ಗ್ರಾ : ಕಿಡಿಗೇಡಿಗಳು ಮಸೀದಿಗಳಲ್ಲಿ ಪ್ರಾಣಿ ಮಾಂಸ ಎಸೆದು ಉದ್ಧಟತನ ಮೆರೆಯುತ್ತಿದ್ದಾರೆ. ಸಮಾಜದಲ್ಲಿ ಅಶಾಂತಿ ಮೂಡಿಸುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ಇದೇ ರೀತಿಯ ಘಟನೆ ನಡೆದಿದೆ.

ಆಗ್ರಾದ ಜಾಮಾ ಮಸೀದಿಯಲ್ಲಿ ಈ ಸಂಬಂಧ ಕಿಡಿಗೇಡಿಯನ್ನು ಬಂಧಿಸಲಾಗಿದೆ.

ಜಾಮಾ ಮಸೀದಿಯಲ್ಲಿ ಪ್ಯಾಕೆಟ್ನಲ್ಲಿ ಪ್ರಾಣಿ ಮಾಂಸ ಎಸೆಯಲಾಗಿದ್ದು, ಇದ್ರಿಂದ ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ. ಮಸೀದಿಯೊಳಗೆ ನಿಷೇಧಿತ ಮಾಂಸ ಎಸೆಯಲಾಗಿ ಅಶಾಂತಿ ಮೂಡಿಸುವ ಯತ್ನ ನಡೆದಿತ್ತು.

ಕಳೆದ ಶುಕ್ರವಾರ ಸ್ಥಳದಲ್ಲಿ ಪೊಲೀಸರು ಮೊಕ್ಕಾಂ ಹೂಡಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದರು ಪೊಲೀಸರು ಸಿಸಿ ಕ್ಯಾಮೆರಾ ಪರಿಶೀಲಿಸಿ ತನಿಖೆ ನಡೆಸಿದ್ದು, ಈ ಸಂಬಂಧ ನಸ್ರುದ್ದೀನ್ ಎಂಬ ವ್ಯಕ್ತಿಯನ್ನು ಬಂಧಿಸಿದ್ದಾರೆ.

ಘಟನೆ ಸಂಬಂಧ ಪೊಲೀಸರು ಕಿಡಿಗೇಡಿ ನಸ್ರುದ್ದೀನ್ ಬಂಧಿಸಿದ್ದು, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಆಗ್ರಾದಲ್ಲಿ ಇಸ್ಲಾಮಿಕ್ ಸಮುದಾಯದ ಜನರು ಪ್ರತಿಭಟನೆ ನಡೆಸಿದ್ದಾರೆ.

Post a Comment

Previous Post Next Post