯಾಸ ಮಾಡುತ್ತೀರಿ. ಈ ಜಿಲ್ಲೆಯಲ್ಲಿ ಯಾವ ಕೆಲಸ ಆಗಬೇಕು ಎಂದು ಬಿಜೆಪಿ ಹೇಳಿಲ್ಲ. ಕೊಲೆಗಳಾಗುತ್ತಿವೆ. ಕೋಟಾ ಶ್ರೀನಿವಾಸ್ ಪೂಜಾರಿ ಅವರ ನಿವಾಸದ ಬಳಿ ಅವಳಿ ಕೊಲೆ ಆಯಿತು. ಅದರಲ್ಲಿ ಮೊದಲ ಅಪರಾಧಿ ಬಿಜೆಪಿ ಜಿಲ್ಲಾ ಪರಿಷತ್ ಸದಸ್ಯ. ಉದಯ್ ಗಾಣಿಗ ಹತ್ಯೆಯಲ್ಲಿ ಮೊದಲ ಅಪರಾಧಿ ಬಿಜೆಪಿ ಪಂಚಾಯ್ತಿ ಅಧ್ಯಕ್ಷ ಎರಡನೇ ಅಪರಾಧಿ ಬಿಜೆಪಿ ಉಪಾಧ್ಯಕ್ಷ. 

ಮುಖ್ಯಮಂತ್ರಿ ಬೊಮ್ಮಾಯಿ ಅವರು ಪ್ರವೀಣ್ ನೆಟ್ಟಾರು ಕೊಲೆ ಆದಾಗ ಪುತ್ತೂರಿಗೆ ಬರುತ್ತಾರೆ. ಸಾವಿನ ಮನೆಯಲ್ಲಿ ಸಾಂತ್ವಾನ ಹೇಳಬೇಕು. ಆದರೆ ಮುಖ್ಯಮಂತ್ರಿಗಳು ಕೇವಲ ಬಿಜೆಪಿಗರಿಗೆ ಮಾತ್ರ ಮುಖ್ಯಮಂತ್ರಿಗಳಲ್ಲ, ಅವರು ರಾಜ್ಯದ ಮುಖ್ಯಮಂತ್ರಿಗಳು. ಅಲ್ಲಿಂದ 2 ಕಿ.ಮೀ ದೂರದ ಮುಜಾಹಿದ್ ಸತ್ತಾಗ ಅವರ ಮನೆಗೆ ಹೋಗುವುದಿಲ್ಲ. ಜೀವ ಕಳೆದುಕೊಂಡಾಗ ಹಿಂದೂ ಮುಸ್ಲಿಂ ಎಂದು ನೋಡಬಾರದು. 

ಬಿಜೆಪಿ ನಾಯಕರು ಕೇಶವಕೃಪ ಹಾಗೂ ನಾಗಪುರದ ಸೂತ್ರಾಧಾರಿಗಳ ಕೈಯಲ್ಲಿರುವ ಪಾತ್ರಧಾರಿಗಳು. ಇವರು ಪಠ್ಯ ಪುಸ್ತಕ ಪರಿಷ್ಕರಣೆ ಹೆಸರಲ್ಲಿ, ನಾರಾಯಣ ಗುರು, ಕುವೆಂಪು, ಬಸವಣ್ಣ, ಅಬ್ಬಕ್ಕ ರಾಣಿಯರಂತಹ ವಿಚಾರವನ್ನು ತಿರುಚಿ ಪಠ್ಯ ಪುಸ್ತಕದಲ್ಲಿ ಇಲ್ಲದಿರುವಂತೆ ಮಾಡುತ್ತಾರೆ. ಇವರ ಕಥೆ ಬಿಟ್ಟು ಮಕ್ಕಳಿಗೆ ಮತ್ಯಾರ ಕಥೆ ಹೇಳುತ್ತೀರಿ? ಅದ್ಯಾರೋ ಸಾರ್ವಕರ್ ಅಂಡಮಾನ್ ಜೈಲಿನಿಂದ ಬುಲ್ ಬುಲ್ ಹಕ್ಕಿ ಮೇಲೆ ಕೂತು ಭಾರತ ನೋಡಿಕೊಂಡು ಹೋಗುತ್ತಿದ್ದನಂತೆ. ಈ ಜಿಲ್ಲೆಯ ಜನ ಮೂಢನಂಬಿಕೆಯವರಲ್ಲ, ಪ್ರಜ್ಞಾವಂತರು. ಮೋದಿ ಅವರಿಂದ ಬೊಮ್ಮಾಯಿ ಅವರ ವರೆಗೂ ಎಲ್ಲರೂ ಸುಳ್ಳು. ಸುಳ್ಳೇ ಮನೆ ದೇವರು.

