ಆತನಿಗೆ ಕುಟುಂಬದ ಸದಸ್ಯರು ಕೇಕ್ ಕಟ್ ಮಾಡಿಸಿ, ತಿನ್ನಿಸುವ ಮೂಲಕ ಧೈರ್ಯ ಹೇಳಿದ್ದಾರೆ.
ಇಲ್ಲಿನ ಬಿವಿವಿ ಸಂಘ ಬಸವೇಶ್ವರ ಇಂಗ್ಲಿಷ್ ಮೀಡಿಯಂನಲ್ಲಿ ಓದುತ್ತಿದ್ದ ಅಭಿಷೇಕ 625ಕ್ಕೆ 200 ಅಂಕ ಪಡೆದು ಶೇ.32 ಅಂಕ ಪಡೆದು ಬೇಜಾರಲ್ಲಿದ್ದ. ತಂದೆ ಯಲ್ಲಪ್ಪ ಅವರು, ಫೇಲ್ ಆದ ಮಗನಿಗೆ ಸಿಹಿ ತಿನ್ನಿಸಿ ಮುತ್ತು ಕೊಟ್ಟು, ಪರೀಕ್ಷೆ ಒಂದೇ ಜೀವನವಲ್ಲ, ಮತ್ತೆ ಪ್ರಯತ್ನ ಮಾಡು ಎಂದು ಹೆಗಲ ಮೇಲೆ ಕೈ ಇಟ್ಟು ಧೈರ್ಯ ತುಂಬಿದ್ದಾರೆ.
ಅಭಿಷೇಕ್, ಹದಿನೈದು ತಿಂಗಳ ಮಗುವಾಗಿದ್ದಾಗ ಎರಡು ಪಾದ ಸುಟ್ಟು ನೆನಪಿನ ಶಕ್ತಿ ಕಳೆದುಕೊಂಡಿದ್ದ. ಹೀಗಾಗಿ ಉತ್ತರ ನೆನಪಿಟ್ಟುಕೊಂಡು ಬರೆಯಲು ವಿದ್ಯಾರ್ಥಿ ವಿಫಲವಾಗಿದ್ದಾನೆ.
ಫೇಲ್ ಆಗಿದ್ದರಿಂದ ಬಹಳ ಬೇಜಾರಾಗಿತ್ತು. ನಮ್ಮ ತಂದೆ ತಾಯಿ ಎಲ್ಲರೂ ಧೈರ್ಯ ಹೇಳಿದರು. ಫೇಲ್ ಆದರೂ ಧೈರ್ಯ ಹೇಳಿ ಕೇಕ್ ತಿನ್ನಿಸಿ ಸಂಭ್ರಮಿಸಿದ್ದಾರೆ. ಮತ್ತೆ ಪ್ರಯತ್ನ ಮಾಡಿ ಪಾಸ್ ಆಗ್ತೀನಿ. ಪರೀಕ್ಷೆಯಲ್ಲಿ ಫೇಲ್ ಆದರೂ ಜೀವನದಲ್ಲಿ ಸಾಧಿಸಿ ತೋರಿಸ್ತೀನಿ ಎಂದು ಅಭಿಷೇಕ್ ಮಾಧ್ಯಮದವರ ಎದುರು ಹೇಳಿದ್ದಾನೆ.
ಎಸ್‌ಎಸ್‌ಎಲ್‌ಸಿಯಲ್ಲಿ 625ಕ್ಕೆ 625 ಅಂಕ ಪಡೆದ 22 ಟಾಪರ್ಸ್ ಪಟ್ಟಿ ಇಲ್ಲಿದೆ
ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶವನ್ನು (SSLC Result 2025) ಶುಕ್ರವಾರ ಪ್ರಕಟವಾಗಿದ್ದು, ಫಲಿತಾಂಶದಲ್ಲಿ 22 ವಿದ್ಯಾರ್ಥಿಗಳು ಪೂರ್ಣ ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಇವರಲ್ಲಿ ಕನ್ನಡ ಮತ್ತು ಉರ್ದು ಮಾಧ್ಯಮ ಶಾಲೆ ವಿದ್ಯಾರ್ಥಿಗಳು ಸೇರಿದ್ದಾರೆ. 625ಕ್ಕೆ 625 ಅಂಕ ಗಳಿಸಿ ಓದಿದ ಶಾಲೆ ಹಾಗೂ ತಮ್ಮ ಜಿಲ್ಲೆಗೆ ಕೀರ್ತಿ ತಂದಿರುವ ಪ್ರತಿಭಾವಂತ ವಿದ್ಯಾರ್ಥಿಗಳ ವಿವರ ಇಲ್ಲಿದೆ.
