17 ದಿನಗಳ ಚಾರ್ ಧಾಮ್ ಯಾತ್ರೆಗಾಗಿ ಭಾರತ್ ಗೌರವ್ ಡಿಲಕ್ಸ್ ರೈಲು ಆರಂಭ

17 ದಿನಗಳ ಚಾರ್ ಧಾಮ್ ಯಾತ್ರೆಗಾಗಿ ಭಾರತ್ ಗೌರವ್ ಡಿಲಕ್ಸ್ ರೈಲು ಆರಂಭ

ಭಾರತೀಯ ರೈಲ್ವೆಯು ಚಾರ್ ಧಾಮ್ ಯಾತ್ರೆಗಾಗಿ ಭಾರತ್ ಗೌರವ್ ಡಿಲಕ್ಸ್ ರೈಲನ್ನು ಪರಿಚಯಿಸಿದೆ. ಈ ರೈಲು ಬದರಿನಾಥ, ಜೋಶಿಮಠ, ಋಷಿಕೇಶ, ಪುರಿ, ಕೋನಾರ್ಕ್, ರಾಮೇಶ್ವರಂ ಮತ್ತು ದ್ವಾರಕಾದಂತಹ ಧಾರ್ಮಿಕ ಸ್ಥಳಗಳನ್ನು ಒಳಗೊಂಡಿದ್ದು, ಕಾಶಿ ವಿಶ್ವನಾಥ, ಭೀಮಶಂಕರ್ ಮತ್ತು ತ್ರ್ಯಂಬಕೇಶ್ವರದಂತಹ ಇತರ ಧಾರ್ಮಿಕ ಸ್ಥಳಗಳನ್ನು ಒಳಗೊಂಡಿದೆ. ಈ ರೈಲು ಒಟ್ಟು 8 ಸಾವಿರದ 425 ಕಿಲೋಮೀಟರ್ ದೂರವನ್ನು ಕ್ರಮಿಸುತ್ತದೆ.

 

ಈ ವಿಶೇಷ ರೈಲು ಈ ತಿಂಗಳ 27 ರಂದು ದೆಹಲಿಯ ಸಫ್ದರ್ಜಂಗ್ ರೈಲು ನಿಲ್ದಾಣದಿಂದ ಹೊರಟು 17 ದಿನಗಳಲ್ಲಿ ದೇಶದ ನಾಲ್ಕು ಧಾಮಗಳು ಮತ್ತು ಇತರ ಧಾರ್ಮಿಕ ಸ್ಥಳಗಳನ್ನು ಒಳಗೊಳ್ಳಲಿದೆ ಎಂದು ನಮ್ಮ ವರದಿಗಾರರು ವರದಿ ಮಾಡಿದ್ದಾರೆ. ರೈಲಿನ ಟಿಕೆಟ್‌ಗಳನ್ನು ಮೊದಲು ಬಂದವರಿಗೆ ಆದ್ಯತೆ ಆಧಾರದ ಮೇಲೆ ನೀಡಲಾಗುತ್ತದೆ, ಇದನ್ನು IRCTC ವೆಬ್‌ಸೈಟ್‌ನಲ್ಲಿ ಬುಕ್ ಮಾಡಬಹುದು.

Post a Comment

Previous Post Next Post