ಬ್ಯಾಂಕ್, ಹೊಟೇಲ್, ಶ್ರಮ ಜೀವಿಗಳು ಸ್ವಂತ ಶ್ರಮದಿಂದ ಬೆಳೆದಿದ್ದಾರೆ. ಯಾರೋ ತಮ್ಮ ಸ್ವಾರ್ಥಕ್ಕೆ ಜಾತಿ, ಧರ್ಮ, ಭಾಷೆಗಳ ನಡುವೆ ಜಗಳ ತರುತ್ತಿದ್ದಾರೆ. ಅವರ ಸಿದ್ಧಾಂತ  ಕಾಪಾಡಬೇಕಾದರೆ, ಅವರ ಮನೆ ಮಕ್ಕಳನ್ನು ಕಳುಹಿಸಲು ಹೇಳಿ. ಹಿಂದುಳಿದವರಲ್ಲಿ ನನ್ನ ಕಳಕಳಿಯ ಮನವಿ ಎಂದರೆ ನೀವು ಯಾವುದೇ ಪಕ್ಷದಲ್ಲಿ ಇದ್ದರೂ ನೀವು ಯಾರನ್ನೂ ಕೆಲೆ ಮಾಡಲೂ ಹೋಗಬೇಡಿ, ಕೊಲೆ ಆಗಲೂ ಬೇಡಿ. ಇದು ದಕ್ಷಿಣ ಕನ್ನಡದ ಸಂಸ್ಕೃತಿ ಅಲ್ಲ. 

ಮೋದಿ ಅವರು ಕೋವಿಡ್ ಇದ್ದಾಗ ಬರಲಿಲ್ಲ, ಇಲ್ಲಿ ಹತ್ಯೆಗಳಾದಾಗ ಬರಲಿಲ್ಲ. ಉತ್ತರ ಕರ್ನಾಟಕದಲ್ಲಿ ಪ್ರವಾಹ ಬಂದಾಗ ಬರಲಿಲ್ಲ. ಈಗ ಚುನಾವಣೆಗಾಗಿ ರಾಜಕೀಯ ಪ್ರವಾಸ ಮಾಡುತ್ತಿದ್ದಾರೆ. ನೀವು ಪ್ರವಾಸ ಮಾಡಿ ಇಲ್ಲಿರುವ ಮರವಂತೆ ಬೀಚ್ ನೋಡಿಕೊಂಡು ಹೋಗಿ, ಹೋಗುವ ಮೊದಲು ಕರ್ನಾಟಕ ರಾಜ್ಯಕ್ಕೆ ಹಾಗೂ ಜಿಲ್ಲೆಯ ಅಭಿವೃದ್ಧಿಗೆ ಏನು ನೀಡುತ್ತೀರಾ ಎಂದು ಹೇಳಿ ಹೋಗಿ.

ಇಲ್ಲಿ ಬಂದಿರುವ ಪೊಲೀಸ್ ಅಧಿಕಾರಿಗಳನ್ನು ಒಂದು ಮನವಿ ಮಾಡುತ್ತೇನೆ. ನಿಮ್ಮ ನಿಷ್ಠೆ ಯಾವುದೋ ಧ್ವಜ, ಧರ್ಮಕ್ಕಲ್ಲ. ನಿಮ್ಮ ತಲೆ ಮೇಲೆ ಅಶೋಕ ಸ್ತಂಭವಿದೆ, ಹೆಗಲ ಮೇಲೆ ನಕ್ಷತ್ರವಿದೆ. ನಿಮ್ಮ ನಿಷ್ಠೆ ತ್ರಿವರ್ಣ ಧ್ವಜಕ್ಕೆ, ಸಂವಿಧಾನಕ್ಕೆ ಇರಬೇಕು.

ಮುಂದಿನ ಚುನಾವಣೆಯಲ್ಲಿ ಇಲ್ಲಿರುವವರು ಶಾಸಕರು, ಮಂತ್ರಿಯಾಗುವುದನ್ನು ಬಿಟ್ಟುಬಿಡಿ, ನೀವು ಮತ ಹಾಕುವಾಗ ನಿಮಗೆ ಯಾರು ಯಾವ ರೀತಿ ಅನುಕೂಲ ಮಾಡಿಕೊಡುತ್ತಾರೆ ಎಂದು ಆಲೋಚಿಸಿ. ನಿಮ್ಮ ಮಕ್ಕಳ ಕೈಗೆ ಚಲ್ವಾರ್ ಚಾಕು ಚೂರಿ ಕೊಡುತ್ತೀರಾ, ಪೆನ್ನು ಪೇಪರ್ ನೀಡಿ ವೈದ್ಯರು, ಇಂಜಿನಿಯರ್ ಐಎಎಸ್ ಮಾಡುತ್ತೀರಾ ಎಂದು ನಿರ್ಧರಿಸಿ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಕ್ತಪಾತವಾಗಿದೆ ಅದು ಸಾಕು, ಇನ್ನಾದರೂ ನಿಲ್ಲಿಸಿ. ಇದರಿಂದ ಯಾರಿಗೂ ಪ್ರಯೋಜನವಿಲ್ಲ. ಕೇವಲ ಪಟ್ಟಭದ್ರ ರಾಜಕೀಯ ಹಿತಾಸಕ್ತಿಯವರಿಗೆ ಮಾತ್ರ ಪ್ರಯೋಜನ.
[22/01, 5:02 PM] Kpcc official: ಉಡುಪಿಯಲ್ಲಿ ಶನಿವಾರ ನಡೆದ ಪ್ರಜಾಧ್ವನಿ ಯಾತ್ರೆ ಸಮಾವೇಶದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ ಕೆ ಹರಿಪ್ರಸಾದ್, ಮಾಜಿ ಸಿಎಂ ವೀರಪ್ಪ ಮೊಯ್ಲಿ, ಮಾಜಿ ಸಚಿವ ಯು ಟಿ ಖಾದರ್, ಮಹಿಳಾ ಕಾಂಗ್ರೆಸ್ ರಾಜ್ಯಾಧ್ಯಕ್ಷೆ ಪುಷ್ಪ ಅಮರನಾಥ್ ಮತ್ತಿತರರು ಭಾಗವಹಿಸಿದ್ದರು.
[22/01, 5:03 PM] Kpcc official: *ಉಡುಪಿ ಪ್ರಜಾಧ್ವನಿ ಯಾತ್ರೆ ಸಮಾವೇಶದಲ್ಲಿ ಡಿ.ಕೆ. ಶಿವಕುಮಾರ್ ಮಾತುಗಳು*