ರಾಜ್ಯದ ಎಸ್‌ಎಸ್‌ಎಲ್‌ಸಿ ಟಾಪರ್ಸ್ ವಿವರ
- ಅಕೀಲ್ ಅಹಮ್ಮದ್ ನದಾಫ್-ಆಕ್ಸ್‌ಫರ್ಡ್ ಇಂಗ್ಲಿಷ್ ಮಾಧ್ಯಮ ಶಾಲೆ, ನಗರಬೆಟ್ಟ, ವಿಜಯಪುರ ಜಿಲ್ಲೆ
- ಸಿ. ಭಾವನ- ನೀಲಗಿರೀಶ್ವರ ವಿದ್ಯಾನಿಕೇತನ ಹೈಸ್ಕೂಲ್, ಬೆಂಗಳೂರು ಗ್ರಾಮಾಂತರ ಜಿಲ್ಲೆ
- ಧನಲಕ್ಷ್ಮಿ ಎಂ-ಎಸ್‌ಟಿ ಯಶ್ ಪಬ್ಲಿಕ್ ಸ್ಕೂಲ್, ಮಾಗಡಿ ಮುಖ್ಯ ರಸ್ತೆ, ಬೆಂಗಳೂರು
- ಧನುಷ್ ಎಸ್-ಮರಿಮಲ್ಲಪ್ಪ ಹೈಸ್ಕೂಲ್, ಮೈಸೂರು
- ಧಾರುತಿ ಜೆ- ಸಹಕಾರ್ ಎಸ್‌ಕೆ ಚಿಕ್ಕಣ್ಣಗೌಡ ಇಂಗ್ಲಿಷ್ ಮಾಧ್ಯಮ ಹೈಸ್ಕೂಲ್, ಕೆಆರ್ ಪೇಟೆ, ಮಂಡ್ಯ ಜಿಲ್ಲೆ
- ಜಾಹ್ನವಿ ಎಸ್.ಎನ್- ವಿಜಯ ಭಾರತಿ ವಿದ್ಯಾಲಯ ಹೈಸ್ಕೂಲ್, ಗಿರಿನಗರ, ಬೆಂಗಳೂರು
- ಮಧುಸೂಧನ್ ರಾಜು ಎಸ್- ಕಿಶೋರ್ ಕೇಂದ್ರ ಹೈಸ್ಕೂಲ್, ಮಲ್ಲೇಶ್ವರಂ, ಬೆಂಗಳೂರು
- ಮಹಮ್ಮದ್ ಮನ್ಸೂರ್ ಅದಿಲ್ - ಚೇತನಾ ವಿದ್ಯಾ ಮಂದಿರ ಹೈಸ್ಕೂಲ್, ತುಮಕೂರು ಜಿಲ್ಲೆ
- ಮೌಲ್ಯ ಡಿ. ರಾಜ್-ರಾಷ್ಟ್ರೀಯ ಅಕಾಡೆಮಿ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್, ಹುಲಿಯಾರ್ ರಸ್ತೆ, ಹಿರಿಯೂರು, ಚಿತ್ರದುರ್ಗ
- ನಮನಾ ಕೆ-ಪ್ರಿಯಾದರ್ಶಿನಿ ಹೈಸ್ಕೂಲ್, ಶಿವಮೊಗ್ಗ
- ನಮಿತಾ- ಮಾತಾ ನ್ಯಾಷನಲ್ ಇಂಗ್ಲಿಷ್ ಹೈಸ್ಕೂಲ್, ಕಲ್ಯಾಣ ನಗರ, ಬೆಂಗಳೂರು
- ನಂದನ್ ಎಚ್‌ಒ- ರಾಷ್ಟ್ರೀಯ ಅಕಾಡೆಮಿ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್, ಹುಲಿಯಾರ್ ರಸ್ತೆ, ಹಿರಿಯೂರು, ಚಿತ್ರದುರ್ಗ
- ನಿತ್ಯಾ ಎಂ ಕುಲಕರ್ಣಿ- ಶ್ರೀ ರಾಮಕೃಷ್ಣ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್, ಶಿವಮೊಗ್ಗ
- ರಂಜಿತಾ ಎ.ಸಿ.- ಶ್ರೀ ಚಂದ್ರಶೇಖರನಾಥ್ ಸ್ವಾಮೀಜಿ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್, ಬಿಜಿಎಸ್ ಕ್ಯಾಂಪಸ್, ಬೆಂಗಳೂರು ಗ್ರಾಮಾಂತರ ಜಿಲ್ಲೆ
- ರೂಪಾ ಚನ್ನಗೌಡ ಪಾಟೀಲ್- ಸರಕಾರಿ ಪಿಯು ಕಾಲೇಜು- ಬೆಳಗಾವಿ ಜಿಲ್ಲೆ
- ಶಹಿಷ್ಣು ಎನ್- ಶ್ರೀ ಆದಿಚುಂಚನಗಿರಿ ಹೈಸ್ಕೂಲ್, ಶಿವಮೊಗ್ಗ ಜಿಲ್ಲೆ
- ಶಗುಪ್ತಾ ಅಂಜುಮ್- ಸರಕಾರಿ ಉರ್ದು ಹೈಸ್ಕೂಲ್, ಕಾರವಾರ
- ಸ್ವಸ್ತಿ ಕಾಮತ್-ಕಾರ್ಕಳ ಜ್ಞಾನಸುಧಾ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್, ಕಾರ್ಕಳ
- ತಾನ್ಯಾ ಆರ್‌ಎನ್- ಬಿಕೆಎಸ್ ವಿಬಿ ಹೈಸ್ಕೂಲ್, ಮೈಸೂರು
- ಉತ್ಸವ್ ಪಾಟೇಲ್- ವಿಜಯ ಸ್ಕೂಲ್, ಹಾಸನ
- ಯಶ್ಮಿತಾ ರೆಡ್ಡಿ ಕೆಬಿ- ಚಿರೆಕ್ ಪಬ್ಲಿಕ್ ಸ್ಕೂಲ್, ಮಧುಗಿರಿ, ತುಮಕೂರು ಜಿಲ್ಲೆ
- ಯುಕ್ತಾ ಎಸ್-ಹೋಲಿ ಚೈಲ್ಡ್ ಇಂಗ್ಲಿಷ್ ಮೀಡಿಯಂ ಸ್ಕೂಲ್, ಬನಶಂಕರಿ, ಬೆಂಗಳೂರು
Post a Comment