ನಿತ್ಯ ಪಂಚಾಂಗ NITYA PANCHANGA 15.07.2023 ಶನಿವಾರ SATURDAY*
*ಸಂವತ್ಸರ:*ಶೋಭಕೃತ್.
*SAMVATSARA :* SHOBHAKRUT.
*ಆಯಣ:* ಉತ್ತರಾಯಣ.
*AYANA:* UTTARAAYANA.
*ಋತು:* ಗ್ರೀಷ್ಮ.
*RUTHU:* GREESHMA.
*ಮಾಸ:* ಆಷಾಢ.
*MAASA:* ASHADHA.
*ಪಕ್ಷ:* ಕೃಷ್ಣ.
*PAKSHA:* KRISHNA.
*ವಾಸರ:*ಸ್ಥಿರವಾಸರ.
*VAASARA:* STHIRAVAASARA.
*ನಕ್ಷತ್ರ:* ಮೃಗಶಿರಾ.
*NAKSHATRA:* MRAGASHIRA.
*ಯೋಗ:* ವೃದ್ಧಿ.
*YOGA:* VRADDHI.
*ಕರಣ:* ಗರಜ.
*KARANA:* GARAJA.
*ತಿಥಿ:* ತ್ರಯೋದಶೀ.
*TITHI:* TRAYODASHI.
*ಶ್ರಾದ್ಧ ತಿಥಿ:* ತ್ರಯೋದಶೀ.
*SHRADDHA TITHI:* TRAYODASHI.
*ಸೂರ್ಯೊದಯ (Sunrise):* 06.00
*ಸೂರ್ಯಾಸ್ತ (Sunset):* 07:04
*ರಾಹು ಕಾಲ (RAHU KAALA) :* 09:00AM To 10:30AM.
*ದಿನ ವಿಶೇಷ (SPECIAL EVENT'S)*
*ಶನಿಪ್ರದೋಷ, ಮಾಸಶಿವರಾತ್ರಿ, ಮುಳಬಾಗಿಲು ಮಂತ್ರಾಲಯ ಶ್ರೀಗುರುರಾಘವೇಂದ್ರ ಸ್ವಾಮಿಗಳವರ ಮಠ ಮತ್ತು ಸೋಸಲೆ ಶ್ರೀವ್ಯಾಸರಾಜರ ಮಠದಲ್ಲಿ ಶ್ರೀಗಳ ಚಾತುರ್ಮಾಸ್ಯ ಸಂಕಲ್ಪಕ್ಕೆ ಕೊನೆಯ ದಿನ.ಪುತ್ತಿಗೆ ಮಠದ ಶ್ರೀಸುಗುಣೆoದ್ರತೀರ್ಥರು ಮತ್ತು ಶ್ರೀಸುಶ್ರೀoದ್ರತೀರ್ಥರ ಪುರಪ್ರವೇಶ ಸ್ವಾಗತೋತ್ಸವ: "ಇದು ಚಂದ್ರಮುಖಿಯ ಕುರಿತಾದ ಕಾವ್ಯಯಾನದ ಐದು ಹನಿಗವಿತೆಗಳು. ಅವಳ ಬೆಳದಿಂಗಳ ಬಣ್ಣಿಸುವ ಭಾವಯಾನದ ಅಕ್ಷರ ಪ್ರಣತೆಗಳು. ಚಂದ್ರಯಾನ ನೋಡಿದ ಸಂಭ್ರಮದಲ್ಲಿ, ನಮ್ಮ ಚಂದ್ರಮುಖಿಯ ಕಾವ್ಯಯಾನದಲ್ಲೂ ವಿಹರಿಸಿಬಿಡಿ. ಓದಿದಷ್ಟೂ ಒಲವಿನುಯ್ಯಾಲೆಯಲಿ ಮನ ಮುದಗೊಂಡೀತು. ನೆನಪಿನಲೆಗಳಲಿ ಹೃದಯ ಹದಗೊಂಡೀತು. ಏನಂತೀರಾ..?" - ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.
1. ನಯನ..!
ಎವೆಯಿಕ್ಕದೆ ಒಮ್ಮೆ ಅವಳ
ಕಂಗಳ ಆಳಕ್ಕಿಳಿದು ನೋಡಿ
ಅನುದಿನವು ಚಂದ್ರಯಾನ
ಅನುಕ್ಷಣ ಕೋಟಿತಾರೆ ದರ್ಶನ.!
****************
2. ಪವಾಡ..!
ಅಕಸ್ಮಾತಾಗಿ ಮೊನ್ನೆ ಇರುಳು
ಬಾಲ್ಕನಿಯಲಿ ಬಂದು ನಿಂತಳು
ಜನ ಗಾಬರಿಯಾದರು ಕಂಡು..
ಅಮಾವಾಸ್ಯೆಯಲ್ಲು ಬೆಳದಿಂಗಳು.!
****************
3. ಸೂರ್ಯಾಸ್ತ.!
ಕಡಲ ತೀರದಲ್ಲಿ ನಿಂತವಳ
ತೀರದ ತುಂಟನೆಯ ನೋಟಕ್ಕೆ
ನಾಚಿ ಕೆಂಪಾದ ಸಂಜೆಸೂರ್ಯ
ನವ ಪುಳಕದಿ ನವಿರಾಗಿ ಬೆವೆತ
ತಂಪಾಗಲು ಹಾಗೆ ಮೆಲ್ಲಮೆಲ್ಲನೆ
ಮೆಲ್ಲಜಾರಿ ಕಡಲೊಳಗೆ ಅವಿತ.!
********************
4. ನೋಟ..!
ಉಡಾವಣೆ ಸಮಯದಲ್ಲಿ
ಅವಳ ಕಂಗಳಲ್ಲಿ ತವಕ
ಅವಳನ್ನೇ ನೋಡುತ್ತಿದ್ದ..
ಚಂದ್ರನಲ್ಲೂ ಪುಳಕಾತಿಪುಳಕ.!
*****************
5. ವರ್ಣಮಯ..!
ಭೂಮಿ ಬಾನುಗಳ ಬೆಸೆವ
ಕಾಮನಬಿಲ್ಲಿನಲಿ ಸಪ್ತವರ್ಣ.!
ನೋಡುವವರ ಹೃನ್ಮನ ಸೆಳೆವ
ಅವಳ ನಗೆಬಿಲ್ಲಿನಲಿ ಸಹಸ್ರವರ್ಣ.!
*****************
6. ಮೋಡಿ..!
ಏಕೀ ಉಡಾವಣೆ ಸಾಹಸ ಬವಣೆ.?
ಅವಳೊಂದು ತಾಸು ಹುಣ್ಣಿಮೆಯಲಿ
ಮನೆಯಾಚೆ ಬಂದು ನಿಂತರೆ ಸಾಕು..
ಚಂದ್ರನೇ ನಾಚಿ ಬಾನಿಂದಿಳಿದು ಬರುವನು
ಅವಳೆಡೆಗೆ ಹೊತ್ತು ಬೆಳದಿಂಗಳ ಬೆಳಕು.!
ಎ.ಎನ್.ರಮೇಶ್.ಗುಬ್ಬಿ.
**
Post a Comment