ನಾನು ದಕ್ಷಿಣ ಕನ್ನಡದ ಕಾರ್ಯಕರ್ತರಿಗೆ ವಿಶೇಷ ಧನ್ಯವಾದ ಅರ್ಪಿಸುತ್ತೇನೆ. ಕಾರಣ, ಈ ಭಾಗದಲ್ಲಿ ಪಕ್ಷವನ್ನು ಸಂಘಟಿಸಲು ಮೊದಲ ಬಾರಿಗೆ ಶಾಸಕರಾದ ಪ್ರಮೋದ್ ಮಧ್ವರಾಜ್ ಅವರಿಗೆ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಮಂತ್ರಿ ಸ್ಥಾನ ನೀಡಲಾಗಿತ್ತು. ಆದರೂ ಅವರು ಪಕ್ಷಕ್ಕೆ ದ್ರೋಹ ಮಾಡಿ ಬಿಜೆಪಿಗೆ ಹೋಗಿದ್ದಾರೆ. ಆದರೆ ಅವರ ಜತೆ ಕಾಂಗ್ರೆಸ್ ಪಕ್ಷದ ಯಾವುದೇ ಕಾರ್ಯಕರ್ತರು ಹೋಗಿಲ್ಲ. ಹೀಗಾಗಿ ನಾನು ಧನ್ಯವಾದ ಅರ್ಪಿಸುತ್ತೇನೆ.

ತಂದೆ, ತಾಯಿ ಹಾಗೂ ಮಗನಿಗೆ ಕಾಂಗ್ರೆಸ್ ಸಚಿವ ಸ್ಥಾನ ನೀಡಿತ್ತು. ಇದಕ್ಕಿಂತ ಹೆಚ್ಚಿನದನ್ನು ಕಾಂಗ್ರೆಸ್ ಏನು ನೀಡಲು ಸಾಧ್ಯ? 2023ರ ಚುನಾವಣೆಯಲ್ಲಿ ಆತ ಯಾವುದೇ ಪಕ್ಷದಿಂದ ನಿಂತರೂ ಇಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆಲ್ಲಿಸಿ, ಆತನನ್ನು ಸೋಲಿಸುವ ಕೆಲಸ ಮಾಡಬೇಕು. ಆತ ನಮ್ಮ ಪಕ್ಷದಲ್ಲಿದ್ದಾಗ ವೇದಿಕೆ ಮೇಲೆ ಕೂರುತ್ತಿದ್ದರು. ಈಗ ಬಿಜೆಪಿಗೆ ಹೋಗಿ ಕೆಳಗೆ ಕೂರುವ ಸ್ಥಿತಿ ಬಂದಿದೆ.

ನಾವಿಂದು ಕೃಷ್ಣನ ಪಾದಕ್ಕೆ ಬಂದಿದ್ದೇವೆ. ನಾರಾಯಣ ಗುರುಗಳ ಭೂಮಿಗೆ ಬಂದಿದ್ದೇವೆ. ಈ ಪ್ರದೇಶಕ್ಕೆ ಅದರದೇ ಆದ ಇತಿಹಾಸವಿದೆ. ಈ ಎರಡು ಜಿಲ್ಲೆ ಅತಿ ಹೆಚ್ಚು ವಿದ್ಯಾವಂತ, ಬುದ್ದಿವಂತರಿರುವ ಜಿಲ್ಲೆ. ಈ ದೇಶಕ್ಕೆ ಆರ್ಥಿಕವಾಗಿ ಶಕ್ತಿ ನೀಡಿರುವ ಜಿಲ್ಲೆ. ಉಡುಪಿಯ ಒಂದು ಪಂಚಾಯ್ತಿಯಲ್ಲಿ 3 ಮೆಡಿಕಲ್ ಕಾಲೇಜು ಇದ್ದು, ಅಷ್ಟರ ಮಟ್ಟಿಗೆ ಶೈಕ್ಷಣಿಕವಾಗಿ ಬೆಳೆಸಲಾಗಿದೆ. 

ನಾವು ಪ್ರಜಾಧ್ವನಿ ಯಾತ್ರೆ ಮಾಡುತ್ತಿದ್ದು, ರಾಜ್ಯದ ಎಲ್ಲ ಜನರ ಸಮಸ್ಯೆ ಅರಿತು, ನಿಮ್ಮ ನೋವು, ಅಭಿಪ್ರಾಯ ತಿಳಿದು ಪರಿಹಾರ ನೀಡಲು ಬಂದಿದ್ದೇವೆ. ಈ ಜಿಲ್ಲೆಯಲ್ಲಿ ನಾವು ಎಲ್ಲ ಕ್ಷೇತ್ರಗಳಲ್ಲೂ ಗೆಲ್ಲುತ್ತಿದ್ದೆವು. ಆದರೆ ಈಗ ಎರಡೂ ಜಿಲ್ಲೆಗಳಲ್ಲಿ ಕೇವಲ ಓರ್ವ ಶಾಸಕರು ಮಾತ್ರ ಇದ್ದಾರೆ. ಈ ವಿಚಾರಕ್ಕೆ ನಮ್ಮ ಮನಸಿಗೆ ನೋವಿದೆ. ನಾವು ನುಡಿದಂತೆ ನಡೆದಿದ್ದೇವೆ. ಉದ್ಯೋಗ ಸೃಷ್ಟಿಗೆ ಖಾಸಗಿಕರಣ ಬಿಟ್ಟು ರಾಷ್ಟ್ರೀಕರಣ ಮಾಡಿ ಎಲ್ಲ ಸಂಘ ಸಂಸ್ಥೆಗಳನ್ನು ನಿರ್ಮಾಣ ಮಾಡಿದ್ದರು. ಎಲ್ಲ ವರ್ಗದ ಜನರಿಗೆ ನ್ಯಾಯ ಒದಗಿಸಿಕೊಟ್ಟಿದ್ದು ಕಾಂಗ್ರೆಸ್ ಪಕ್ಷ.

