ಘಟನೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಸಿಟಿವಿ ದೃಶ್ಯ ಹಾಗೂ ಸ್ಥಳೀಯರ ಅನುಮಾನದ ಮೇಲೆ ಪ್ರಕರಣದ ಆರೋಪಿಯನ್ನು ವಶಕ್ಕೆ ಪಡೆಯಲಾಗಿತ್ತು.ಬಳಿಕ 2-3 ಗಂಟೆಗಳ ಕಾಲ ನಿರಂತರವಾಗಿ ವಿಚಾರಣೆ ಮಾಡಿದಾಗ ಕೂಡ ಆತ ಕೆಲವೇ ಕೆಲವು ಮಾಹಿತಿಗಳನ್ನು ತಿಳಿಸಿದ್ದ. ಆತ ಕೃತ್ಯವನ್ನು ಎಸಗಿರುವುದು ಬಯಲಾಗಿದೆ. ಇದಕ್ಕೆ ಸಂಬಂಧಪಟ್ಟ ಸಿಸಿಟಿವಿ ದೃಶ್ಯಗಳು ಕೂಡ ಲಭ್ಯವಾಗಿವೆ. ಹೀಗಾಗಿ ಆತ ಯಾರು ಅನ್ನೋದನ್ನು ಪತ್ತೆ ಮಾಡುವ ಸಂದರ್ಭದಲ್ಲಿ ಆತ ತನ್ನ ಹೆಸರು ಹಾಗೂ ಊರನ್ನು ತಿಳಿಸಿದ್ದಾನೆ. ಆದರೆ ಇದಕ್ಕೆ ಪೂರಕವಾದ ಮಾಹಿತಿಗಳು ಸಿಗಲಿಲ್ಲ ಎಂದರು.
ವಿಚಾರಣೆಯಲ್ಲಿ ರಿತೇಶ್ ಕುಮಾರ್ (35) ಎಂದು ತಿಳಿದುಬಂದಿದೆ. ಈತ ಬಿಹಾರದ ಪಾಟ್ನಾ ಮೂಲದವನು. ಕಳೆದ ಕೆಲವು ವರ್ಷಗಳಿಂದ ಈತ ಮನೆಯಿಂದ ಹೊರಗಡೆ ಇದ್ದು, ಬೇರೆ ಬೇರೆ ಊರುಗಳಲ್ಲಿ ಕೆಲಸ ಮಾಡಿಕೊಂಡು ಇದೀಗ ಹುಬ್ಬಳ್ಳಿಗೆ ಕಳೆದ 2-3 ತಿಂಗಳ ಹಿಂದೆ ಬಂದಿರುವುದಾಗಿ ತಿಳಿಸಿದ್ದಾನೆ. ಇನ್ನು ವಾಸ ಎಲ್ಲಿ ಎಂದು ಕೇಳಿದಾಗ ತಾರಿಹಾಳ್ ಬ್ರಿಡ್ಜ್ ಕೆಳಗೆ ಎಂದು ಹೇಳಿದ್ದ. ಹೀಗಾಗಿ ಆತನ ಆಧಾರ್ ಕಾರ್ಡ್ ಮೊದಲಾದವುಗಳ ಗುರುತು ಪತ್ತೆಗೆ ಆತನನ್ನು ಅಲ್ಲಿಗೆ ಕರೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಆತ ಏಕಾಏಕಿ ಪೊಲೀಸ್ ವಾಹನದ ಮೇಲೆ ಕಲ್ಲು ತೂರಿ, ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ ಮಾಡಿ ಎಸ್ಕೇಪ್ ಆಗಲು ಯತ್ನಿಸಿದ್ದಾನೆ ಎಂದು ಹೇಳಿದರು.
ಈ ವೇಳೆ ಮಹಿಳಾ ಪೊಲೀಸ್ ಅಧಿಕಾರಿ ಪಿಎಸ್‌ಐ ಅನ್ನಪೂರ್ಣ ಅವರು ಶರಣಾಗುವಂತೆ ಹೇಳಿದ್ದಾರೆ. ಆದರೆ ಆತ ಮತ್ತೆ ಕಲ್ಲು ತೂರಿ ಓಡಲು ಮುಂದಾದಾಗ ಅವರು ಏರ್‌ಫೈರ್ ಮಾಡಿದ್ದಾರೆ. ಇದಕ್ಕೂ ಆತ ಕ್ಯಾರೇ ಎನ್ನದಾಗ ಆತನ ಕಾಲಿಗೆಂದು ಗುಂಡು ಹಾರಿಸಿದ್ದಾರೆ. ಈ ವೇಳೆ ಒಂದು ಗುಂಡು ಆತನ ಬೆನ್ನಿಗೆ ಬಿದ್ದಿದ್ದು, ಆತ ಕುಸಿದು ಬಿದ್ದ. ಕೂಡಲೇ ಆತನ ಜೀವ ಉಳಿಸಲೆಂದು ಸ್ಥಳೀಯ ಕೆಎಂಸಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅದಾಗಲೇ ಆತ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ ಎಂದರು.
Post a Comment