ವದೆಹಲಿ: ಪಾಕಿಸ್ಥಾನದ ಮಹಿಳೆಯೊಂದಿಗಿನ ತನ್ನ ವಿವಾಹವನ್ನು “ಮರೆಮಾಚಿದ್ದಕ್ಕಾಗಿ” ಕೇಂದ್ರ ಮೀಸಲು ಪೊಲೀಸ್ ಪಡೆ(CRPF) ಯೋಧ ಮುನೀರ್ ಅಹ್ಮದ್ ರನ್ನು ಸೇವೆಯಿಂದ ವಜಾಗೊಳಿಸಿದೆ ಎಂದು ಅಧಿಕೃತ ಮೂಲಗಳು ಶನಿವಾರ ತಿಳಿಸಿವೆ.


ಮುನೀರ್ ಅಹ್ಮದ್ ರನ್ನು ಕೊನೆಯದಾಗಿ ದೇಶದ ಪ್ರಮುಖ ಆಂತರಿಕ ಭದ್ರತಾ ಪಡೆ, ಪ್ಯಾರಾಮಿಲಿಟರಿ CRPF ನ 41 ನೇ ಬೆಟಾಲಿಯನ್‌ನಲ್ಲಿ ನಿಯೋಜಿಸಲಾಗಿತ್ತು.ವಿಚಾರಣೆ ನಡೆಸುವ ಅಗತ್ಯವಿಲ್ಲದ ನಿಯಮಗಳ ಅಡಿಯಲ್ಲಿ ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಅಧಿಕೃತ ಮೂಲಗಳು PTI ಗೆ ತಿಳಿಸಿವೆ.

“ಪಾಕಿಸ್ಥಾನಿ ಪ್ರಜೆಯೊಂದಿಗಿನ ತನ್ನ ಮದುವೆಯನ್ನು ಮರೆಮಾಚಿದ್ದಕ್ಕಾಗಿ ಮತ್ತು ಆಕೆಯ ವೀಸಾದ ಮಾನ್ಯತೆಯನ್ನು ಮೀರಿ ಆಕೆಗೆ ತಿಳಿದೇ ಆಶ್ರಯ ನೀಡಿದ್ದಕ್ಕಾಗಿ ಮುನೀರ್ ಅಹ್ಮದ್ ಅವರನ್ನು ತತ್ ಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ವಜಾಗೊಳಿಸಲಾಗಿದೆ.

” ಮುನೀರ್ ಅಹ್ಮದ್ ಸೇವಾ ನಡವಳಿಕೆಯನ್ನು ಉಲ್ಲಂಘಿಸಿದ್ದು, ರಾಷ್ಟ್ರೀಯ ಭದ್ರತೆಗೆ ಹಾನಿಕಾರಕವೆಂದು ಕಂಡುಬಂದಿದ್ದಾರೆ ಎಂದು CRPF ವಕ್ತಾರ ಡೆಪ್ಯೂಟಿ ಇನ್ಸ್‌ಪೆಕ್ಟರ್ ಜನರಲ್ (DIG) ಎಂ.ದಿನಕರನ್ ಹೇಳಿದ್ದಾರೆ.

26 ಜನರ ಸಾ*ವಿಗೆ ಕಾರಣವಾದ ಪಹಲ್ಗಾಮ್ ದಾ*ಳಿಯ ನಂತರ ಭಾರತ ತೆಗೆದುಕೊಂಡ ರಾಜತಾಂತ್ರಿಕ ಕ್ರಮಗಳ ಭಾಗವಾಗಿ ಭಾರತವು ಪಾಕಿಸ್ಥಾನ ಪ್ರಜೆಗಳನ್ನು ದೇಶ ಬಿಟ್ಟು ಹೋಗುವಂತೆ ಆದೇಶ ನಂತರ ಅಹ್ಮದ್ ಮತ್ತು ಮೆನಾಲ್ ಖಾನ್ ಅವರ ವಿವಾಹ ಬೆಳಕಿಗೆ ಬಂದಿದೆ. ಕಳೆದ ವರ್ಷ ಮೇ 24 ರಂದು ಇಬ್ಬರೂ ವಿಡಿಯೋ ಕರೆಯ ಮೂಲಕ ವಿವಾಹವಾಗಿದ್ದರು

Post a Comment

Previous Post Next Post