ಇತಿಹಾಸ ಮರೆತರೆ ಯಾರೂ ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ ಎಂದು ಅಂಬೇಡ್ಕರ್ ಹೇಳಿದ್ದಾರೆ. ಕಾಂಗ್ರೆಸ್ ಬ್ಯಾಂಕ್ ರಾಷ್ಟ್ರೀಕರಣದಿಂದ ಜನರ ಬದುಕು ಕಟ್ಟುವ ಬಗ್ಗೆ ಆಲೋಚಿಸಿತ್ತು. ಆದರೆ ಬಿಜೆಪಿ ಜನರ ಬದುಕು ಬಿಟ್ಟು ಭಾವನೆ ವಿಚಾರವಾಗಿ ರಾಜಕಾರಣ ಮಾಡಿ ಎಲ್ಲ ಸಂಸ್ಥೆಗಳನ್ನು ಖಾಸಗಿಕರಣ ಮಾಡುತ್ತಿದೆ.

ಆಸ್ಕರ್ ಫರ್ನಾಂಡೀಸ್ ಅವರು ಈ ಭಾಗದಲ್ಲಿ ಒಂದು ಕಾರ್ಖಾನೆಯನ್ನು ಕಷ್ಟಪಟ್ಟು ಉಳಿಸಿಕೊಂಡಿದ್ದರು. ನಾನು ಸಹಕಾರ ಸಚಿವನಾಗಿದ್ದಾಗ ಸಹಾಯ ಮಾಡಿದ್ದೆ. ಈಗ ಎಲ್ಲವನ್ನು ಮಾರಿಕೊಂಡು ಸ್ಕ್ರಾಪ್ ಮಾರಲು ಮುಂದಾಗಿದ್ದಾರಂತೆ. ಎಲ್ಲೆಡೆ ಅರ್ಜಿ ಹಾಕುವ ನಿರಾಣಿ ಅವರು ಇಲ್ಲಿಗೆ ಯಾಕೋ ಅರ್ಜಿ ಹಾಕಿಲ್ಲ. ಇದು ಬಿಜೆಪಿಯ ವ್ಯವಹಾರ.

ಬಿಜೆಪಿಯ ಡಬಲ್ ಇಂಜಿನ್ ಸರ್ಕಾರ ಇದೆ. ಅವರು 600 ಭರವಸೆ ನೀಡಿದ್ದರು. ಆದರೆ ಅವರು ಕೊಟ್ಟ ಮಾತು ಉಳಿಸಿಕೊಂಡಿದ್ದಾರಾ? ರೈತರ ಆದಾಯ ಡಬಲ್ ಮಾಡುತ್ತೇವೆ, 2 ಕೋಟಿ ಉದ್ಯೋಗ ನೀಡುತ್ತೇವೆ ಎಂದರು. ಈ ಭಾಗದ ಮೀನುಗಾರರಿಗೆ ಏನೆಲ್ಲಾ ಮಾತು ಕೊಟ್ಟಿದ್ದರು, ಯಾವುದನ್ನೂ ಈಡೇರಿಸಿಲ್ಲ. ಈ ಭಾಗದ ಮೀನುಗಾರರು ನನಗೆ ಒಂದು ಮನವಿ ನೀಡಿದ್ದಾರೆ. ಅವರು ಸೀಮೆಎಣ್ಣೆ ಕೇಳುತ್ತಿದ್ದಾರೆ. ಈಗ ನೀಡಲಾಗುತ್ತಿರುವ 300 ಲೀಟರ್ ಸೀಮೆಎಣ್ಣೆ ಅನ್ನು 500 ಲೀಟರ್ ಮಾಡಬೇಕು ಎಂದು ಮನವಿ ಮಾಡುತ್ತಿದ್ದಾರೆ. ಆದರೆ ಈಗಿನ ಸರ್ಕಾರ ಕೇವಲ 75 ಲೀಟರ್ ನೀಡಲು ಮುಂದಾಗಿದೆ. ಇಂತಹ 10 ಬೇಡಿಕೆಗಳನ್ನು ಅವರು ನಮಗೆ ನೀಡಿದ್ದಾರೆ. ಇವುಗಳನ್ನು ಈಡೇರಿಸಲು ಈ ಸರ್ಕಾರಕ್ಕೆ ಸಾಧ್ಯವಾಗಿಲ್ಲ.

ಇತ್ತೀಚೆಗೆ ಸರ್ಕಾರ ಬಂಡವಾಳ ಹೂಡಿಕೆದಾರರ ಸಮಾವೇಶ ಮಾಡಿ 10 ಲಕ್ಷ ಕೋಟಿ ಹೂಡಿಕೆ ಬಂದಿದೆ ಎಂದು ಹೇಳಿದೆ. ಈ ಸಂದರ್ಭದಲ್ಲಿ ಯಡಿಯೂರಪ್ಪ, ನಳಿನ್ ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ, ಸದಾನಂದ ಗೌಡರಿಗೆ ಒಂದು ಪ್ರಶ್ನೆ ಕೇಳಲು ಬಯಸುತ್ತೇನೆ. ಈ 10 ಲಕ್ಷ ಕೋಟಿ ಬಂಡವಾಳದಲ್ಲಿ ಮಂಗಳೂರು, ಉಡುಪಿ, ಶಿವಮೊಗ್ಗದಲ್ಲಿ ಹೂಡಿಕೆ ಮಾಡಲು ಎಷ್ಟು ಹಣ ಬಂದಿದೆ? ಎಂದು. ನಿಮ್ಮ ಆಡಳಿತ ನೋಡಿ ಯಾರೊಬ್ಬರೂ ಈ ಭಾಗಗಳಲ್ಲಿ 1 ಲಕ್ಷ ಕೋಟಿ ಬಂಡವಾಳ ಹಾಕಲು ಯಾರೂ ಮುಂದೆ ಬಂದಿಲ್ಲ. ಅದಕ್ಕೆ ಕಾರಣ ನೀವು ಜನರ ಭಾವನೆ ಜತೆ ಆಟವಾಡುತ್ತಿರುವುದು.

ನನಗೆ ಈ ಭಾಗದ ಅನೇಕ ಶಿಕ್ಷಣ ಸಂಸ್ಥೆಗಳ ಸ್ನೇಹಿತರಿದ್ದಾರೆ. ಇಲ್ಲಿನ ಶಿಕ್ಷಣ ಸಂಸ್ಥೆಗಳಲ್ಲಿ ಓದಲು ಹೊರ ರಾಜ್ಯ, ದೇಶಗಳಿಂದ ವಿದ್ಯಾರ್ಥಿಗಳು ಆಗಮಿಸುತ್ತಿದ್ದರು. ಆದರೆ ಕೋಮುಗಲಭೆ ವಿಷ ಬೀಜ ಬಿತ್ತುತ್ತಿರುವುದನ್ನು ನೋಡಿ ಹೆಚ್ಚಿನ ಜನ ಇಲ್ಲಿಗೆ ತಮ್ಮ ಮಕ್ಕಳನ್ನು ಕಳುಹಿಸುತ್ತಿಲ್ಲ. 

ಈ ಸರ್ಕಾರದ ಆಡಳಿತದಲ್ಲಿ ಅಮಾಯಕ ಅಲ್ಪಸಂಖ್ಯಾತರು, ಬಿಜೆಪಿ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರು ಕೊಲೆಯಾಗಿದ್ದಾರೆ, ಇಲ್ಲಿ ಕೇವಲ ಅಮಾಯಕರು ಮಾತ್ರ ಬಲಿಯಾಗುತ್ತಿದ್ದು, ಬಿಜೆಪಿ ನಾಯಕರ ಮಕ್ಕಳು ಯಾಕೆ ಪಕ್ಷ ಸಂಘಟನೆ ಮಾಡಲು ತ್ರಿಶೂಲ, ದೊಣ್ಣೆ ಹಿಡಿದು ಮುಂದೆ ಬರುತ್ತಿಲ್ಲ? ಕೇವಲ ಬಡವರ ಮಕ್ಕಳನ್ನು ಮಾತ್ರ ಬಲಿ ಕೊಡುತ್ತಿದ್ದಾರೆ.

ನಾನು ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳಿಗೆ ಒಂದು ಮನವಿ ಮಾಡಿಕೊಳ್ಳುತ್ತೇನೆ. ಬಿಜೆಪಿಯವರು ಡಬಲ್ ಇಂಜಿನ್ ಸರ್ಕಾರ, ಅಚ್ಛೇ ದಿನ ಎಂದು ಹೇಳಿದರು, ನಿಮಗೆ ಯಾವ ಅಚ್ಛೇ ದಿನ ಬಂದಿದೆ ಹೇಳಿ? ನಿಮ್ಮ ಖಾತೆಗೆ 15 ಲಕ್ಷ ಹಾಕುತ್ತೇನೆ ಎಂದರು, ಹಾಕಿದ್ದಾರಾ? ನಿಮ್ಮ ಬದುಕಿನಲ್ಲಿ ಬದಲಾವಣೆ ಮಾಡುತ್ತೇನೆ ಎಂದರು. 400 ರೂ. ಇದ್ದ ಅಡುಗೆ ಸಿಲಿಂಡರ್ ಬೆಲೆ 1100 ಆಗಿದೆ. ಎಲ್ಲಾ ಪೆಟ್ರೋಲ್ ಬಂಕ್ ಗಳಲ್ಲಿ ಉಜ್ವಲ ಯೋಜನೆ ಜಾಹೀರಾತಿನಲ್ಲಿ ಮೋದಿ ಅವರ ಫೋಟೋ ಹಾಕಿಕೊಂಡಿದ್ದರು. ಅಡುಗೆ ಎಣ್ಣೆ ಲೀಟರ್ ಗೆ 90 ರಿಂದ 240 ಆಗಿದೆ. ಉಪ್ಪು, ಮೊಸರು ಎಲ್ಲದರ ಮೇಲೆ ತೆರಿಗೆ ಹಾಕಿದ್ದಾರೆ.

ಕೋವಿಡ್ ಸಮಯದಲ್ಲಿ ಎಲ್ಲ ವರ್ಗದ ಜನ 2 ವರ್ಷ ನರಳಾಡಿದ್ದಾರೆ. ಯಾರಿಗೂ ಈ ಸರ್ಕಾರ ನೆರವು ನೀಡಲಿಲ್ಲ. ನಾನು ಹಾಗೂ ಸಿದ್ದರಾಮಯನವರು ಈ ವರ್ಗದ ಜನರಿಗೆ ತಿಂಗಳಿಗೆ 10 ಸಾವಿರ ಪ್ರೋತ್ಸಾಹ ಧನ ನೀಡಿ ಎಂದು ಹೋರಾಟ ಮಾಡಿದೆವು. ಆಗ ಕೆಲ ಚಾಲಕರಿಗೆ ಒಂದು ತಿಂಗಳು ಮಾತ್ರ 5 ಸಾವಿರ ಕೊಟ್ಟರು. ಬೀದಿ ವ್ಯಾಪಾರಿಗಳಿಗೆ ನೆರವು ನೀಡಿ ಎಂದರೆ ನೀಡಲಿಲ್ಲ, ಹೆಣದ ಮೇಲೆ, ಔಷಧಿ ಮೇಲೆ ಙಣ ಮಾಡಿದರು. 

ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ 40% ಕಮಿಷನ್ ಆರೋಪದ ಬಗ್ಗೆ ಪ್ರಧಾನಿಗೆ ಪತ್ರ ಬರೆದರು. ಬಿಜೆಪಿ ನಾಯಕರು ಕೋವಿಡ್ ಸಲಕರಣೆ ಖರೀದಿಯಲ್ಲಿ 300% ಕಮಿಷನ್ ಪಡೆದಿದ್ದಾರೆ. ಈ ಸರ್ಕಾರಕ್ಕೆ 40% ಸರ್ಕಾರ ಎಂಬ ಬ್ರ್ಯಾಂಡ್ ಬಂದಿದೆ. ಚಾಮರಾಜನಗರದಲ್ಲಿ ಆಕ್ಸಿಜನ್ ಇಲ್ಲದೆ 36 ಜನ ಸತ್ತರು. ಆದರೂ ಸೌಜನ್ಯಕ್ಕಾದರೂ ಒಬ್ಬ ಮಂತ್ರಿ ಹೋಗಿ ಅಲ್ಲಿನ ಜನರಿಗೆ ಸಾಂತ್ವನ ಹೇಳಲಿಲ್ಲ. ಜಿಲ್ಲಾ ಮಂತ್ರಿ, ಇಲಾಖಾ ಮಂತ್ರಿ, ಜಿಲ್ಲಾಧಿಕಾರಿ ಸಾಂತ್ವನ ಹೇಳಲಿಲ್ಲ. ಬೆಳಗಾವಿಯ ಸಂಸದ ಸುರೇಶ್ ಅಂಗಡಿ ಕೋವಿಡ್ ನಿಂದ ಸತ್ತರು. ಅವರ ಮೃತದೇಹವನ್ನು ಅವರ ಊರಿಗೆ ತರಲು ಈ ಸರ್ಕಾರದಿಂದ ಸಾಧ್ಯವಾಗಲಿಲ್ಲ.

ಎಲ್ಲಿದೆ ಮಾನವೀಯತೆ? ಸಂಸ್ಕೃತಿ? ಧರ್ಮ? ಅಂತ್ಯಸಂಸ್ಕಾರ ಮಾಡುವಾಗಲೂ ಲಂಚ ಹೊಡೆದರು. ಹಾಸಿಗೆ ವಿಚಾರದಲ್ಲೂ ಹಗರಣ ಮಾಡಿದರು. ಬೆಂಗಳೂರು ಸಂಸದ ತೇಜಸ್ವಿ ಸೂರ್ಯ ಬೆಡ್ ಧಂದೆ ಬಗ್ಗೆ ಮಾತನಾಡಿದರು, ಅದನ್ನು ಮಾಡಿದವರು ಯಾರು? 

ನಿಮ್ಮ ಬದುಕು ಬದಲಾವಣೆ ಹೇಗೆ ಮಾಡಬೇಕು ಎಂದು ಕಾಂಗ್ರೆಸ್ ಪಕ್ಷದ ಎಲ್ಲಾ ನಾಯಕರು ಚರ್ಚೆ ಮಾಡಿದ್ದಾರೆ. ಬೆಲೆ ಏರಿಕೆಯಿಂದ ತತ್ತರಿಸಿರುವ ನಿಮಗೆ ಸಹಾಯ ಮಾಡಲು ಗೃಹಜ್ಯೋತಿ ಎಂಬ ಯೋಜನೆ ಮೂಲಕ ಪ್ರತಿ ಮನೆಗೆ 200 ಯುನಿಟ್ ವಿದ್ಯುತ್ ಅನ್ನು ಪ್ರತಿ ತಿಂಗಳು ನೀಡಲು ತೀರ್ಮಾನಿಸಿದ್ದೇವೆ. ಹಾಸನದಲ್ಲಿ ಒಬ್ಬ ಶಾಸಕರಿಲ್ಲದಿದ್ದರೂ ಸಾವಿರಾರು ಜನರು ಭವ್ಯ ಸ್ವಾಗತ ಕೋರಿ ನಮಗೆ ಬೆಂಬಲ ನೀಡಿದರು. ಅದು ರಾಜ್ಯದಲ್ಲಿ ಬದಲಾವಣೆ ಬಯಸಿರುವುದರ ಸಂಕೇತ. ಇನ್ನು ಮಹಿಳೆಯರಿಗೆ ಕಾಂಗ್ರೆಸ್ ಪಕ್ಷ ಏನು ಮಾಡಬೇಕು ಎಂದು ಕೇಳಿದಾಗ 8 ಸಾವಿರಕ್ಕೂ ಹೆಚ್ಚು ಸಲಹೆ, ಅಭಿಪ್ರಾಯಗಳು ಬಂದವು. ಅವುಗಳ ಬಗ್ಗೆ ಚರ್ಚಿಸಿ, ಬೆಲೆ ಏರಿಕೆಯಿಂದ ತತ್ತರಿಸಿರುವ ಜನರಿಗೆ ನೆರವಾಗಲು ಪ್ರತಿ ಮನೆಯೊಡತಿಗೆ ಪ್ರತಿ ತಿಂಗಳು 2 ಸಾವಿರ ರೂ. ಆರ್ಥಿಕ ನೆರವು ನೀಡುವ ಗೃಹಲಕ್ಷ್ಮಿ ಎಂಬ ಯೋಜನೆಯನ್ನು ಪ್ರಕಟಿಸಿದ್ದೇವೆ. ಇವೆರಡು ಕಾಂಗ್ರೆಸ್ ಪಕ್ಷದ ಎರಡು ಗ್ಯಾರೆಂಟಿ ಯೋಜನೆಗಳಾಗಿವೆ.

ನಾವು ಘೋಷಣೆ ಮಾಡಿದ ನಂತರ ಬಿಜೆಪಿಯವರು ಘೋಷಣೆ ಮಾಡುತ್ತಿದ್ದಾರೆ. ಮೂರುವರೆ ವರ್ಷಗಳಿಂದ ಡಬಲ್ ಇಂಜಿನ್ ಸರ್ಕಾರ ಇಟ್ಟುಕೊಂಡಿದ್ದರಲ್ಲಾ ಯಾಕೆ ಮಾಡಲಿಲ್ಲ? ನೀವು ಯಾವುದಾದರೂ ಓರ್ವ ಬಡವರಿಗೆ ಸಹಾಯ ಮಾಡಿದ್ದೀರಾ? ಕೇವಲ ಕೋಮುದ್ವೇಷ, ಜಾತಿ ಜಾತಿಗಳ ನಡುವೆ, ಧರ್ಮ ಧರ್ಮಗಳ ನಡುವೆ ಬೆಂಕಿ ಹಚ್ಚುತ್ತಿದ್ದೀರಿ. ವಿದ್ಯಾಭ್ಯಾಸದಲ್ಲಿ ರಾಜ್ಯಕ್ಕೆ ಮಾತ್ರವಲ್ಲ ದೇಶಕ್ಕೆ ಮಾದರಿಯಾಗಿದ್ದ ಜಿಲ್ಲೆ ಇಂದು ತಮ್ಮ ಸ್ಥಾನಗಳಲ್ಲಿ ಕುಸಿಯುತ್ತಿವೆ. ಇದಕ್ಕಾಗಿ ಬಿಜೆಪಿಗೆ ಮತ ಹಾಕಬೇಕಾ? 

ಬಿಜೆಪಿ ಕಳೆದ ಬಾರಿ ಕೊಟ್ಟಿದ್ದ 600 ಭರವಸೆಗಳಲ್ಲಿ ಕೇವಲ 50 ಮಾತ್ರ ಈಡೇರಿದೆ. ಸಿದ್ದರಾಮಯ್ಯನವರು 165 ಭರವಸೆ ಕೊಟ್ಟು 159 ಭರವೆಸೆ ಈಡೇರಿಸಿದರು. ಇನ್ನು 30 ಹೆಚ್ಚಿನ ಕಾರ್ಯಕ್ರಮ ನೀಡಿದ್ದೇವೆ. ಅವರ ಯೋಜನೆ ಬಗ್ಗೆ ನಾವು ದಿನನಿತ್ಯ ಪ್ರಶ್ನೆ ಕೇಳುತ್ತಿದ್ದರೂ ಅದಕ್ಕೆ ಉತ್ತರ ನೀಡುತ್ತಿಲ್ಲ. ಇವರ ದುರಾಡಳಿತ ನೋಡಿ ನಾವು ಬಿಜೆಪಿಯ ಪಾಪದ ಪುರಾಣವನ್ನು ಬಿಡುಗಡೆ ಮಾಡಿದ್ದೇವೆ. ಇದನ್ನು ನೀವು ಪ್ರತಿ ಮನೆಗೂ ತಲುಪಿಸಬೇಕು. 

ಸಿಎಂ ಹುದ್ದೆಗೆ 2500 ಕೋಟಿ ನೀಡಬೇಕು ಎಂದು ನಾನು ಹೇಳಿದ್ದನೇ? ಅವರದೇ ಪಕ್ಷದ ಶಾಸಕ ಹೇಳಿದ್ದು, ಇದುವರೆಗೂ ಆತನಿಗೆ ನೊಟೀಸ್ ನೀಡಿಲ್ಲ ಯಾಕೆ? ಪಿಎಸ್ಐ ಹಗರಣ ಮಾಡಿದ್ದರು, ಅದರಲ್ಲಿ ಹಗರಣ ಬಯಲಿಗೆ ತಂದರೋ ಅವರಿಗೆ ನೊಟೀಸ್ ನೀಡುತ್ತೀರಿ, ನಿಮ್ಮ ಸಂಸದ ಪ್ರತಾಪ್ ಸಿಂಹ ಉಪಕುಲಪತಿ ಹುದ್ದೆಗೆ 5-6 ಕೋಟಿ ಲಂಚ ನೀಡಬೇಕು ಎಂದು ಹೇಳಿದರೂ ಯಾಕೆ ನೊಟೀಸ್ ನೀಡಿಲ್ಲ? 

ಬಿಜೆಪಿ ಮಂತ್ರಿ, ಶಾಸಕರು ದಿನನಿತ್ಯ ಕುಣಿಯುತ್ತಿದ್ದಾರೆ. ನಾನು ಈ ಹಿಂದೆ ಸಿದ್ದರಾಮಯ್ಯ ಅವರ ವಿರುದ್ಧ ಕುಮಾರಸ್ವಾಮಿ ಅವಿಶ್ವಾಸ ನಿರ್ಣಯ ಮಂಡಿಸಿದಾಗ ನಾನು ಸದನದಲ್ಲಿ ಡಿವಿಜಿ ಅವರ ಸಾಲುಗಳನ್ನು ಉಲ್ಲೇಖಿಸಿದ್ದೆ. ‘ಎದ್ದೆದ್ದು ಬೀಳುತಿಹೆ, ಗುದ್ದಾಡಿ ಸೋಲುತಿಹೆ ।
ಗದ್ದಲವ ತುಂಬಿ ಪ್ರಸಿದ್ದನಾಗುತಿಹೆ ।।
ಉದ್ಧರಿಸುವೆನು ಜಗವನೆನ್ನುತಿಹ ಸಖನೆ, 
ನಿನ್ನುದ್ಧಾರವೆಷ್ಟಾಯ್ತೊ? – ಮಂಕುತಿಮ್ಮ ।।’

ಅದೇ ರೀತಿ ಯಡಿಯೂರಪ್ಪನವರೆ, ಸದಾನಂದಗೌಡರೇ, ಶೋಭಕ್ಕನವರೇ ನೀವು ಯಾರನ್ನು ಉದ್ಧಾರ ಮಾಡಿದ್ದೀರಿ ಎಂದು ನಿಮ್ಮ ಪಕ್ಷದವರನ್ನು ನಿಲ್ಲಿಸಿಕೊಂಡು ಹೇಳಿ. ಇಂತಹ ವರ್ಗಕ್ಕೆ ನ್ಯಾಯ ಒದಗಿಸಿದ್ದೇವೆ, ಇಂತಹ ಸಮಾಜಕ್ಕೆ ಸಮಾನತೆ ನೀಡಿದ್ದೇವೆ ಎಂದು ಹೇಳಿ ನೋಡೋಣ.

ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲ ವರ್ಗದ ಜನರು ಅಧಿಕಾರಕ್ಕೆ ಬರುತ್ತಾರೆ. ಎಲ್ಲರಿಗೂ ನ್ಯಾಯ ಒದಗಿಸುತ್ತದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸ್ವಂತ ಬಲದಿಂದ ಅಧಿಕಾರಕ್ಕೆ ಬರಲಿದೆ. ಈ ಜಿಲ್ಲೆಯಲ್ಲಿ ನಾವು ಎಲ್ಲ ಸೀಟು ಗೆಲ್ಲುತ್ತೇವೆ. ನಾವು ಪ್ರಾಮಾಣಿಕವಾಗಿ ಒಗ್ಗಟ್ಟಿನಿಂದ ನಿಮ್ಮ ಸೇವಕರಾಗಿ ದುಡಿಯುತ್ತೇವೆ.
[22/01, 9:30 PM] Kpcc official: ಮಂಗಳೂರಿನಲ್ಲಿ ಭಾನುವಾರ ನಡೆದ ಪ್ರಜಾಧ್ವನಿ ಯಾತ್ರೆ ಸಮಾವೇಶದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಮಾಜಿ ಡಿಸಿಎಂ ಡಾ ಜಿ ಪರಮೇಶ್ವರ, ರಾಜ್ಯಸಭೆ ಸದಸ್ಯ ಜಿ ಸಿ ಚಂದ್ರಶೇಖರ್, ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮೊಹಮದ್ ಹ್ಯಾರಿಸ್ ನಲಾಪಾಡ್, ಮುಖಂಡರಾದ ರೋಜಿ ಜಾನ್, ಪುಷ್ಪ ಅಮರನಾಥ, ಜನಾರ್ಧನ ಪೂಜಾರಿ, ಯು ಟಿ ಖಾದರ್, ವಿನಯ್ ಕುಮಾರ್ ಸೊರಕೆ, ಶಕುಂತಲಾ ಶೆಟ್ಟಿ, ಐವನ್ ಡಿಸೋಜಾ, ಮಂಜುನಾಥ ಭಂಡಾರಿ, ಮಿಥುನ್ ರೈ, ಹರೀಶ್ ಕುಮಾರ್ ಮತ್ತಿತರರು ಭಾಗವಹಿಸಿದ್ದರು.

Post a Comment

Previous Post Next Post